“ನಾನು ಯಾವುದೇ ಮಾತುಗಳನ್ನು ಹೇಳಿದರೆ ಅದು ಫಲಿಸುತ್ತಿದೆ”


ನನ್ನ ಹೆಸರು ಗುಣಮ್ಮ. ನನಗೆ 2008ರಲ್ಲಿ ಧ್ಯಾನದ ಪರಿಚಯವಾಯಿತು. ಧ್ಯಾನದಿಂದ ನನ್ನ ಜೀವನದಲ್ಲಿ ಎಷ್ಟೆಷ್ಟೊ ಬದಲಾವಣೆಗಳನ್ನು ಕಾಣುತ್ತಿದ್ದೇನೆ. ನಾನು ಧ್ಯಾನವನ್ನು ಸಮಯ ಸಿಕ್ಕಿದಾಗೆಲ್ಲಾ ತಪ್ಪದೇ ಮಾಡುತ್ತಿದ್ದೇನೆ. ಧ್ಯಾನಕ್ಕೆ ಬರುವ ಮೊದಲು ಮನೆಯಲ್ಲಿ ಒಬ್ಬಳೆ ಇರುವುದಕ್ಕೆ ಭಯವಾಗುತ್ತಿತ್ತು. ಈಗ ಹಾಗೇನೂ ಅನಿಸುತ್ತಿಲ್ಲ. ಸಂಬಂಧಿಕರ ಹಾಗೂ ನೆರೆಹೊರೆಯವರ ಜೀವನದಲ್ಲಿ ನಡೆಯುವ ಘಟನೆಗಳು ಮೊದಲೆ ಸೂಚನೆಯಾಗಿ ಧ್ಯಾನದಲ್ಲಿ ಕಾಣಿಸಿಕೊಳ್ಳುತ್ತಿತ್ತು. ಇದರಿಂದ ಮನಸ್ಸು ಅಸ್ತವ್ಯಸ್ತವಾಗುತ್ತಿತ್ತು. ಅದಕ್ಕಾಗಿ ನಾನು ಧ್ಯಾನದಲ್ಲಿ ನನಗೆ ಯಾವುದೇ ರೀತಿಯ ಸೂಚನೆಗಳು ಬರಬಾರದೆಂದು ಕೋರಿಕೊಂಡೆ. ಈಗ ಯಾವುದೇ ರೀತಿಯ ಸೂಚನೆಗಳು ಬರುತ್ತಿಲ್ಲ. ನಾನು ಯಾವುದೇ ಮಾತುಗಳನ್ನು ಹೇಳಿದರೆ ಅದು ಫಲಿಸುತ್ತಿದೆ. ನಾನು ಹೆಚ್ಚು ಮೌನಿಯಾಗಿದ್ದೇನೆ. ನನಗೆ ಯಾವುದೇ ಅಡೆತಡೆಗಳು ಬಂದಲ್ಲಿ ಯಾರೋ ಒಬ್ಬರು ಅಪರೋಕ್ಷವಾಗಿ ಸಹಾಯ ನೀಡುವುದು ನನ್ನ ಅನುಭವಕ್ಕೆ ಬರುತ್ತಿದೆ. ಧ್ಯಾನವು ಪ್ರತಿಯೊಬ್ಬರಿಗೂ ಬೇಕೇಬೇಕೆಂಬುದು ನನ್ನ ಅಭಿಪ್ರಾಯ.


ಗುಣಮ್ಮ

Go to top