" ಧ್ಯಾನದಿಂದ ನರವ್ಯಾಧಿಯ ಉಪಶಮನ "

 

 

ನನ್ನ ಹೆಸರು ವನಜಾಕ್ಷಿ. ನಾನೊಬ್ಬ ಗೃಹಿಣಿಯಾಗಿದ್ದು, ನನಗೀಗ 53 ವರ್ಷ ವಯಸ್ಸು.  4-5 ವರ್ಷಗಳಿಂದ ನಾನು ನರಸಂಬಂಧಿ ವ್ಯಾಧಿಯಿಂದ ಬಳಲುತ್ತಿದ್ದೆ. ಅದರ ಲಕ್ಷಣವೇನೆಂದರೆ, ಆಗಾಗ ನನ್ನ ಮುಖದ ಬಲಭಾಗದಲ್ಲಿ ತಲೆಯಿಂದ ಕುತ್ತಿಗೆಯವರೆಗೂ ವಿದ್ಯುತ್ ಶಾಕ್ ಹೊಡೆದಂತೆ, ಸೂಜಿಯಿಂದ ಚುಚ್ಚಿದಂತಾಗುತ್ತಿದ್ದ ನೋವು ಸುಮಾರು ಒಂದು ಗಂಟೆಯ ಅವಧಿಯವರೆಗೆ ನಿರಂತರವಾಗಿರುತ್ತಿತ್ತು.

 

ನನಗೆ ಆ ನೋವನ್ನು ಸಹಿಸುವುದು ಅಸಾಧ್ಯವಾಗಿತ್ತು. ನಾನು ಸುಮ್ಮನೆ ಅಳುತ್ತಾ ಕೂರುತ್ತಿದ್ದೆ. ಆ ಸಮಯದಲ್ಲಿ ಆತ್ಮಹತ್ಮೆ ಮಾಡಿಕೊಂಡು ಸಾಯಬೇಕೆಂದು ಅನಿಸುತ್ತಿತ್ತು. ನಾನು ಅನೇಕ ವೈದ್ಯರನ್ನು ಭೇಟಿಯಾದರೂ ಆ ನೋವಿನ ಕಾರಣ ಕಂಡು ಹಿಡಿಯಲಾಗಲಿಲ್ಲ. ನನಗೆ ಕೆಲವು ಮಾತ್ರೆಗಳನ್ನು ಕೊಟ್ಟು ಅವುಗಳನ್ನು ಮುಂದುವರೆಸುವಂತೆ ಹೇಳಿದರು. ನಂತರ ತಪಾಸಣೆಗೆಂದು ಹೋದಾಗ ರಕ್ತಪರೀಕ್ಷೆ, ಮೆದುಳಿನ ಎಂ.ಆರ್.ಐ. ಸ್ಕ್ಯಾನಿಂಗ್ ಮಾಡುವಂತೆ ಹೇಳಿದ ವೈದ್ಯರ ಸಲಹೆಯಂತೆ ಎಲ್ಲಾ ಪರೀಕ್ಷೆಗಳನ್ನು ಮಾಡಲಾಗಿ, ಫಲಿತಾಂಶ ನಾರ್ಮಲ್ ಆಗಿದ್ದು ಯಾವುದೇ ದೋಷಗಳು ಕಂಡುಬರಲಿಲ್ಲ. ಅಲ್ಲದೇ ಹವಾಮಾನ ಬದಲಾವಣೆಗೆ [ಚಳಿ, ಮಳೆ, ಬಿಸಿಲು] ಸಂಬಂಧಿಸಿದ ಕಾಯಿಲೆಯೂ ಅಲ್ಲವೆಂದು ತಿಳಿಸಲಾಯಿತು. ಇನ್ನೂ ಕೆಲವಾರು ಪರೀಕ್ಷೆಗಳ ನಂತರ ಕಣ್ಣು ಗುಡ್ಡೆಯ ಹಿಂಭಾಗದಲ್ಲಿ ರಕ್ತ ಹೆಪ್ಪುಗಟ್ಟಿರುವುದರಿಂದ ತಕ್ಷಣವೇ ಶಸ್ತ್ರಚಿಕಿತ್ಸೆ ಮಾಡಬೇಕೆಂದು ವೈದ್ಯರು ತಿಳಿಸಿದರು. ಇನ್ನೊಬ್ಬ ವೈದ್ಯರನ್ನು ಸಂಪರ್ಕಿಸಿದಾಗ ನನ್ನ ಅನಾರೋಗ್ಯವು ಹಲ್ಲಿನ ಬೇರಿಗೆ ಸಂಬಂಧಿಸಿದ ನರದ ಸಮಸ್ಯೆಯೆಂದೂ, ಇನ್ನೊಬ್ಬ ವೈದ್ಯರು ಅದು [Trigeminal Neuralgia] ಎಂದು ಕರೆಯಲಾಗುವ ಈ ನರಸಂಬಂಧಿ ವ್ಯಾಧಿಯಿಂದ ಒಂದು ಲಕ್ಷ ಜನರ ಪೈಕಿ ಹನ್ನೆರಡು ಜನರು ನರಳುತ್ತಿದ್ದು  ರೋಗ ನಿರ್ಣಯ ತುಂಬಾ ಕಠಿಣವಾದುದು ಎಂದು ಹೇಳಿದರು. ಹಲ್ಲು ನೋವೆಂದು ದಂತವೈದ್ಯರ ಬಳಿ ಹೋಗಿ, ಚಿಕಿತ್ಸೆಯನ್ನು ತೆಗೆದುಕೊಂಡ ನಂತರವು ನೋವಿನಲ್ಲಿ ಯಾವುದೇ ಸುಧಾರಣೆಯಾಗಲಿಲ್ಲ. ನಾನು ಯಾವುದೇ ಶಸ್ತ್ರಕ್ರಿಯೆಗೆ ಒಳಗಾಗಲು ಬಯಸದೆ ಎರಡು ವರ್ಷ ಕಳೆದೆನು. ನಾನು ಪ್ರತಿದಿನ ಒಟ್ಟು 1500mgಯಷ್ಟು ನೋವು ನಿವಾರಕ ಗುಳಿಗೆಗಳನ್ನು ಸೇವಿಸಿದರೂ ನನ್ನ ನೋವು ಉಪಶಮನವಾಗುತ್ತಿರಲಿಲ್ಲ. ಕೊನೆಗೆ ನನ್ನ ಗೆಳತಿಯೊಬ್ಬರ ಸಲಹೆಯಂತೆ ನಾನು ರಾಜಾಜಿನಗರ, ಒಂದನೇ ಬ್ಲಾಕ್ ನಲ್ಲಿರುವ ಶ್ರೀ ಮಹೇಶ್ವರ ಮಹಾ ಪಿರಮಿಡ್ ಧ್ಯಾನ ಕೇಂದ್ರದಲ್ಲಿ ಸ್ವಪ್ನ ವೇಣುಗೋಪಾಲ್‌ರವರಿಂದ ಧ್ಯಾನ ಕಲಿತು ಪ್ರತಿದಿನ ಮನೆಯಲ್ಲಿ ನನ್ನ ಗೆಳತಿಯ ಜೊತೆ ಅಥವಾ ಒಬ್ಬಂಟಿಯಾಗಿ ಧ್ಯಾನ ಮಾಡಲು ಪ್ರಾರಂಭಿಸಿದೆ ಮತ್ತು ಪ್ರತಿ ಗುರುವಾರವು ಸ್ವಪ್ನರವರ ಮನೆಯಲ್ಲಿ ನಡೆಯುತ್ತಿರುವ ಧ್ಯಾನ, ಸತ್ಸಂಗಕ್ಕೆ ಹೋಗುತ್ತಿದ್ದೇನೆ. ನನ್ನ ಗೆಳತಿಯ ಜೊತೆಗೆ ಪಿರಮಿಡ್ ವ್ಯಾಲಿಗೆ ಎರಡು ಬಾರಿ ಹೋಗಿ ಅಲ್ಲಿಯೂ ಧ್ಯಾನ ಮಾಡಿದೆ. ಕೇವಲ ಒಂದು ತಿಂಗಳಿನಲ್ಲಿ ನನ್ನ ನೋವು ಉಪಶಮನವಾಗಲು ಶುರುವಾಗಿ  ದಿನದಿಂದ ದಿನಕ್ಕೆ ನೋವಿನ ತೀವ್ರತೆ ಕಡೆಮೆಯಾಗತೊಡಗಿತು. ಹೀಗೆ ನಾನು ಕಳೆದ ಒಂದೂವರೆ ವರ್ಷಗಳಿಂದ ದಿನಕ್ಕೆ ಎರಡು-ಮೂರು ಗಂಟೆಗಳು ಧ್ಯಾನ ಮಾಡುತ್ತಿದ್ದೇನೆ.  ನನ್ನ ಆರೋಗ್ಯದಲ್ಲಿ ಶೇ.85ರಷ್ಟು ಸುಧಾರಣೆಯಾಗಿದೆ. ಯಾವುದೇ ಶಸ್ತ್ರಕ್ರಿಯೆಯನ್ನು ಮಾಡಿಸಿಕೊಂಡಿಲ್ಲ. ನನಗೆ ಧ್ಯಾನ ಮತ್ತು ಭಗವಂತನಲ್ಲಿ ಭರವಸೆಯಿದೆ. 

 

 

ವನಜಾಕ್ಷಿ

ಬೆಂಗಳೂರು

 

Go to top