" ಧ್ಯಾನದಿಂದ ವಿದ್ಯಾಭ್ಯಾಸದಲ್ಲಿ ಅಭಿವೃದ್ಧಿ ಹೊಂದಿದೆ "

 

ನನ್ನ ಹೆಸರು ಅಕ್ಷಯ ಕುಮಾರ್.  ನಮ್ಮ ಅಮ್ಮನ ಹೆಸರು ರಜನಿ ಕೃಷ್ಣನ್.  ನಮ್ಮ ಊರು ಸಿರುಗುಪ್ಪ.  ನಾನು ನಾಲ್ಕು ವರ್ಷಗಳಿಂದ ಧ್ಯಾನ ಮಾಡುತ್ತಿದ್ದೇನೆ. ಸಿರುಗುಪ್ಪದಲ್ಲಿದ್ದಾಗ ನಾನು ಚೆನ್ನಾಗಿ ಓದುತ್ತಿರಲಿಲ್ಲ.  ಅಲ್ಲಿ ನನಗೆ "ಬಿ" ಗ್ರೇಡ್ ಬರುತ್ತಿತ್ತು.  ನನ್ನ ಅಮ್ಮ ಧ್ಯಾನ ಮಾಡು ಎಂದು ಹೇಳುತ್ತಿದ್ದರು.  ಅದಕ್ಕೆ ನಾನು ಮತ್ತು ಅಮ್ಮ ದಿನಾಲು ಧ್ಯಾನ ಮಾಡುತ್ತೇವೆ.  ನಾನು ದಾವಣಗೆರೆಯಲ್ಲಿ ಹಾಸ್ಟಲ್‌ನಲ್ಲಿದ್ದಾಗ ತುಂಬಾ ಅಳುಬರುತ್ತಿತ್ತು, ಆವಾಗ ನಾನು ಧ್ಯಾನ ಮಾಡಿದೆನು.  ನಾನು ಇಲ್ಲೆ ಈ Day Border ಆಗಬೇಕೆಂದು ಧ್ಯಾನ ಮಾಡಿದೆ.  ನಾನು ಈ Day Border ಆದೆ.  ದಾವಣೆಗೆರೆಯಲ್ಲಿ ಮನೆ ಮಾಡಿದ್ದಾರೆ.  ನಾನು ಸಂತೋಷವಾಗಿದ್ದೇನೆ.  ನಾನು ದಾವಣಗೆರೆಯಲ್ಲಿ "1"ಕ್ಲಾಸ್ ಬಂದಿದ್ದೇನೆ.  ದಾವಣಗೆರೆ ಧ್ಯಾನ ಯಜ್ಞದಲ್ಲಿ ನಾನು "ಡಾನ್ಸ್‌" ಮಾಡಿದೆನು.  ಆ ಡಾನ್ಸ್ ಒಂದು ದಿನದಲ್ಲಿ ಕಲಿತು ಮಾಡಿದೆನು.  ಮತ್ತೆ ಧ್ಯಾನದಲ್ಲಿ "ಕಲರ್ಸ್‌", ಇನ್ನೂ ಬಹಳಷ್ಟು ಅನುಭವಗಳು ಆಗಿದೆ. ನನಗೆ  ಜ್ವರ, ತಲೆನೋವು, ಕಾಲುನೋವು ಇತ್ತು.  ನಾನು ಧ್ಯಾನ ಮಾಡಿದೆ ನನಗೆ ಈಗ ಅವೆಲ್ಲ ಏನೂ ಇಲ್ಲ.   ಧನ್ಯವಾದಗಳು.

 

ಅಕ್ಷಯಕುಮಾರ್
ದಾವಣಗೆರೆ

Go to top