" ಧ್ಯಾನದಿಂದ ನಮ್ಮ ಸಂಕಲ್ಪಗಳು ಸಿದ್ಧಿಸುತ್ತವೆ "

 

ನನ್ನ ಹೆಸರು ಅನಿತ. ನಮ್ಮದು ಗೌರೀಬಿದನೂರು. ನಮ್ಮ ಮನೆಯಲ್ಲಿ ಅಕ್ಟೋಬರ್ 10ನೇ ತಾರೀಖು ಬೆಳಗ್ಗೆ 6 ರಿಂದ ಸಾಯಂಕಾಲ 6 ಗಂಟೆಯವರೆಗೆ ಅಖಂಡ ಧ್ಯಾನ ಇಟ್ಟುಕೊಂಡಿದ್ದೆವು. ನನಗೆ ಪತ್ರಿ ಸರ್ ಮಾಡಿಸಿದ ಸಂಕಲ್ಪದಿಂದ ಧ್ಯಾನ ಕಾರ್ಯಕ್ರಮ ತುಂಬಾ ಆನಂದವಾಗಿ ನಡೆಯಿತು. ಧ್ಯಾನ ತುಂಬಾ ಚೆನ್ನಾಗಿತ್ತು, ಎನರ್ಜಿ ತುಂಬಾ flow ಆಗ್ತಾ ಇತ್ತು ಅಂತ ಎಲ್ಲರೂ ಸಂತೋಷದಿಂದ ಹೇಳಿದರು.

 

ಧ್ಯಾನದ ಹಿಂದಿನ ದಿನ 9ನೇ ತಾರೀಖು ನಾನು ಮನೆಯಲ್ಲಿ ಧ್ಯಾನಕ್ಕೆ ಕುಳಿತು ಪತ್ರಿ ಸರ್‌ಗೆ ಹೇಳಿದೆ, ನಾಳೆ ನನಗೆ ಹೆಚ್ಚು ಧ್ಯಾನ ಮಾಡುವುದಕ್ಕೆ ಆಗುವುದಿಲ್ಲವಾದ್ದರಿಂದ, ನನಗೆ ಈ ದಿನವೇ ನಾಳೆ ಆಗುವ ಅನುಭವಗಳನ್ನು, ಮಾಸ್ಟರ‍್ಸ್ ಯಾರು ಬರ್ತಾರೆ ಎಂಬುದನ್ನು ತೋರಿಸಿ ಅಂತ ಕೇಳಿಕೊಂಡು ಧ್ಯಾನಕ್ಕೆ ಕುಳಿತೆ. ಮೊದಲು ನನಗೆ ಪತ್ರೀ ಸರ್ ಬಂದು, ಧ್ಯಾನ ಮುಗಿಯುವವರೆಗೂ ನಿಮ್ಮ ಮನೆಯಲ್ಲೇ ಇರುತ್ತೇನೆ ಅಂತ ಹೇಳಿದರು.

 

ನಾವು ಹಿಮಾಲಯಕ್ಕೆ ಹೋದಾಗ ಮಹಾವತಾರ್ ಬಾಬಾರವರ ಗವಿಗೆ ಹೋಗಿದ್ದೆವು. ಬಾಬಾ ನೆನಪಿಗೆ ಬಂದರು. ಅದಕ್ಕೆ ಬಾಬಾರವರಿಗೆ ಹೇಳಿದೆ, "ನಾವೆಲ್ಲಾ ಪತ್ರೀ ಸರ್ ಜೊತೆ ನಿಮ್ಮ ಮನೆಗೆ (ಹಿಮಾಲಯಕ್ಕೆ) ಬಂದಿದ್ದೆವು, ನೀವು ಈಗ ನಮ್ಮ ಮನೆಗೆ ಬನ್ನಿ, ಅಖಂಡ ಧ್ಯಾನಕ್ಕೆ ಬಂದ ಎಲ್ಲಾ ಧ್ಯಾನಿಗಳಿಗೂ ನಿಮ್ಮ ಎನರ್ಜಿ ಕೊಡಿ ಅಂತ ಕೇಳಿದೆ". ಆಗ ಆಕಾಶದಿಂದ ನಮ್ಮ ಮನೆಯ ಮೇಲಿನ top open ಆಗಿ ಅಲ್ಲಿಗೆ ಬೆಳ್ಳಗೆ ಒಂದು ದಾರಿಯ ತರಹ ಆಯಿತು. ಆಕಾಶದಿಂದ ಬಾಬಾರವರು ಆ ದಾರಿಯಲ್ಲಿ ಇಳಿದುಕೊಂಡು ನಮ್ಮ ಮನೆಗೆ ಬಂದರು. ನಾನು ಹೇಳಿದೆ ನಾವೆಲ್ಲಾ ಸರ್ ಜೊತೆಯಲ್ಲಿ ತುಂಬಾ ಜನ ಮಾಸ್ಟರ‍್ಸ್ ಬಂದಿದ್ದೆವು, ನೀವೂ ನಿಮ್ಮ ಫ್ರಂಡ್ಸ್‌ನ(ಮಾಸ್ಟರ‍್ಸ್ ) ಕರೆದುಕೊಂಡು ಬನ್ನಿ ಅಂತ ಹೇಳಿದೆ. ಆಗ ಆಕಾಶದಿಂದ ಆ ಬೆಳ್ಳನೆಯ ದಾರಿಯಲ್ಲಿ ಋಷಿಗಳು, ಮುನಿಗಳು, ಚಿಕ್ಕವರು, ದೊಡ್ಡವರು, ಯೋಗಿಗಳು ಎಲ್ಲರೂ ನಮ್ಮ ಮನೆಗೆ ಬರ‍್ತಾ ಇದ್ದಾರೆ. ಎನರ್ಜಿ ತುಂಬಾ ಇದೆ. ಮಳೆ ತರಹ ಬೀಳ್ತಾ ಇದೆ. ಈ ಎನರ್ಜಿ ಎಲ್ಲರಿಗೂ ಸೇರಬೇಕು ಅಂತ ಬಾಬಾರವರಿಗೆ ಹೇಳಿದೆ, ಆಗ ಬಾಬಾ ಎಲ್ಲರಿಗೂ ಸೇರಲಿ ಅಂತ ಹೇಳಿದಾಗ, ಹಿಮದ ಮಳೆಯ ತರಹ ಎಲ್ಲರ ಮೇಲೆ ಬೀಳ್ತಾ ಇತ್ತು.

 

ನಾನು ನಮ್ಮ ಮನೆಯಲ್ಲಿ ಅಖಂಡ ಧ್ಯಾನದಲ್ಲಿ ಧ್ಯಾನ ಮಾಡಿದ ಎಲ್ಲರಿಗೂ ಒಳ್ಳೆಯ ಎನರ್ಜಿ ಸಿಗಬೇಕು. ಎಲ್ಲರೂ ಈಗ ಇರುವ ಧ್ಯಾನ ಸ್ಥಿತಿಗಿಂತ ಇನ್ನೂ ಉತ್ತಮ ಸ್ಥಿತಿಗೆ ಹೋಗಬೇಕು ಅಂತ ಪತ್ರೀ ಸರ್‌ರವರನ್ನು ಕೇಳಿಕೊಂಡಿದ್ದೆ. ಅದಕ್ಕೆ ಪತ್ರೀ ಸರ್ ಈ ಅಖಂಡ ಧ್ಯಾನದಿಂದ ಬರೀ ನಿಮ್ಮ ಮನೆಯಲ್ಲಿ ಮಾಡುವ ಧ್ಯಾನಿಗಳಿಗೆ ಮಾತ್ರವಲ್ಲ ಎನರ್ಜಿ ಬರುವುದು, ನಿಮ್ಮ ಊರಿನಲ್ಲಿ ಇರುವ ಎಲ್ಲಾ ಪಕ್ಷಿ, ಪ್ರಾಣಿ, ಪ್ರಕೃತಿ, ಎಲ್ಲರಿಗೂ ಎನರ್ಜಿ flow ಆಗುತ್ತೆ. ಈ ರೀತಿ ಅಖಂಡ ಧ್ಯಾನದಿಂದ ಗೌರೀಬಿದನೂರು ಎನರ್ಜಿ ಲೆವಲ್ ಹೆಚ್ಚಾಗುತ್ತೆ. ಇದೇ ರೀತಿ ಅಖಂಡ ಧ್ಯಾನ ನಡೆಯುತ್ತಾ ಇರಲಿ ಅಂತ ಹೇಳಿದರು.

 

ನಮ್ಮ ಸೋದರಿಯ ಸೊಸೆಗೆ delivery ಆಯ್ತು. ಗಂಡುಮಗು. ಮಗುವಿನ ತಾಯಿ, ತಂದೆ, ಅಜ್ಜಿ, ತಾತ ಎಲ್ಲರೂ ಧ್ಯಾನಿಗಳು. ಆ ಮಗುವಿಗೆ breathing problem ಬಂತು. Lungs infection ಆಗಿದೆ ಎಂದು ಹೇಳಿದ doctor, ಮಗುವಿಗೆ ತೊಂದರೆ ಇದೆ ಅಂತ ಹೇಳಿದರು. ಆಗ ನಾನು, ನಮ್ಮ ಸೋದರಿ ಎಲ್ಲರೂ ಒಂದು ಸಂಕಲ್ಪ ಮಾಡಿ, ಹಾಸ್ಪಿಟಲ್‌ನಲ್ಲಿ ಅಖಂಡ ಧ್ಯಾನ ಶುರು ಮಾಡಿ, ಈ ಧ್ಯಾನದಿಂದ ಬಂದಿರೋ ಎನರ್ಜಿ ಎಲ್ಲಾ ಆ ಮಗುವಿಗೆ ಹೋಗಲಿ, ಆ ಮಗುವಿಗೆ ವಾಸಿಯಾಗಲಿ ಅಂತ ಹೇಳಿಕೊಂಡು, ಎಲ್ಲರೂ ಅಖಂಡ ಧ್ಯಾನ ಮಾಡಿದೆವು. 5 ದಿನದಲ್ಲಿ ಮಗುವಿಗೆ ವಾಸಿಯಾಯಿತು. ಮಗು ಆರೋಗ್ಯವಾಗಿದೆ. ಇವೆಲ್ಲಾ ಧ್ಯಾನದ ಮಹಿಮೆ.

 

ಈ ಧ್ಯಾನವನ್ನು ಕಲಿಸಿಕೊಟ್ಟ ಪತ್ರೀ ಸರ್‌ರವರಿಗೆ ನನ್ನ ಅನಂತಾನಂತ ವಂದನೆಗಳು. ನನ್ನಲ್ಲಿ ಕೊನೆಯ ಶ್ವಾಸವಿರುವವರೆಗೂ ಧ್ಯಾನ ಮಾಡ್ತೀನಿ. ಧ್ಯಾನ ಹೇಳಿಕೊಡ್ತೀನಿ. ಇದೇ ನನ್ನ ಜೀವನದ ಗುರಿ. ಈ ಧ್ಯಾನದಿಂದ ನನ್ನ ಜನ್ಮ ಸಾರ್ಥಕವಾಗಿದೆ. ನಮ್ಮಂತಹ ಬಹಳಷ್ಟು ಧ್ಯಾನಿಗಳಿಗೆ ಬದುಕಿನ ಗುರಿ ತೋರಿಸಿದ ಪತ್ರೀ ಸರ್‌ರವರಿಗೆ ನನ್ನ ಪ್ರಣಾಮಗಳು.

 

ಅನಿತ
ಗೌರೀಬಿದನೂರು

Go to top