" ಆರೋಗ್ಯದಲ್ಲಿ ಸಂಪೂರ್ಣ ಸುಧಾರಣೆ "

 

 

ನನ್ನ ಹೆಸರು ಪಾಪಮ್ಮ. ನನಗೆ ಈಗ ಸುಮಾರು ೮೫ ವರ್ಷ ವಯಸ್ಸು. ನನಗೆ ಪಿರಮಿಡ್ ಧ್ಯಾನವು ನನ್ನ ಸೊಸೆಯಿಂದ ಪರಿಚಯವಾಯಿತು. ಹಾಗೂ ಚಿಂತಾಮಣಿಯ ಧ್ಯಾನ ಕೇಂದ್ರಕ್ಕೆ ಶಕುಂತಲಾರವರ ಜೊತೆಯಲ್ಲಿ ಹೋಗಿ, ಧ್ಯಾನ ಮಾಡುತ್ತಿದ್ದೇನೆ. ಅದೇ ರೀತಿ ಮನೆಯಲ್ಲೂ ಮಾಡುತ್ತೇನೆ.

 

ಧ್ಯಾನಕ್ಕೆ ಬರುವುದಕ್ಕಿಂತ ಮುಂಚೆ ನನಗೆ ಬಹಳ ಒಂಟಿತನ ಕಾಡುತ್ತಿತ್ತು ಮತ್ತು ಮನಸ್ಸಿನಲ್ಲಿ ನಕಾರಾತ್ಮಕ ಭಾವನೆಗಳು ಬರುತ್ತಿದ್ದವು. ಅದೇ ರೀತಿ ನನಗೆ ಪ್ರತಿನಿತ್ಯ ಕೈಕಾಲುಗಳು ಮತ್ತು ಕೀಲುಗಳಲ್ಲಿ ತೀವ್ರವಾದ ನೋವು ಕಾಣಿಸಿಕೊಳ್ಳುತ್ತಿತ್ತು. ಆದರೆ ಧ್ಯಾನ ಮಾಡಿದಾಗಿನಿಂದ ಎಲ್ಲಾ ನೋವುಗಳೂ ಕಡಿಮೆ ಆಯಿತು. ಅದೂ ಔಷಧವಿಲ್ಲದೇ!

 

ಹಾಗೆಯೇ ನನಗೆ ಎಲ್ಲಾ ಋತುಮಾನಗಳಲ್ಲೂ ಶೀತದ ಗಡ್ಡೆಗಳು (Tonsils) ಕತ್ತಿನ ಎರಡು ಭಾಗದಲ್ಲೂ ಕಾಣಿಸಿಕೊಂಡು ಆಹಾರ ನುಂಗಲು ಬಹಳ ಕಷ್ಟವಾಗುತ್ತಿತ್ತು. ಆದರೆ ಧ್ಯಾನ ಮಾಡಿದಾಗಿನಿಂದ ಸಂಪೂರ್ಣ ವಾಸಿ ಆಗಿದೆ. ಈಗ ನಾನು ಇಳಿ ವಯಸ್ಸಿನಲ್ಲೂ ಆರೋಗ್ಯವಾಗಿದ್ದೇನೆ. ಆದ್ದರಿಂದ ಈ ಮೂಲಕ ನಾನು ಎಲ್ಲರಲ್ಲೂ ಮನವಿ ಮಾಡಿಕೊಳ್ಳುವುದೇನೆಂದರೆ ಸಕಲ ಮನುಕುಲವೂ ಧ್ಯಾನ ಮಾಡಿ ಆರೋಗ್ಯಕರವಾದ ಜೀವನ ನಡೆಸಿ. ಎಲ್ಲಾ ಪಿರಮಿಡ್ ಮಾಸ್ಟರ್‌ಗಳಿಗೆ ನನ್ನ ಅನಂತ ಧನ್ಯವಾದಗಳು.

 

 

ಪಾಪಮ್ಮ

ಚಿಂತಾಮಣಿ

Go to top