" ಹಗುರಾಯಿತು ದೇಹ ಮತ್ತು ಮನಸ್ಸು"

 

 

ನಾನು ಸರಸ್ವತಿ.ಕೆ. ಸರಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಈ ಪಿರಮಿಡ್ ಧ್ಯಾನವು ಶ್ರೀಮತಿ ಶಕುಂತಲಾರವರಿಂದ ಪರಿಚಯವಾಯಿತು. ದಿನಾಂಕ 2/5/15ರಂದು ಬೆಂಗಳೂರಿನ ಪಿರಮಿಡ್ ವ್ಯಾಲಿಗೆ ಶಕುಂತಲಾರವರ ಜೊತೆ ಹೋಗಿದ್ದೆ. ನನಗೆ ಮೊದಲೇ ತಲೆ ಸುತ್ತು ಇದ್ದ ಕಾರಣ ಮೊದಲು ಧ್ಯಾನಮಾಡಿದಾಗ (First sitting) ಅದು ಮತ್ತಷ್ಟು ಹೆಚ್ಚಾದಂತಹ ಅನುಭವಾಯಿತು. ಆದರೆ ಅದೇ ದಿನ ಎರಡನೇ ಬಾರಿ(Second sittingನಲ್ಲಿ)ಧ್ಯಾನ ಮಾಡಿದಾಗ ಒಮ್ಮೆಲೇ ನನ್ನ ತಲೆಸುತ್ತು ಕಡಿಮೆ ಆಯಿತು.

 

ಪಿರಮಿಡ್ ವ್ಯಾಲಿಗೆ ಬಂದುಹೋದ ನಂತರ ಧ್ಯಾನವನ್ನು ಮುಂದುವರಿಸುತ್ತಾ ನನ್ನ ಮಗ ಮತ್ತು ಶಾಲಾ ಮಕ್ಕಳಿಗೆ ಧ್ಯಾನವನ್ನು ಪರಿಚಯಿಸಿದೆ. ಹಾಗೂ ಬಿಡುವಿನ ವೇಳೆಯಲ್ಲಿ ಚಿಂತಾಮಣಿಯ ಧ್ಯಾನಕೇಂದ್ರದಲ್ಲಿ ಧ್ಯಾನ ಮಾಡುತ್ತೇನೆ. ದಿನಾಂಕ 22/8/15ರಂದು ಈ ಧ್ಯಾನ ಕೇಂದ್ರದಲ್ಲಿ ಧ್ಯಾನಮಗ್ನಳಾಗಿದ್ದಾಗ ಒಮ್ಮೆಗೆ ಒಂದು ನೆರಳು(Shadow). ನನ್ನ ದೇಹದಿಂದ ಹೊರಗೆ ಹೋದಂತಹ ಮತ್ತು ದೇಹ ಬಹಳಷ್ಟು ಹಗುರವಾದಂತಹ ಅನುಭವಾಯಿತು. ಹಾಗೇ ಅಂದು ರಾತ್ರಿಯೇ ನಾನು ನನ್ನ ದೇಹ ಮತ್ತು ಮನಸ್ಸಿನಲ್ಲಿರುವ ಎಲ್ಲಾ ಕಲ್ಮಷಗಳು ಹೊರಗೆ ಹೋಗಬೇಕೆಂದು ಸಂಕಲ್ಪ ಮಾಡಿ ಧ್ಯಾನಕ್ಕೆ ಕುಳಿತೆ. ಇದಾದ ೨ ನಿಮಿಷಗಳಲ್ಲಿ ನಾನು ಧ್ಯಾನಸ್ಥಿತಿಯಲ್ಲಿರುವಾಗ ಒಂದು ಜಟಕಾ ಬಂಡಿಯಲ್ಲಿ ಆಕಾರವೊಂದು ಬಂದು, ಒಂದು ಪೆಟ್ಟಿಗೆ (Box)ಯನ್ನು ನನಗೆ ಕೊಟ್ಟಂತೆ, ನಾನು ಅದರಲ್ಲಿ ನನ್ನಲ್ಲಿದ್ದ ಎಲ್ಲಾ ಕಲ್ಮಷಗಳನ್ನು ತುಂಬಿ ಬೀಗಹಾಕಿ (Lock) ಮತ್ತೆ ಅದೇ ಬಂಡಿಯಲ್ಲಿ ಇಟ್ಟು ’ಇನ್ನು ಎಂದೂ ನೀನು (ಕಲ್ಮಷ) ನನ್ನ ಕಣ್ಣಿಗೆ ಕಾಣದಿರು’ ಎನ್ನುವಷ್ಟರಲ್ಲಿ ಆ ಪೆಟ್ಟಿಗೆ (Box) ಬೆಂಕಿಗೆ ಅಹುತಿ ಆದಂತೆ, ಮತ್ತೆರಡು ಕ್ಷಣಗಳ ನಂತರ ಬಿಳಿ ನೆರಳೊಂದು (White Shadow) ನನ್ನ ನಯನಗಳಲ್ಲಿ ತುಂಬಿದ ಅನುಭವವಾಯಿತು. ಇದಲ್ಲದೇ ನನಗೆ ಹಲವಾರು ಅನುಭವಗಳಾಗಿವೆ.

 

ನನಗೆ ಮೊದಲು ತುಂಬಾ ನಕಾರಾತ್ಮಕ ಭಾವನೆಗಳು, ಭ್ರಮೆಗಳು(illusions) ಹಾಗೂ ಅನಾರೋಗ್ಯ ಸಮಸ್ಯೆಗಳಿದ್ದವು. ಅವೆಲ್ಲವೂ ಆಶ್ಚರ್ಯಕರ ರೀತಿಯಲ್ಲಿ ಕಡಿಮೆ ಆಗಿ ನಾನು ಈಗ ಸಕಾರಾತ್ಮಕ ಮನಸ್ಕಳಾಗಿ ಜೀವಿಸುತ್ತಿದ್ದೇನೆ. ಧ್ಯಾನ ತಿಳಿಸಿದ ಎಲ್ಲಾ ಮಾಸ್ಟರ‍್ಸ್‌ಗೆ ನನ್ನ ಹೃತ್ಪೂರ್ವಕ ವಂದನೆಗಳು.

 

 

ಸರಸ್ವತಿ.ಕೆ

ಚಿಂತಾಮಣಿ

Go to top