“ ವೆಂಕಟಾಪುರದ ಮಂಡಲ ಧ್ಯಾನ ತರಗತಿಗಳು ”

 

ಧ್ಯಾನ ಜಗತ್ ಸಂಸ್ಥಾಪಕರಾದ ಬ್ರಹ್ಮರ್ಷಿ ಪತ್ರೀಜಿಯವರಿಗೆ ವಂದಿಸುತ್ತಾ, ಧ್ಯಾನವು ನಮ್ಮ ಸಂಸ್ಕೃತಿ, ನಮ್ಮ ಪರಂಪರೆ, ಇದು ಋಷಿಮುನಿಗಳ ಆವಿಷ್ಕಾರ. “ಧ್ಯಾನದಿಂದಲೇ ಜ್ಞಾನ”. ಧ್ಯಾನವು ಜ್ಞಾನದ ದಾರಿಯಲ್ಲಿ ಸಾಗುವಂತೆ ಮಾಡುತ್ತದೆ.

 ಬಳ್ಳಾರಿ ಜಿಲ್ಲೆಯಲ್ಲಿರುವ ವೆಂಕಟಾಪುರ ಎಂಬ ಪುಟ್ಟ ಗ್ರಾಮದಲ್ಲಿ ಧ್ಯಾನದ ಪರಿಮಳವನ್ನು ಪಸರಿಸುವಲ್ಲಿ ಶ್ರೀಯುತ P.ಸುಧಾಕರ್‌ರವರ ಕೃಷಿ ಅಪಾರವಿದೆ. “ಶ್ರಮವು ಇಷ್ಟವಾದರೆ ಯಾವುದೂ ಕಷ್ಟವಾಗಲಾರದು” ಎಂಬಂತೆ ಧ್ಯಾನ ಪ್ರಚಾರಕ್ಕೆ ಅವರು ಶ್ರಮಿಸುತ್ತಿರುವುದು ಶ್ಲಾಘನೀಯ, ಸ್ಪೂರ್ತಿದಾಯಕ ಮತ್ತು ಸಂತೋಷಕರ ವಿಚಾರ. ಧ್ಯಾನ ಪ್ರಚಾರದಲ್ಲಿ ಅವರ ಇಡೀ ಕುಟುಂಬವೆ ತೊಡಗಿಸಿಕೊಂಡಿದೆ. ಅವರ ಈ ಯಶಸ್ಸಿನ ಹೆಜ್ಜೆಗೆ ವೆಂಕಟಾಪುರ ಗ್ರಾಮದ ಆತ್ಮಬಂಧುಗಳೆಲ್ಲರ ಸಂಪೂರ್ಣ ಸ್ವಾಗತವಿದೆ.

ಅಭಿನಂದನೆಗಳೊಂದಿಗೆ,

ನಿಮ್ಮ

ವೆಂಕಟಾಪುರದ ಸಮಸ್ತ

ಆತ್ಮಬಂಧುಗಳು

 

 

ಮಂಡಲ ಧ್ಯಾನ - 1

 

ಹೆಸರು: ಶ್ರೀಮತಿ ಶಾರದಮ್ಮ ಶ್ರೀ N.B.ಹರಿಹರರೆಡ್ಡಿಯವರ ಮನೆಯಲ್ಲಿ.

ಅನುಭವ: ನಮ್ಮ ಮನೆಯಲ್ಲಿ ಪ್ರಥಮ ಮಂಡಲ ಧ್ಯಾನವನ್ನು ಪ್ರಾರಂಭಿಸುವಾಗ ಕೇವಲ ೬ ರಿಂದ ೮ ಜನರು ಸೇರಿ ಧ್ಯಾನ ಮಾಡುತ್ತಿದ್ದೆವು. ಒಂದು ದಿನ ಧ್ಯಾನಿಗಳೆಲ್ಲರೂ ಸೇರಿ ಮಳೆಗಾಗಿ ಸಂಕಲ್ಪ ಮಾಡಿ ಧ್ಯಾನ ಮಾಡಿದೆವು. ಮರುದಿನವೇ ಧ್ಯಾನದ ಸಮಯದಲ್ಲಿ ಒಂದು ಗಂಟೆ ಸತತವಾಗಿ ಮಳೆ ಸುರಿಯಿತು. ಈ ರೀತಿ ೪ ರಿಂದ ೫ ಬಾರಿ ಮಳೆ ಬಂದಿದೆ. ಸಂಕಲ್ಪ ಧ್ಯಾನದಿಂದ ನಮಗೆ ಬೇಕಾದುದನ್ನು ಪಡೆದುಕೊಳ್ಳಬಹುದೆಂಬ ಅನುಭವವಾಯಿತು.

N.B.ಹರಿಹರರೆಡ್ಡಿ

+91 9663420903

  

ಮಂಡಲ ಧ್ಯಾನ - 2

 

ಹೆಸರು:- ಶ್ರೀಮತಿ ಪಾರ್ವತಮ್ಮ,

ಶ್ರೀ G.S.ಶಿವರಾಮರೆಡ್ಡಿಯವರ ಮನೆಯಲ್ಲಿ.

ಅನುಭವ:- ನಮ್ಮ ಮನೆಯಲ್ಲಿ ಧ್ಯಾನ ಪ್ರಾರಂಭಿಸಲು ಕಾರಣವೇನೆಂದರೆ ನನ್ನ ಎರಡನೇ ಮಗನ ಅಕಾಲಿಕ ಮರಣ. ಇದರಿಂದಾಗಿ ಮನೆಯಲ್ಲಿ ಅಶಾಂತಿ, ದುಃಖ, ದುಗುಡ, ಭಯ ಭೀತಿಯ ವಾತಾವರಣ ಸೃಷ್ಠಿಯಾಗಿತ್ತು. ಮಾನಸಿಕ ನೆಮ್ಮದಿಯು ಸಹ ಇಲ್ಲದಂತಾಗಿತ್ತು. ಇದೇ ಸಮಯದಲ್ಲಿ ನಮ್ಮ ಸ್ನೇಹಿತರಾದ ಃ.ರಾಮಮೂರ್ತಿಯವರ ಸಲಹೆಯ ಮೇರೆಗೆ ನಮ್ಮ ಮನೆಯಲ್ಲಿ ಮಂಡಲ ಧ್ಯಾನ ಪ್ರಾರಂಭಿಸಿದೆವು. ನಾವು ಧ್ಯಾನವನ್ನು ನನ್ನ ಮಗ ಮರಣಹೊಂದಿದ ಕೊಠಡಿಯಲ್ಲಿಯೇ ಮಾಡಿದೆವು. ಧ್ಯಾನಕ್ಕಿಂತ ಮೊದಲು ಆ ಕೊಠಡಿಗೆ ಹೋಗಲು ಭಯಭೀತರಾಗಿದ್ದೆವು. ಧ್ಯಾನ ಮಾಡಿದ ನಂತರ ನಿರ್ಭಯವಾಗಿ ಮನೆಯವರೆಲ್ಲರೂ ಆ ಕೊಠಡಿ ಪ್ರವೇಶಿಸಿದೆವು. ಹಾಗೂ ಮನೆಯಲ್ಲಿ ಶಾಂತಿ, ನೆಮ್ಮದಿ, ಆರೋಗ್ಯ, ಆನಂದ, ಸುಖ-ಸಂತೋಷಗಳೆಲ್ಲವೂ ಮರುಕಳಿಸಿದವು.

G.S.ಶಿವರಾಮರೆಡ್ಡಿ

+91 944894495

  

ಮಂಡಲ ಧ್ಯಾನ - 3

 

ಹೆಸರು:- ಶ್ರೀಮತಿ ಸಿದ್ದಮ್ಮ, ಶ್ರೀ ಏಕಾಂತರೆಡ್ಡಿಯವರ ಮನೆಯಲ್ಲಿ

ಅನುಭವ:- ನನ್ನ ಮೊಮ್ಮಗಳಾದ ಶ್ವೇತಾಳಿಗೆ ಕಳೆದ ಸುಮಾರು ಮೂರು ವರ್ಷಗಳಿಂದ ಮಧುಮೇಹ ಖಾಯಿಲೆ ಇತ್ತು. ಇದರಿಂದಾಗಿ ಅವರು ಮಾನಸಿಕ ಹಾಗೂ ದೈಹಿಕವಾಗಿ ಅಸಂತೃಪ್ತರಾಗಿದ್ದರು. ಇದನ್ನು ಅರಿತು P.ಸುಧಾಕರ್‌ರವರು ಧ್ಯಾನದ ಮಹತ್ವವನ್ನು ತಿಳಿಸಿ ಅವರ ಮನೆಯಲ್ಲಿ ಮಂಡಲ ಧ್ಯಾನವನ್ನು ಮಾಡಲು ಪ್ರೇರೇಪಿಸಿದರು. ಅವರ ಸಲಹೆಯಂತೆ ಇವರ ಮನೆಯಲ್ಲಿ ಧ್ಯಾನ ಮಾಡಿದ್ದರಿಂದ ಶ್ವೇತಾಳಿಗೆ ಇದ್ದ ಮಧುಮೇಹ ಖಾಯಿಲೆ ಸಂಪೂರ್ಣವಾಗಿ ಗುಣಮುಖವಾಗಿ ಮಾನಸಿಕ ಹಾಗೂ ದೈಹಿಕವಾಗಿ ಚೇತರಿಸಿಕೊಂಡಿದ್ದಾರೆ.

ಏಕಾಂತರೆಡ್ಡಿ

+91 9741757485

 

ಮಂಡಲ ಧ್ಯಾನ - 4

 

ಹೆಸರು:- ಶ್ರೀಮತಿ ಶ್ವೇತಾ ಶ್ರೀ H.R.ವಿಜಯ್‌ಕುಮಾರ್‌ರವರ ಮನೆಯಲ್ಲಿ.

ಅನುಭವ:- ನಮ್ಮ ಮನೆಯಲ್ಲಿ ಧ್ಯಾನ ಪ್ರಾರಂಭಕ್ಕಿಂತ ಮೊದಲು ಅಶಾಂತಿಯಿಂದ, ಅನಾರೋಗ್ಯದಿಂದ ಹಾಗೂ ನಕಾರಾತ್ಮಕ ಆಲೋಚನೆಗಳ ಸ್ಥಿತಿಯಲ್ಲಿದ್ದೆವು. ಧ್ಯಾನದ ಮಹತ್ವವನ್ನು ತಿಳಿದುಕೊಂಡ ಮೇಲೆ ನಮ್ಮ ಮನೆಯಲ್ಲಿ ಮಂಡಲ ಧ್ಯಾನವನ್ನು ನಡೆಸಿದೆವು. ಇದಾದ ನಂತರ ಮನೆಯಲ್ಲಿ ಶಾಂತಿ, ನೆಮ್ಮದಿ, ಸಂತೋಷಕರ ವಾತಾವರಣ ಸೃಷ್ಠಿಯಾಗಿ, ಸುಖಕರ ಜೀವನವನ್ನು ನಡೆಸುತ್ತಿದ್ದೇವೆ.

H.R.ವಿಜಯ್‌ಕುಮಾರ್

+91 9900853653

 

ಮಂಡಲ ಧ್ಯಾನ -5

 

ಹೆಸರು:- ಶ್ರೀಮತಿ ವಾಣಿಶ್ರೀ, ಶ್ರೀH.ಕೃಷ್ಣಮೂರ್ತಿಯವರ ಮನೆಯಲ್ಲಿ.

ಅನುಭವ:- ನಮ್ಮದು ಅವಿಭಕ್ತ ಕುಟುಂಬವಾಗಿದ್ದು, ಮನೆಯಲ್ಲಿ ಅಶಾಂತಿ ಹಾಗೂ ನೆಮ್ಮದಿ ಇಲ್ಲದ ವಾತಾವರಣವಿತ್ತು. ಮನೆಯಲ್ಲಿ ಧ್ಯಾನ ಕಾರ್ಯಕ್ರಮಗಳನ್ನು ನಡೆಸಿದ ನಂತರ ಶಾಂತಿ, ನೆಮ್ಮದಿ ಸುಖಕರ ವಾತಾವರಣ. ಹಾಗೂ ಮಕ್ಕಳ ಉತ್ತಮ ವಿದ್ಯಾಭ್ಯಾಸ ಈ ಎಲ್ಲವೂ ದೊರೆತಂತಾಯಿತು. ಹಾಗೂ ಕೃಷಿಯಲ್ಲಿ ಉತ್ತಮವಾದ ಫಸಲನ್ನು ಪಡೆಯುತ್ತಿದ್ದು ಸಂತೃಪ್ತಿಯಾದ ಜೀವನವನ್ನು ನಡೆಸುತ್ತಿದ್ದೇವೆ.

H.ಕೃಷ್ಣಮೂರ್ತಿ

+91 9902595158

 

ಮಂಡಲ ಧ್ಯಾನ - 6

 

ಹೆಸರು:- ಶ್ರೀಮತಿ ಲಕ್ಷ್ಮೀ, ಶ್ರೀ K.T.ಸೋಮರೆಡ್ಡಿಯವರ ಮನೆಯಲ್ಲಿ;

ಅನುಭವ:- ನಮ್ಮ ಮನೆಯಲ್ಲಿ ಧ್ಯಾನ ಮಾಡುವುದಕ್ಕಿಂತ ಮೊದಲು ಅಶಾಂತಿ, ನಕಾರಾತ್ಮಕ ಆಲೋಚನೆಗಳಿಂದ ಇದ್ದೆವು. ಧ್ಯಾನ ಕಾರ್ಯಕ್ರಮವನ್ನು ನಡೆಸಿದ ನಂತರ ಸುಖ, ಶಾಂತಿ ನೆಮ್ಮದಿ ಮತ್ತು ಸಕಾರಾತ್ಮಕ ಆಲೋಚನೆಗಳ ಸ್ಥಿತಿಗೆ ಬಂದು ಸುಖವಾದ ಜೀವನ ನಡೆಸುತ್ತಿದ್ದೇವೆ.

K.T.ಸೋಮರೆಡ್ಡಿ

+91 9538602619

 

ಮಂಡಲ ಧ್ಯಾನ -7

 

ಹೆಸರು:- ಶ್ರೀಮತಿ ತಿಪ್ಪಮ್ಮ, ಶ್ರೀ H.B.ಗುರುಮೂರ್ತಿಯವರ ಮನೆಯಲ್ಲಿ

ಅನುಭವ:- ನಮ್ಮ ಮನೆಯಲ್ಲಿ ಧ್ಯಾನ ಮಾಡಿದ ಕಾರಣ ನಮ್ಮ ದ್ವಿತೀಯ ಪುತ್ರನಿಗೆ ಕಂಕಣ ಭಾಗ್ಯವು ಬಹಳ ಬೇಗನೆ ಒಲಿದು ಬಂದಿತು. ಹಾಗೂ ಮನೆಯಲ್ಲಿ ಸುಖ, ಶಾಂತಿ ಮತ್ತು ನೆಮ್ಮದಿಯು ನೆಲೆಸಿರುತ್ತದೆ.

H.B..ಗುರುಮೂರ್ತಿ

+91 9343998359

 

ಮಂಡಲ ಧ್ಯಾನ -8

 

ಹೆಸರು:- ಶ್ರೀಮತಿ ಶಿವಗಂಗಮ್ಮ, ಶ್ರೀ R.ಬಸವರಾಜು ಇವರ ಮನೆಯಲ್ಲಿ;

ಅನುಭವ:- ನಮ್ಮ ಮನೆಯಲ್ಲಿ ಧ್ಯಾನದ ಸಮಯವು ಒಂದು ಘಂಟೆ, ಆದರೆ ಧ್ಯಾನ ಮಾಡಿದರೆ ಹತ್ತೇ ನಿಮಿಷದಲ್ಲಿ ಮಾಡಿದೆವು ಎಂಬ ಅನುಭವವು ಎಲ್ಲಾ ಧ್ಯಾನದ ಆತ್ಮಬಂಧುಗಳಿಗಾಗಿದೆ. ನಮ್ಮ ಮನೆಯಲ್ಲಿ ಧ್ಯಾನ ಪ್ರಾರಂಭಿಸಿದ ಮೇಲೆ ಮೂರು ಹೊಸ ಧ್ಯಾನಿಗಳು ಧ್ಯಾನವನ್ನು ಪ್ರಾರಂಭಿಸಿರುತ್ತಾರೆ.

 

R.ಬಸವರಾಜು

+91 9341459735

ಮಂಡಲ ಧ್ಯಾನ - 9

 

ಹೆಸರು:- ಶ್ರೀಮತಿ ರತ್ನಮ್ಮ, ಶ್ರೀ ರಾಜಶೇಖರಪ್ಪ ಇವರ ಮನೆಯಲ್ಲಿ;

ಅನುಭವ:- ನಾನು ವಾಹನದಲ್ಲಿ ಪ್ರಯಣಮಾಡುವಾಗ ಒಂದು ಕಾರಿಗೆ ಡಿಕ್ಕಿ ಹೊಡೆದುದರ ಪರಿಣಾಮವಾಗಿ ನನ್ನ ಕುತ್ತಿಗೆ ಮತ್ತು ಬೆನ್ನು ಮೂಳೆಗಳು ಸಡಿಲವಾಗಿದ್ದವು. ಇದನ್ನು ಆಸ್ಪತ್ರೆಯಲ್ಲಿ ಡಾಕ್ಟರುಗಳಿಂದ ಸರಿಪಡಿಸಲು ಆಗಲಿಲ್ಲ. ಆಗ ನಮಗೆ ಧ್ಯಾನದ ವಿಚಾರವು ತಿಳಿಯಿತು. ಅಂದಿನಿಂದ ನಾನು ಧ್ಯಾನ ಮಾಡಲು ಪ್ರಾರಂಭಿಸಿದೆ. ಕೆಲವು ದಿನಗಳ ನಂತರ ನನ್ನ ಕುತ್ತಿಗೆ ಮತ್ತು ಬೆನ್ನುಮೂಳೆಗಳು ಸರಿಯಾಗಿ ಜೊಡಣೆಗೊಂಡು ನಾನು ನಿರಾಳವಾಗಿ ಓಡಾಡಲು ಶಕ್ತಿ ಬಂದಿದೆ. ಈಗ ನಾನು ಚೆನ್ನಾಗಿದ್ದೇನೆ.

 

ರಾಜಶೇಖರಪ್ಪ

+91 8015516580

  

ಮಂಡಲ ಧ್ಯಾನ -10

 

ಹೆಸರು:- ಶ್ರೀಮತಿ ಲಲಿತಮ್ಮ,

ಶ್ರೀ V.ಸೀತಾರಾಮಾಚಾರಿಯವರ ಮನೆಯಲ್ಲಿ;

ಅನುಭವ:- ನಾವು ಧ್ಯಾನ ಮಾರ್ಗಕ್ಕೆ ಬರುವ ಮೊದಲು ಮನೆಯಲ್ಲಿ ಅಶಾಂತಿ, ಸಿಟ್ಟು-ಕೋಪ, ಮತ್ತು ಮನಸ್ಸಿನ ಚಂಚಲತೆ ಹಾಗೂ ದೇಹದಲ್ಲಿನ ಅನೇಕ ರೀತಿಯ ಸಮಸ್ಯೆಗಳಿಂದ ಹಾಗೂ ನಕಾರಾತ್ಮಕ ವಾತಾವರಣವಿತ್ತು. ಈ ಎಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿದ್ದ ನಮಗೆ ಶ್ರೀಯುತ P. ಸುಧಾಕರ್‌ರವರು, ಧ್ಯಾನದ ಅರಿವನ್ನು ಮೂಡಿಸಿ ನಂತರ ಆಧ್ಯಾತ್ಮಿಕ ವಿಚಾರಗಳ ಸತ್ಸಂಗವನ್ನು ನಡೆಸಿ ಧ್ಯಾನದ ಕಡೆಗೆ ಒಲವನ್ನು ಮೂಡಿಸಿದರು. ಅವರ ಸಲಹೆಯಂತೆ ನಾನು ಮತ್ತು ನಮ್ಮ ಮನೆಯವರೆಲ್ಲರೂ ಸಹ ಧ್ಯಾನಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಿ ಪ್ರತಿನಿತ್ಯ ಧ್ಯಾನ ಸಾಧನೆಯಲ್ಲಿ ತೊಡಗಿದ್ದೇವೆ. ಧ್ಯಾನದ ಸಾಧನೆಯಿಂದಾಗಿ ನಮ್ಮ ಕುಟುಂಬದ ಸದಸ್ಯರೆಲ್ಲರಿಗೂ ಮನಸ್ಸಿಗೆ ಶಾಂತಿ, ಉತ್ತಮವಾದ ಆರೋಗ್ಯ, ನೆಮ್ಮದಿ, ತಾಳ್ಮೆ, ದೊರಕಿವೆ. ಹಾಗೂ ನಾವೆಲ್ಲರೂ ಧ್ಯಾನದಿಂದ ಮುಖ್ಯವಾಗಿ ಏಕಾಗ್ರತೆಯನ್ನು ಪಡೆದುಕೊಂಡಿದ್ದೇವೆ. ನನ್ನ ಮಕ್ಕಳು ವಿದ್ಯಾಭ್ಯಾಸದಲ್ಲಿ ಉತ್ತಮವಾದ ಹಾಗೂ ಉನ್ನತವಾದ ಯಶಸ್ಸು ಕಾಣುವಲ್ಲಿ ಈ ಧ್ಯಾನವು ಸಹಾಯಕವಾಗಿದೆ. ಮುಖ್ಯವಾಗಿ ನಮಗೆ ನಾವು ಅಂದುಕೊಂಡಿದ್ದನ್ನು ಸಾಧಿಸಲೇಬೇಕೆಂಬ ಛಲ ಹುಟ್ಟಿಕೊಂಡಿದೆ ಮತ್ತು ಮನೆಯವರೆಲ್ಲರೂ ಉತ್ತಮ ಆರೋಗ್ಯವನ್ನು ಪಡೆಯುವುದರಲ್ಲಿ ಸಹಕಾರಿಯಾಗಿದೆ. ಇನ್ನೊಂದು ಕುತೂಹಲಕರವಾದ ವಿಷಯವೇನೆಂದರೆ ಮನೆಯಲ್ಲಿ ೪೧ ದಿನಗಳ ಮಂಡಲ ಧ್ಯಾನವು ಎಲ್ಲಾ ಆತ್ಮಬಂಧುಗಳಿಗೆ ವಿಶ್ವಮಯ ಪ್ರಾಣಶಕ್ತಿಯನ್ನು (ಕಾಸ್ಮಿಕ್ ಎನರ್ಜಿ) ಪಡೆದುಕೊಂಡ ಅನುಭವವಾಗಿದೆ.

 

G. ಸೀತಾರಾಮಾಚಾರಿ

+91 9611950128

 

ಮಂಡಲ ಧ್ಯಾನ-11

 

ಹೆಸರು:- ಶ್ರೀಮತಿ M.S. ಶ್ರೀದೇವಿ,

ಶ್ರೀ N.M. ರವಿಶಂಕರ್‌ರವರ ಮನೆಯಲ್ಲಿ;

ಅನುಭವ:- ನಾನು ಧ್ಯಾನಕ್ಕೆ ಬರುವ ಮೊದಲು ಅಜ್ಞಾನದಿಂದ, ಅಸಭ್ಯ ವರ್ತನೆಯಿಂದ ಅಸಂತೃಪ್ತನಾಗಿದ್ದು ನಮ್ಮ ಮನೆಯಲ್ಲಿ ಅಶಾಂತಿ, ದುಃಖ ದುಗುಡ ನಕಾರಾತ್ಮಕ ವಾತಾವರಣವಿತ್ತು. ನಾವು ಬಹಳಷ್ಟು ಮನಸ್ಸಿನ ಚಂಚಲತೆ ಹೊಂದಿದ್ದು ಮನೆಯ ಮತ್ತು ತೋಟದ ಕೆಲಸಗಳಲ್ಲಿ ಸೋಮಾರಿತನವೆಂಬುದು ಅಪಾರವಾಗಿತ್ತು. ಮನೆಯಲ್ಲಿ ಮತ್ತು ಬಂದು-ಮಿತ್ರರಲ್ಲಿ ಗೌರವವಿಲ್ಲದ ಮಾತುಗಳನ್ನಾಡುವುದು ಮತ್ತು ನಮ್ಮ ಮನೆಯಲ್ಲಿ ದಿನಂಪ್ರತಿ ಜಗಳದ ವಾತಾವರಣವು ಸೃಷ್ಠಿಯಾಗಿತ್ತು ಹಾಗೂ ನಮ್ಮ ದಾಂಪತ್ಯ ಜೀವನವೂ ಸಹಿತ ಕವಲುದಾರಿಯತ್ತು. ನಮಗೆ ಈ ಸಂದರ್ಭದಲ್ಲಿ ಗುರುಗಳ ಸಮಾನರಾಗಿ ಶ್ರೀಯುತ P.ಸುಧಾಕರ್‌ರವರು ಧ್ಯಾನದ ಮಹತ್ವವನ್ನು ತಿಳಿಸಿದರು. ನಮ್ಮ ಮನೆಯಲ್ಲಿ ಧ್ಯಾನ ಪ್ರಾರಂಭಿಸಿದೆವು. ನಂತರ ಧ್ಯಾನಕ್ಕೆ ನಮ್ಮ ಕುಟುಂಬದವರೆಲ್ಲರೂ ಹಾಗೂ ಆತ್ಮಬಂಧುಗಳು ಸೇರಿ ಧ್ಯಾನ ಮಾಡುತ್ತಾ ನಮಗೆ ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳೆಲ್ಲವೂ ಒಂದೊಂದಾಗಿ ಹೊರಹೋಗಲಾರಂಭಿಸಿದವು. ಈ ಸಮಯದಲ್ಲಿ P.ಸುಧಾಕರ್‌ರವರು ಆಧ್ಯಾತ್ಮಿಕ ಹಾಗು ಜೀವನದ ಮೌಲ್ಯಯುತವಾದ ವಿಚಾರಗಳನ್ನು ಸತ್ಸಂಗದಲ್ಲಿ ತಿಳಿಸಿರುತ್ತಾರೆ.

 

 ನಮಗೆ ಮದುವೆಯಾದ ಮೇಲೆ ಎಂಟು ವರ್ಷಗಳಾದರೂ ಸಂತಾನ ಭಾಗ್ಯವಿರಲಿಲ್ಲ. ಮಂಡಲ ಧ್ಯಾನ ನಡೆಸಿದ ಕೆಲವು ತಿಂಗಳನಂತರ ನಮಗೆ ಸಂತಾನ ಭಾಗ್ಯ ಕೂಡಿ ಬಂದಿತು. ನಂತರ ಧ್ಯಾನ ಮಾರ್ಗದಿಂದ ನಮ್ಮ ಮನಸ್ಸಿಗೆ ಯಾವುದೇ ಒತ್ತಡ ಇರುವುದಿಲ್ಲ. ಈ ಒಂದು ಧ್ಯಾನದಿಂದ ಸರಿಯಾದ ಶಿಕ್ಷಣದ ಅರಿವು ಕಲಿತಂತಾಯಿತು. ಸರಿಯಾದ ಆತ್ಮಜ್ಞಾನವಿರುವ ಪುಸ್ತಕಗಳನ್ನು ಓದುವುದು ಮತ್ತು ಮಾಸ್ಟರ‍್ಸ್ ಜೊತೆ ಫೋನ್‌ನ ಮುಖಾಂತರ ಸತ್ಸಂಗ ನಡೆಸುವ ಒಳ್ಳೆಯ ಅಭ್ಯಾಸ ಬಂದಿದೆ. ನನ್ನ ಪತ್ನಿಗೆ ದಿನಾಂಕ ೨೨/೦೭/೨೦೧೩ರಂದು ಗುರು ಪೌರ್ಣಿಮೆ ದಿನದಂದು ಸಾಯಂಕಾಲ ೬:೪೫ರ ಸಮಯದ ವೇಳಗೆ ಗಂಡು ಮಗುವಿನ ಜನನವಾಯಿತು. ಧ್ಯಾನದಿಂದ ಮಾತು ಕಡಿಮೆಯಾಗಿ ಮೌನವು ಹೆಚ್ಚಾಯಿತು. ನಮ್ಮ ಮನೆಯಲ್ಲಿ ನಡೆಸಿದ ಮಂಡಲ ಧ್ಯಾನದಿಂದ ಮನಶ್ಶಾಂತಿ, ನೆಮ್ಮದಿ, ಏಕಾಗ್ರತೆ ಮತ್ತು ಸಮಯಪ್ರಜ್ಞೆ ಉಂಟಾಗಿದೆ; ಹಾಗೂ ಯಾವುದೇ ಒಂದು ಕೆಲಸವು ಸಂಪೂರ್ಣವಾದ ಇಚ್ಛಾಶಕ್ತಿಯಿಂದ ನೆರವೇರುತ್ತದೆ.

 

N.M.ರವಿಶಂಕರ್

+91 9900960942

ಕೃತಜ್ಞತೆಗಳು

 

ನಮಗೆ ಆಧ್ಯಾತ್ಮಿಕ ದಾರಿಯನ್ನು ತೋರಿಸಿಕೊಟ್ಟಂತಹ ಬ್ರಹ್ಮರ್ಷಿ ಸುಭಾಷ್ ಪತ್ರೀಜಿಯವರಿಗೆ ವೆಂಕಟಾಪುರ ಗ್ರಾಮದ ಸಮಸ್ತ ಆತ್ಮಬಂಧುಗಳೆಲ್ಲರಿಂದ ಮನಪೂರ್ವಕ ಕೃತಜ್ಞತೆಗಳನ್ನು ಅರ್ಪಿಸುತ್ತಾ ಹಾಗೂ ನಮ್ಮ ವೆಂಕಟಾಪುರ ಗ್ರಾಮಕ್ಕೆ ಧ್ಯಾನದ ಮಹತ್ವವನ್ನು ತಿಳಿಸಿ ಅಳವಡಿಸಿದಂತಹ ಶ್ರೀಯುತ P.ಸುಧಾಕರ್ ಅವರಿಗೆ ಮತ್ತು ನಮ್ಮ ಗ್ರಾಮಕ್ಕೆ ಆಗಮಿಸಿ ಧ್ಯಾನ, ಸತ್ಸಂಗ ನಡೆಸಿಕೊಟ್ಟ ಧ್ಯಾನ ಮಾಸ್ಟರ‍್ಸ್‌ಗಳೆಲ್ಲರಿಗೂ ಗ್ರಾಮದ ಸಮಸ್ತ ಆತ್ಮಬಂಧುಗಳಿಂದ ತುಂಬು ಹೃದಯದ ಕೃತಜ್ಞತೆಗಳು.

ಈ ಎಲ್ಲಾ ಮಂಡಲ ಧ್ಯಾನಗಳಿಗೆ ಸಹಕರಿಸಿದ ಹಾಗೂ ಸಹಕರಿಸುತ್ತಿರುವ ಆತ್ಮಬಂಧುಗಳು.

ಶ್ರೀಯುತ P. ಸುಧಾಕರ್ (ಬೆಂಗಳೂರು)

ಮೊ.:- 9945239843

ಶ್ರೀB.ರಾಮಮೂರ್ತಿ (ವೆಂಕಟಾಪುರ)

ಮೊ.:- 9342577696

ಶ್ರೀ R.ಬಸವರಾಜು (ವೆಂಕಟಾಪುರ)

ಮೊ.:- 9341459735

ಶ್ರೀ N.M.ರವಿಶಂಕರ್ (ವೆಂಕಟಾಪುರ)

ಮೊ.:- 9900960942.

 

“ 2016 ಒಳಾಗಾಗಿ ಸಂಪೂರ್ಣ ಪಿರಮಿಡ್ ಧ್ಯಾನ ಜಗತ್ ” ಆಗಬೇಕೆಂಬುದು ಬ್ರಹ್ಮರ್ಷಿ ಪತ್ರೀಜಿಯರವರ ಕನಸು; ಮತ್ತು ನಮ್ಮ ವೆಂಕಟಾಪುರ ಗ್ರಾಮಕ್ಕೆ ಒಂದು ಪಿರಮಿಡ್ ಆಗಬೇಕೆಂಬುದು ಎಲ್ಲಾ ಧ್ಯಾನಾತ್ಮ ಬಂಧುಗಳ ಸಂಕಲ್ಪವಾಗಿರುತ್ತದೆ

Go to top