" 5 ದಿನ ಅಖಂಡ ಧ್ಯಾನ ತುಂಬಾ ಚೆನ್ನಾಗಿ ನಡೆಯಿತು "

 

ನಮ್ಮ ಊರಿನ ಪಿರಮಿಡ್‌ನಲ್ಲಿ 108 ಗಂಟೆಗಳ ಧ್ಯಾನ ಮಾಡಿದೆವು ಅದನ್ನು ವಿನಾಯಕನ ಹಬ್ಬದ ದಿನ ಪ್ರಾರಂಭ ಮಾಡಿದೆವು, 5 ದಿನ ಅಖಂಡ ಧ್ಯಾನ ತುಂಬಾ ಚೆನ್ನಾಗಿ ನಡೆಯಿತು. ಎಲ್ಲಾ ಧ್ಯಾನಿಗಳು ಬಂದು ಧ್ಯಾನ ಮಾಡಿ ಈ ಅಖಂಡ ಧ್ಯಾನ ಮಹಾಯಜ್ಞವನ್ನು ಪೂರ್ತಿಮಾಡಿದರು.

 

1)ಈ ಅಖಂಡ ಧ್ಯಾನದಲ್ಲಿ ನಾನು ಮೊದಲನೆಯ ದಿನ ಧ್ಯಾನಾ ಮಾಡುತ್ತಿರುವಾಗ ಬಾಲಗಣಪತಿ ಬಂದು ಬಾಗಿಲ ಬಳಿ ಬಗ್ಗಿ ನೋಡುತ್ತಾ ಇದ್ದನು. ನಾನು "ಏಕೆ ಅಲ್ಲಿ ನಿಂತಿರುವೆ , ಒಳಗಡೆ ಬಂದು ಧ್ಯಾನಾ ಮಾಡು" ಅಂತ ಹೇಳಿದ್ದಕ್ಕೆ ಗಣಪತಿ "ನಾನಿಲ್ಲೇ ಇರುತ್ತೇನೆ, ಪತ್ರೀಸರ್ ನನಗೆ 5 ದಿನ ಇಲ್ಲೇ ಇರುವುದಕ್ಕೆ ಹೇಳಿದ್ದಾರೆ. ಈ ಅಖಂಡ ಧ್ಯಾನಕ್ಕೆ ಯಾವರೀತಿಯಾದ ತೊಂದರೆಯು ಆಗಬಾರದು ಎಂದು ನನ್ನನ್ನು ಕಾವಲು ಇಟ್ಟಿದ್ದಾರೆ. ನಾನು ಇಲ್ಲಿ ಇದ್ದು ನಿಮ್ಮನ್ನು ಕಾಯುತ್ತಾ ಇರುತ್ತೇನೆ" ಎಂದು ಹೇಳಿದರು.2)ಹಿಮಾಲಯದಲ್ಲಿರುವ ಗಂಗೆಯನ್ನು ನಾನು ಧ್ಯಾನದಲ್ಲಿ ಕರೆದು, ನೀನು ಅಲ್ಲೇ ಏಕೆ ಹರಿಯುತ್ತಿರುವೆ. ಇಲ್ಲಿ ನಮ್ಮ ಪಿರಮಿಡ್ ಹತ್ತಿರ ಏಕೆ ಬರಬಾರದು ಅಂತ ಹೇಳಿದ್ದಕ್ಕೆ ಆಗ ಗಂಗೆ ಮೇಲಿನಿಂದ ಬಂದು ಪಿರಮಿಡ್‌ಗೆ ಒಂದು ಪ್ರದಕ್ಷಿಣೆ ಹಾಕಿ ಪಿರಮಿಡ್ ಮೇಲಿಂದ ಬಂದು ನನ್ನ ತಲೆಯ ಮೇಲೆ ಸಣ್ಣಗೆ ಹನಿಯತರಹ ಸಿಂಪಡಿಸಿತು. ಧ್ಯಾನ ಮಾಡ್ತಾ ಇರುವವರೆಲ್ಲರಿಗೂ ಹನಿಗಳು ಬಿದ್ದಿದ್ದವು. ನನಗೆ ಇದು ಸ್ಪರ್ಶ ಆಗಬೇಕು ಅಂತ ಕೇಳಿದ್ದಕ್ಕೆ ನನಗೆ ಕೈಮೇಲೆ ಹನಿಗಳ ಸ್ಪರ್ಶವಾಯಿತು

 

3)ಪತ್ರೀ ಸರ್ ಬಂದು ಒಂದು ದೊಡ್ಡ ಸಿಂಹಾಸನದ ಮೇಲೆ ಕುಳಿತಿದ್ದಾರೆ. ಪಿರಮಿಡ್ ತುಂಬಾ ದೊಡ್ಡದಾಗಿ ಆಗಿಬಿಟ್ಟಿದೆ. ಎಲ್ಲಾ ಆಸ್ಟ್ರಲ್ ಮಾಸ್ಟರ್‌ಗಳು, ಮಾಸ್ಟರ್‌ಗಳೆಲ್ಲರನ್ನು ಪತ್ರೀ ಸಾರ್ ಲೈನಲ್ಲಿ ಕೂರಿಸಿದ್ದಾರೆ. ಎಲ್ಲಾ ಮಕ್ಕಳಂತೆ ಕುಳಿತಿದ್ದಾರೆ. ಪತ್ರೀ ಸಾರ್ ಅವರಿಗೆ ಹೀಗೆ ಹೇಳೀದರು "ಯಾರೂ ಈ ಧ್ಯಾನ ಮಹಾ ಯಜ್ಞಮುಗಿಯುವ ತನಕ ಹೋಗಬಾರದು, ಎಲ್ಲರೂ ನಿಮ್ಮ ನಿಮ್ಮ ಶಕ್ತಿಯನ್ನು ಇಲ್ಲಿರುವ ಧ್ಯಾನಿಗಳಿಗೆ ಹಂಚಿ, ಅವರು ಧ್ಯಾನದಲ್ಲಿ ಉನ್ನತ ಸ್ಥಿತಿಗೆ ಹೋಗುವುದಕ್ಕೆ ಸಹಾಯ ಮಾಡಿ" ಎಂದು ಹೇಳಿದರು.

 

4)ಈ ಪಿರಮಿಡ್ ಒಂದು ಲೋಟಸ್ಸ್ ಫ್ಲವರ್‌ನಲ್ಲಿ ಇದೆ. ಫ್ಲವರ್ ಮೊದಲು ಮೊಗ್ಗಿನ ತರಹ ಮುಚ್ಚಿಕೊಂಡು ಇದೆ. ಅದು ನಿಧಾನವಾಗಿ ಒಂದೊಂದೇ ದಳಗಳು ಬಿಡಿಸಿಕೊಳ್ಳತ್ತಾ ಇದೆ. ಅದರ ಮಧ್ಯದಲ್ಲಿ ಈ ಪಿರಮಿಡ್ ತುಂಬಾ ಪ್ರಕಾಶಮಾನವಾಗಿ ಗೋಚರಿಸುತ್ತಿದೆ. ಈ ಪಿರಮಿಡ್‌ಗೆ ಆಕಾಶದಿಂದ ಎನರ್ಜಿ ಹರಿಯುತ್ತಾ ಇದೆ. ಈ ಎನರ್ಜಿಯೆಲ್ಲಾ ಪಿರಮಿಡ್‌ನಲ್ಲಿ ಧ್ಯಾನ ಮಾಡುತ್ತಾ ಇರುವವರೆಲ್ಲರಿಗೂ ಬಂದು ಸೇರುತ್ತಾ ಇದೆ.

 

5)ಈ ಅಖಂಡ ಧ್ಯಾನದಿಂದ ಗೌರಿಬಿದನೂರಿನ ಪಿರಮಿಡ್‌ಗೆ ಬೆಂಗಳೂರು ಪಿರಮಿಡ್‌ನಿಂದ ಎನರ್ಜಿ ಹರಿಯುತ್ತದೆ ಅಂತ ಪತ್ರೀ ಸರ್ ಹೇಳಿದರು. ಈ ಧ್ಯಾನದಿಂದ ಗೌರಿಬಿದನೂರಿನ ಎನರ್ಜಿ ಲೆವೆಲ್ ಇನ್ನೂ ಹೆಚ್ಚಾಗುತ್ತದೆ ಹಾಗೂ ಯಾವ ಜಾಗದಲ್ಲಿ ಯಾರಿಗೆ ಎನರ್ಜಿ ಕಡಿಮೆ ಇರುತ್ತದೆಯೋ, ಅಲ್ಲಿಗೆ ಅವರಿಗೆ ಪಿರಮಿಡ್‌ನಿಂದ ಎನರ್ಜಿ ಹರಿದು, ಅವರಿಗೆ ಧ್ಯಾನ ಮಾಡುವುದಕ್ಕೆ, ಧ್ಯಾನ ಪ್ರಚಾರ ಮಾಡುವುದಕ್ಕೆ ಸಹಾಯ ಆಗುತ್ತದೆ ಅಂತ ಪತ್ರೀ ಸರ್ ಹೇಳಿದರು.

 

ಅನಿತ
ಗೌರಿಬಿದನೂರು

Go to top