" ಧ್ಯಾನದಿಂದ ಆರೋಗ್ಯ ಸುಧಾರಣೆ "

 

 

ನನ್ನ ಹೆಸರು ಅರುಣ. ನನ್ನ ವಯಸ್ಸು 15 ವರ್ಷಗಳು. ನಾನು ಸರ್ಕಾರಿ ಮಾದರಿ ಬಾಲಕರ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಓದುತ್ತಿದ್ದೇನೆ. ಒಮ್ಮೆ ಶ್ರೀಮತಿ ಶೈಲಜ ಎಂಬುವರು ನಮ್ಮ ಶಾಲೆಯಲ್ಲಿ ೪೦ ನಿಮಿಷಗಳ ಕಾಲ ಧ್ಯಾನ ತರಗತಿ ನಡೆಸಿ, ಮೌಲ್ಯಗಳ ಬಗ್ಗೆ ತಿಳಿಸಿ, ೧೦ ನಿಮಿಷಗಳ ಕಾಲ ಧ್ಯಾನ ಮಾಡಿಸಿದರು. ಇದು ಗೌತಮಬುದ್ಧ ಅವರು ಹೇಳಿಕೊಟ್ಟ ಧ್ಯಾನಪದ್ಧತಿಯಾಗಿದ್ದು ಈಗ ಸುಭಾಷ್ ಪತ್ರೀಜಿ ಅವರು ಈ ಧ್ಯಾನದ ವಿಧಾನವನ್ನು ಪ್ರಚಾರ ಮಾಡುತ್ತಿದ್ದಾರೆಂದು ಹೇಳಿದರು. ೨ ವರ್ಷಗಳಿಂದ ನಾನು ಈ ಧ್ಯಾನದ ಅಭ್ಯಾಸವನ್ನು ಮಾಡುತ್ತಿದ್ದೇನೆ. ನನಗೆ ಮೊದಲಿದ್ದ ಕಣ್ಣುನೋವು ಮತ್ತು ತಲೆನೋವು ಕಡಿಮೆಯಾಗಿದೆ. ನನಗೆ ಬೇಸರವಾದಾಗ, ಧ್ಯಾನ ಮಾಡಿದ ಮೇಲೆ ಮನಸ್ಸು ಶಾಂತವಾಗುತ್ತದೆ. ಧ್ಯಾನಸ್ಥಿತಿಯಲ್ಲಿದ್ದಾಗ ನನಗೆ ರಾಘವೇಂದ್ರಸ್ವಾಮಿ, ಆಂಜನೇಯಸ್ವಾಮಿ, ಶಿರಿಡಿ ಶ್ರೀಸಾಯಿಬಾಬಾ ಅವರು ಕಾಣಿಸಿದ್ದರು. ನಾನು ಪ್ರತಿದಿನ ೩೦ ನಿಮಿಷಗಳ ಕಾಲ ಧ್ಯಾನವನ್ನು ಮಾಡುತ್ತಿದ್ದೇನೆ. ಧ್ಯಾನವನ್ನು ಪರಿಚಯಿಸಿದ ಗೌತಮಬುದ್ಧ ಮತ್ತು ಸುಭಾಷ್ ಪತ್ರೀಜಿ ಅವರಿಗೆ ನನ್ನ ಕೋಟಿ, ಕೋಟಿ ಧನ್ಯವಾದಗಳು.

 

 

ಅರುಣ

R.ಚಿಂತಾಮಣಿ.

Go to top