“ಯಾವುದೇ ಸಮಸ್ಯೆ ಇಲ್ಲದೆ ಜೀವನ ಸುಖವಾಗಿ, ಶಾಂತವಾಗಿ ನಡೆಯುತ್ತಿದೆ”

 

ನನ್ನ ಹೆಸರು ಪುಷ್ಪ. ನನಗೆ 2008ರಲ್ಲಿ ಧ್ಯಾನ ಪರಿಚಯವಾಯಿತು. ಮೊದಲು ಹಣಕಾಸಿನ ಕೊರತೆಯಿಂದಾದ ಒತ್ತಡ, ಜನಗಳಿಂದ ತೊಂದರೆ ಉಂಟಾದಾಗ ನೊಂದುಕೊಳ್ಳುತ್ತಿದ್ದೆ. ಧ್ಯಾನವನ್ನು ಶುರುಮಾಡಿದ ನಂತರ ನನ್ನ ಸಮಸ್ಯೆಗಳೆಲ್ಲಾ ತಾವಾಗಿಯೇ ಪರಿಹಾರವಾಗುತ್ತಿವೆ. ಹಣಕಾಸು ಮತ್ತಿತರ ಯಾವುದೇ ಸಮಸ್ಯೆ ಇಲ್ಲದೆ ಜೀವನ ಸುಖವಾಗಿ, ಶಾಂತವಾಗಿ ನಡೆಯುತ್ತಿದೆ. ಒಮ್ಮೆ ಸ್ನೇಹಿತರ ಮನೆಯಲ್ಲಿ ಧ್ಯಾನಕ್ಕೆ ಕುಳಿತ್ತಿದ್ದಾಗ ತುಂಬಾ ವಾಂತಿಯಾಗಿ ಆಯಾಸ ಮತ್ತು ಭಯವಾಯಿತು. ಅಲ್ಲಿದ್ದ ಸಂಧ್ಯಾರವರು ನನ್ನಲ್ಲಿದ್ದ ನಕಾರಾತ್ಮಕತೆಗಳೆಲ್ಲಾ ಹೊರಗೆ ಬಂದುದಾಗಿ ತಿಳಿಸಿದರು. ಶ್ರೀ ಪ್ರೇಮನಾಥ್ರವರು ನನ್ನನ್ನು ಸ್ಪಿರಿಚ್ಯುಯಲ್ ಕೌನ್ಸಿಲಿಂಗ್ ಮಾಡಿದಾಗ ನಾನು ಹಿಂದಿನ ಜನ್ಮದಲ್ಲಿ ಋಷಿ ಪುತ್ರಿಯಾಗಿದ್ದೆ ಎಂಬುದನ್ನು ಕಂಡುಕೊಂಡೆ. ಮುಂದೆ ಧ್ಯಾನವನ್ನು ತಪ್ಪದೇ ಮಾಡಬೇಕೆಂದು ಅವರು ತಿಳಿಸಿದರು. ಅಂದಿನಿಂದ ಇಂದಿನವರೆಗೂ ಧ್ಯಾನವನ್ನು ತಪ್ಪದೆ ಮಾಡುತ್ತಿದ್ದೇನೆ ಮತ್ತು ಇತರರಿಗೂ ತಿಳಿಸುತ್ತಿದ್ದೇನೆ. ಜೀವನದಲ್ಲಿ ನೆಮ್ಮದಿ ಹಾಗೂ ಎಲ್ಲವನ್ನು ಸ್ವೀಕಾರ ಮಾಡುವ ಮನೋಭಾವ ಬೆಳೆದಿದೆ.


 ಪುಷ್ಪ

Go to top