" ಧ್ಯಾನದಿಂದ ಆತ್ಮದ ಅರಿವು "

 

 

ನನ್ನ ಹೆಸರು ಓ.ಶುಭ. ನಾನು ಶಿಕ  ಕಿಯಾಗಿ ಕೆಲಸ ಮಾಡುತ್ತಿದ್ದೇನೆ. ಮೊದಲು ಧ್ಯಾನದ ಬಗ್ಗೆ ಯಾವುದೇ ಅರಿವ  ಇರಲಿಲ್ಲ. ನನ್ನ ಸ್ನೇಹಿತೆಯಾದ ಅನಿತಾರವರ ಬಲವಂತದಿಂದ ಧ್ಯಾನದ ಕೆಲವುತರಗತಿಗಳಿಗೆ ಹೋಗಬೇಕಾಯಿತು. ಹಾಗೆ ಹೋಗುತ್ತಾ ಪದ್ಮಲತಾ ಹಾಗು ನಾಗೇಶ ರಿರವರಿಂದ ಅನೇಕ ವಿಷಯಗಳನ್ನು ತಿಳಿದುಕೊಂಡೆ. ಇದರಿಂದ ನನಗೆ ಧ್ಯಾನದ ಬಗ್ಗೆ ಆಸಕ್ತಿ ಮೂಡಿತು. ಒಮ್ಮೆ ಚಿಂತಾಮಣಿಗೆ ಪತ್ರೀಜಿಯವರ ಆಗಮನವಾದಾಗ ಅವರ ದರ್ಶನವನ್ನು ಪಡೆದುಕೊಂಡೆ.

 

ಚಿಂತಾಮಣಿಯಲ್ಲಿ ನಡೆಯುವ ಧ್ಯಾನ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಧ್ಯಾನದಲ್ಲಿ ಆಸಕ್ತಿಯನ್ನು ಮೂಡಿಸಿಕೊಂಡೆ. ಇಂತಹ ಧ್ಯಾನವನ್ನು ನಮ್ಮೆಲ್ಲರಿಗೂ ತಿಳಿಸಿಕೊಟ್ಟ ಪತ್ರೀಜಿಯವರಿಗೆ ಧನ್ಯವಾದಗಳು.

 

ಧ್ಯಾನದಿಂದ ಆದ ಅನುಭವಗಳನ್ನು ನಾನು ನಿಮ್ಮಲ್ಲಿ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಧ್ಯಾನ ನನಗೆ ಸಂತೋಷವನ್ನು ನೀಡಿದೆ. ಜೀವನದಲ್ಲಿ ಬರುವ ಸಮಸ್ಯೆಗಳನ್ನು ಯಾವ ರೀತಿ ಪರಿಹರಿಸಿಕೊಳ್ಳಬೇಕು ಎಂಬುದನ್ನು ತಿಳಿಸಿಕೊ????ದೆ. ನಾವು ಯಾವ ರೀತಿ ಮಾತನಾಡಬೇಕು, ಯಾವ ರೀತಿ ಯೋಚಿಸಬೇಕು ಎಂಬುದನ್ನು ಧ್ಯಾನದಿಂದ ನಾನು ತಿಳಿದುಕೊಂಡೆ. ನಮ್ಮ ಆರೋಗ್ಯದಲ್ಲಿ ತೊಂದರೆಗಳಾದಾಗ ಅದನ್ನು ಅತಿಥಿಯಂತೆ ಸತ್ಕರಿಸಿ ಪ್ರೀತಿಯಿಂದ ನಡೆದುಕೊಂಡಾಗ ಅದು ಬೇಗನೆ ವಾಸಿಯಾಗುತ ವೆ ಎಂಬುದನ್ನು ನನ್ನ ಅನುಭವದಲ್ಲಿ ತಿಳಿದುಕೊಂಡೆ. ಇದರಿಂದ ಧ್ಯಾನದಲ್ಲಿ ನನ್ನ ಆಸಕ್ತಿ ಮೊದಲಿಗಿಂತ ಹೆಚ್ಚಾಯಿತು.

 

ಶಿಕ್ಷಕಿಯಾದ ನಾನು ನನ್ನ ಅನುಭವಗಳನ್ನು ನನ್ನ ಸಹೋದ್ಯೋಗಿಗಳಿಗೆ ತಿಳಿಸುತ್ತಾ ಅವರನ್ನು ಕೂಡ ಧ್ಯಾನ ಮಾಡುವಂತೆ ಪ್ರೇರೇಪಿಸುತ್ತೇನೆ. ಮಕ್ಕಳಿಗೆ ಧ್ಯಾನದ ಅರಿವು ಮೂಡಿಸಿ ಪ್ರತಿನಿತ್ಯ ಧ್ಯಾನವನ್ನು ಮಾಡಿಸುತ್ತೇನೆ. ಧ್ಯಾನವನ್ನು ಪರಿಚಯಿಸಿದ ಅನಿತಾ, ನಾಗೇಶ್ವರಿ ಮತ್ತು ಪದ್ಮಲತಾರವರಿಗೆ ನನ್ನ ಧನ್ಯವಾದಗಳು.

 

 

N.ಶುಭ

ಚಿಂತಾಮಣಿ

Go to top