" ಕೃಷ್ಣಾಪುರಂ ಗ್ರಾಮ, ವೆಲ್ದುತಿ ಮಂಡಲ, ಕರ್ನೂಲು ಜಿಲ್ಲೆ "

 

 

ನನ್ನ ಹೆಸರು ವೆಂಕಟರಾಮ. ನಮ್ಮ ಗ್ರಾಮಕ್ಕೆ ಬ್ರಹ್ಮರ್ಷಿ ಪತ್ರೀಜಿ ಬಂದಿದ್ದರು. ಹನುಮಂತ ರಾಮನ ಹತ್ತಿರ ಬೆಟ್ಟದ ಮೇಲೆ ಭೂಮಿ ಪೂಜೆ ಮಾಡಿ ’ಇಲ್ಲಿ ಶ್ರೀಕೃಷ್ಣ ಪಿರಮಿಡ್ ಧ್ಯಾನ ಮಂದಿರ ಕಟ್ಟಬೇಕು’ ಎಂದು ಹೇಳಿದರು. ನಮ್ಮ ಬಳಿ ಏನೂ ಇರಲಿಲ್ಲ. ನಮ್ಮ ಗ್ರಾಮದಲ್ಲಿ ಎಲ್ಲರೂ ತಮ್ಮ ಕೆಲಸವನ್ನು ಮುಗಿಸಿ ರಾತ್ರಿ 9ರಿಂದ ತಮಗೆ ಸಾದ್ಯವಾದಷ್ಟು ಹೊತ್ತು ಧ್ಯಾನ ಮಾಡಿ ಅಲ್ಲಿನ ಕೆಲಸವನ್ನು ಆಡುತ್ತಾ, ಹಾಡುತ್ತಾ ಪ್ರೇಮದಿಂದ ಮಾಡುವುದರೊಂದಿಗೆ ನಮ್ಮ ಧ್ಯಾನಸಾಧನೆ ಸಾಗುತ್ತಿತ್ತು. ಧ್ಯಾನ ಮಂದಿರ ಕಟ್ಟಿದ ಮೇಲೆ ನಮ್ಮ ಗ್ರಾಮ ಶಾಕಾಹಾರ ಗ್ರಾಮವಾಗಿ ಬದಲಾದುದರಿಂದ ಒಳ್ಳೆಯ ಫಸಲು ಬಂದು, ನಾವು ಆನಂದದಿಂದ ಯಾವುದೇ ಚಿಂತೆಗಳಿಲ್ಲದೇ ಏಕಾಗ್ರತೆಯಿಂದ ಧ್ಯಾನ ಮಾಡುತ್ತಿದ್ದೇವೆ. ಬ್ರಹ್ಮರ್ಷಿ ಪತ್ರೀಜಿಯವರ ಈ ಧ್ಯಾನದಿಂದ ನಮಗೆ ಮತ್ತು ನಮ್ಮ ಗ್ರಾಮಕ್ಕೆ ಎಷ್ಟೊ ಒಳಿತಾಗಿದೆ. ಶ್ರೀಕೃಷ್ಣ ಧ್ಯಾನಮಂದಿರ 31X31 ಅಳತೆಯಲ್ಲಿ, 700 ಅಡಿಗಳ ಬೆಟ್ಟದ ಮೇಲೆ ನಿರ್ಮಾಣವಾಗಿದೆ. ಈ ಭೂಮಂಡಲವೆಲ್ಲಾ ಆನಂದದಿಂದ ಧ್ಯಾನ ಮಾಡುತ್ತಿದೆ.

 

ಇಲ್ಲಿ ಧ್ಯಾನ ಮಾಡುತ್ತಿದ್ದಾಗ ನನಗೆ ಬ್ರಹ್ಮರ್ಷಿ ಪತ್ರೀಜಿ ಸೂಕ್ಷ್ಮಶರೀರದಲ್ಲಿ (ಆಸ್ಟ್ರಲ್) ಬಂದು ಪಿರಮಿಡ್ ಆಕಾರವನ್ನು ಕೊಟ್ಟರು. ಈ ಪಿರಮಿಡ್‌ಗೆ ಗುಣಾಕರ್‌ರೆಡ್ಡಿ, ವಿಜಯ್‌ಕುಮಾರ್ ರಿಂದ ನಕಾಶೆ (ಪ್ಲಾನ್) ತಯಾರಾಯಿತು. ೫ ತಿಂಗಳಲ್ಲೇ ಈ ಪಿರಮಿಡ್ ಅದ್ಭುತವಾಗಿ ನಿರ‍್ಮಾಣವಾಯಿತು. ಈಗ ನಮ್ಮ ಇಡೀ ಗ್ರಾಮವೆಲ್ಲಾ ಧ್ಯಾನ ಮಾಡುತ್ತಾ ಆನಂದದಿಂದ ಇದೆ.

 

 

ವೆಂಕಟರಾಮ

ಕೃಷ್ಣಾಪುರಂ ಗ್ರಾಮ

Go to top