ಪಿರಮಿಡ್ ಧ್ಯಾನದಿಂದ ನನ್ನಲ್ಲಾದ ಬದಲಾವಣೆಗಳು

 

ಸ್ವಭಾವತಃ ನಾನೊಬ್ಬ ವಾಚಾಳಿಯಾಗಿದ್ದು ‘ನಾನು’ ಎಂಬ ಅಹಂ ಇನ್ನೂ ಇದೆ. ಬೆಂಗಳೂರಿನ ಪ್ರಜ್ಞಾ ಪಿರಮಿಡ್ ಧ್ಯಾನ ಕೇಂದ್ರದ ಪರಿಚಯ ಒಂದು ಆಕಸ್ಮಿಕ. ಈ ಸಂದರ್ಭದಲ್ಲಿ ಮಹಾನುಭಾವರಾದ ಬ್ರಹ್ಮರ್ಷಿ ಸುಭಾಷ್ ಪತ್ರೀಜಿಯವರ ನೆನಪಾಗುತ್ತಿದೆ. Pyramid Spiritual Societies Movement (PSSM) ಸಂಸ್ಥಾಪಕರಾದ ಇವರು ಒಬ್ಬ ಅವತಾರ ಪುರುಷ ಎನಿಸುತ್ತಿದೆ. ಸಮಾಜದ ಒಳಿತಿನ ಬಗ್ಗೆ ಇವರಿಗಿರುವ ಕಾಳಜಿ ನಿಜಕ್ಕೂ ಇವರನ್ನು ಬುದ್ಧ ಬಸವಾದಿಗಳ ಸಾಲಿಗೆ ಸೇರಿಸುತ್ತದೆ.

ಕೌಟುಂಬಿಕ ಸಮಸ್ಯೆಗಳಿಂದ ಕೂಡಿದ ನನ್ನ ಜೀವನದ ಮರಳುಗಾಡಿನಲ್ಲಿ ಪಿರಮಿಡ್ ಧ್ಯಾನ ಒಂದು ಓಯಸಿಸ್. ಧ್ಯಾನದ ಮಹತ್ವ ಏನೆಂಬುದು ಸತ್ಸಂಗದಿಂದ ಸ್ವಲ್ಪಸ್ವಲ್ಪ ಅರಿವಾಗುತ್ತಿದೆ. ಪಿರಮಿಡ್ ಮಾಸ್ಟರ್‌ಗಳು ನಮ್ಮನ್ನು ಲೌಕಿಕ ಲೋಕದಿಂದ ಪಾರಮಾರ್ಥಿಕ ಲೋಕದೆಡೆಗೆ ಕರೆದೊಯ್ಯಲು ಬಹಳ ಶ್ರಮಿಸುತ್ತಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನ ಭಾರತಿಯಲ್ಲಿ ಬಯಲು ಧ್ಯಾನದ ಸಂದರ್ಭವನ್ನು ನಾನು ಎಂದೂ ಮರೆಯಲಾರೆ. ಆ ದಿನ ಹಿರಿಯ ಮಾಸ್ಟರ್ ಶ್ರೀ ಪ್ರೇಮನಾಥ್ ‘ನಮ್ಮ ಮಾತುಗಳು ಯಾವಾಗ ಉಚಿತವಾಗಿರುತ್ತದೆ? ಆ ಮಾತುಗಳು ಎಷ್ಟಿರಬೇಕು? ಹೇಗಿರಬೇಕು?’ ಇತ್ಯಾದಿ ವಿವರಗಳನ್ನು ತಮ್ಮ ನಯವಾದ ಮಾತುಗಳ ಚಾಟಿಯಿಂದ ನನ್ನನ್ನು ಸೂಕ್ಷ್ಮವಾಗಿ ಎಚ್ಚರಿಸಿದರು. ಈಗ ನಾನು ಮಿತಭಾಷಿಯಾಗುತ್ತಿದ್ದೇನೆ. ಪ್ರೇಮನಾಥ್ ಸರ್‌ಗೆ ವಂದನೆಗಳು.
ಪಿರಮಿಡ್ ಧ್ಯಾನದಿಂದ ನನ್ನ ದೇಹದ ನಡುಕ ಸಾಕಷ್ಟು ಕಡಿಮೆಯಾಗಿದೆ. ಮನಸ್ಸು ಪ್ರಶಾಂತವಾಗುತ್ತಿದೆ. ಬ್ರಹ್ಮರ್ಷಿ ಪತ್ರೀಜಿ ಅವರ ಮುತ್ತಿನಂತಹ ಮಾತುಗಳಾದ,

ಧ್ಯಾನ
ಮೌನ
ಗಾನ
ಶಾಂತಿಗೆ ಸೋಪಾನ

ಎಂಬೀ ಸೂಳ್ನುಡಿಗಳನ್ನು ನಾವೆಲ್ಲ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ.

ಶಾಖಾಹಾರ ಅಂದರೆ, ಸಸ್ಯಾಹಾರ, ಪರಿಸರ ಪ್ರಜ್ಞೆ, ಸ್ವಚ್ಛ ಭಾರತ್- ಇವುಗಳ ಮಹತ್ವವನ್ನು ಸಾರಲು ಪ್ರಜ್ಞ ಪಿರಮಿಡ್ ಧ್ಯಾನ ಕೇಂದ್ರ, ಬೆಂಗಳೂರು, ಇಲ್ಲಿ ಸಾಕಷ್ಟು ಚಟುವಟಿಕೆಗಳನ್ನು ನಾವೆಲ್ಲ ನಡೆಸಿಕೊಂಡು ಬರುತ್ತಿದ್ದೇವೆ.


ಇನ್ನು ಮುಂದೆ

"ಮಾಂಸಾಹಾರಕ್ಕೆ ಟಾಟಾ; ಸಸ್ಯಾಹಾರದತ್ತ ನಮ್ಮ ಓಟ"


- ಸಿ.ಚಂದ್ರಶೇಖರಯ್ಯ,
+91 96863 58868

Go to top