" ಸ್ವರ್ಗ ಬೇರೆಲ್ಲೂ ಇಲ್ಲ, ಇಲ್ಲೇ ಇದೆ "

 

ಧ್ಯಾನ ಮಹಾಚಕ್ರದಲ್ಲಿ ಸೇರಿದ್ದ ಧ್ಯಾನಿಗಳನ್ನು ನೋಡಿದರೆ ಸ್ವರ್ಗ ಬೇರೆಲ್ಲೂ ಇಲ್ಲ, ಇಲ್ಲೇ ಇದೆ ಅಂತ ಅನ್ನಿಸಿತು. ಅಲ್ಲಿ ಧ್ಯಾನಕ್ಕೆ ಕುಳಿತರೆ ವಿಶ್ವಶಕ್ತಿಯು ನಮ್ಮ ಶರೀರವೆಲ್ಲಾ ತುಂಬಿ ಹೋಗಿ ಹೊರಕ್ಕೆ ಬಂದು ನೆಲವೆಲ್ಲಾ, ಭೂಮಿ ಮೇಲೂ, ಎಲ್ಲಾ ಜೀವಿಗಳಿಗೂ ಸೇರ‍್ತಾ ಇದೆ. ಅಲ್ಲಿ ಧ್ಯಾನ ಮಾಡ್ತಾ ಇದ್ದಾಗ ಪತ್ರೀಜಿಯವರು ಸ್ಟೇಜ್ ಮೇಲೆ ಕುಳಿತು ಕೊಳಲು ನುಡಿಸುತ್ತಾ ಇದ್ದಾರೆ. ಎಲ್ಲರೂ ಕಣ್ಣು ಮುಚ್ಚಿ ಧ್ಯಾನ ಮಾಡ್ತಾ ಇದ್ದಾರೆ ಆಗ, ನನಗೆ ಎಲ್ಲರೂ ಪತ್ರೀಜಿಯವರ ತರಹ ಕಾಣಿಸುತ್ತಾ ಇದ್ದಾರೆ. ಇದರ ಅರ್ಥವೇನು ಎಂದು ಪತ್ರೀಜಿಯವರನ್ನು ಕೇಳಿದಾಗ ‘ಎಲ್ಲಾ ನಾನೇ, ನಾನೇ ಎಲ್ಲಾ’ ಅಂತ ಹೇಳಿದರು.

 

ಧ್ಯಾನದಲ್ಲಿ ಕುಳಿತಾಗ ನಾನು ಪತ್ರೀಜಿಯವರನ್ನು ಒಂದು ಪ್ರಶ್ನೆ ಕೇಳಿದೆ. ಅದೇನೆಂದರೆ "ಈ ಧ್ಯಾನ ಮಹಾಚಕ್ರಕ್ಕೆ ಬಂದ ಧ್ಯಾನಿಗಳೆಲ್ಲರೂ ಈ ಧ್ಯಾನಚಕ್ರವನ್ನು ಮುಗಿಸಿಕೊಂಡು ಹೋಗುವಾಗ ಯಾವ ಸ್ಥಿತಿಯಲ್ಲಿ ಇರುತ್ತಾರೆ ?" ಎಂದು. ಅದು ಕೇಳಿದಕ್ಕೆ ಗ್ರೌಂಡ್‌ನಲ್ಲಿ ಕುಳಿತಿರುವ ಎಲ್ಲಾ ಮಾಸ್ಟರ್‌ಗಳೂ ಪಿರಮಿಡ್‌ಗಳಾಗಿಬಿಟ್ಟಿದ್ದಾರೆ. ಪತ್ರಿಸಾರ್‌ರವರು ಒಂದು ದೊಡ್ಡ ಪಿರಮಿಡ್ ತರಹ ಕಾಣಿಸುತ್ತಾ ಇದ್ದಾರೆ, ಬೇರೆ ಎಲ್ಲಾ ಮಾಸ್ಟರ್‌ಗಳೂ ಚಿಕ್ಕ ಚಿಕ್ಕ ಪಿರಮಿಡ್‌ಗಳಾಗಿ ಗ್ರೌಂಡ್ ಎಲ್ಲಾ ತುಂಬಿಹೋಗಿದ್ದಾರೆ. ಎಲ್ಲಿ ನೋಡಿದರೂ ಪಿರಮಿಡ್‌ಗಳೇ ತುಂಬಿವೆ. ಇದರ ಅರ್ಥ ಏನು ಅಂತ ಕೇಳಿದ್ದಕ್ಕೆ" ಇಲ್ಲಿಗೆ ಬರುವಾಗ ಯಾವುದೇ ಸ್ಥಿತಿಯಲ್ಲಿರಲಿ, ಹೋಗುವಾಗ ಎಲ್ಲರೂ ನಡೆದಾಡುವ ಪಿರಮಿಡ್‌ಗಳಾಗಿ ಪ್ರಪಂಚವೆಲ್ಲಾ ಧ್ಯಾನಮಯವನ್ನಾಗಿ ಮಾಡುವ ಪ್ರಚಂಡ ಮಾಸ್ಟರ್‌ಗಳಾಗುತ್ತಾರೆ ಅಂತ ಹೇಳಿದರು.

 

ಧ್ಯಾನ ಮಾಡುತ್ತಿರುವಾಗ ಗ್ರೌಂಡ್ ತುಂಬಾ ಹಸಿರು ಬಣ್ಣದ ಪಿರಮಿಡ್‌ಗಳು ಕಾಣಿಸುತ್ತಿವೆ. ಪತ್ರೀಜಿಯವರು ಸಹ ಹಸಿರು ಬಣ್ಣದಲ್ಲಿ ಕಾಣಿಸುತ್ತಿದ್ದಾರೆ. ಎಲ್ಲಿ ನೋಡಿದರೂ ಹಸಿರೇ ಹಸಿರು ಆಗ ಹಸಿರು ಬಣ್ಣದ ಪಿರಮಿಡ್ ಮಧ್ಯದಿಂದ ಒಬ್ಬ ಹಸಿರು ಬಣ್ಣದ ದೇವತೆ ಮೇಲೆ ಬಂದಳು. ಯಾರು ನೀವು ಅಂತ ಕೇಳಿದ್ದಕ್ಕೆ "ನಾನು ಪ್ರಕೃತಿ ಮಾತೆ", ನೀವು ಇಷ್ಟು ಜನ ಧ್ಯಾನಮಾಡಿ ಧ್ಯಾನಶಕ್ತಿಯನ್ನು ಪ್ರಪಂಚಕ್ಕೆಲ್ಲಾ ಹಂಚುತ್ತಾ ಇದ್ದೀರ. ಈಗ ಭೂಮಿತಾಯಿ ಸಂತೋಷದಿಂದ ಇದ್ದಾಳೆ. ಹಸಿರಿನಿಂದ ಕಂಗೊಳಿಸುತ್ತಾ ಇದ್ದಾಳೆ. ಇದನ್ನು ನೋಡಿ ನನಗೆ ತುಂಬಾ ಸಂತೋಷವಾಗಿ ನಿಮ್ಮ ಗುರುಗಳ ದರ್ಶನ ಪಡೆದು ನಾನು ಧನ್ಯಳಾಗಬೇಕೆಂದು ಬಂದಿದ್ದೇನೆ" ಎಂದು ಹಸನ್ಮುಖದಿಂದ ಹೇಳಿದಳು. ಆ ತಾಯಿ ಮುಖ ಆನಂದದಿಂದ ತುಂಬಿಹೋಗಿದೆ. ಸಂತೋಷದಿಂದ ಪತ್ರಿಸಾರ್ ದರ್ಶನಮಾಡಿಕೊಂಡು ಪತ್ರಿಸಾರ್‌ರವರಿಂದ ಎನರ್ಜಿಯನ್ನು ತಗೊಂಡು ಹಾಗೇ ಭೂಮಿಯೊಳಕ್ಕೆ ಹೊರಟುಹೋದಳು.

 

 

ಅನಿತ
ಗೌರಿಬಿದನೂರು

Go to top