" ನನ್ನ ಆಲೋಚನೆಗಳೆ ನನ್ನ ಜೀವನ "

 

 

ನನ್ನ ಹೆಸರು ಪ್ರೇಮ, ನಾನು 4 ವರ್ಷದಿಂದ ಧ್ಯಾನ ಮಾಡುತ್ತಿದ್ದೇನೆ. ಅನಿತಾ ಮತ್ತು ಪದಲತ ಮೂಲಕ ನನಗೆ ಧ್ಯಾನದ ಪರಿಚಯವಾಯಿತು.

 

ಧ್ಯಾನ ಅಭ್ಯಾಸಕ್ಕೆ ಬಂದ ಮೇಲೆ ನಲ್ಲಿ  ಅನೇಕ  ಬದಲಾವಣೆಗಳಾಗಿವೆ. ನನ್ನ ಆಲೋಚನೆಗಳೆ ನನ್ನ ಜೀವನ ಎಂದು ಅರಿವಾಯಿತು . ಆಲೋಚನೆಗಳು ಮತ್ತು ಅನಾವಶ್ಯಕ ಮಾತುಗಳು ಕಡಿಮೆಯಾಗಿವೆ . ಅನೇಕ ಮೂqs ನಂಬಿಕೆಗಳಿಂದ ಹೊರಬರಲು ಧ್ಯಾನವು ಸಹಕಾರಿಯಾಗಿದೆ.

 

ಧ್ಯಾನಕ್ಕೆ ಬಂದ ಮೇಲೆ ಪ್ರಕೃತಿಯನ್ನು ತುಂಬ ಆರಾಧಿಸುತ್ತೇನೆ. ಗಿಡ, ಮರ, ಪಕ್ಷಿ, ಪ್ರಾಣಿಗಳ ಮೇಲೆ ತುಂಬಾ ಪ್ರೀತಿ ಹಾಗು ನಾವು ಪ್ರತಿನಿತ್ಯ ಬಳಸುವ ವಸ್ತುಗಳ ಮೇಲೆ ಗೌರವ ಭಾವನೆ, ನಕಾರಾತ್ಮಕ ಆಲೋಚನೆಗಳು ಹೋಗಿ ಸಕಾರಾತ್ಮಕವಾಗಿರುತ್ತೇನೆ.

 

ಧ್ಯಾನಕ್ಕೆ ಬರುವ ಮುಂಚಿನ ಜೀವನಕ್ಕೂ ಈಗಿರುವ ಜೀವನಕ್ಕೂ ವ ತ್ಯಾಸ ಚೆನ್ನಾಗಿ ತಿಳಿಯುತ್ತಿ ದೆ. ಒಂಟಿಯಾಗಿದ್ದರೂ ಸಂತೋಷವಾಗಿರುತೆ ನೆ. ಇದರಿಂದ ನನ್ನನ್ನು ನಾನು ಗಮನಿಸಿಕೊಳ್ಳುವುದು ಹೆಚ್ಚಾಗಿದೆ. ಹೆಚ್ಚು ಹೆಚ್ಚು ಧ್ಯಾನ ಮಾಡುವುದರಿಂದ ನಮ  ಲ್ಲಿ ವಿಶ್ವ ಪ್ರಾಣಶಕ್ತಿಯು ಹೆಚ್ಚಿದಂತೆ ನಮ್ಮ ಜ್ಞಾನವು ಹೆಚ್ಚುತ್ತದೆ. ನಮ್ಮ ಜೀವನದಲ್ಲಿ ಬರುವ ಎಲ್ಲಾ ಸಂದರ್ಭ ಗಳನ್ನು ಸಮತೋಲನದಿಂದ ಎದುರಿಸಬಹುದು.

 

ಚಿಂತಾಮಣಿಗೆ ಬರುವ ಎಲ್ಲಾ ಮಾಸ  ರ್‌ಗಳ ಕ್ಲಾಸುಗಳಿಗೆ ಹೋಗುತೆ ನೆ. ಆಧ್ಯಾತಿ  ಕ ಪುಸ ಕಗಳನ್ನು ಓದುತ್ತೇನೆ, ನನ್ನ ಕುಟುಂಬದವರಿಗೆ, ಬಂಧುಮಿತ್ರರಿಗೆ ಧ್ಯಾನ ಮಾಡಲು ಹೇಳುತ್ತೇನೆ. ನನಗೆ ಸೊಂಟದ ನೋವಿನ ಸಮಸ್ಯೆ (Disc problem) ಇತ್ತು. ಧ್ಯಾನಕೆ  ಕುಳಿತುಕೊಳ  ಲು ಸಾಧ್ಯವಾಗುತ್ತಿರಲಿಲ್ಲ. ಶ್ರದ್ಧೆಯಿಂದ ಧ್ಯಾನ ಮಾಡುವುದರಿಂದ 2 ರಿಂದ 3 ಗಂಟೆ ಧ್ಯಾನ ಮಾಡಲು ಸಾಧ್ಯವಾಗಿದೆ.

 

ಜೀವನ ಹೇಗೆ ನಡೆಯುವುದು ಎಂಬುವುದು ಮುಖ್ಯವಲ್ಲ ಹೇಗೆ ಜೀವಿಸುತ್ತೇನೆ ಎಂಬುವುದು ಮುಖ್ಯ ಎಂಬುವುದನ್ನು ತಿಳಿದುಕೊಂಡಿದ್ದೇನೆ. ಸ್ವಾವಲಂಬನೆ ಬೆಳೆದಿದೆ. ಇಷ್ಟು ಒಳ್ಳೆಯ ಧ್ಯಾನದ ವಿದ್ಯೆಯನ್ನು ನಮಗೆ ಕಲಿಸಿದ ಬ್ರಹ್ಮರ್ಷಿ ಸುಭಾಷ್ ಪತ್ರೀಜಿಯವರಿಗೆ ಶತಕೋಟಿ ವಂದನೆಗಳು.

 

ಪ್ರೇಮ

ಚಿಂತಾಮಣಿ

Go to top