ಧ್ಯಾನದಿಂದ ಆರೋಗ್ಯ ಸುಧಾರಣೆ


ನನ್ನ ಹೆಸರು ಸವಿತ. ನಾನು ಬೆಂಗಳೂರಿನ ಉಲ್ಲಾಳ ರಸ್ತೆಯಲ್ಲಿರುವ ಜ್ಞಾನಜ್ಯೋತಿನಗರದಲ್ಲಿ ವಾಸವಾಗಿದ್ದೇನೆ. ನನಗೆ ಧ್ಯಾನ ಪರಿಚಯವಾದದ್ದು ‘ಪ್ರಜ್ಞಾ ಪಿರಮಿಡ್ ಸ್ಪಿರಿಚುಯಲ್ ಸೆಂಟರ್’ ನಡೆಸುತ್ತಿರುವ ಶ್ರೀಮತಿ ಸುಧಾ ವಿಶ್ವನಾಥ್ ಅವರಿಂದ. ಕಳೆದ ವರ್ಷ, ಅಂದರೆ, 2016 ಆಗಸ್ಟ್‌ನಲ್ಲಿ ಸುಧಾ ಅವರು ನನಗೆ ಧ್ಯಾನದಿಂದಾಗುವ ಬದಲಾವಣೆ ಮತ್ತು ಅದರ ಮಹತ್ವವನ್ನು ತಿಳಿಸಿದರು. ಅಂದಿನಿಂದ ನಾನು ಧ್ಯಾನವನ್ನು ಮಾಡುತ್ತಾ ಬಂದೆ. ಇಲ್ಲಿಯವರೆಗೂ ಪ್ರತಿದಿನ ಹಗಲು ರಾತ್ರಿಯೆನ್ನದೆ ಧ್ಯಾನವನ್ನು ಮಾಡುತ್ತಾ ಬಂದಿದ್ದೇನೆ. ಧ್ಯಾನದಲ್ಲಿ ನನಗೆ ಹಲವಾರು ರೀತಿಯ ಅನುಭವವಾಯಿತು. ಕೇವಲ 25 ದಿನಗಳಲ್ಲಿ ದೈಹಿಕವಾಗಿಯೂ ಹಾಗೂ ಮಾನಸಿಕವಾಗಿಯೂ ಸಂಪೂರ್ಣ ಬದಲಾವಣೆಯನ್ನು ಕಂಡೆ. ಹುಟ್ಟಿದಾಗಿನಿಂದ ನಾನು ತಲೆಸುತ್ತು, ಹೊಟ್ಟೆನೋವು ಇನ್ನೂ ಹಲವಾರು ಖಾಯಿಲೆಗಳಿಂದ ಬಳಲುತ್ತಿದ್ದೆ. ನಾನು ಭೇಟಿಮಾಡದ ಡಾಕ್ಟರ್‌ಗಳಿಲ್ಲ, ತೆಗೆದುಕೊಳ್ಳದ ಮಾತ್ರೆಗಳಿಲ್ಲ. ಯಾವ ಡಾಕ್ಟರ್ ಬಳಿ ಹೋದರೂ ಗುಣವಾಗುತ್ತಿರಲಿಲ್ಲ, ಯಾವ ಮಾತ್ರೆ ತೆಗೆದುಕೊಂಡರೂ ಗುಣವಾಗುತ್ತಿರಲಿಲ್ಲ. ಆಶ್ಚರ್ಯ ಎನಿಸುವಂತೆ ನನ್ನ ಈ ಎಲ್ಲಾ ತೊಂದರೆಗಳಿಂದ ನಾನು ಸಂಪೂರ್ಣ ಗುಣಮುಖಳಾಗಲು ಧ್ಯಾನದಿಂದ ಸಾಧ್ಯವಾಯಿತು. ಇದರ ಜೊತೆಗೆ ಸತ್ಸಂಗ, ಸಸ್ಯಾಹಾರ ಜಾಥಾ, ಸ್ವಚ್ಛಭಾರತ ಅಭಿಯಾನ ಇವುಗಳಲ್ಲಿ ಪಾಲ್ಗೊಳ್ಳುವುದನ್ನೆಲ್ಲಾ ಮಾಡುತ್ತಾ ಬಂದಿದ್ದೇನೆ. ಇದಕ್ಕೆಲ್ಲ ನನ್ನ ಪತಿಯವರಾದ ಕೆ.ಪಿ.ರಮೇಶ್ ಹಾಗೂ ನನ್ನ ಮಗ ರಜತ್ ಮಣಿಗಾರ್ ಇವರ ಸಂಪುರ್ಣ ಸಹಕಾರ ದೊರತಿದೆ. ಇದಲ್ಲದೆ ನನ್ನಲ್ಲಾದ ಆರೋಗ್ಯದ ಬದಲಾವಣೆಯನ್ನು ಕಂಡು ನನ್ನ ಕುಟುಂಬಸ್ಥರೆಲ್ಲರೂ ಧ್ಯಾನವನ್ನು ಮಾಡುತ್ತಿದ್ದಾರೆ. ನಮ್ಮ ಹಳ್ಳಿಯಲ್ಲೂ ಸಹ ನಾನು ಧ್ಯಾನವನ್ನು ಕಲಿಸಿದ್ದೇನೆ. ನನ್ನ ಪರಿಚಯಸ್ಥರಿಗೆ ಹಾಗೂ ಸ್ನೇಹಿತರಿಗೆಲ್ಲಾ ಧ್ಯಾನ ಪ್ರಚಾರ ಮಾಡಿ ಅವರನ್ನು ನಮ್ಮ ಸೆಂಟರ್‌ಗೆ ಕರೆದುಕೊಂಡು ಬಂದಿದ್ದೇನೆ. ನಾನು ಮತ್ತೊಬ್ಬರ ಬಳಿ ಮಾತನಾಡುವಾಗ ಧ್ಯಾನದ ವಿಷಯ ಬಿಟ್ಟರೆ ಬೇರೆಯ ವಿಷಯಕ್ಕೆ ಹೋಗುವುದಿಲ್ಲ. ನಾನು ಎಲ್ಲರಲ್ಲೂ ಕೇಳಿಕೊಳ್ಳುವುದಿಷ್ಟೇ- ಧ್ಯಾನವನ್ನು ಮಾಡದೇ ಇರುವವರು ತಡಮಾಡದೆ ಧ್ಯಾನಮಾಡಲು ಪ್ರಾರಂಭಿಸಿ. ಈಗಾಗಲೇ ಧ್ಯಾನ ಮಾಡುತ್ತಿರುವವರು ಹೆಚ್ಚೆಚ್ಚು ಧ್ಯಾನ ಮಾಡಿ. ನಿಮ್ಮ ಸುತ್ತಮುತ್ತ ಇರುವ ಜನರಿಗೆ ಧ್ಯಾನ ಕಲಿಸಿ. ಬ್ರಹ್ಮರ್ಷಿ ಪತ್ರೀಜಿಯವರ ಆಶಯದಂತೆ, ಹಿರಿಯ ಪಿರಮಿಡ್ ಮಾಸ್ಟರುಗಳ ಆಶಯದಂತೆ ಹಾಗೂ ನಮ್ಮ ನಿಮ್ಮೆಲ್ಲರ ಆಶಯದಂತೆ ಪ್ರತಿಯೊಬ್ಬರನ್ನು ಧ್ಯಾನ ಜಗತ್ತಿಗೆ ಕರೆತರೋಣ. ಎಲ್ಲಾ ಪಿರಮಿಡ್ ಮಾಸ್ಟರ್‌ಗಳಿಗೆ ನನ್ನ ಅನಂತ ಧನ್ಯವಾದಗಳು. ನನಗೆ ಧ್ಯಾನ ಪರಿಚಯ ಮಾಡಿಸಿದ, ನನ್ನ ಈ ಆನಂದಕ್ಕೆ ಕಾರಣವಾದ ಶ್ರೀಮತಿ ಸುಧಾ ವಿಶ್ವನಾಥ್‌ರವರಿಗೆ ನನ್ನ ತುಂಬು ಹೃದಯದ ಕೃತಜ್ಞತೆ ಸಲ್ಲಿಸುತ್ತೇನೆ.


- ಸವಿತ ರಮೇಶ್
+91 98440 30066

Go to top