"ಪಾದಗಳ ದರ್ಶನ"

 


ನನ್ನ ಹೆಸರು ಬಾನು. ಮುನೇಶ್ವರ ಪಿರಮಿಡ್ ಧ್ಯಾನಕೇಂದ್ರ ಸ್ಥಾಪನೆಯಾದಾಗಿನಿಂದ ಹೋಗುತ್ತಿದ್ದೇನೆ. ಸಾಮೂಹಿಕ ಧ್ಯಾನ ಚೆನ್ನಾಗಿದ್ದು ಧ್ಯಾನ ಶುರುಮಾಡಿನಿಂದಲೇ ಧ್ಯಾನದ ಅನುಭವಗಳು ಆಗುತ್ತಿತ್ತು. ಒಮ್ಮೆ ಧ್ಯಾನದಲ್ಲಿ ಆಕಾಶ ನಕ್ಷತ್ರಗಳು ನನ್ನ ಸಮೀಪಕ್ಕೆ, ಅಂದರೆ, ನನ್ನ ಕೈಗೆ ಎಟುಕುವಂತಹ ಅನುಭವವಾಯಿತು. ಪ್ರಾಣಶಕ್ತಿಯು ಹರಿಯುವುದರ ಅನುಭವ ಸಾಕಷ್ಟು ಆಗುತ್ತಿರುತ್ತದೆ. ನನ್ನ ಅನುಭವಗಳನ್ನು ಪ್ರೇಮನಾಥ್ ಸಾರ್‌ರವರ ಸತ್ಸಂಗದಲ್ಲಿ ವ್ಯಕ್ತಪಡಿಸಿದಾಗ ಅವರು ನಿನ್ನಲ್ಲಿಗೆ ನಕ್ಷತ್ರಗಳು ಬಂದಿಲ್ಲ ನಿನ್ನನ್ನು ಅಲ್ಲಿಗೆ ಕರೆದೊಯ್ದಿದ್ದಾರೆ ಎಂದರು. ಧ್ಯಾನದಿಂದ ಮೊದಲಿಗಿಂತ ಹೆಚ್ಚು ತಿಳಿವಳಿಗೆ ಜ್ಞಾನ ಬಂದಿದೆ. ನನ್ನ ಮಗನ S.S.L.C. ಪರೀಕ್ಷೆ ನಡೆಯುತ್ತಿದ್ದಾಗ ಮಕ್ಕಳೆಲ್ಲರು ಚೆನ್ನಾಗಿ ಪರೀಕ್ಷೆಯಲ್ಲಿ ಬರೆಯಬೇಕೆಂದು ಧ್ಯಾನ ಮಾಡುತ್ತಿದ್ದಾಗ ನಾನು ಧ್ಯಾನದಲ್ಲೇ ಎಲ್ಲಾ ಗುರುಗಳು ಆರ್ಶಿವಾದ ಮಾಡುತ್ತಿರುವುದು ಕಾಣಿಸಿತು.

ಮತ್ತೊಮ್ಮೆ ಪ್ರೇಮನಾಥ್ ಸಾರ್‌ರವರು ತಿರುಪತಿಯಲ್ಲಿ ಕೇವಲ ದೇವರ ಮುಖವನ್ನು ಮಾತ್ರ ನೋಡುವುದಲ್ಲ ಅವರ ಪಾದಗಳನ್ನು ನೋಡಬೇಕು ಎಂದು ಹೇಳುತ್ತಿದ್ದುದನ್ನು ಕೇಳಿಸಿಕೊಂಡಿದ್ದೆ. ನಾನು ಆಗಾಗ್ಗೆ ತಿರುಪತಿಗೆ ಹೋಗುತ್ತಿದ್ದು ಒಮ್ಮೆಯೂ ಪಾದಗಳನ್ನು ದರ್ಶಿಸಲು ಆಗಲೇ ಇಲ್ಲವಲ್ಲ ಎಂದುಕೊಂಡು ಧ್ಯಾನದಲ್ಲಿ ಕುಳಿತ್ತಿದ್ದಾಗ ಪಾದಗಳ ದರ್ಶನ ಮಾಡುವಂತಾಯಿತು. ಹಲವಾರು ಅನುಭವಗಳು ಧ್ಯಾನದಲ್ಲಿ ಆಗುತ್ತಿದ್ದು ಸಮಯ ಅಭಾವದಿಂದ ಸಾಮೂಹಿಕ ಧ್ಯಾನಕ್ಕೆ ಹೋಗದೆ ಇದ್ದರು ಮನೆಯಲ್ಲಿ ತಪ್ಪದೆ ಮಾಡುತ್ತಿದ್ದೇನೆ.

ನನ್ನ ಕುಟುಂಬದವರು ಧ್ಯಾನವನ್ನು ತಪ್ಪದೆ ಮಾಡುತ್ತಾರೆ. ಧ್ಯಾನದ ಬಗ್ಗೆ ಎಲ್ಲರಿಗೂ ತಿಳಿಸುತ್ತಿರುತ್ತೇನೆ. ಪಿರಮಿಡ್ ವ್ಯಾಲಿಗೆ ಆಗಾಗ ಭೇಟಿ ಕೊಡುತ್ತೇವೆ. ಧ್ಯಾನ ಪರಿಚಯಿಸಿದವರಿಗೂ ಮತ್ತು ಎಲ್ಲಾ ಧ್ಯಾನಿಗಳಿಗೂ ನನ್ನ ಹೃದಯ ಪೂರ್ವಕ ಧನ್ಯವಾದಗಳು ಮತ್ತು ಗುರುಗಳಾದ ಪತ್ರೀಜೀಯವರಿಗೆ ನನ್ನ ಅನಂತಾನಂತ ಕೋಟಿ ನಮನಗಳು.


-ಬಾನು
ಬೆಂಗಳೂರು

Go to top