" ' ಧ್ಯಾನ-ಜ್ಞಾನ ' ಪ್ರಚಾರ ಮಾಡುವಷ್ಟು ಮಟ್ಟಕ್ಕೆ ಬರಲು ಕಾರಣ ಮತ್ಯಾರೋ ಅಲ್ಲ ನಮ್ಮ ಪತ್ರೀಜಿ "

 

ನನ್ನ ತಾಯಿ.. ಕ್ರಿಸ್ಚಿಯನ್, ನನ್ನ ತಂದೆ.. ಮುಸ್ಲಿಂ..., ನನಗೆ ಯಾವಾಗಲೂ ತಲೆನೋವು, ಜ್ವರ, ಯಾರ ಜೊತೆ ಮಾತನಾಡಬೇಕೆಂದರೂ ಭಯ...ಆಂದೋಲನ ಮನೆಯಲ್ಲಿ ಮಾಂಸಾಹಾರಮನಸ್ಸಿನಲ್ಲಿ ಪ್ರಶ್ನೆಗಳ ಆಹಾಕಾರ..."ನಾವು ಹುಟ್ಟುವುದಕ್ಕಿಂತಾ ಮುಂಚೆ ಎಲ್ಲಿದ್ದೆವು..?", "ಸತ್ತ ಮೇಲೆ ಏನಾಗುತ್ತೇವೆ?", "ಈ ರೋಗಗಳು...ರೋದನೆಗಳು.. ಏನು?", "ಆನಂದ... ಯಾಕೆ ಕಡಿಮೆ ಆಗಿದೆ?", "ಬ್ರಹ-ವಿಷ್ಣುವು-ಶಿವನು-ಜೀಸಸ್-ಅಲ್ಲಾ..., ಇವರೆಲ್ಲಾ ದೇವರಾದರೇ..., ಆ ದೇವರೆಲ್ಲಾ ಹೇಗೆ ಹುಟ್ಟಿದ್ದಾರೆ?", ಈ ಪ್ರಶ್ನೆಗಳನ್ನು ಮನೆಯವರನ್ನು ಕೇಳಿದರೇ ಬೈಯ್ಯುತ್ತಾರೆ. ಹೊರಗಿನವರನ್ನು ಕೇಳಿದರೇ ಕೋಪಮಾಡಿಕೊಳ್ಳುತ್ತಾರೆ... ಸದಾ ಮೈಂಡ್ ಡಿಸ್ಟರ್ಬ್ ಆಗುತ್ತಾ ಇರುತ್ತಿತ್ತು... ಇದೆಲ್ಲಾ... ನಾನು ತಾಡಿಪತ್ರಿ, ವಿದ್ಯಾರ್ಥಿ ವಿದ್ಯಾಲಯ ಸ್ಕೂಲ್‌ನಲ್ಲಿ ಒಂಬತ್ತನೆಯ ತರಗತಿ ಓದುತ್ತಿದ್ದ ದಿನಗಳಲ್ಲಿ...ನಡೆದ ಕಥೆ...

ನಮ್ಮ ಸ್ಕೂಲ್‌ನಲ್ಲಿ "ಧ್ಯಾನ" ಹೇಳಿಕೊಡಲು ಪತ್ರೀಜಿ ಬಂದರು...ಸ್ಟೋರೀ...ಟರ್ನಿಂಗ್... ಆಗಿ ಹೋಗಿತ್ತು. ಆರು ನೂರು ಜನ ಸ್ಟೂಡೆಂಟ್ಸ್ ಮೆಡಿಟೇಷನ್ ಹೇಗೆ ಮಾಡಬೇಕೋ ಹೇಳಿಕೊಡುತ್ತಾ ಧ್ಯಾನ ಮಾಡಿಸಿದರು...ಪತ್ರೀಜಿ. ಕ್ಲಾಸ್ ಆಗಿಹೋಯಿತು ಪತ್ರೀಜಿಯವರನ್ನು ಭೇಟಿ ಆದೆ..."ನಿಮ್ಮ ಜೊತೆ ಮಾತನಾಡಬೇಕು" ಎಂದೆ. ಅದೇ ನಾನು ಮೊದಲನೇ ಬಾರಿ ಧೈರ್ಯ ಮಾಡಿದ ಘಟನೆ. ಪೂರೀ ತಿನ್ನುತ್ತಿದ್ದ ಪತ್ರೀಜಿ ನನ್ನ ನೋಡಿದರು ಪೂರೀ ಎಲ್ಲಾ ತಿಂದು ಮುಗಿಸುವವರೆಗೂ ಹಾಗೆಯೇ ನೋಡಿದರು. ನನ್ನಲ್ಲಿ ಭಯ ನಡುಕ ಯಾಕೆ ಹಾಗೆ ನೋಡುತ್ತಿದ್ದಾರೋ ಏನಂತಾರೋ...? ಎದ್ದರು ಪತ್ರೀ ಸಾರ್..."ನನ್ನ ಜೊತೆ ಧರ್ಮವರಂ ಬಂದುಬಿಡು" ಎಂದರು..

*     *     *

ಧರ್ಮವರಂ ಕ್ಲಾಸಿನಲ್ಲಿ " ‘ಧ್ಯಾನಂ ಶರಣಂ ಗಚ್ಚಾಮಿ’, ‘ವಸಿಷ್ಠಾಮೃತಂ...’, ‘ಜೊನಾಥನ್ ಲಿವಿಂಗ್‌ಸ್ಟನ್ ಸೀಗಲ್’, ‘ಭಗವದ್ಗೀತೆ’...ಪುಸ್ತಕಗಳನ್ನು ಓದಿ..." ಎಂದು ಪತ್ರೀಜಿ ಉಪನ್ಯಾಸದಲ್ಲಿ ಹೇಳಿದರು. ಆ ಪುಸ್ತಕಗಳನ್ನು ತೆಗೆದುಕೊಂಡೆ.

*     *     *

ಆ ಪುಸ್ತಕಗಳೆಲ್ಲವನ್ನೂ ಓದಿದ್ದೇನೆ. ಯಾವುದು ಓದಿದರೂ.. "ಪತ್ರೀಜಿ ಹೇಳಿರುವುದೇ" ಅನಿಸುತ್ತದೆ. ಧ್ಯಾನ ಮಾಡಲು ಪ್ರಾರಂಭಿಸಿದೆ. ಮನೆಯವರು ಅವಮಾನಿಸುವುದು...ಕೂಗಾಡುವುದು. "ಹುಚ್ಚು ಹಿಡಿದಿದೆಯಾ?" ಎನ್ನುವುದು..."ಮಾಂಸಾಹಾರ ಬಿಟ್ಟಿದ್ದೀಯಾ...! ಮತ್ತೇನು ತಿನ್ನುತ್ತಿಯಾ?-ಎಲೆಗಳು, ಗೆಡ್ಡೆಗೆಣಸುಗಳಾ?". ಅಮ್ಮನದೂ ಅದೇ ಪ್ರಶ್ನೆತಂದೆಯದೂ ಅದೇ ಜೋರು.

*     *     *

ತಲೆನೋವು ಕಡಿಮೆ ಆಗಿದೆ. ಪ್ರಶಗಳಿಗೆ ಸಮಾಧಾನಗಳು ಸಿಕ್ಕಿವೆ. ಮನಸ್ಸಿಗೆ ನೆಮ್ಮದಿ ಸಿಕ್ಕಿದೆ. ಭಯ ಮಾಯವಾಗಿದೆ. ಜ್ವರ ಓಡಿಹೋಗಿದೆ...ಮನೆಯವರಿಗೆ ನನ್ನ "ನೋವು" ಅರ್ಥವಾಗಿದೆ. ಅವರು ಸಹಾ ಧ್ಯಾನ ಮಾಡುವ ಪರಿಸ್ಥಿತಿ ಬಂದುಬಿಟ್ಟಿತು ಇದೊಂದು ಲೆವೆಲ್...

*     *     *

"ಪತ್ರೀಜಿ ಹುಚ್ಚು" ಬ್ರಹ್ಮಾಂಡವಾಗಿ ಹಿಡಿದುಬಿಟ್ಟಿತ್ತು..ಅವರು ಯಾವ ಊರಿಗೆ ಹೋದರೇ ಆ ಊರಿನಲ್ಲಿ ನಾನು ಪ್ರತ್ಯಕ್ಷ. ಅನಂತಪುರದಲ್ಲಿ ಶಿವರಾತ್ರಿ ಧ್ಯಾನಯಜ್ಞ...ನಡೆಯುತ್ತಿದೆ ಸಡೆನ್ ಆಗಿ ಪತ್ರೀಜಿ ನನ್ನನ್ನು ವೇದಿಕೆ ಮೇಲೆ ಕರೆದು "ನಿನ್ನ ಅನುಭವಗಳನ್ನು ಹೇಳು" ಎಂದರು. ಅರ್ಧಗಂಟೆ... ಹೇಳಿದೆ... ಏನು ಹೇಳಿದೆನೋ ಗೊತ್ತಿಲ್ಲ, "ಒಂದು ಬೆರಳಷ್ಟಿಲ್ಲ - ಇವನು ಹೇಳುವುದು ನಿಜವಾ?" ಎನಿಸಿತಂತೆ ಎಲ್ಲರಿಗೂ...ಆ ತದನಂತರ ಅನೇಕ ಸಭೆಗಳಲ್ಲಿ ಮಾತನಾಡಿಸಿದರು ಪತ್ರೀಜಿ.

*     *     *

ಒಂದು ಸಲ ಪತ್ರೀಜಿ ಅವರ ಜೊತೆ ಎರಡು ತಿಂಗಳು ನಿರಂತರವಾಗಿ ಇದ್ದೆ. ಅವರು ಹೇಳುವ ಪ್ರತಿ ಒಂದರಲ್ಲೂ ಹದಿನಂಟು ಆದರ್ಶಸೂತ್ರಗಳ ಜೊತೆ ಅವರು ಜೀವಿಸುವ ರೀತಿ... ಅಮೋಘ. ದಿನಕ್ಕೆ 20 ಗಂಟೆಗಳ ಕಾಲ ನಿರಂತರವಾಗಿ... ಅಖಂಡವಾಗಿ ಅವರು ಶ್ರಮಿಸುವ ರೀತಿ... ಅನನ್ಯ ಸಾಮಾನ್ಯ ಉಳಿದ ಕೆಲಸಗಳಲ್ಲಿ... ಎಷ್ಟು ಸುಸ್ತಾದರು, ಎಷ್ಟು ರಾತ್ರಿಯಾದರೂ, ಒಳ್ಳೆಯ ಪುಸ್ತಕಗಳನ್ನು ಶ್ರದ್ಧೆಯಿಂದ ಸೀರಿಯಸ್ ಆಗಿ ಓದುವ ರೀತಿ ಗುಡ್‌ನೆಸ್...ಜನಾರಣ್ಯದಲ್ಲಿ ತಿರುಗಾಡುತ್ತಿರುವ ಅವಿಶ್ರಾಂತ ಶ್ರಮಿಕನಾದ ಋಷಿಪುಂಗವನ್ನು ನೋಡುತ್ತಿದ್ದೇನೇನೋ? ಆ ಇನ್‌ಸ್ಪಿರೇಷನ್‌ನಿಂದ ನನ್ನ ಜೀವನದ ರೂಪುರೇಷೆಗಳೇ ಬದಲಾದವು ಇನ್ನೇನಿದೆ...?

*     *     *

"ಟೆಲಿಪತಿ..", "ಥರ್ಡ್ ಐ..", "ಆಸ್ಟ್ರಲ್ ಟ್ರಾವೆಲ್‌", "ಆರಾ", "ದರ್ಶನ ಶಕ್ತಿ" ಇವೆಲ್ಲಾ ತಿಳಿದಿದೆ.

*     *     *

ನಮ್ಮ ಮನೆಯೇ ಧ್ಯಾನ ಕೇಂದ್ರವಾಗಿ ಬದಲಾಗಿದೆ. ನಮ್ಮ ಕಾಲನೀ ಧ್ಯಾನನಿಲಯವಾಗಿದೆ. ತಾಡಿಪತ್ರಿಯ ಪ್ರತಿ ಕಾಲನಿಯಲ್ಲೂ ಧ್ಯಾನವನ್ನು ಕುರಿತು ಹೇಳುವುದು, ಮಾಡಿಸುವುದು ಪ್ರಾರಂಭಿಸಿದೆ. ತಾಡಿಪತ್ರಿ ಮಂಡಲದಲ್ಲಿ ಪ್ರತಿ ಗ್ರಾಮಕ್ಕೂ ಹೋಗಿ ಬೋಧಿಸಿದೆ. "ಧ್ಯಾನ ರಾಯಲ ಸೀಮ" ಪ್ರೋಗ್ರಾಮ್‌ನಲ್ಲಿ ಪಾಲ್ಗೊಂಡೆ. ಅನಂತಪುರದಲ್ಲಿ ನೂರಾರು ಸ್ಕೂಲುಗಳಲ್ಲಿ ಧ್ಯಾನ ಹೇಳಿಕೊಟ್ಟೆ. ಇತರೆ ಜಿಲ್ಲೆಗಳಿಗೆ ನನ್ನ ದೂರ ಪ್ರಯಾಣವನ್ನು ಮಾಡುತ್ತಿದ್ದೇನೆ. ಚೆನ್ನೈಗೆ ಹೊರಟೆ. ಅನೇಕ ರೈಲುಗಳಲ್ಲಿ ಪ್ರತಿ ಕಂಪಾರ್ಟ್‌ಮೆಂಟ್‌ನಲ್ಲಿ "ಧ್ಯಾನ" ಸ್ಟಿಕ್ಕರ್ಸ್ ಅಂಟಿಸಿದೆ. ಶಬರಿಮಲೈನಲ್ಲಿ ಸ್ವಾಮಿಗಳಿಗೆ ಧ್ಯಾನ ಹೇಳಿಕೊಟ್ಟೆ. ಮುಂಬೈನಲ್ಲಿ 8 ದಿನ ಧ್ಯಾನ ಪ್ರಚಾರ ಮಾಡಿದೆ. ಇವೆಲ್ಲಾ ನಾನು "ಓದುವಾಗಲೇ" ಮಾಡಿದೆ. "9ನೇ ತರಗತಿ"ಯಲ್ಲಿ ಪತ್ರೀಜಿಯವರ ಮೊದಲ ಭೇಟಿ. ಈಗ M.B.A ಮಾಡಿದ್ದೇನೆ. ಮಾರ್ಷಲ್ ಆರ್ಟ್ಸ್‌ನಲ್ಲಿ ಬ್ಲಾಕ್‌ಬೆಲ್ಟ್ ಸಂಪಾದಿಸಿದೆ. ಡಾನ್ಸ್ ಕಲಿತುಕೊಳ್ಳುತ್ತಿದ್ದೇನೆ. ಕ್ರಿಕೆಟ್, ಫುಟ್‌ಬಾಲ್, ಟೆನ್ನಿಸ್ ಆಡುತ್ತಿದ್ದೇನೆ.

*     *     *

"ಪ್ರಪಂಚವೆಲ್ಲಾ ಧ್ಯಾನ ಪ್ರಚಾರ ಮಾಡಬೇಕು" ಎಂಬುವುದೇ... ನನ್ನ ಆಶಯ... ಈಗ...."ಧ್ಯಾನಾಂಧ್ರ ಪ್ರದೇಶ್‌" "ಸ್ಪಿರಿಚ್ಯುವಲ್ ಇಂಡಿಯಾ" ಮ್ಯಾಗಝೀನ್‌ಗಳನ್ನು ಕನಿಷ್ಠ ಪಕ್ಷ ಒಂದು ಲಕ್ಷ ಕಾಪೀಗಳು ಸರ್ಕ್ಯುಲೇಷನ್ ಮಾಡುವುದೇ ನನ್ನ ಗುರಿ. ಅದಕ್ಕಾಗಿ ಒಂದು ಪ್ರಣಾಳಿಕೆ ರಚಿಸಿಕೊಂಡು ಕೆಲಸ ಪ್ರಾರಂಭಿಸಿದೆ. ಪ್ರತಿ ಜಿಲ್ಲೆಯಿಂದ ಕೆಲವರನ್ನು ಈ ಕೆಲಸಕ್ಕೆ ಇನ್‌ಸ್ಪೈರ್ ಮಾಡಬೇಕೆಂದು.. ಮುಂಚಿತವಾಗಿ ನಾನು...2008 ಮಾರ್ಚ್ 22ರಿಂದ ಮಾರ್ಚ್ 26ವರೆಗೂ ತಾಡಿಪತ್ರಿಯಲ್ಲಿ ಮಾತ್ರವೇ ತಿರುಗಿ ಅಲ್ಲಿಯ ಪಿರಮಿಡ್ ಮಾಸ್ಟರ‍್ಸ್ ವಿಶೇಷ ಸಹಕಾರದಿಂದ 110 ಜನರನ್ನು ಧ್ಯಾನಾಂಧ್ರಪ್ರದೇಶ್ ಚಂದಾದಾರರನ್ನಾಗಿಸಿದೆ.

*     *     *

ಯಾರ ಜೊತೆಯಾದರೂ ಮಾತನಾಡಲು ಹೆದರುವ ನಾನು "ಯಾರ ಜೊತೆಯಾದರೂ" ಮಾತನಾಡಬಲ್ಲ ಸ್ಥಿತಿ ಏನು ಮಾಡಬೇಕೆಂದರೂ ಹಿಂದುಳಿಯುವ ನಾನು "ಏನು" ಮಾಡಬೇಕೆಂದರೂ ಒಂದು ಹೆಜ್ಜೆ ಮುಂದೆ ಹಾಕುವ ಈ ಶಕ್ತಿ..ಹೇಗೆ ಬಂತೋ.... ಅರ್ಥವಾಯಿತಲ್ಲವೇ....ದಟೀಜ್ ಪತ್ರೀಜಿ....

ನಾನು ಕಳೆದ 12 ವರ್ಷಗಳಿಂದ ಲಕ್ಷಾಂತರ ಜನಕ್ಕೆ ಧ್ಯಾನವನ್ನು ಹೇಳಿಕೊಟ್ಟಿದ್ದೇನೆ. ಪ್ರಾರಂಭದಲ್ಲಿ ತಾಡಪತ್ರಿ ಮಂಡಲದಲ್ಲಿ, ಅನಂತರಂ ಜಿಲ್ಲೆಯಲ್ಲಿ, ಆಂಧ್ರಪ್ರದೇಶ್ ರಾಜ್ಯದಲ್ಲಿ, ಭಾರತದೇಶದಲ್ಲಿ ತಮಿಳುನಾಡು, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಚಂಡಿಘರ್, ಕನ್ಯಾಕುಮಾರಿ, ಪಂಜಾಬ್, ಹಿಮಾಚಲ್ ಪ್ರದೇಶ್, ದೆಹಲಿಯಲ್ಲಿ ಅನಂತರ, ಪ್ರಪಂಚದಲ್ಲೆಲ್ಲಾ ಧ್ಯಾನವನ್ನು, ಸಸ್ಯಾಹಾರದ ಪ್ರಾಮುಖ್ಯತೆಯನ್ನು, ಪಿರಮಿಡ್ ಪ್ರಾಮುಖ್ಯತೆಯನ್ನು ಪ್ರಚಾರ ಮಾಡುತ್ತಿದ್ದೇನೆ. 2010 ಡಿಸೆಂಬರ್ ತಿಂಗಳಲ್ಲಿ UAE (United Arabian Emirates)ನಲ್ಲಿ ಷಾರ್ಜಾ, ದುಬಾಯಿ, ಅಬುದಾಬಿ, ರಸಲ್ ಕೈಮನಲ್ಲಿ ವಿಸ್ತಾರವಾಗಿ ಧ್ಯಾನ ಪ್ರಚಾರ ಮಾಡಿದ್ದೇನೆ. ಅಲ್ಲಿ ಧ್ಯಾನದ ಬಗ್ಗೆ ಹೇಳಿದ ತಕ್ಷಣ ನೂರಾರು ಜನ ಕುಳಿತು ಧ್ಯಾನ ಮಾಡಲಾರಂಭಿಸಿದರು. ಪ್ರತಿದಿನ ಧ್ಯಾನ ಮಾಡುತ್ತಿದ್ದಾರೆ. ಧ್ಯಾನ ಹೇಳುಕೊಡುವುದರಲ್ಲಿ ಇರುವ ಆನಂದ ವರ್ಣಾತೀತ. ನಾನು ಪ್ರತಿದಿನ ನೂರಾರು ಜನ ವಿದ್ಯಾರ್ಥಿಗಳಿಗೆ ಧ್ಯಾನ ಹೇಳಿಕೊಡುತ್ತಿದ್ದೇನೆ. ಧ್ಯಾನ ಪ್ರಚಾರ ಮಾಡುವುದರಿಂದ ಹೊಸ ಹೊಸ ಅನುಭವಗಳು, ಹೊಸಬರ ಜೊತೆ ಪರಿಚಯ, ನೂತನ ಸಂಪ್ರದಾಯ ವಿಧಾನಗಳು, ಹಾಗೆ, ಎಣಿಸಲಾರದಷ್ಟು ಅನುಭವಗಳನ್ನು ಹೊಂದಿದ್ದೇನೆ.

ಬಾವಿಯಲ್ಲಿ ಇರುವ ಕಪ್ಪೆಯ ಹಾಗೆ ತಾಡಿಪತ್ರಿಯಲ್ಲಿ ಒಂದು ಬಡ ಕುಟುಂಬದಲ್ಲಿ ಇದ್ದ ನಾನು, ಧ್ಯಾನದಿಂದ ನನ್ನನ್ನು ನಾನು ಅರಿತುಕೊಂಡು ನನ್ನ ಶಕ್ತಿ ಸಾಮರ್ಥ್ಯಗಳಿಂದ, ನನ್ನ ಆತ್ಮ ವಿಶ್ವಾಸದಿಂದ ಪ್ರಪಂಚದಲ್ಲೆಲ್ಲಾ ಧ್ಯಾನ ಪ್ರಚಾರ ಮಾಡುತ್ತಿದ್ದೇನೆ. ಪ್ರಪಂಚದಲ್ಲೆಲ್ಲಾ ಪ್ರಜೆಗಳು ಪಿರಮಿಡ್ ಮಾಸ್ಟರ‍್ಸ್ ಆಗಬೇಕೆಂಬುದೇ ನನ್ನ ಗುರಿ.

ಎಲ್ಲೊ ಅನಂತಪುರ ಜಿಲ್ಲೆಯಲ್ಲಿ ಇದ್ದ ನನ್ನನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ’ಧ್ಯಾನ-ಜ್ಞಾನ’ ಪ್ರಚಾರ ಮಾಡುವಷ್ಟು ಮಟ್ಟಕ್ಕೆ ಬರಲು ಕಾರಣ ಮತ್ಯಾರೋ ಅಲ್ಲ ನಮ್ಮ ಪತ್ರೀಜಿ. ದಟೀಜ್ ಪತ್ರೀಜಿ ..

 

ಆನಂದ್
ಹೈದರಾಬಾದ್

Go to top