" ಸಂಗೀತದ ಜೊತೆ ಧ್ಯಾನಮಾಡುವುದೇ ಒಂದು ಅದ್ಭುತ "

 

ನಾನು 2006ದಿಂದ ಧ್ಯಾನ ಮಾಡಲು ಪ್ರಾರಂಭಿಸಿದೆ. ವೈಜಾಗ್‌ನಲ್ಲಿ ನಡೆದ ಧ್ಯಾನ ಮಹಾಚಕ್ರಕ್ಕೆ ನಾವು ಐದು ಜನ ಹೋಗಿದ್ದೆವು. ನನಗೆ 27 ರಂದು ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾಗಲೇ ತುಂಬಾ ನೆಗಡಿಯಾಗಿ ಮೂಗಿನಲ್ಲಿ ತುಂಬಾ ಸೋರುತ್ತಾ ಇತ್ತು. ಇದೇನಪ್ಪ ಹೀಗಾಯಿತಲ್ಲಾ ಎಂದುಕೊಂಡೆ. 28ರಂದು ಬೆಳಗ್ಗೆ ಸಾಮೂಹಿಕ ಧ್ಯಾನದಲ್ಲಿ ಕುಳಿತುಕೊಂಡೆ. ಧ್ಯಾನ ಮುಗಿದ ಮೇಲೆ ನನಗೆ ತುಂಬಾ ಆಶ್ಚರ್ಯವಾಯಿತು. ಹಿಂದಿನ ದಿನ ತುಂಬಾ ತಲೆಭಾರ ಮತ್ತು ನೆಗಡಿಯಿಂದ ಬಳಲುತ್ತಿದ್ದ ನನಗೆ ಒಮ್ಮೆಲೆ ಅದೆಲ್ಲ ಕಡಿಮೆ ಆಗಿತ್ತು. ಇದರಿಂದ ಇನ್ನುಳಿದ ಮೂರು ದಿನಗಳು ನನಗೆ ಅಲ್ಲಿ ಇರುವುದಕ್ಕೆ ಬಹಳ ಅನುಕೂಲವಾಯಿತು. ಇವೆಲ್ಲಾ ಧ್ಯಾನದ ಮಹಿಮೆ ಎಂದು ತಿಳಿದೆ.

 

ಅಂಬಿಕ
ಮಾಗಡಿ, ಬೆಂಗಳೂರು
ಫೋನ್  : +91 9242871507

Go to top