" ಧ್ಯಾನ ಸರ್ವ ರೋಗ ನಿವಾರಿಣಿ "

 

 

ನನ್ನ ಹೆಸರು ಜಗದಾಂಬ. ನಾನು ಉಪಾಧ್ಯಾಯಿನಿಯಾಗಿ ಕೆಲಸ ಮಾಡುತ್ತಿದ್ದು, ಈಗ ನಿವೃತ್ತಿ ಹೊಂದಿದ್ದೇನೆ. 4 ವರ್ಷಗಳ ಹಿಂದೆ ಮಲ್ಲೇಶ್ವರದ ಮಿಲ್ಕ್‌ಕಾಲೊನಿಯಲ್ಲಿರುವ ಮುನೇಶ್ವರ ಪಿರಮಿಡ್ ಧ್ಯಾನಕೇಂದ್ರ ದಲ್ಲಿ ಧ್ಯಾನ ಪರಿಚಯವಾಯಿತು. ಅಂದಿನಿಂದಲೂ ನಾನು ಧ್ಯಾನಕೇಂದ್ರದಲ್ಲಿ ಪ್ರತಿದಿನ ಸಂಜೆ 6-30 ರಿಂದ 7-30 ರವರೆಗೆ ಜೀವರತ್ನ ಮೇಡಮ್ ಅವರ ನೇತೃತ್ವದಲ್ಲಿ ನಡೆಯುವ ಸಮಷ್ಟಿ ಧ್ಯಾನದಲ್ಲಿ ಭಾಗವಹಿಸುತ್ತಿದ್ದೇನೆ.
ನನಗೆ ಕಣ್ಣುಗಳಲ್ಲಿ ಪೊರೆಯುಂಟಾಗಿ, ಒಂದು ಕಣ್ಣಿನ ಪೊರೆ ಆಪರೇಶನ್ ಆಗಿತ್ತು. ಇನ್ನೊಂದು ಕಣ್ಣಿನ ಪೊರೆಯ ಅಪರೇಶನ್‌ಗಾಗಿ ದಿನಾಂಕ ನಿಗದಿಯಾಗಿತ್ತು. ಇತರ ಧ್ಯಾನಿಗಳ ಅನುಭವಗಳನ್ನು ಕೇಳಿ ನನ್ನಲ್ಲೂ ಉತ್ಸುಕತೆ ಉಂಟಾಯಿತು. ನಾನೇಕೆ ಪ್ರಯೋಗ ಮಾಡಬಾರದೆಂದು ಆಲೋಚಿಸಿ ಪ್ರತಿದಿನ ಬೆಳಿಗ್ಗೆ 3 ಗಂಟೆಯಿಂದ 6 ಗಂಟೆವರೆಗೆ ೩ ತಾಸು ಧ್ಯಾನ ಮಾಡಲು ಶುರುಮಾಡಿದೆ. ಹೀಗೆ 70 ದಿನಗಳು ಮಾಡಿದ ನಂತರ ವೈದ್ಯರಲ್ಲಿ ಹೋಗಿ ಪರೀಕ್ಷಿಸಿದಾಗ, ನನ್ನ ಕಣ್ಣಿನ ಪೊರೆ ಕಣ್ಮರೆಯಾಗಿರುವುದಾಗಿಯೂ, ಪೊರೆ ಆಪರೇಶನ್ ಅವಶ್ಯಕತೆ ಇಲ್ಲವೆಂದೂ ವೈದ್ಯರೂ ತಿಳಿಸಿದರು. ಇದರಿಂದ ನನಗೂ ಮತ್ತು ನನ್ನ ಕುಟುಂಬದವರಿಗೂ ತುಂಬಾ ಸಂತೋಷವಾಯಿತು.
ಧ್ಯಾನಾಭ್ಯಾಸದಿಂದಾಗಿ ಮನಸ್ಸು ಶಾಂತವಾಗಿದೆ, ದೇಹ ಹಗುರವಾಗಿದೆ. ಮುಖದಲ್ಲಿ ಒಳ್ಳೆಯ ಕಳೆ ಬಂದಿದೆಯೆಂದು ಎಲ್ಲರೂ ಹೇಳುತ್ತಾರೆ. ಧ್ಯಾನದಲ್ಲಿ ಬ್ರಹ್ಮರ್ಷಿ ಸುಭಾಷ್ ಪತ್ರೀಜಿ ಕಾಣಿಸಿಕೊಳ್ಳುತ್ತಾರೆ. ಒಂದು ಪತ್ರೀಜಿ ಕಾಣಿಸಿಕೊಂಡು, ಲೈಬ್ರರಿಯಲ್ಲಿನ ಅನೇಕ ಪುಸ್ತಕಗಳ ಮಧ್ಯದಿಂದ ಒಂದು ಪುಸ್ತಕ ತೆಗೆದು ತೋರಿಸಿ ಅದನ್ನು ಓದುವಂತೆ ತಿಳಿಸಿದರು. ಅದು ಶಿರಡಿ ಸಾಯಿಬಾಬಾರ ಬಗ್ಗೆ ಪುಸ್ತಕವಾಗಿತ್ತು. ಇನ್ನೊಮ್ಮೆ, ನಾನು ಶಿರಡಿಗೆ ಹೋದಂತೆ, ಸಾಯಿಬಾಬಾ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿದಂತೆ ಅನುಭವವಾಯಿತು. ನನ್ನ ಕುಟುಂಬ ಮತ್ತು ಆಪ್ತೇಷ್ಟರ ನನ್ನ ಸಂಬಂಧ ತೃಪ್ತಿಕರವಾಗಿದೆ. ಧ್ಯಾನದಲ್ಲಿದೆ ನಮ್ಮ ಜೀವನದ ಸಾರ್ಥಕತೆ, ಆದ್ದರಿಂದ ಎಲ್ಲರೂ ಧ್ಯಾನಿಗಳಾಗಿರಿ. ಧ್ಯಾನವನ್ನು ಪರಿಚಯಮಾಡಿದ ನಮ್ಮ ಗುರುಗಳಾದ ಸುಭಾಷ್ ಪತ್ರೀಜಿಯವರಿಗೆ ಅನಂತ, ಅನಂತ ವಂದನೆಗಳು.

 

 

ಜಗದಾಂಬ, ಬೆಂಗಳೂರು

ಫೋ: +91 96639 82995

Go to top