" ಧ್ಯಾನ-ಹಲವು ಸಮಸ್ಯೆಗಳಿಗೆ ಪರಿಹಾರ ಮಾರ್ಗ "

 

 

ನನ್ನ ಹೆಸರು ಲಕ್ಷ್ಮಿ. ಶ್ರೀಮತಿ ಗಾಯತ್ರಿಯವರ ಮೂಲಕ 2015 ಜುಲೈ 10ರಂದು ನನಗೆ ಧ್ಯಾನದ ಪರಿಚಯವಾಯಿತು.. ಮೊದಲನೆಯ ದಿನ ಒಂದು ಗಂಟೆಯ ಕಾಲ ಧ್ಯಾನ ಮಾಡುವಾಗ ತಲೆ ತಿರುಗಿದ ಅನುಭವವಾಯಿತು. ಆದರೂ ಪ್ರತಿದಿನ ಬಿಡದಂತೆ ಧ್ಯಾನ ಮಾಡಿದುದರಿಂದ ನನ್ನಲ್ಲಿ ತುಂಬಾ ಬದಲಾವಣೆಗಳು ಬಂದವು.

 

ಹದಿನೈದು ವರ್ಷಗಳಿಂದ ತಲೆನೋವು, ಮೂಲವ್ಯಾಧಿ(ಪೈಲ್ಸ್)ಯಿಂದ ತುಂಬಾ ಯಾತನೆ ಅನುಭವಿಸಿದ್ದೆನು. ನನಗೆ ಕೆಳಗೆ ಕುಳಿತುಕೊಳ್ಳಲು ಮತ್ತು ಹೆಚ್ಚು ದೂರ ನಡೆಯಲು ಆಗುತ್ತಿರಲಿಲ್ಲ. ತುಂಬಾ ಕೋಪ ಮತ್ತು ಕೆಲಸದ ಒತ್ತಡ ಜಾಸ್ತಿ ಆದರೆ ಬೆವರು ಬರುತ್ತಿತ್ತು. ಮಾತ್ರೆಗಳನ್ನು ತುಂಬಾ ಬಳಸುತ್ತಿದ್ದೆನು. ಆದರೆ ಸತತವಾಗಿ ಧ್ಯಾನಮಾಡಲು ಆರಂಭಿಸಿದ ಮೇಲೆ ಆರೋಗ್ಯದಲ್ಲಿ ಸುಧಾರಣೆಯಾಯಿತು. ಈಗ ಕೆಳಗೆ ಕುಳಿತು ಧ್ಯಾನ ಮಾಡಬಲ್ಲೆನು. ಮಾತ್ರೆಗಳನ್ನು ಕಡಿಮೆ ಮಾಡಿದ್ದೇನೆ. ನನ್ನಲ್ಲಿ ಇಷ್ಟು ಸಂತೋಷ ಮತ್ತು ಬದಲಾವಣೆಯನ್ನು ತಂದು ಕೊಟ್ಟಂತಹ ಈ ಧ್ಯಾನವಿದ್ಯೆ ತಿಳಿಸಿಕೊಟ್ಟ ಶ್ರೀಮತಿ ಗಾಯತ್ರಿ ಮತ್ತು ಪದ್ಮಲತರವರಿಗೆ ನನ್ನ ವಂದನೆಗಳು.

 

 

ಲಕ್ಷ್ಮಿ

ಚಿಂತಾಮಣಿ

Go to top