“ ಏಳು ದಿನಗಳು ”

 

 

ಪ್ರಿಯ ಧ್ಯಾನಿಗಳೇ, ನನ್ನ ಹೆಸರು ಖ.ಚಂದ್ರಮೋಹನ್. ಏಪ್ರಿಲ್ 2000ನೆ ಇಸವಿಯಲ್ಲಿ, ಮೆಹಬೂಬ್‌ನಗರದಲ್ಲಿ ನನಗೆ ಧ್ಯಾನ ಪರಿಚಯವಾಯಿತು. ಧ್ಯಾನಕ್ಕೆ ಬರುವ ಎರಡು ವರ್ಷಗಳ ಮುಂಚೆ ಇಂಟರ್ ಮೀಡಿಯೇಟ್ ಪರೀಕ್ಷೆಯಲ್ಲಿ ಫೇಲ್ ಆಗುತ್ತಾ, ಮನೆಯಲ್ಲೂ, ಹೊರಗೂ ಎಲ್ಲರಿಂದ ಬರುತ್ತಿದ್ದ ಬೈಯ್ಗುಳಗಳೊಂದಿಗೆ, ಓದಿನ ಮೇಲೆ ಇಷ್ಟವಿಲ್ಲದೇ ಏನು ಮಾಡಲೂ ತಿಳಿಯದೇ, ಮನೆ ಬಿಟ್ಟು ಹೋಗಬೇಕೆಂದುಕೊಂಡೆನು. ಹೀಗೆ ಹಲವಾರು ಆಲೋಚನೆಗಳೊಂದಿಗೆ ಕುಗ್ಗಿಹೋಗುತ್ತಾ, ಜೀವನದ ಗುರಿ ಏನು ಎಂಬುದು ತಿಳಿಯದೇ, ಜೀವನದ ಬಗ್ಗೆ ಆಲೋಚಿಸುತ್ತಾ ಪರಿಹಾರ ಸಿಗದೆ, ನಿಧಾನವಾಗಿ ಸತ್ಯಾನ್ವೇಷಣೆಗಾಗಿ ಹಾತೊರೆಯುತ್ತಿದ್ದೆನು. ಆ ಸಮಯದಲ್ಲಿ ನನ್ನ ಸ್ನೇಹಿತ ಶ್ರೀಕಾಂತ್ ಮೂಲಕ ಮೆಹಬೂಬ್‌ನಗರದಲ್ಲಿ ಬ್ರಹ್ಮರ್ಷಿ ಪತ್ರೀಜಿಯವರ ಧ್ಯಾನದ ಕ್ಲಾಸ್‌ಗೆ ಹೋದೆನು. ಆದಿನ ಧ್ಯಾನದಲ್ಲಿ ಪಡೆದ ಆನಂದವನ್ನು ನಾನು ಯಾವತ್ತಿಗೂ ಮರೆಯಲಾರೆನು. ನನಗೆ ಒಂದು ವಜ್ರಾಯುಧ ಸಿಕ್ಕಿದ್ದಷ್ಟು ಆನಂದವನ್ನು ಅನುಭವಿಸಿದೆನು.

 

 ಅಂದಿನಿಂದ, ಪ್ರತಿದಿನ ಧ್ಯಾನ, ಸ್ವಾಧ್ಯಾಯ, ಸಜ್ಜನಸಾಂಗತ್ಯಗಳಿಂದ ನನ್ನಲ್ಲಿ ಎಷ್ಟೋ ಬದಲಾವಣೆ ಕಂಡಿತು. ಆ ಮಾರ್ಗದಲ್ಲಿ ನಾನು ಹೈದರಾಬಾದ್‌ನಲ್ಲಿ ಪದವಿ (BCA), ಮತ್ತು ಸ್ನಾತಕೋತ್ತರ ಪದವಿ (MBA)ಯನ್ನು ಉತ್ತಮವಾದ ಫಲಿತಾಂಶದೊಂದಿಗೆ ಪೂರ್ಣಗೊಳಿಸಿದೆನು. ಅಷ್ಟೇ ಅಲ್ಲದೇ, ಒಬ್ಬ ವ್ಯಕ್ತಿಯಾಗಿ ನನ್ನಲ್ಲಿ ಎಷ್ಟೋ ಧೈರ್ಯ, ಪ್ರಶಾಂತತೆ ಮತ್ತು ನಂಬಿಕೆಯು ವೃದ್ಧಿಯಾಯಿತು. ಪತ್ರೀಜಿಯವರ ಪ್ರತಿ ಕ್ಲಾಸ್, ಟ್ರೆಕ್ಕಿಂಗ್, ತಿರುಪತಿಯಲ್ಲಿನ ಕಾರ್ಯಕ್ರಮಗಳು, ಎಷ್ಟೋ ಜನ ಪಿರಮಿಡ್ ಮಾಸ್ಟರ‍್ಸ್‌ರ ಅನುಭವಗಳನ್ನು ಕೇಳುವುದರಿಂದ ನನ್ನ ಜ್ಞಾನವು ಇನ್ನಷ್ಟು ಹೆಚ್ಚಿತು.

 

 ಆ ದಿಶೆಯಲ್ಲಿ H.R.Executive ಆಗಿ ಹೈದರಾಬಾದ್‌ನಲ್ಲಿ 2 ವರ್ಷಗಳು ಕೆಲಸ ಮಾಡಿದ ನಂತರ,  2007ರಲ್ಲಿ ಬೆಂಗಳೂರಿಗೆ ವರ್ಗಾವಣೆಯಾಗಿ 2009ರವರೆಗೆ, ಉದ್ಯೋಗದಲ್ಲಿದ್ದುಕೊಂಡೆ ಎಲ್ಲಾ ರೀತಿಯ ಧ್ಯಾನದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾ ಇದ್ದೆನು. PSSM ನಲ್ಲಿ ಸ್ವಯಂಸೇವಕನಾಗಿ ಕೆಲಸ ಮಾಡುವುದರಿಂದ ತುಂಬಾ ಆನಂದಗೊಳ್ಳುತ್ತಿದ್ದೆನು. 2009 ಆಗಸ್ಟ್‌ನಲ್ಲಿ ಕೆಲಸಕ್ಕೆ ರಾಜೀನಾಮೆ ಕೊಡುವುದರೊಂದಿಗೆ ಪೂರ್ಣಪ್ರಮಾಣದ ಸ್ವಯಂಸೇವಕನಾಗಿ “ಧ್ಯಾನ ಕಸ್ತೂರಿ” ಮತ್ತು “ಪಬ್ಲಿಷಿಂಗ್” ವಿಭಾಗವನ್ನು ಪಿರಮಿಡ್ ಮಾಸ್ಟರ್ ಆದ ಅಯ್ಯಪ್ಪ, ಅನಿತ ಮೇಡಂ, ಕೃಷ್ಣಚೈತನ್ಯರೊಂದಿಗೆ ಸೇರಿ ಪ್ರಚಾರ ವಿಶೇಷತೆಗಳನ್ನು ಗಮನಿಸುತ್ತಾ ಪತ್ರೀಸಾರ್‌ರೊಂದಿಗೆ ಬೆಂಗಳೂರು, ಮತ್ತು ಕರ್ನಾಟಕದಲ್ಲಿನ ಎಲ್ಲಾ ಪ್ರದೇಶಗಳಿಗೆ ಹೋಗಿ, ಅಲ್ಲಿನ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಾ ಅದರಲ್ಲಿ ಪಾಲ್ಗೊಳ್ಳುವುದರಿಂದ ಬಹಳಷ್ಟನ್ನು ಕಲಿತುಕೊಂಡೆನು. ಪತ್ರಿಸಾರ್‌ರವರ ಸಾಂಗತ್ಯದಲ್ಲಿ ಇರುವುದು, ಅವರ ಜೊತೆ ಪ್ರಯಾಣಿಸುವುದು ನಾನೆಂದೂ ಕನಸಿನಲ್ಲಿ ಸಹ ಊಹಿಸಿರದ ಘಟನೆಗಳು. ಇವು ನನ್ನ ಜೀವನದ ದಿಕ್ಕನ್ನೇ ಬದಲಾಯಿಸಿದವು. 2011 ಡಿಸೆಂಬರ್‌ನಲ್ಲಿ ಪತ್ರೀಜಿಯವರ ಸಮ್ಮುಕದಲ್ಲಿ ಪಿರಮಿಡ್ ಮಾಸ್ಟರ್ ಶಾಲಿನಿಯೊಂದಿಗೆ ಚೆನ್ನೈನಲ್ಲಿ ನನ್ನ ವಿವಾಹವಾಯಿತು. ಆ ನಂತರ ಸಾರ್‌ರವರ ಆದೇಶದ ಮೇರೆಗೆ 2012 ಮಾರ್ಚ್‌ನಿಂದ ಪಿರಮಿಡ್ ವ್ಯಾಲಿಯಲ್ಲಿ ಕಾರ್ಯಕ್ರಮಗಳನ್ನು ಮತ್ತು ಸ್ವಯಂಸೇವಕ ಸಿಬ್ಬಂದಿ ಮತ್ತು ಬೋಧಕರನ್ನು ನೋಡಿಕೊಳ್ಳುವ ಜವಾಬ್ಧಾರಿಯನ್ನು ಅನುಭವವುಳ್ಳ ಪಿರಮಿಡ್ ವ್ಯಾಲಿ ಟ್ರಸ್ಟಿಗಳ ಸಲಹೆಗಳೊಂದಿಗೆ ಪ್ರತಿದಿನ ಹೊಸ ಹೊಸ ವಿಷಯಗಳನ್ನು ಕಲಿಯುತ್ತಾ ಉತ್ಸಾಹದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. ಶಾಲಿನಿ ಕೂಡಾ ಪಿರಮಿಡ್ ವ್ಯಾಲಿ ಪುಸ್ತಕಮಳಿಗೆಯ ಚಟುವಟಿಕೆಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾಳೆ.

 

 ಹೀಗೆ ನನ್ನ ಹದಿನೈದು ವರ್ಷಗಳ ಆಧ್ಯಾತ್ಮಿಕ ಪ್ರಯಾಣದಲ್ಲಿ ಎಷ್ಟೋ ಅನುಭವಗಳ ನಂತರ, ಒಂದು ದಿನ ಪಿರಮಿಡ್ ವ್ಯಾಲಿಯ ಕಬೀರ್ ಭವನದಲ್ಲಿ ನಡೆದ’ನಿವಾಸಿ ಧ್ಯಾನ ಕಾರ್ಯಕ್ರಮ’ (ರೆಸಿಡೆಂಟ್ ಮೆಡಿಟೇಷನ್ ಪ್ರೋಗ್ರಾಂ)ದಲ್ಲಿನ ಭಾಗವಾಗಿ ಪತ್ರೀಜಿಯವರು ವೀಡಿಯೋ ಪ್ರವಚನ ಮಾಡುತ್ತಾ “ನಾನು 12 ದಿನಗಳು” ಕೇವಲ “ನೀರು” ಮಾತ್ರ ಕುಡಿಯುತ್ತಾ ಧ್ಯಾನ ಪ್ರಚಾರ ಮತ್ತು ಪ್ರಯೋಗಗಳು, ಕ್ಲಾಸುಗಳನ್ನು ನಿರ್ವಹಿಸುತ್ತಾ ತುಂಬಾ ಉತ್ಸಾಹದಿಂದ ಕೆಲಸಗಳನ್ನು ಮಾಡಿದೆನು’ ಎಂದು ಹೇಳಿದರು. ಆ ಮಾತುಗಳು ನನ್ನನ್ನು ಯೋಚಿಸುವಂತೆ ಮಾಡಿದವು. ಕೆಲವು ದಿನಗಳು ಕಳೆದನಂತರ ಪತ್ರೀಜಿಯವರು ಪಿರಮಿಡ್ ವ್ಯಾಲಿಯಲ್ಲಿ ಸಜ್ಜನಸಾಂಗತ್ಯದಲ್ಲಿ "ನಾನು ಒಂದು ವರ್ಷ ಕೇವಲ ಟೊಮೋಟೋ ಸೂಪ್, ಒಂದು ವರ್ಷ ’ಮೌನದಲ್ಲಿ ಇದ್ದುದ್ದರಿಂದ ನನ್ನಲ್ಲಿ ಎಷ್ಟೋ ಸಂಕಲ್ಪಶಕ್ತಿ ಬಂದಿತು" ಎಂದು ಹೇಳಿದರು. "ಹಾಗೆ ಮಾಡುವುದರಿಂದ ನಮ್ಮ ಆತ್ಮಶಕ್ತಿಯನ್ನು ವೃದ್ಧಿಸಿಕೊಳ್ಳುವುದರೊಂದಿಗೆ ನಮ್ಮ ಮನಸ್ಸು ಕೂಡಾ ನಮ್ಮ ಅಧೀನದಲ್ಲಿ ಇರುತ್ತದೆ” ಎಂದು ಹೇಳಿದ ಮಾತುಗಳು ನನ್ನನ್ನು ಇನ್ನೂ ಧ್ಯಾನದಾಳಕ್ಕೆ ಕರೆದುಕೊಂಡು ಹೋಯಿತು.

 

 ಸೆಪ್ಟೆಂಬರ್ 1ನೆಯ ತಾರೀಖಿನಿಂದ 7 ದಿನಗಳ ಕಾಲ ಕೇವಲ ನೀರು ಮಾತ್ರ ಕುಡಿಯಬೇಕು ಎಂದೆನಿಸಿತು. ಪತ್ರೀಜಿಯವರಿಗೆ ಹೇಳಿದಾಗ ನಿಸ್ಸಂದೇಹವಾಗಿ ಆಚರಿಸು ಎಂದು ಹೇಳಿದರು. ಅವರ ಮಾತುಗಳಿಂದ ನಾನು ಮತ್ತಷ್ಟು ಆನಂದಗೊಂಡು, ಅದೇ ಉತ್ಸಾಹದಿಂದ 7 ದಿನಗಳನ್ನು ಬರಿ ನೀರಿನೊಂದಿಗೆ ಕಳೆದೆನು. ಧ್ಯಾನ ಮಾಡಿದಾಗ 7 ರೀತಿಯ ಅನುಭವಗಳು ಆಗುವಂತೆ, ಆ 7 ದಿನಗಳು ಒಂದೊಂದು ದಿನ ಒಂದೊಂದು ಅನುಭವವಾಯಿತು.

 

 ಮೊದಲನೆಯ ದಿನ ಇಡೀ ದಿನ ಶರೀರವೆಲ್ಲಾ ಹಗುರವಾದಂತೆ ತುಂಬಾ ಉತ್ಸಾಹಭರಿತವಾಗಿತ್ತು. ಈ ವಾರದ 7 ದಿನಗಳೂ ನೀರು ಸೇವಿಸಿದಿದ್ದರಿಂದ ನೀರಿನ ಮೇಲೆ ಅಮಿತವಾದ ಗೌರವ ಉಂಟಾಯಿತು. ನಮ್ಮ ಆಲೋಚನೆಗಳಿಂದ ನೀರು ಹೇಗೆ ಪ್ರತಿಕ್ರಿಯೆ ನೀಡುತ್ತದೆ ಎನ್ನುವ “ಸ್ಪಿರುಚ್ಯುವಲ್ ಇಂಡಿಯಾ ಮ್ಯಾಗ್‌ಜೈನ್” ನ್ನಲ್ಲಿನ ಒಂದು ಲೇಖನ ನೆನಪಿಗೆ ಬಂದು ಅದನ್ನು ಕಾರ್ಯಗತಗೊಳಿಸಿದ್ದರಿಂದ ನನಗೆ ಇನ್ನೂ ಆನಂದವಾಯಿತು. ಪತ್ರಿಸಾರ್ ಯಾವಾಗಲೂ ಊಟ ಮಾಡುವಾಗ ಕುಡಿಯುವ ನೀರನ್ನು ಯಾವಾಗಲೂ ತನ್ನೊಂದಿಗೆ ಸಮಾನವಾಗಿ ಏಕೆ ಕಾಣುತ್ತಾರೋ ನನಗೆ ಅನುಭವಪೂರ್ವಕವಾಗಿ ಅರ್ಥವಾಯಿತು. ನಾವು ಕುಡಿಯುವ ನೀರನ್ನು ಕೃತಜ್ಞತಾಭಾವದಿಂದ ಕುಡಿದರೆ ಅದು ಕ್ರಿಸ್ಟಲ್ ನೀರಿನಂತೆ ಬದಲಾಗುತ್ತದೆ ಎಂಬ ಸಂದೇಶ ಬಂದಿತು.

 

 ಈ ಏಳು ದಿನಗಳು ಪ್ರತಿದಿನ ಹೆಚ್ಚು ಧ್ಯಾನ, ಸ್ವಾಧ್ಯಾಯ, ವ್ಯಾಲಿಯ ಸಿಬ್ಬಂದಿ ವರ್ಗ ಮತ್ತು ಸ್ವಯಂಸೇವಕರೊಂದಿಗೆ ಸಜ್ಜನಸಾಂಗತ್ಯದೊಂದಿಗೆ ಪ್ರತಿದಿನ ವ್ಯಾಲಿಯಲ್ಲಿ ನಡೆಯುವ ಕಾರ್ಯಕ್ರಮಗಳುಮತ್ತು ಕೆಲಸಗಳಲ್ಲಿ ತುಂಬಾ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದೆನು. ಏಳು ದಿನಗಳು ಮನಸ್ಸಿನ ಸಹಜ ಗುಣವನ್ನು ತುಂಬಾ ಹತ್ತಿರದಿಂದ ನೋಡಿದೆನು. ಅದಕ್ಕೆ ಬೇಕಾದ ಧ್ಯಾನ, ಜ್ಞಾನವನ್ನು ನೀಡುತ್ತಾ ಮನಸ್ಸನ್ನು ಆಕ್ಕರೆಯಿಂದ ರೂಪಿಸಿಕೊಂಡಿದ್ದು ಹೊಸ ಅನುಭವ, ಶರೀರ-ಮನಸ್ಸು-ಬುದ್ಧಿ-ಆತ್ಮ ಎಲ್ಲವನ್ನೂ ಬೇರೆಬೇರೆಯಾಗಿ ನೋಡಿದ್ದು ಅದ್ಭುತವಾದ ಅನುಭವವಾಗಿತ್ತು.

 

 ಈ 7 ದಿನಗಳೂ ಶರೀರಕ್ಕೆ-ನೀರು, ಮನಸ್ಸಿಗೆ-ಉಲ್ಲಾಸ, ಬುದ್ಧಿಗೆ-ಜ್ಞಾನ, ಆತ್ಮಕ್ಕೆ-ಧ್ಯಾನ. ಹೀಗೆ ಸಮಭಾಗದಲ್ಲಿ, ಯಾವುದಕ್ಕೆ ಏನು ಕೊಡಬೇಕೋ ಅದು ಕೊಡುವುದರಿಂದ ಮನಸ್ಸು ದೈನಂದಿನ ಜೀವನದಲ್ಲಿ ತುಂಬಾ ಉತ್ಸಾಹದಿಂದ ಇರುತ್ತದೆ ಎಂದು ಕಂಡುಕೊಂಡೆನು, ಮುಖ್ಯವಾಗಿ “ವಾಕ್‌ಕ್ಷೇತ್ರದ” ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾದ ಅವಶ್ಯಕತೆಯಿದೆ. ಈ 7 ದಿನಗಳಲ್ಲಿ ಎಷ್ಟು ಅಗತ್ಯವೋ ಅಷ್ಟು ಮಾತನಾಡುವುದು. ಪಿರಮಿಡ್ ವ್ಯಾಲಿಯಲ್ಲಿ ನಿತ್ಯ ಅನ್ನದಾನದಲ್ಲಿ ಊಟ ಮಾಡುತ್ತಿದ್ದವರಿಗೆ ಬಡಿಸುತ್ತಿರುವಾಗ ನನ್ನ ಭಾವನೆಗಳು ನನ್ನ ಅಧೀನದಲ್ಲಿ, ನನ್ನ ಆದೇಶಾನುಸಾರ ನಡೆದುಕೊಳ್ಳುತ್ತಿರುವುದನ್ನು ಅನುಭವಪೂರ್ವಕವಾಗಿ ತಿಳಿದುಕೊಂಡೆನು.

 

 ಈ ಏಳು ದಿನಗಳೂ ಪಿರಮಿಡ್ ವ್ಯಾಲಿಯಲ್ಲಿ ಇದ್ದಿದ್ದು ನನ್ನ ಅದೃಷ್ಟವೆಂದು ಭಾವಿಸುತ್ತೇನೆ. ಈ ವಾತಾವರಣ ಅತ್ಯಂತ ಶಕ್ತಿಯುತವಾದ ಶಕ್ತಿಕ್ಷೇತ್ರದಲ್ಲಿದ್ದುದ್ದರಿಂದ ನನ್ನ ಕೆಲಸ, ಕಾರ್ಯಗಳು ಸರಿಯಾದ ರೀತಿಯಲ್ಲಿ ನೆರವೇರಿತು. ನನ್ನಲ್ಲಿ ‘ಅರಿವು’(awareness) ಮತ್ತು ‘ಅಂತರ್‌ವಾಣಿ’(Inner voice) ವೃದ್ಧಿಸಿತು. ಈ ಏಳು ದಿನಗಳು “Placebo” ಪುಸ್ತಕವು ನನಗೆ ತುಂಬಾ ಸಹಾಯಕವಾಯಿತು. ಶರೀರ, ಮನಸ್ಸು, ಮೆದುಳಿನ ಬಗ್ಗೆ ಕೂಲಂಕಷವಾಗಿ ತಿಳಿದುಕೊಂಡಿದ್ದರಿಂದ ಅದನ್ನು ಶಾಸ್ತ್ರೀಯ ದೃಕ್ಪಥದಲ್ಲಿ ನೋಡುತ್ತಾ ಅವುಗಳನ್ನು ಅನುಸರಿಸಿದ್ದರಿಂದ ಬಹಳಷ್ಟನ್ನು ಕಲಿತೆನು.

 

  ಕೊನೆಯದಿನ ಮಧ್ಯಾಹ್ನ “ಅಖಂಡ ಧ್ಯಾನ ಪ್ರಾಂಗಣದೊಳಗೆ ಹೋಗಿ ಅಲ್ಲಿ ೨ ಗಂಟೆಗಳ ಕಾಲ ಧ್ಯಾನ ಮಾಡಿದಾಗ, ಧ್ಯಾನದಲ್ಲಿ ಆಕಾಶದಷ್ಟು ಎತ್ತರವಿರುವ ಬುದ್ಧನು ಕಾಣಿಸಿದನು. ನಂತರ ಸಾಯಂಕಾಲ ವ್ಯಾಲಿಯಲ್ಲಿ ನಡೆಯುತ್ತಿರುವಾಗ” ಎಲ್ಲರಲ್ಲೂ ನಾನು ಬುದ್ಧನನ್ನು ಕಂಡೆನು.

 

 ಈ ಏಳು ದಿನಗಳೂ ಅತ್ಯಂತ ಅದ್ಭುತವಾದ ಅನುಭವ ಹೊಂದಿದ ನಂತರ ನನ್ನಲ್ಲಿ ಆದ ಬದಲಾವಣೆಗಳಲ್ಲಿ ಮುಖ್ಯವಾಗಿ ಎಲ್ಲರಲ್ಲೂ ಬುದ್ಧತ್ವವನ್ನು ನೋಡುವುದು. ಅವರ ಮೇಲೆ ಏನೂ ಭಾವನೆಗಳು ಇಲ್ಲದೇ ಹೊಸದಾಗಿ, ಕೃತಜ್ಞತಾ ಭಾವದೊಂದಿಗೆ ನೋಡುವುದು ನನಗೆ ತಿಳಿಯದಂತಹ ಬದಲಾವಣೆ. ಹೀಗೆ ಎಷ್ಟೋ ಬದಲಾವಣೆಗಳು. ಮನಸ್ಸಿನ ಮೇಲೆ ಹಿಡಿತ ಮತ್ತು ಸ್ನೇಹಭಾವ ಹೀಗೆ ಜ್ಞಾನ, ಸಹನೆ ಮತ್ತು ‘ಭಾವನೆಗಳ” ಮೇಲೆ ಹಿಡಿತ ಸಾಧಿಸಿದಂತೆ ಅನಿಸಿತು.

 

 ನಂತರ ಆಹಾರದ ಬಗ್ಗೆ ನಿಷ್ಠೆ, ಹಸಿವೆಯಾದರೆ ಮಾತ್ರ ತಿನ್ನುವುದು ಅಭ್ಯಾಸವಾಯಿತು. ನನ್ನ ಆಲೋಚನೆಯಲ್ಲಿ, ವರ್ತನೆಯಲ್ಲಿ ಬದಲಾವಣೆ ಕಾಣಿಸಿತು.. ನಂತರ USA ಯಿಂದ ಪತ್ರೀಜಿ ಫೋನ್ ಮಾಡಿದಾಗ, ನನ್ನ ೭ ದಿನಗಳ ನೀರಿನ ವ್ರತದ ಬಗ್ಗೆ ಮತ್ತು ಅನುಭವಗಳನ್ನು ಹೇಳಿದಾಗ, "ಆಗಾಗ ಹಾಗೆ ಮಾಡಿದರೆ “You improve your confidence”ಎಂದು ಹೇಳಿದರು. ಅದರಿಂದ ಆತ್ಮಾನಂದಕ್ಕೆ ಒಳಗಾದೆನು. ನನ್ನ ಹದಿನೈದು ವರ್ಷಗಳ ಆಧ್ಯಾತ್ಮಿಕ ಜೀವನವನ್ನು ಅನುಕ್ಷಣ ಪ್ರೋತ್ಸಾಹಿಸುತ್ತಾ ಸೂಚನೆಗಳನ್ನು ನೀಡುತ್ತಾ ಎಷ್ಟೋ ಅನುಭವಗಳನ್ನು ಮತ್ತು ದಿಶೆಯನ್ನು, ಮಾರ್ಗವನ್ನು ತೋರಿಸಿದ ಪ್ರಪಂಚದ ಆಧ್ಯಾತ್ಮಿಕ ಪರಮಗುರುವಾದ “ಬ್ರಹ್ಮರ್ಷಿಪತ್ರೀಜಿ” ಯವರಿಗೆ ನನ್ನ ಆತ್ಮಪ್ರಣಾಮಗಳು.

 

 

R.ಚಂದ್ರ ಮೋಹನ್

+91 8147093628

 

Go to top