" ಧ್ಯಾನ ಶಕ್ತಿಯಿಂದಲೇ... ಆರೋಗ್ಯ "

 

ನನ್ನ ಹೆಸರು A.V. ಸುಬ್ಬಾರೆಡ್ಡಿ. ನಾನು ಮದನಪಲ್ಲಿಯಲ್ಲಿ 22 ಹಾಸಿಗೆಗಳ 'ಭವ್ಯ ಚಿಕ್ಕ ಮಕ್ಕಳ ಆಸ್ಪತ್ರೆಯನ್ನು’ ನಡೆಸುತ್ತಿದ್ದೇನೆ. 'ಮದನಪಲ್ಲಿ ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟಿ’ ಅಧ್ಯಕ್ಷನಾಗಿದ್ದೇನೆ. ಧ್ಯಾನ ಮಾರ್ಗದಲ್ಲಿ ನನ್ನ ವಯಸ್ಸು ಕೇವಲ ಒಂದು ವರೆ ವರ್ಷ.

 

ಮೊದಲನೆಯ ಬಾರಿ ಬ್ರಹ್ಮರ್ಷಿ ಪತ್ರೀಜಿ ಅವರನ್ನು 2008ರ ನವಂಬರ್ 3ನೇ ದಿನಾಂಕ ಕಡಪ ಜಿಲ್ಲೆ ತಾಳ್ಳಪಾಕದಲ್ಲಿ ಭೇಟಿಯಾಗುವ ಭಾಗ್ಯ ನನಗೆ ಸಿಕ್ಕಿದೆ. ಆ ದಿನ ಬೆಳಗ್ಗೆ ಯಿಂದ ರಾತ್ರಿ 10:30 ವರೆಗೂ ಪತ್ರೀಜಿ ಅವರ ಜೊತೆಯಿದ್ದೆ. ಬೆಳಗ್ಗೆಯಿಂದ ಸಾಯಂಕಾಲದವರೆಗೂ ಪತ್ರೀಜಿಯವರ ಜೊತೆ ಇರುವ ಪ್ರತಿ ಕ್ಷಣ, ಪತ್ರೀಜಿ ಅವರ ಪ್ರತಿ ಒಂದು ಮಾತು, ಪ್ರತಿ ಒಂದು ಚೇಷ್ಟೆ... ಪ್ರತಿ ಒಂದು ಕದಲಿಕೆ ನನಗೆ ಸಾಯಿ ಬಾಬಾ ಹಾಗೆ ಅನಿಸಿತು. ಹಿಂದೆ ನಾನು ಓದಿರುವ ಸಾಯಿ ಲೀಲಾಮೃತಂನಲ್ಲಿ ಇರುವ ಘಟನೆಗಳು ನನಗೆ ಕಣ್ಣಿಗೆ ಕಟ್ಟಿದ ಹಾಗೆ ಕಾಣಿಸಿಕೊಂಡಿತು. ಆ ದಿನ ನನ್ನ ಆಧ್ಯಾತ್ಮಿಕ ಜೀವನದಲ್ಲಿನ ಕೊರತೆ ತೀರಿತು. ಪತ್ರೀಜಿ ನನ್ನ ಗುರುಗಳೇ ಇನ್ಮೇಲೆ ಪತ್ರೀಜಿ ಬಾಯಿಂದ ಬರುವ ಪ್ರತಿ ಒಂದು ಮಾತು, ಪ್ರತಿ ಆದೇಶ ನನಗೆ ವೇದ ವಾಕ್ಕು. ಪತ್ರೀಜಿ ಏನು ಹೇಳಿದರೇ ಅದು ಮಾಡುವುದೇ ನನ್ನ ಕೆಲಸ. ಪತ್ರೀಜಿ ಪಾದಗಳಲ್ಲಿ ನನ್ನ ಜೀವನವನ್ನು ಹಂಚಿಕೊಳ್ಳಬೇಕೆಂದು ನಿರ್ಣಯಿಸಿ ಕೊಂಡಿದ್ದೇನೆ.

 

ಒಬ್ಬ ಡಾಕ್ಟರ್ ಆಗಿ ವೈದ್ಯಶಾಸ್ತ್ರವನ್ನು ಕುರಿತು ತಿಳಿದಿರುವ ವ್ಯಕ್ತಿಯಾಗಿ ರೋಗಗಳು ಯಾವ ವಿಧವಾಗಿ ಬರುತ್ತವೆಂದು ಪೆಥೋಫಿಜಿಯಾಲಜೀ... ತಿಳಿದಿರುವ ವ್ಯಕ್ತಿಯಾಗಿ, ಔಷಧಗಳನ್ನು ಉಪಯೋಗಿಸಿದಾಗ ಅವು ಶರೀರದಲ್ಲಿ ಯಾವ ತರಹಾ ಕೆಲಸಮಾಡಿ ರೋಗಗಳನ್ನು ವಾಸಿಮಾಡುತ್ತವೋ ತಿಳಿದಿರುವ ವ್ಯಕ್ತಿಯಾಗಿ, ಅದೇ ಸಮಯದಲ್ಲಿ ಧ್ಯಾನಿಯಾಗಿ ಧ್ಯಾನದ ಪ್ರಯೋಜನಗಳು ತಿಳಿದಿರುವ ವ್ಯಕ್ತಿಯಾಗಿ, ಧ್ಯಾನ ಮಾಡಿದಾಗ, ಆಲೋಚನಾರಹಿತ ಸ್ಥಿತಿಗೆ ಹೋದಾಗ ನಮ್ಮ ಮೆದುಳಿನಲ್ಲಿ, ಶರೀರದಲ್ಲಿ, ಎಂಡೋಕ್ರೈನ್ ಗ್ಲಾಂಡ್ಸ್‌ಗಳಲ್ಲಿ ಶಾಸ್ತ್ರಪರವಾಗಿ ನಡೆಯುವ ಬದಲಾವಣೆಗಳನ್ನು ತಿಳಿದುಕೊಂಡು, ಇವೆಲ್ಲವನ್ನು ಕುರಿತು ಯೋಚಿಸಿದ ನಂತರ ಧ್ಯಾನ ಸರ್ವರೋಗ ನಿವಾರಿಣಿ ಎಂದು, ಸರಿಯಾದ ಧ್ಯಾನ ಸಾಧನೆ ಮಾಡಿದರೆ, ನೆಗಡಿಯಿಂದ ಕಾನ್ಸರ್‌ವರೆಗೂ ಎಲ್ಲಾ ತರಹದ ರೋಗಗಳನ್ನು ಶಾಸ್ತ್ರಪರವಾಗಿ ಮತ್ತು ಆಧ್ಯಾತ್ಮಿಕವಾಗಿ ಸಂಪೂರ್ಣವಾಗಿ ವಾಸಿ ಮಾಡಿಕೊಳ್ಳಬಹುದು ಎಂದು ಖಂಡಿತವಾಗಿಯೂ ಹೇಳಿಕೊಳ್ಳಬಹುದು.

 

"ಜ್ಞಾನಾಗ್ನಿ ದಗ್ಧ ಕರ್ಮಣಾಂ" ಎಂದರಲ್ಲವೇ, ಧ್ಯಾನದಿಂದ, ಜ್ಞಾನದಿಂದ ಸರ್ವಕರ್ಮಗಳು ಉರಿದು ಬೂದಿಯಾಗಿ ನಾವು ಕರ್ಮ ವಿಮುಕ್ತರಾಗುತ್ತೇವೆ. "ಪೂರ್ವ ಜನ್ಮ ಕೃತಂ ಪಾಪಂ, ವ್ಯಾಧಿ ರೂಪೇಣ ಪೀಡ್ಯತೇ" ಗತ ಜನ್ಮಗಳ ಪಾಪಕರ್ಮಗಳು ಈ ಜನ್ಮದಲ್ಲಿ ವಿಧವಿಧವಾದ ರೋಗಗಳ ರೂಪದಲ್ಲಿ ನಮ್ಮನ್ನ ಪೀಡಿಸುತ್ತವೆ. ಧ್ಯಾನದಿಂದ ನಾವು ಜ್ಞಾನವನ್ನು ಹೊಂದಿ, ಆ ಜ್ಞಾನದಲ್ಲಿ ಸರ್ವಪಾಪಕರ್ಮಗಳು ಬೂದಿಯಾಗಿ, ನಾವು ಆ ಪಾಪಕರ್ಮಗಳಿಂದ ವಿಮುಕ್ತರಾಗಿ ವ್ಯಾಧಿಗಳಿಂದ ರಕ್ಷಿಸಲ್ಪಡುತ್ತೇವೆ; ಮತ್ತು ಧ್ಯಾನ ಸ್ಥಿತಿಯಲ್ಲಿ ಇದ್ದಾಗ ಆಲೋಚನಾರಹಿತ ಸ್ಥಿತಿಯಲ್ಲಿ ಇದ್ದಾಗ ಬ್ರಹ್ಮರಂಧ್ರದಿಂದ ನಮ್ಮ ಒಳಗೆ ಪ್ರವೇಶಿಸುವ ಕಾಸ್ಮಿಕ್ ಎನರ್ಜಿ... ವಿಶ್ವಶಕ್ತಿ... ಶರೀರದಲ್ಲಿ ಇರುವ ಎಲ್ಲಾ ಕಣಗಳನ್ನು ಉತ್ತೇಜಿತವನ್ನು ಮಾಡುವುದರಿಂದ ಶರೀರದಲ್ಲಿ ಇರುವ ಎಲ್ಲಾ ಅಂಗಾಂಗಗಳ ಸಾಮರ್ಥ್ಯ ಹೆಚ್ಚುತ್ತದೆ; ಎಲ್ಲಾ ತರಹದ ವ್ಯಾಧಿಗಳು ವಾಸಿಯಾಗುತ್ತವೆ; ರೋಗ ನಿರೋಧಕಶಕ್ತಿ ಹೆಚ್ಚುತ್ತದೆ. ಧ್ಯಾನದಿಂದ ರೋಗಗಳನ್ನು ವಾಸಿಮಾಡಿಕೊಳ್ಳಬಹುದು ಎಂಬುವ ವಿಷಯವನ್ನು ವೈದ್ಯ ವಿಜ್ಞಾನ ಶಾಸ್ತ್ರ ಪರವಾಗಿ ಸಹ ವಿವರಿಸಬಹುದು.

 

ಉದಾಹರಣೆಗೆ ಬಿಪಿ ಮತ್ತು ಷುಗರ್ ವ್ಯಾಧಿಗಳು. ರಕ್ತನಾಳಗಳಲ್ಲಿ ರಕ್ತ ಎಷ್ಟು ಪ್ರೆಷರ್‌ಯಿಂದ ಪ್ರವಹಿಸುತ್ತದೋ, ಆ ಪ್ರೆಷರನ್ನೇ ಬಿಪಿ/ಬ್ಲಡ್ ಪ್ರೆಷರ್ ಅನ್ನುತ್ತಾರೆ. ಶರೀರದಲ್ಲಿ ನಡೆಯುವ ವಿಧವಿಧವಾದ ಬದಲಾವಣೆಗಳಿಂದಾಗಲೀ, ಮಾನಸಿಕ ಒತ್ತಡಗಳಿಂದಾಗಲೀ, ವಂಶಪಾರಂಪರ್ಯದಿಂದಾಗಲೀ ಅಥವಾ ರಕ್ತನಾಳಗಳಿಗೆ ಸಂಬಂಧಿಸಿದ ರೋಗಗಳಿಂದ ರಕ್ತನಾಳಗಳಲ್ಲಿ ಜರುಗುವ ಬದಲಾವಣೆಗಳಿಂದಾಗಲೀ ಬಿಪಿ ರೋಗ ಬರುತ್ತದೆ. ಕೊನೆಗೆ ಕಾರಣವೇನಾದರೂ ಅದರ ಪ್ರಭಾವದಿಂದ ರಕ್ತನಾಳಗಳ ಕುಗ್ಗುವುದರಿಂದ... ಬಿಪಿ ಹೆಚ್ಚಿ ಬಿಪಿ ರೋಗ, ರಕ್ತ ಪೋಟು ಎಂದರೇ ಹೃದಯ ರೋಗ ಬರುತ್ತದೆ.

 

ಈ ವ್ಯಾಧಿ ಇರುವವರು ಧ್ಯಾನಿಗಳಾಗದೇ ಇದ್ದರೇ ಜೀವಮಾನ ಈ ಕುಗ್ಗಿರುವ ರಕ್ತನಾಳಗಳನ್ನು ಹಿಗ್ಗಿಸುವ ಸ್ವಭಾವ ಇರುವ ಔಷಧಿಗಳನ್ನು ಪ್ರತಿದಿನ, ಜೀವಿತಾಂತ್ಯದವರೆಗು ಉಪಯೋಗಿಸಬೇಕು. ಆದರಿಂದ, ಆ ಔಷಧಿಗಳು, ಕುಗ್ಗಿರುವ ರಕ್ತನಾಳಗಳನ್ನು ಮಾಮೂಲು ಸೈಜಿನಲ್ಲಿ ಇರುವ ಹಾಗೆ ಮಾಡಿ ಬ್ಲಡ್ ಪ್ರೆಷರ್ ನಾರ್ಮಲ್ ಆಗಿ ಇರಿಸುತ್ತದೆ. ನಾವು ಯಾವಾಗ ಮಾನಸಿಕವಾಗಿ ತಳಮಳದಿಂದ ಇರುತ್ತೇವೋ, ಮತ್ತು ಆವಶ್ಯಕತೆಗೆ ಮೀರಿದ ಅನೇಕ ಬಗೆಯ ಆಲೋಚನೆಗಳನ್ನು ಮಾಡುತ್ತಿರುತ್ತೇವೋ, ಆಗ ನಮ್ಮ ಮೆದುಳಿನಲ್ಲಿರುವ ಥೆಲಾಮಿಕ್ ಯಾಕ್ಟಿವಿಟೀ, ಹೈಪೋ ಯಾಕ್ಟಿವಿಟೀ ಹೆಚ್ಚುತ್ತದೆ. ಇದರಿಂದ ಪಿಟ್ಯುಟರೀ ಗ್ರಂಥಿಯ ಮೇಲೆ ಒತ್ತಡ ಹೆಚ್ಚಿ 'ಅಡ್ರೆನೋ ಕಾರ್ಟಿಕೋ ಟ್ರಾಫಿಕ್ ಹಾರ್ಮೋನುಗಳು’ ಅಧಿಕವಾಗಿ ಉತ್ಪತ್ತಿ ಆಗುತ್ತವೆ. ಈ ಹಾರ್ಮೋನುಗಳು ಕಿಡ್ನಿಗಳ ಮೇಲೆ ಇರುವಂತಹ ಸುಪ್ರಾರೀನಲ್ ಗ್ಲಾಂಡ್ಸ್ ಮೇಲೆ ಪ್ರಭಾವ ಉಂಟುಮಾಡುವುದರಿಂದ ಅಡ್ರೇನಲಿನ್ ಮತ್ತು ನಾರ್ ಅಡ್ರೇನಲಿನ್ ಹಾರ್ಮೋನುಗಳು ಅಧಿಕವಾಗಿ ಉತ್ಪತ್ತಿ ಆಗುತ್ತವೆ. ಈ ಹಾರ್ಮೋನುಗಳಿಗೆ ರಕ್ತನಾಳಗಳನ್ನು ಕುಗ್ಗಿಸುವ ಸ್ವಭಾವ ಇರುವುದರಿಂದ ರಕ್ತನಾಳಗಳು ಕುಗ್ಗಿಹೋಗಿ ಬಿಪಿ ಕಾಯಲೇ ಬರುತ್ತದೆ. ಯಾವಾಗ ನಾವು ಧ್ಯಾನ ಮಾಡುತ್ತೇವೋ ಆಗ ನಾವು ಸಂಪೂರ್ಣ ಆಲೋಚನಾರಹಿತ ಸ್ಥಿತಿಗೆ ಹೋಗುವುದರಿಂದ ಮಾನಸಿಕ ಪ್ರಶಾಂತತೆ ಏರ್ಪಾಟಾಗಿ ನಮ್ಮ ಮೆದುಳಿನಲ್ಲಿರುವ ಥೆಲಾಮಿಕ್ ಮತ್ತು ಹೈಪೋ ಥೆಲಾಮಿಕ್ ಯಾಕ್ಟಿವಿಟಿ ಕಡಿಮೆಯಾಗುತ್ತದೆ. ಇದರಿಂದಾಗಿ, ಆಡ್ರಿನೋಕಾರ್ಟಿಕೋ ಟ್ರೋಫಿಕ್ ಹಾರ್ಮೋನುಗಳು ಕಡಿಮೆ ಆಗುವುದು. ಮತ್ತು ಅದರಿಂದ ಅಡ್ರೀನಲಿನ್ ಮತ್ತು ಸಾರ್ ಅಡ್ರೀನಲಿನ್ ಹಾರ್ಮೋನುಗಳು ಕಡಿಮೆ ಆಗುವುದರಿಂದ ಕುಗ್ಗಿ ಹೋಗಿರುವ ರಕ್ತನಾಳಗಳು ನಿಧಾನಕ್ಕೆ ಕೆಲವು ಸಮಯದ ನಂತರ ಮಾಮೂಲು ಸ್ಥಿತಿಗೆ ಬಂದು ರಕ್ತದ ಒತ್ತಡ ಮಾಮೂಲು ಸ್ಥಾಯಿಗೆ ಬಂದು ಕಂಟ್ರೋಲ್‌ನಲ್ಲಿರುತ್ತದೆ. ಈ ವಿಧವಾಗಿ ಧ್ಯಾನದಲ್ಲಿ ಬರುವ ಮುಂಚೆ ಔಷಧಿ ಮಾಡುವ ಕೆಲಸ ಈಗ ಧ್ಯಾನದಿಂದ ನಮ್ಮ ರೋಗವನ್ನು ನಾವೇ ವಾಸಿಮಾಡಿಕೊಳ್ಳಬಲ್ಲೆವರಾಗುತ್ತಿದ್ದೇವೆ.

 

ಅದೇ ತರಹ ಷುಗರ್ ವ್ಯಾಧಿ, ಸಕ್ಕರೇ ಕಾಯಲೇ ಹೇಗೆ ವಾಸಿಯಾಗುತ್ತದೋ ತಿಳಿದುಕೊಳ್ಳೋಣ. ಪ್ರಾಂಕಿಯಾನ್ ಗ್ರಂಥಿಯಲ್ಲಿ ಬರುವ ವಿಧವಿಧವಾದ ಬದಲಾವಣೆಗಳಿಂದ ಇನ್ಸುಲಿನ್ ಹಾರ್ಮೋನನ್ನು ಉತ್ಪತ್ತಿ ಮಾದುವ ಸಾಮರ್ಥ್ಯ ಕಡಿಮೆ ಆಗಿ ಅದರ ಉತ್ಪತ್ತಿ ಕಡಿಮೆಯಾಗುವುದರಿಂದ ಸಕ್ಕರೆ ವ್ಯಾಧಿ ಬರುತ್ತದೆ. ಯಾವಾಗ ಮಾನಸಿಕ ತಳಮಳಗಳು, ಆಲೋಚನೆಗಳು ಹೆಚ್ಚಾಗಿ ಇರುತ್ತವೊ ಆಗ ಮೆದುಳಿನಲ್ಲಿ ಥೆಲಾಮಿಕ್ ಮತ್ತು ಹೈಪೋ ಥೆಲಾಮಿಕ್ ಯಾಕ್ಟಿವಿಟೀ ಹೆಚ್ಚುವುದರಿಂದ ಪಿಟ್ಯುಟರೀ ಗ್ರಂಥಿಯ ಮೇಲೆ ಒತ್ತಡ ಹೆಚ್ಚಿ ಕಾರ್ಟಿಸೋಲ್ ಹಾರ್ಮೋನುಗಳು ಹೆಚ್ಚಾಗಿ ಉತ್ಪತ್ತಿ ಆಗುತ್ತವೆ. ಕಾರ್ಟಿಸೋಲ್ ಹಾರ್ಮೋನುಗಳು ಪ್ರಾಂಕಿಯಾಟಿಕ್ ಗ್ರಂಥಿ ಒಳಗಿರುವ ಬೀಟಾ ಕಣಗಳ ಮೇಲೆ ಪ್ರಭಾವ ತೋರಿಸಿ ಅದರ ಸಾಮರ್ಥ್ಯವನ್ನು ಕಡಿಮೆ ಮಾಡುವುದರಿಂದ ಇನ್ಸುಲಿನ್ ಉತ್ಪತ್ತಿ ನಿಂತು ಹೋಗುತ್ತದೆ. ಶರೀರದಲ್ಲಿ ಗ್ಲೂಕೋಜ್ ಅಂಶ ಹೆಚ್ಚುತ್ತದೆ. ಇದರನ್ನೆ ನಾವು ಸಕ್ಕರೆ ಕಾಯಲೇ ಎನ್ನುತ್ತೇವೆ. ನಮ್ಮ ಶರೀರದಲ್ಲಿ ಯಾವಾಗ ಇನ್ಸುಲಿನ್ ಪರಿಣಾಮ ಕಡಿಮೆ ಆಗುತ್ತದೊ ಆಗ ಡಾಕ್ಟರುಗಳು ನಮಗೆ ಹೊರಗಿನಿಂದ ಇನ್ಸುಲಿನ್ ಮಾತ್ರಗಳ ರೂಪದಲ್ಲಾಗಲೀ ಅಥವಾ ಇಂಜೆಕ್ಷನ್ ರೂಪದಲ್ಲಾಗಲೀ ಪ್ರತಿದಿನ ಜೀವಮಾನ ಕೊಟ್ಟು ಸಕ್ಕರೆ ವ್ಯಾಧಿಯನ್ನು... ರಕ್ತದಲ್ಲಿರುವ ಸಕ್ಕರೆ ಪರಿಣಾಮವನ್ನು... ಕಂಟ್ರೋಲ್‌ನಲ್ಲಿ ಇಡುತ್ತಾರೆ. ನಾವು ಯಾವಾಗ ಧ್ಯಾನ ಮಾಡುತ್ತೇವೊ ಥೆಲಾಮಿಕ್ ಮತ್ತು ಹೈಪೋ ಥೆಲಾಮಿಕ್ ಯಾಕ್ಟಿವಿಟೀ ಕಡಿಮೆಯಾಗಿ, ಮತ್ತು ಶರೀರದಲ್ಲಿ ಪ್ರವೇಶಿಸುವ ಕಾಸ್ಮಿಕ್ ಎನರ್ಜಿಯಿಂದ ಪಾಂಕ್ರಿಯಾಟಿಕ್ ಗ್ರಂಥಿಯಲ್ಲಿರುವ ಕಣಗಳು ಉತ್ತೇಜಿತವಾಗುವುದರಿಂದ ಇನ್ಸುಲಿನ್ ಉತ್ಪತ್ತಿ ಹೆಚ್ಚುತ್ತದೆ. ಅದರಿಂದ ರಕ್ತದಲ್ಲಿ ಇರುವ ಷುಗರ್ ಮೆಟಾಬೊಲೈಜ್ ಮಾಡುವುದರಿಂದ ಪರಿಣಾಮವನ್ನು ಕಡಿಮೆ ಮಾಡಿ ಸಕ್ಕರೆ ವ್ಯಾಧಿಯನ್ನು ಕಂಟ್ರೋಲ್‌ನಲ್ಲಿ ಇಡಲಾಗುತ್ತದೆ. ಈ ವಿಧವಾಗಿ ಧ್ಯಾನ ಮಾಡದೇ ಇರುವವರಲ್ಲಿ ಔಷಧಿ ಮಾಡುವ ಕೆಲಸ ಧ್ಯಾನ ಮಾಡುವವರಲ್ಲಿ ಔಷಧಿಗಳು ಇಲ್ಲದೇ ಷುಗರ್ ವ್ಯಾಧಿಯನ್ನು ಕಂಟ್ರೋಲ್‌ನಲ್ಲಿ ಇಡಲಾಗುತ್ತದೆ.

 

ಈ ವಿಧವಾಗಿ ಬಿಪಿ ಮತ್ತು ಸಕ್ಕರೆ ವ್ಯಾಧಿಗಳೇ ಅಲ್ಲದೇ ಎಲ್ಲಾ ತರಹದ ವ್ಯಾಧಿಗಳನ್ನು ಇಲ್ಲಿ ಧ್ಯಾನದಿಂದ ಶರೀರದಲ್ಲಿ ನಡೆಯುವ ಶಾಸ್ತ್ರಪರವಾದ ಬಗೆಬಗೆಯ ಜೀವರಸಾಯನಿಕ, ಭೌತಿಕ ಪ್ರತಿಕ್ರಿಯೆಗಳಿಂದ ನಾವು ಹೊಂದುವ ಕಾಸ್ಮಿಕ್ ಎನರ್ಜಿಯಿಂದ ಮತ್ತು ಆಧ್ಯಾತ್ಮಿಕ ಶಕ್ತಿಯಿಂದ ಔಷಧಿಗಳಿಲ್ಲದೇ ಖಾಯಿಲೆಗಳನ್ನು ವಾಸಿಮಾಡಿಕೊಳ್ಳಬಹುದು. ಉಳಿದ ಎಲ್ಲಾ ವಿಧವಾದ ರೋಗಗಳೆಲ್ಲವನ್ನು ಕುರಿತು ಸಹಾ ಆಗಾಗ ಅವಕಾಶ ಬಂದಾಗ 'ಧ್ಯಾನ ಕಸ್ತೂರಿ’ ಮೂಲಕ ತಿಳಿದುಕೊಳ್ಳೋಣ.

 

Dr.A.V. ಸುಬ್ಬಾರೆಡ್ಡಿ, MBBA, DCH
ಅಧ್ಯಕ್ಷರು, ಮದನಪಲ್ಲಿ ಪಿರಮಿಡ್ ಸ್ಪಿರಿಚ್ಯುವಲ್ ಸೊಸೈಟಿ,
ಮದನಪಲ್ಲಿ

Go to top