" ಧ್ಯಾನದಿಂದ ನಾವು ನಮ್ಮ ಗುರಿಯನ್ನು ತಲುಪಲು ಸಾಧ್ಯ "

 

 

ನನ್ನ ಹೆಸರು ಅಲೇಖ್ಯ ಪುಲಮಾರಶೆಟ್ಟಿ. ನನಗೆ 14 ವರ್ಷ. ನನ್ನ ಕುಟುಂಬದವರೆಲ್ಲರೂ 1999ರಲ್ಲೆ ಧ್ಯಾನವನ್ನು ಪ್ರಾರಂಭಿಸಿದರು. ನಾನು ಶ್ರದ್ಧೆಯಿಂದ ಧ್ಯಾನ ಮಾಡಲು ಪ್ರಾರಂಭಿಸಿದ್ದು 2007ರಲ್ಲಿ.  ಈ ವರ್ಷ ನಾನು ಧ್ಯಾನ ಮತ್ತು ಮನೋಶಕ್ತಿಯ ಬಗ್ಗೆ ಪ್ರಯೋಗಗಳನ್ನು ಮಾಡಲು ಪ್ರಾರಂಭಿಸಿದೆ. ಅಂದಿನಿಂದ ನನ್ನ ಅನುಭವಗಳು ಪ್ರಾರಂಭವಾಯಿತು. ನಾನು ಪುಸ್ತಕ ಪ್ರಿಯೆಯಾದ್ದರಿಂದ ಬಹಳಷ್ಟು ಆಸಕ್ತಿಕರ ವಿಷಯಗಳನ್ನೊಳಗೊಂಡ ’ದಿ ಸಿಕ್ರೇಟ್’ಯೆಂಬ ಪುಸ್ತಕವನ್ನು ಓದಲು ನಿರ್ಧರಿಸಿದೆ. ಆ ಪುಸ್ತಕವನ್ನು ಓದುತ್ತಾ ಆ ಪುಸ್ತಕದ ಬಗ್ಗೆ ಮಂತ್ರಮುಗ್ಧಳಾಗಿ ಹೋದೆ. ಕೂಡಲೇ ಅದಲ್ಲಿರುವ ಚಿಕ್ಕಚಿಕ್ಕ ಅಂಶಗಳನ್ನು ನಾನು ಪ್ರಯತ್ನಿಸಿದೆ... ಅವೆಲ್ಲವು ಫಲಿಸಿತು ಈ ಬೇಸಿಗೆಯಲ್ಲಿ ನನಗಾದ 9 ಅನುಭವಗಳು ನನ್ನನ್ನು ಅಚ್ಚರಿಗೊಳಿಸಿ, ನನಗೆ ಧ್ಯಾನದ ಶಕ್ತಿಯನ್ನು ತಿಳಿಯುವಂತೆ ಮಾಡಿದವು. 

 

9 ಅನುಭವಗಳಲ್ಲಿ ಒಂದು ಅನುಭವ ನನ್ನ ಓದಿಗೆ ಸಂಬಂಧಿಸಿದ್ದು. ನನ್ನ 7ನೇ ತರಗತಿಯವರೆಗೂ ನಾನು ಶೇಕಡ 90ರಷ್ಟು ಫಲಿತಾಂಶ ಗಳಿಸುತ್ತಿದ್ದೆ. ಆದರೆ, ನನ್ನ 7ನೇ ತರಗತಿಯ ಸಮಯದಲ್ಲಿ ನನ್ನ ಫಲಿತಾಂಶ ಶೇ.70ಕ್ಕೆ ಕುಸಿಯಿತು. ಅದು ನನ್ನನ್ನು ಆತಂಕಕ್ಕೆ ಒಳಗಾಗುವಂತೆ ಮಾಡಿತು. ಆದರೆ, ಈ ವರ್ಷ, ನನ್ನ 9ನೇ ತರಗತಿಯ ಪರೀಕ್ಷೆಗಳು ಹತ್ತಿರಗೊಂಡಾಗ ನಾನು ನಿರ್ಧರಿಸಿದೆ, ಒಳ್ಳೆ ಫಲಿತಾಂಶ ಪಡೆಯಬೇಕೆಂದು, ಅದಕ್ಕಾಗಿ ನಾನು ನನ್ನ ತಾಯಿಯ ಸಲಹೆ ಪಡೆಯುತ್ತಿದ್ದೆ. ಅದರಂತೆ ಪರೀಕ್ಷೆಗೆ ಒಂದು ವಾರ ಮುನ್ನವೇ ನಾನು ಎಲ್ಲವನ್ನು ಒಮ್ಮೆ ಓದಿದ್ದೆ, ಪರೀಕ್ಷೆಗೆ ಒಂದು ವಾರ ಇದ್ದಾಗ ಪ್ರತಿ ದಿನ ಧ್ಯಾನ ಮತ್ತು ಪುನರಾವರ್ತನೆಯಲ್ಲೇ ಕಳೆದೆ. ನಾನು ನನ್ನ ಒಂದು ನಕಲಿ ಅಂಕಪಟ್ಟಿಯನ್ನು ತಯಾರಿಸಿದೆ.  ಅದರಲ್ಲಿ ನಾನು ನನ್ನೆಲ್ಲಾ ಅಂಕಗಳನ್ನು ಶೇ.90 ಇರುವಂತೆ ಮಾಡಿದೆ. ನಂತರ, ನನ್ನೆಲ್ಲಾ ಪರೀಕ್ಷೆಗಳಿಗೆ ನಾನು ತಯಾರಿ ನಡೆಸಿದ್ದು ನಮ್ಮ ಪಿರಮಿಡ್ ಮನೆಯಲ್ಲೇ. ಆಗಾಗ ನಾನು ನನ್ನ ನಕಲಿ ಅಂಕಪಟ್ಟಿಯನ್ನು ನೋಡುತ್ತಾ ಅದನ್ನು ನಿಜವೆಂದು ವಿಜುವಲೈಸ್ ಮಾಡಿಕೊಳ್ಳುತ್ತಿದ್ದೆ. ನಾನು ಪ್ರತಿದಿನ ಓದುವುದಕ್ಕೂ ಮುನ್ನ, ಮಲಗುವುದಕ್ಕೂ ಮುನ್ನ; ಪರೀಕ್ಷೆಗೂ ಮುನ್ನ ತಪ್ಪದೆ ಧ್ಯಾನ ಮಾಡುತ್ತಿದ್ದೆ. ಈ ಎಲ್ಲಾ ಸಕಾರಾತ್ಮಕ ಸಂಗತಿಗಳಿಂದ ನನ್ನ ಫಲಿತಾಂಶ ಶೇ.70 ರಿಂದ ಶೇ.86ಕ್ಕೆ ಜಿಗಿಯಿತು. ನನ್ನ ಶ್ರಮದಿಂದ ಇದನ್ನೆಲ್ಲಾ ಸಾಧಿಸಿದೆ ಎಂಬ ಸಂತಸ ನನ್ನಲ್ಲಿತ್ತು. ನನ್ನ ಈ ಫಲಿತಾಂಶಕ್ಕೆ ಕಾರಣ ಧ್ಯಾನವೆ ಎಂದು ಅನಿಸುತ್ತಿದೆ. 

 

ನನ್ನ ಇನ್ನೊಂದು ಅನುಭವ ನನ್ನ ಆರೋಗ್ಯಕ್ಕೆ ಸಂಬಂಧಿಸಿದ್ದು. ಪ್ರತಿ ಪರೀಕ್ಷೆಯ ನಂತರವೂ ನನಗೆ ಅನಾರೋಗ್ಯ ಕಾಡುತ್ತಿತ್ತು. ನಾನು ಬಾಲ್ಯದಿಂದ ಇಂದಿನವರೆಗೂ ನಾನೆಂದೂ ಸಂಪೂರ್ಣ ಆರೋಗ್ಯವಂತಳಾಗಿರಲೇ ಇಲ್ಲ. ನಾನು ಬಹಳಷ್ಟು ಬಾರಿ ಅನಾರೋಗ್ಯಕ್ಕೆ ತುತ್ತಾಗಿದ್ದೇನೆ. ಕೆಲವೊಮ್ಮೆ ಲಘುವಾಗಿ, ಕೆಲವೊಮ್ಮೆ ಗಂಭೀರವಾಗಿ. ಬಹಳಷ್ಟು ಬಾರಿ ನಾನು ಅನಾರೋಗ್ಯಕ್ಕೆ ಒಳಗಾದಾಗ ನನ್ನ ತಾಯಿ ನನ್ನ ಬಳಿ ಕುಳಿತು ಧ್ಯಾನ ಮಾಡಿಸುತ್ತಿದ್ದರು. ಆ ಸಮಯದಲ್ಲಿ ನನಗೆ ಧ್ಯಾನದಲ್ಲಿ ನಂಬಿಕೆ ಇರಲಿಲ್ಲ. ಆದ್ದರಿಂದ, ನಾನು ಶ್ರದ್ಧೆಯಿಂದ ಧ್ಯಾನ ಮಾಡುತ್ತಿರಲಿಲ್ಲ. ನಾನು ಕೆಲವು ಔಷಧಿಗಳ ಸಹಾಯದಿಂದ ನಿಧಾನವಾಗಿ ಗುಣಮುಖಳಾದೆ, ಆದರೆ, ಈಗ ನಾನು ಶ್ರದ್ಧೆಯಿಂದ ಧ್ಯಾನ ಮಾಡಲು ಪ್ರಾರಂಭಿಸಿದ್ದೇನೆ. ಈಗ ನಾನು ನನ್ನೆಲ್ಲಾ ಕಾಯಿಲೆಗಳನ್ನು ನಾನೇ ಗುಣ ಪಡಿಸಿಕೊಳ್ಳಬಲ್ಲೆ ಎಂದೆನಿಸುತ್ತದೆ. 

         

ಪ್ರತಿವರ್ಷ ರಜೆಗಳಲ್ಲೂ ನನಗೆ ಒಂದು ಸಮಸ್ಯೆ ಕಾಡುತ್ತಿತ್ತು, ನನಗೆ ಯಾವಾಗಲೂ ಉಸಿರಾಟ ಮತ್ತು ಉಬ್ಬಸದ ಸಮಸ್ಯೆ ಇರುತ್ತಿತ್ತು. ನಾನು ನಮ್ಮ ಊರಿಗೆ ಹೋದಾಗಲೆಲ್ಲಾ ನನಗೆ ಸಂತೋಷವಾಗಿ ಎಲ್ಲಿಯೂ ಓಡಾಡಲು ಸಾಧ್ಯವಾಗುತ್ತಿರಲಿಲ್ಲ.

 

ಆದರೆ, ಈ ಏಪ್ರಿಲ್ ತಿಂಗಳಲ್ಲಿ ನಾನು ಪ್ರವಾಸಕ್ಕೆ ಹೊರಟೆ, ಆಗ ನನ್ನ ತಾಯಿ ನನಗೆ ಪ್ರತಿನಿತ್ಯ ಧ್ಯಾನ ಮಾಡು ಆಗ ನಿನಗೆ ಯಾವುದೇ ಅನಾರೋಗ್ಯವಿರುವುದಿಲ್ಲ ಎಂದು ಹೇಳಿ, ಈ ಬಾರಿ ನೀನು ನಿನ್ನ ಈ ಸಮಸ್ಯೆಯಿಂದ ಸಂಪೂರ್ಣವಾಗಿ ಹೊರಬರಬೇಕೆಂದು ಹೇಳಿದರು. ನಾನು ಒಪ್ಪಿಕೊಂಡೆ. ಆದರೆ, ಇದು ಹೇಳಿದಷ್ಟು ಸುಲಭವಲ್ಲ ಎಂದನಿಸಿತು. ಆದರೂ ನನಗೆ ದಿನನಿತ್ಯ ಧ್ಯಾನ ಮಾಡಲು ಸಾಧ್ಯವಾಗುತ್ತಿರಲಿಲ್ಲ.  ನಾನು ನಮ್ಮ ಊರಿಗೆ ಹೋದ ನಂತರ, ಮೊದಲ ಕೆಲವು ದಿನಗಳು ಆರೋಗ್ಯವಾಗಿದ್ದೆ. ಒಂದು ದಿನ ಮುಂಜಾನೆ ಎದ್ದ ಕೂಡಲೆ ನನ್ನನ್ನು ನೆಗಡಿ, ಕೆಮ್ಮು ಸಂಪೂರ್ಣವಾಗಿ ಆವರಿಸಿತ್ತು. ಅದನ್ನು ಗಮನಿಸಿದ ಕೂಡಲೆ ನಾನು ನನ್ನ ತಲೆಯನ್ನಿರಿಸಿದ್ದು ಪಿರಮಿಡ್ ಮನೆಯೊಳಗೆ. ಅಲ್ಲಿ ನಾನು ಐದು ನಿಮಿಷ ಧ್ಯಾನ ಮಾಡಿದೆ. ಅಷ್ಟಕ್ಕೆ ನನ್ನಲ್ಲಿ ಬಹಳಷ್ಟು ಬದಲಾವಣೆಗಳಾಗಿದ್ದವು. ನನಗೆ ಹಗುರ ಎಂದೆನಿಸುತ್ತಿತ್ತು. ಇನ್ನೂ ಸ್ವಲ್ಪ ನೆಗಡಿ ಇತ್ತು ಅದು ಹೆಚ್ಚಾಗಬಾರದೆಂಬ ಯೋಚನೆಯು ನನ್ನಲ್ಲಿತ್ತು.  ಅದರಿಂದ ತಪ್ಪದೆ ದಿನಕ್ಕೆರಡು ಬಾರಿ 20 ನಿಮಿಷ ಧ್ಯಾನ ಮಾಡುತ್ತಿದ್ದೆ. ನಾನು ಸಂಪೂರ್ಣ ಆರೋಗ್ಯವಾಗಿರುವುದನ್ನು ಕೆಲ ದಿನಗಳ ನಂತರ ನಾನು ಅನಿರೀಕ್ಷಿತವಾಗಿ ಗಮನಿಸಿದೆ. ನನಗೆ ಅಚ್ಚರಿ ಎಂದೆನಿಸಿತು. ಬಹಳ ಸಂತೋಷವಾಯಿತು. ನನ್ನೆಲ್ಲಾ ಕಾಯಿಲೆಗಳನ್ನು ನಾನೇ ಗುಣಪಡಿಸಿಕೊಂಡೆನಾ? ಬಹಳಷ್ಟು ವರ್ಷಗಳಿಂದ ಈ ಎಲ್ಲಾ ಸಮಸ್ಯೆಗಳಿಂದ ಬಹಳಷ್ಟು ನೋವನ್ನು ಅನುಭವಿಸಿದ್ದೆ. 

 

ನನ್ನ ಮುಂದಿನ ಪ್ರವಾಸದಲ್ಲಿ ನನಗೆ ಸ್ವಲ್ಪ ನೆಗಡಿಯಿತ್ತು. ಆಗ ನಾನೇನು ಮಾಡಬೇಕೆಂದು ನನಗೆ ತಿಳಿದಿತ್ತು. ನನಗೆ ಹಗುರ ಎಂದೆನಿಸುವವರೆಗೂ ನಾನು ಧ್ಯಾನದಲ್ಲೆ ಕುಳಿತುಕೊಳ್ಳುತ್ತಿದ್ದೆ. ಇದರಿಂದ ನಾನು ಈ ವರ್ಷ ನನ್ನೆಲ್ಲಾ ಸ್ನೇಹಿತರೊಡನೆ ಬಹಳ ಸಂತೋಷವಾಗಿದ್ದೆ. ಹಿಂದೆಂದೂ ನಾನು ಇಷ್ಟು ಸಂತೋಷವಾಗಿರಲಿಲ್ಲ. 

 

ಈ ಎರಡು ಅನುಭವಗಳು ನನಗೆ ನಿರೂಪಿಸಿದ್ದೇನೆಂದರೆ ಧ್ಯಾನದಿಂದ ನಾವು ನಮ್ಮ ಗುರಿಯನ್ನು ತಲುಪಲು ಸಾಧ್ಯ ಮತ್ತು ನಮ್ಮೆಲ್ಲಾ ಆರೋಗ್ಯ ಸಮಸ್ಯೆಗಳನ್ನು ಯಾವುದೇ ಔಷಧಿಗಳಿಲ್ಲದೆ ನಾವೇ ಗುಣಪಡಿಸಿಕೊಳ್ಳಬಹುದು. ಇವೆಲ್ಲಾ ಅನುಭವಗಳ ನಂತರ ನಾನು ದಿನನಿತ್ಯ ಧ್ಯಾನ ಮಾಡುತ್ತಿದ್ದೇನೆ ಮತ್ತು ನನ್ನ ಮುಂದಿನ ಅನುಭವಗಳ ಬಗ್ಗೆ ನಾನು ಬಹಳ ಕಾತುರಳಾಗಿದ್ದೇನೆ.

 

ಅಲೇಖ್ಯ
ಬೆಂಗಳೂರು

Go to top