"ಮನೆಯಲ್ಲಿ ಎಲ್ಲರೂ ಧ್ಯಾನ ಮಾಡಲು ಆರಂಭಿಸಿದ್ದಾರೆ"

 


ನನ್ನ ಹೆಸರು ಅನಿತ. ಬೆಂಗಳೂರಿನ ಮಿಲ್ಕ್ ಕಾಲೋನಿಯಲ್ಲಿರುವ ಮುನೇಶ್ವರ ಪಿರಮಿಡ್ ಧ್ಯಾನಕೇಂದ್ರದಲ್ಲಿ ನಲವತ್ತೆಂಟು ದಿನಗಳ ಮಂಡಲ ಧ್ಯಾನ ಶುರುವಾದಾಗ, ನನ್ನ ಸ್ನೇಹಿತರಾದ ಭಾನು ಮತ್ತು ಸುಜಾತ ನನಗೆ ಧ್ಯಾನವನ್ನು ಪರಿಚಯಿಸಿದ್ದರು. ನನಗೆ ಆಗ ಅತಿಯಾದ ಸೊಂಟನೋವು ಇತ್ತು. ಪ್ರತಿದಿನ ತಪ್ಪದೆ ನಾವೆಲ್ಲರು ಸಂಧ್ಯಾರವರ ಜೊತೆಯಲ್ಲಿ ಧ್ಯಾನ ಮಾಡುತ್ತಿದ್ದೆವು. ಮಂಡಲ ಧ್ಯಾನ ಮುಗಿಯುವಷ್ಟರಲ್ಲಿ ಮೊದಲು ಇದ್ದ ಸೊಂಟನೋವು ಕಾಣೆಯಾಗಿತ್ತು. ಇಂದಿನವರೆಗೂ ಆ ನೋವು ಇಲ್ಲದಾಗಿದೆ. ಈಗಲೂ ಧ್ಯಾನವನ್ನು ನಿರಂತರವಾಗಿ ಮಾಡುತ್ತಿದ್ದೇನೆ. ಧ್ಯಾನದಿಂದ ಅತಿ ಶಾಂತವಾಗಿ ಇರುವಂತಾಗಿದೆ. ಸಮಸ್ಯೆಗಳಿಗೆ ಪರಿಹಾರಗಳು ಮುನ್ಸೂಚನೆಯಾಗಿ ಕಾಣುತ್ತಿರುತ್ತವೆ.. ನಾವು ಪ್ರತಿದಿನ ಸಾಮೂಹಿಕ ಧ್ಯಾನ ( Group Meditation) ಮಾಡುವುದರಿಂದ ಹೆಚ್ಚು ಸಮಯ ಸತ್ಸಂಗದಲ್ಲಿ ಇರುವಂತಾಗಿದೆ. ರಾಜಾಜಿನಗರದ ಬುದ್ಧಾ ಪಿರಮಿಡ್ ಧ್ಯಾನ ಕೇಂದ್ರದಲ್ಲಿ ಪ್ರತಿ ಭಾನುವಾರ ನಡೆಯುವ ಸತ್ಸಂಗದಲ್ಲಿ ಪಾಲ್ಗೊಳ್ಳುವುದರಿಂದ ಹೆಚ್ಚಿನ ಜ್ಞಾನ ಗಳಿಸಿಕೊಳ್ಳುತ್ತಿದ್ದೇನೆ ಮತ್ತು ಸದಾ ಎಚ್ಚರದ ಸ್ಥಿತಿಯಲ್ಲಿರಲು ಧ್ಯಾನ ನನಗೆ ಸಹಾಯಕವಾಗಿದೆ. ಧ್ಯಾನ ಮಾಡುವಾಗ ಮೈ ಹಗುರವಾಗಿರುತ್ತದೆ. ನಿದ್ದೆಯಲ್ಲಿ ಮತ್ತು ಧ್ಯಾನದಲ್ಲಿ ಬೆಳಕು ಕಾಣುತ್ತದೆ. ಮನೆಯಲ್ಲಿ ಎಲ್ಲರೂ ಧ್ಯಾನ ಮಾಡಲು ಆರಂಭಿಸಿದ್ದಾರೆ. ಧ್ಯಾನ ಪರಿಚಯಿಸಿದ ನನ್ನ ಮಿತ್ರರಾದ ಸುಜಾತ ಮತ್ತು ಭಾನುರವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು ಮತ್ತು ಧ್ಯಾನವನ್ನು ಸರಿಯಾದ ರೀತಿಯಲ್ಲಿ ಮಾರ್ಗದರ್ಶನ (ಗೈಡ್) ಮಾಡಿ ಪ್ರತಿದಿನವೂ ಸಾಮೂಹಿಕ ಧ್ಯಾನವನ್ನು ನಮ್ಮ ಕೇಂದ್ರದಲ್ಲಿ ನಡೆಸುತ್ತಿರುವ ಜೀವರತ್ನರವರಿಗೆ ನನ್ನ ನಮನಗಳು ಮತ್ತು ಗುರುಗಳಾದ ಪತ್ರೀಜಿಯವರಿಗೆ ನನ್ನ ಅನಂತ ಕೋಟಿ ನಮಸ್ಕಾರಗಳು.


- ಅನಿತ

ಬೆಂಗಳೂರು

Go to top