" ಧ್ಯಾನ ಸಾಧನೆ ಮಾಡುವುದು ಬಿಟ್ಟರೆ ಮತ್ತೇನೂ ಇಲ್ಲ "

 

 

ನನ್ನ ಹೆಸರು ಶ್ರೀಮತಿ ಅನ್ನಪೂರ್ಣ M.A. ನನ್ನ ವಯಸ್ಸು ಅರವತ್ತನಾಲ್ಕು ವರ್ಷಗಳು. ನಾನು ಐದು ವರ್ಷಗಳ ಕೆಳಗೆ ಧ್ಯಾನವನ್ನು ಶ್ರೀಪಾದರಾವ್‌ರವರ ಹತ್ತಿರ ಕಲಿತುಕೊಂಡಿದ್ದೆ. ಬ್ರಹ್ಮರ್ಷಿ ಪತ್ರೀಜಿಯವರು, ಮಾನವಕುಲ ಕೋಟಿಯನ್ನು ಪಿರಮಿಡ್ ಪ್ರಪಂಚಕ್ಕೆ ಪಾದಾರ್ಪಣೆ ಮಾಡಿಸಿ, ಧ್ಯಾನಾಸಕ್ತರಾಗಿರೆಂದು ಭರವಸೆಯನ್ನು ನೀಡುತ್ತಾ. ಪ್ರಚಾರ ಮಾಡುತ್ತಾ ಬಂದಿರುವುದಕ್ಕೆ ಕೃತಜ್ಞತೆಗಳನ್ನು ಎಷ್ಟು ತಿಳಿಸಿದರೂ ಕಡಿಮೆಯೆ.

 

ಖಮ್ಮಂನ ಸರಕಾರಿ ಕಾಲೇಜಿನಲ್ಲಿ ಉಪನ್ಯಾಸಕಿ ಮತ್ತು ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆಯಾಗಿ ಕೆಲಸ ಮಾಡಿರುವ ನಾನು ಜೀವನದಲ್ಲಿ ಎಷ್ಟೋ ಸಾಧಿಸಿದ್ದೇನೆ ಎಂದು ತಿಳಿದಿದ್ದೆನು. ಆದರೆ, ಧ್ಯಾನ ಮಾಡುವುದು ತಿಳಿದ ನಂತರ ನನ್ನ ಜೀವನದಲ್ಲಿ ಎಷ್ಟೋ ಆನಂದದ ಕ್ಷಣಗಳನ್ನು ಕಳೆದುಕೊಂಡಿದ್ದೇನೆಂದು ಅರಿವಾಯಿತು.

 

ಚಾಮರಾಜಪೇಟೆ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ಯೋಗ ಮತ್ತು ಧ್ಯಾನ ತರಗತಿಗಳನ್ನು ನಡೆಸುತ್ತಾ ಪಾರಮಾರ್ಥಿಕವಾದ ಆನಂದವನ್ನು ಹೊಂದುತ್ತಿದ್ದೇನೆ. ಧ್ಯಾನ ಸಾಧನೆ ಮಾಡುವುದು ಬಿಟ್ಟರೆ ಮತ್ತೇನೂ ಇಲ್ಲವೆಂದು ಅನುಭವಪೂರ್ವಕವಾಗಿ ತಿಳಿದುಕೊಂಡಿದ್ದೇನೆ. ನನ್ನ ಕಾಲಿನ ಕಿಬ್ಬೆರಳು fracture ಆದಾಗ ಡಾಕ್ಟರ್ ಅವಶ್ಯಕತೆಯಿಲ್ಲ ಎಂದುಕೊಂಡು, ನಾನೇ ಸರಳಚಿಕಿತ್ಸೆಯನ್ನು ಮಾಡಿಕೊಂಡು, ಧ್ಯಾನವನ್ನು 4-5 ಗಂಟೆಗಳ ಕಾಲ ಮಾಡಿದ್ದರಿಂದ ನೋವು ಪೂರ್ತಿಯಾಗಿ ಮಾಯವಾಯಿತು. ಇಂಥಹ ಅನುಭವಗಳನ್ನು ಎಷ್ಟೋ ಅನುಭವಿಸಿದ್ದೇನೆ.

 

ಶಾರೀರಿಕ ಆರೋಗ್ಯ, ಮಾನಸಿಕ ಶಾಂತಿ, ಆಧ್ಯಾತ್ಮಿಕ ಆನಂದವನ್ನು ಹೊಂದುತ್ತಾ complete transformation ಆಗಿದೆಯೆಂದು ಹೇಳಬಹುದು. ಎಷ್ಟೇ ಬಾಧೆಯಿದ್ದರೂ, ಎಷ್ಟೇ ಆನಂದದ ಕ್ಷಣಗಳಾದರೂ ಸಹಿಸುವ ಸಹನೆ ನನ್ನಲ್ಲಿ ಬಂದಿದೆ.

 

ಅನ್ನಪೂರ್ಣ, M.A
 ಬೆಂಗಳೂರು

Go to top