" ನಮ್ಮೂರಲ್ಲೂ ಕೂಡಾ ಪಿರಮಿಡ್ ಬರುತ್ತದೆ "

 

 

10ನನ್ನ ಹೆಸರು ಅರುಣ, ಬಳ್ಳಾರಿ ಜಿಲ್ಲೆಯ ‘ಕಾಕರ್ಲತೋಟ’ ದ ನಿವಾಸಿ. ನಾನು ಪಿರಮಿಡ್ ಕುಟುಂಬಕ್ಕೆ 2011ರಲ್ಲಿ ಬಂದೆನು. ಧ್ಯಾನದ ಬಗ್ಗೆ ನನ್ನ ಗೆಳೆಯ ಅಮರ್ ಮೂಲಕ ತಿಳಿದುಕೊಂಡೆನು.

 

ಒಮ್ಮೆ ಅಮರ್ ಅವರು "ಲೈಫ್ ಆಫ್ಟರ್ ಡೆತ್" ಎನ್ನುವ ವಿಷಯದ ಬಗ್ಗೆ ಸೆಮಿನಾರ್ ಮಾಡಿದರು. ಆದರೆ, ನಾವೆಲ್ಲರೂ ಹಾಸ್ಯ ಮಾಡಿದೆವು. ಅವರಿಗೆ ಸೆಮಿನಾರ್ ಮಾಡಲು ಬಿಡಲಿಲ್ಲ. ನನ್ನ ಜನ್ಮದಿನದಂದು ಅಮರ್ ಅವರು ಸಿ.ಡಿ ಮತ್ತು ಪುಸ್ತಕ ಬಹುಮಾನವಾಗಿ ಕೊಟ್ಟರು. ಆದರೆ, ನಾನು ಅದನ್ನು ನೋಡಲಿಲ್ಲ. ನಂತರ 2011 ಫೆಬ್ರವರಿ 13ರಂದು ಧ್ಯಾನಾಂಧ್ರಪ್ರದೇಶ್ ಮಾಸಪತ್ರಿಕೆ ಮತ್ತು ‘ಧ್ಯಾನ ನವರತ್ನಗಳು’ ಎಂಬ ಹೆಸರಿನ ಸಿ.ಡಿ. ನೀಡಿದರು. ಮನೆಗೆ ಬಂದ ಮೇಲೆ ಆ ಬುಕ್ ಓದಿ, ಸಿ.ಡಿ. ನೋಡಿದೆವು, ಆಗ ಏನೂ ಅರ್ಥ ಆಗಲಿಲ್ಲ. ಆಗ ನನಗೆ ಅಮರ್ ಕೊಟ್ಟಿರುವ ಸಿ.ಡಿ.ಯಲ್ಲಿ ಏನಿದೆಯೋ ನೋಡೋಣ ಎಂದು ನೋಡಿದೆವು. ಅದರಲ್ಲಿ ಧ್ಯಾನ ಹೇಗೆ ಮಾಡಬೇಕು ಎಂದು ಚೆನ್ನಾಗಿ ತೋರಿಸಿದ್ದಾರೆ. ಆಗ ನನಗೆ ತುಂಬಾ ಬೇಜಾರಾಯಿತು, ಸಿ.ಡಿ ಇಷ್ಟು ದಿನ ನನ್ನ ಬಳಿ ಇದ್ದರೂ ನೋಡಲೇ ಇಲ್ಲವಲ್ಲಾ ಎಂದೆನಿಸಿತು. ಅಂದಿನಿಂದ ನಿಧಾನವಾಗಿ ಧ್ಯಾನ ಮಾಡಲು ಶುರುಮಾಡಿದೆನು. ಪ್ರಾರಂಭದಲ್ಲಿ ಸ್ವಲ್ಪ ಹೊತ್ತು ಕೂಡಾ ಧ್ಯಾನಕ್ಕೆ ಕುಳಿತುಕೊಳ್ಳಲು ಆಗುತ್ತಿರಲಿಲ್ಲ. ಆದರೆ ಈಗ ಒಂದು ಗಂಟೆಯ ಕಾಲ ಕುಳಿತುಕೊಳ್ಳಬಲ್ಲೆ.

 

ಧ್ಯಾನಕ್ಕೆ ಬಂದ ಮೇಲೆ ನನಗೆ ತುಂಬಾ ದಿನಗಳಿಂದ ಪೀಡಿಸುತ್ತಿದ್ದ ಕತ್ತು ನೋವು ಕಡಿಮೆಯಾಯಿತು. ಧ್ಯಾನದ ಬಗ್ಗೆ ತುಂಬಾ ವಿಷಯಗಳನ್ನು ನನ್ನ ಗೆಳತಿ ಗೌತಮಿಯನ್ನು ಕೇಳಿ ತಿಳಿದುಕೊಳ್ಳುತ್ತಿದ್ದೆನು. 2013ರಲ್ಲಿ ನನಗೆ ಮದುವೆಯಾಯಿತು. ನಾನು ಗರ್ಭಿಣಿ ಆದ ಮೇಲೆ ಒಂದು ದಿನ ಧ್ಯಾನದಲ್ಲಿ ಗೂಳಿ ನಮ್ಮ ಮನೆಯೊಳಗೆ ಬರುತ್ತಿರುವಂತೆ ದೃಶ್ಯ ಕಾಣಿಸಿತು, ನನಗೆ ಗಂಡು ಮಗು ಹುಟ್ಟಬಹುದು ಎಂದುಕೊಂಡೆನು. ಜನವರಿ, 29,2015ರಂದು ನನಗೆ ಗಂಡು ಮಗು ಹುಟ್ಟಿತು. ಗ್ರೇಟ್ ಮಾಸ್ಟರ್ ನಮ್ಮ ಮನೆಗೆ ಬಂದರು ಎಂದು ಎಲ್ಲರೂ ಹರ್ಷಿತಗೊಂಡೆವು.

 

ಮಗು ಹೊಟ್ಟೆಯಲ್ಲಿದ್ದಾಗ, ಅದರ ಮೊದಲನೆಯ ಚಲನೆಯೇ ಧ್ಯಾನದಲ್ಲಿ ಕುಳಿತಿದ್ದಾಗ ಅನುಭವಕ್ಕೆ ಬಂದಿತು. ನಾನು ಗರ್ಭಿಣಿ ಆಗಿದ್ದಾಗ ಪತ್ರೀ ಸಾರ್‌ರವರನ್ನೂ ಭೇಟಿ ಮಾಡಿದೆನು. ಅವರು ಬಳ್ಳಾರಿಯಲ್ಲಿ ಪಿರಮಿಡ್ ಪ್ರಾರಂಭೋತ್ಸವಕ್ಕೆ ಬಂದಿದ್ದರು. ನಾನು ನಮ್ಮ ಯಜಮಾನರು ಹೋಗಿದ್ದೆವು. ಹೋಗುವ ಮುಂಚೆ ಪತ್ರೀ ಸಾರ್ ಜೊತೆ ಮಾತನಾಡಬೇಕೆಂದುಕೊಂಡೆನು. ಆದರೆ ಅಲ್ಲಿಗೆ ಹೋದ ಮೇಲೆ ನನಗೆ ಆ ನಂಬಿಕೆ ಇಲ್ಲದಾಯಿತು, ತುಂಬಾ ಜನರು ಬಂದಿದ್ದರು. ಕಾರ್ಯಕ್ರಮ ಮುಗಿಯಿತು. ಸರ್‌ರವರು ವೇದಿಕೆಯಿಂದ ಇಳಿದು ಹೊರಟು ಹೋಗುತ್ತಿದ್ದರು. ಅವರ ಸುತ್ತಲೂ ಜನರು ಸೇರಿದ್ದರು. ನಮ್ಮ ಯಜಮಾನರು ಅವರಿಗೆ ಗೊತ್ತಿದ್ದ ಅಂಕಲ್‌ರನ್ನು ಸರ್ ಬಳಿಗೆ ಕರೆದುಕೊಂಡು ಹೋಗಿ ಎಂದು ಕೇಳಿದರು. ಅಲ್ಲಿಗೆ ಹೋದ ಮೇಲೆ ಅವರೊಂದಿಗೆ ಏನು ಮಾತನಾಡಬೇಕೆಂದು ತಿಳಿಯಲಿಲ್ಲ. ಫೋಟೋ ತೆಗೆಸಿಕೊಂಡೆವು.

 

ಅಲ್ಲಿ ಪಿರಮಿಡ್ ಕಟ್ಟಿಸಲು ಪ್ಲಾಟ್ ನೀಡಿದ ಅಂಕಲ್‌ರವರ ಮುಂದೆ, ಪತ್ರೀಜಿ, "ಇಲ್ಲಿ ಮುಂದೆ ಪಿರಮಿಡ್ ಕಟ್ಟಿಸಿ, ಯಾರು ಅವರ ಊರಿಗೆ ಕೊಡುಗೆಯಾಗಿ ನೀಡುತ್ತಾರೆ?" ಎಂದು ಕೇಳಿದರು. ಆಗ ನಮ್ಮ ಯಜಮಾನರು ಕೈ ಎತ್ತಿದರು. ನನಗೆ ತುಂಬಾ ಸಂತೋಷವಾಯಿತು. ಮುಂದೆ ನಮ್ಮೂರಲ್ಲೂ ಕೂಡಾ ಪಿರಮಿಡ್ ಬರುತ್ತದೆ ಎಂದು ಆಶಿಸುತ್ತಿದ್ದೇನೆ.

 

 

ಅರುಣ, ಬಳ್ಳಾರಿ

ಫೋ: + 91 81974 02524

Go to top