" ಎಲ್ಲರೊಂದಿಗೆ ನನ್ನ ಬಾಂಧವ್ಯ ಮಧುರವಾಗಿದೆ "

 

 

ನನ್ನ ಹೆಸರು ಉಷಾ. ನನಗೆ 2014ರಲ್ಲಿ ಮಲ್ಲೇಶ್ವರಂ ಮಿಲ್ಕ್‌ಕಾಲೋನಿಯಲ್ಲಿರುವ "ಮುನೇಶ್ವರ ಧ್ಯಾನ ಕೇಂದ್ರ"ದಲ್ಲಿ ಧ್ಯಾನದ ಪರಿಚಯವಾಗಿ, ಆಗಿನಿಂದಲೇ ನಾನು ಧ್ಯಾನ ಮಾಡಲು ಶುರುಮಾಡಿದೆ. ಧ್ಯಾನ ಶುರು ಮಾಡಿದ ಮೊದಲ ದಿನದಿಂದಲೇ ನನಗೆ ಧ್ಯಾನಾನುಭವಗಳು ಶುರುವಾದವು. ಮೊದಲನೇ ದಿನ ಧ್ಯಾನ ಮಾಡುವಾಗ ಧ್ಯಾನದಲ್ಲಿ ನಾಲ್ಕು ಋಷಿ-ಮುನಿಗಳು ಈಜುಕೊಂಡು ಹೋಗಿ ಸಮುದ್ರ ಮಧ್ಯದಲ್ಲಿ ನನ್ನನ್ನು ಕೂರಿಸಿ ಅವರಷ್ಟಕ್ಕೆ ಅವರು ಯಜ್ಞ ಮಾಡುತ್ತಿದ್ದರು ಮತ್ತು ನಾನು ಧ್ಯಾನ ಮಾಡುತ್ತಿರುವ ದೃಶ್ಯ ಕಂಡುಬಂದಿತು. ನನ್ನ ಆಜ್ಞಾಚಕ್ರ ಧ್ಯಾನಮಾಡಿದ ಮೊದಲನೇ ದಿನವೇ ಉತ್ತೇಜಿತವಾಯಿತು. ಧ್ಯಾನ ಮಾಡುವಾಗ ಬೆಳಕು ಕಾಣಿಸುತ್ತದೆ. ಜೀವನದಲ್ಲಿ ನನಗೆ ಬೇಕಾದುದೆಲ್ಲಾ ನನಗೆ ದೊರೆಯುತ್ತಿದೆ. ಧ್ಯಾನಕ್ಕೆ ಬರುವ ಮೊದಲು ನನಗೆ ಆರೋಗ್ಯ ಸರಿ ಇರಲಿಲ್ಲ. ಮನೆಯೊಳಗೆ ಕಾಲಿಡಲು ಹೆದರಿಕೆಯಾಗುತ್ತಿತ್ತು ಒಳಗೆ ಹೋಗಲು ನನ್ನಿಂದ ಆಗುತ್ತಿರಲಿಲ್ಲ ಯಾವುದೋ ನಕಾರಾತ್ಮಕ ಶಕ್ತಿ ನನ್ನನ್ನು ಮನೆಯಲ್ಲಿ ಕಾಲಿಡಲು ಬಿಡುತ್ತಿರಲಿಲ್ಲ. ಆದರೆ ಧ್ಯಾನಕ್ಕೆ ಬಂದ ಮೇಲೆ ನಾನೊಬ್ಬಳೆ ಧೈರ್ಯದಿಂದ ಮನೆಯಲ್ಲಿ ಇರುತ್ತಿದ್ದೇನೆ.
ಸತ್ತುಹೋದ ನನ್ನ ತಂದೆ-ತಾಯಿಗಳನ್ನು ನೋಡುವ ಆಸೆ ನನಗೆ ತುಂಬಾ ಇತ್ತು. ಆ ನನ್ನ ಆಸೆ ನೆರವೇರಿತು. ಅವರ ಆತ್ಮಗಳನ್ನು ಮತ್ತು ಮರಣಹೊಂದಿದ ನನ್ನ ಬಂಧುಗಳ ಆತ್ಮಗಳನ್ನು ನಾನು ಧ್ಯಾನದಲ್ಲಿ ನೋಡುವಂತಾಗಿದೆ. ಭಯವೂ ಇಲ್ಲವಾಗಿದೆ. ಭವಿಷ್ಯದ ಆಗು ಹೋಗುಗಳ ಮುನ್ಸೂಚನೆಗಳು ಸಿಗುತ್ತಿವೆ. ನಾನು ಎಲ್ಲರಿಗೂ ಧ್ಯಾನದ ಬಗ್ಗೆ ತಿಳಿಸಿ ಹೇಳುತ್ತಿರುತ್ತೇನೆ. ನನ್ನ ಮಗಳು ಕೃತಿ ಇಂಜನಿಯರಿಂಗ್ ಮುಗಿಸುವ ಮೊದಲೇ ಇಂಟರರ್ನ್‌ಶಿಪ್ ಸಿಕ್ಕಿತು. ಪ್ರಾಜೆಕ್ಟ್‌ಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾಳೆ. ಅವಳೂ ಮತ್ತು ನಾನು ಧ್ಯಾನಕ್ಕೆ ಶರಣಾಗಿದ್ದೇವೆ. ಅವಳ ಅನುಭವಗಳು ಸಹ ನನಗಿಂತ ಒಂದು ಪಟ್ಟು ಜಾಸ್ತಿಯಾಗಿಯೇ ಇದೆ. ಅವಳು ನನ್ನನ್ನು ಇನ್ನೂ ಹೆಚ್ಚು ಧ್ಯಾನ ಮಾಡಲು ಪ್ರೇರೇಪಿಸುತ್ತಾಳೆ. ಧ್ಯಾನದ ಮಹಿಮೆ ನಮ್ಮನ್ನು ಆಶ್ಚರ್ಯಚಕಿತರನ್ನಾಗಿಸಿದೆ. ಎಲ್ಲರೊಂದಿಗೆ ನನ್ನ ಬಾಂಧವ್ಯ ಮಧುರವಾಗಿದೆ.
ಎಲ್ಲಾ ರೀತಿಯಲ್ಲೂ ನಮ್ಮೆಲ್ಲರ ಸುಖಮಯ ಜೀವನಕ್ಕೆ ದಾರಿ ತೋರಿದ, ಅದ್ಭುತ ಅನುಭವಗಳ ಭಂಡಾರ ತುಂಬಿಸಿದ ’ಆನಾಪಾನಸತಿ’ ಧ್ಯಾನಕ್ಕೆ ಮತ್ತು ಈ ಧ್ಯಾನಪದ್ಧತಿಯನ್ನು ಪರಿಚಯಿಸಿದ ಬ್ರಹ್ಮರ್ಷಿ ಸುಭಾಷ್ ಪತ್ರೀಜಿಯವರಿಗೆ ಅನಂತಾನಂತ ವಂದನೆಗಳು.

 

ಉಷಾ, ಬೆಂಗಳೂರು

ಫೋ: +91 9964702252

Go to top