" ವಿಶಾಖಪಟ್ಟಣದಲ್ಲಿ ನಡೆದ ಧ್ಯಾನಮಹಾಚಕ್ರ ಕಾರ್ಯಕ್ರಮವು ‘ನ ಭೂತೋ ನ ಭವಿಷ್ಯತಿ’ "

 

ವಿಶಾಖಪಟ್ಟಣದಲ್ಲಿ ನಡೆದ ಧ್ಯಾನಮಹಾಚಕ್ರ ಕಾರ್ಯಕ್ರಮವು ‘ನ ಭೂತೋ ನ ಭವಿಷ್ಯತಿ’ ಎಂಬಂತೆ ನಡೆಯಿತು. ಪ್ರತಿನಿತ್ಯ ನಡೆದ ಬೆಳಗಿನ ‘ ಸಾಮೂಹಿಕ ಧ್ಯಾನ ’ವು ಇಡೀ ಪ್ರಾಂಗಣದಲ್ಲಿ ಅತ್ಯದ್ಭುತವಾದ, ಶಕ್ತಿಶಾಲಿ ಪ್ರಭಾವಲಯವನ್ನು (ಮಾರ್ಘೋಜೆನಿಕ್ ಫೀಲ್ಡ್) ಸೃಷ್ಟಿಸಿತ್ತು. ಈ ಸಾಮೂಹಿಕ ಧ್ಯಾನವೇ ಇಡೀ ಹತ್ತುದಿನಗಳ ಕಾಲದ ಈ ಮಹಾಚಕ್ರ ಕಾರ್ಯಕ್ರಮದ ಹೈಲೈಟ್. ಆಧ್ಯಾತ್ಮಿಕ ಪ್ರವಚನಗಳು ಮತ್ತು ಗೋಷ್ಠಿಗಳು ವಿಚಾರಪ್ರಚೋದಕವಾಗಿದ್ದವು. ದೇಶವಿದೇಶಗಳಿಂದ ಹಾಗೂ ಭಾರತದ ವಿವಿಧ ಪ್ರದೇಶಗಳಿಂದ ಬಂದು, ಸಾಗರೋಪಾದಿಯಲ್ಲಿ ಸೇರಿದ್ದ ಪಿರಮಿಡ್ ಮಾಸ್ಟರ್‌ಗಳು ಮತ್ತು ಧ್ಯಾನಿಗಳು ಊಟ, ವಸತಿ ಸೇರಿದಂತೆ ಕಾರ್ಯಕ್ರಮದ ಹತ್ತೂ ದಿನಗಳು ಅತ್ಯಂತ ಶಿಸ್ತಿನಿಂದ ನಡೆದುಕೊಂಡು ಆಧ್ಯಾತ್ಮಿಕ ಪ್ರೌಢಿಮೆ ತೋರಿದ್ದು ಅತ್ಯಂತ ಶ್ಲಾಘನೀಯ ಅಂಶ. ಕಾರ್ಯಕ್ರಮ ಸಂಘಟನೆಯಲ್ಲಿ ಅಚ್ಚುಕಟ್ಟುತನ ಎದ್ದುಕಾಣುತ್ತಿತ್ತು.

 

ಈ ಧ್ಯಾನಮಹಾಚಕ್ರದಲ್ಲಿ ಭಾಗವಹಿಸುವ ಮೂಲಕ, " ಕರ್ನಾಟಕದಲ್ಲಿ ಧ್ಯಾನ ಪ್ರಚಾರವನ್ನು ಇನ್ನೂ ಪರಿಣಾಮಕಾರಿಯಾಗಿ ಕೈಗೊಳ್ಳಬೇಕು " ಎಂಬ ಸಂಕಲ್ಪವು ನನ್ನಲ್ಲಿ ಇನ್ನಷ್ಟು ಗಟ್ಟಿಯಾಯಿತು. ಅಲ್ಲದೆ, ಪತ್ರೀಜಿಯವರ ಸಂಕಲ್ಪದ ಪ್ರಭಾವ ಮತ್ತು ಈ ವಾರ್ಷಿಕ ಮಹೋತ್ಸವವು ವರ್ಷದಿಂದ ವರ್ಷಕ್ಕೆ ಮಹೋನ್ನತವಾಗಿ ಬೆಳೆಯುತ್ತಿರುವುದನ್ನು ಕಣ್ಣಾರೆ ಕಂಡಂತಾಯಿತು.

 

Dr.A. ಸತ್ಯನಾರಾಯಣ
ಸಂಪಾದಕರು, ಧ್ಯಾನ ಕಸ್ತೂರಿ
ಬೆಂಗಳೂರು
ಫೋನ್  :  +91 9448883872

Go to top