" ಧ್ಯಾನದಿಂದ ನಾನು ಆನಂದವಾಗಿದ್ದೇನೆ "

 

ನನ್ನ ಹೆಸರು ಅನ್ನಪೂರ್ಣ K. ನಾನು ಇಂದಿರಾನಗರದ ಪ್ರಾಥಮಿಕ ಶಾಲೆಯಲ್ಲಿ ಸಹ-ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ನನ್ನೊಂದಿಗೆ ಸಹ-ಶಿಕ್ಷಕಿಯಾಗಿರುವ ಲಲಿತಾರವರಿಂದ ನನಗೆ ಆನಾಪಾನಸತಿ ಧ್ಯಾನದ ಪರಿಚಯವಾಯಿತು.

 

ನಾನು ಕಳೆದ ೨ ವರ್ಷಗಳಿಂದ ’ಹೈಪರ್ ಥೈರಾಯ್ಡ್’ ಎಂಬ ಸಮಸ್ಯೆಯಿಂದ ಬಳಲುತ್ತಿದ್ದೆ. ಅದು ನನಗೆ ಜೀವಮಾನವಿಡೀ ಜೊತೆ ಎಂದು ವೈದ್ಯರು ಹೇಳಿ ಬಿಟ್ಟಿದ್ದರು. ನನಗೆ ‘ಡಸ್ಟ್ ಅಲರ್ಜಿ’ ಎಂಬುದೊಂದು ಕಾಯಿಲೆ ಇತ್ತು. ನನ್ನ ಚರ್ಮಕ್ಕೆ ಸಣ್ಣ ಧೂಳಿನ ಕಣ ತಾಗಿದರೂ ಸಾಕು ಅಲ್ಲೆಲ್ಲ ಬೊಬ್ಬೆ ಬರುತ್ತಿತ್ತು. ಮನೆಯಲ್ಲಿ T.V. ನೋಡುತ್ತ ಕುಳಿತಾಗ ಕಿಟಕಿಯಿಂದ ಯಾರೋ ನನ್ನನ್ನು ಇಣುಕಿ ನೋಡುತ್ತಿದ್ದಾರೆ ಎಂದು ಭಯವಾಗುತ್ತಿತ್ತು. ಹಾಗೆಯೇ, ಮನೆಯಲ್ಲಿ ಒಬ್ಬಳೇ ಓಡಾಡುತ್ತಿರುವಾಗ ನನ್ನ ಹಿಂದೆ ಯಾರೋ ಓಡಾಡುತ್ತಿದ್ದಾರೆ ಎಂಬ ಭಯ ನನ್ನನ್ನು ಆವರಿಸಿತ್ತು. ಅಲ್ಲದೆ, ಯಜಮಾನರು ಯಾವುದಾದರೂ ಊರಿಗೆ ಹೋದರೆ ಅವರಿಗೆ ಏನೋ ಆಗಿ ಬಿಡುತ್ತದೆ. ಗಾಡಿಯ ಮೇಲೆ ಓಡಾಡುವಾಗ ಅಪಘಾತವಾಗಿ ಸತ್ತೇ ಹೋಗಿ ಬಿಡುತ್ತೇವೆ. ನಮಗೆ ಏನೋ ಆಗಿಬಿಡುತ್ತದೆ ಎಂದು ಪದೇ ಪದೇ ಭಯ ಪಡುತ್ತಿದ್ದೆ. ಪ್ರತಿ ದಿನವೂ ಒಂದಲ್ಲಾ ಒಂದು ಕಾರಣದಿಂದ ಕಣ್ಣೀರಿಡುವಂಥ ಪರಿಸ್ಥಿತಿ ನನ್ನದಾಗಿತ್ತು. ಪರಿಸ್ಥಿತಿ ನನ್ನದಾಗಿತ್ತು.

 

ಲಲಿತಾ ಅಕ್ಕ ಇವರ ಮನೆಯಲ್ಲಿ ಪ್ರಾರಂಭವಾದ ‘ಮನೆ ಮನೆ ಧ್ಯಾನ’ ಕಾರ್ಯಕ್ರಮದಲ್ಲಿ ಭಾಗವಹಿಸತೊಡಗಿದೆ ಅಕ್ಕನ ಸಲಹೆಯಂತೆ ಮನೆಯಲ್ಲಿ ೨x೨ ಪಿರಮಿಡ್‌ನ್ನು ಹಾಕಿಸಿಕೊಂಡೆ. ಕಳೆದ 4 ತಿಂಗಳಿನಿಂದ ನಿರಂತರವಾಗಿ ಧ್ಯಾನ ಮಾಡುತ್ತಿದ್ದೇನೆ. ಶಾಲೆಯಲ್ಲಿಯೂ ಅಕ್ಕ ಪಿರಮಿಡ್ ಹಾಕಿಸಿದ್ದ್ದಾಳೆ. ಅಲ್ಲಿ ಬೆಳಗ್ಗೆ ಸಾಯಂಕಾಲ ಮಕ್ಕಳೊಂದಿಗೆ ಧ್ಯಾನ. ಸಾಯಂಕಾಲ ‘ಮನೆ ಮನೆ ಧ್ಯಾನ’ ರಾತ್ರಿ ನನ್ನ ಮನೆಯಲ್ಲಿ ಪಿರಮಿಡ್ ಕೆಳಗೆ ಧ್ಯಾನವನ್ನು ಪ್ರತಿದಿನವೂ ಮಾಡುತ್ತಿದ್ದೇನೆ. ಕಳೆದ 3 ತಿಂಗಳನಿಂದ ನಾನು ‘ಥೈರಾಕ್ಸಿನ್’ ಮಾತ್ರೆಯನ್ನು ತೆಗೆದುಕೊಳ್ಳುತ್ತಿಲ್ಲ. ಯಜಮಾನರು ಯಾವ ಊರಿಗೆ ಹೋದರೂ ನಾನು ಫೋನ್ ಮಾಡಿ ತೊಂದರೆ ಕೊಡುವುದಿಲ್ಲ. ಗಾಡಿಯಲ್ಲಿ ಓಡಾಡಿದರೂ ಯಾವ ಭಯವೂ ಇಲ್ಲ. ‘ಗಣರಾಜ್ಯೋತ್ಸವ’ ಅಂಗವಾಗಿ ಶಾಲೆಯಲ್ಲಿ ನಾನೇ ಧೂಳು ಕೊಡವಿದರೂ ನನಗೆ ಏನೇನೂ ಸಮಸ್ಯೆಯಾಗಲಿಲ್ಲ. ಮನೆಯಲ್ಲಿ ಒಂಟಿಯಾಗಿದ್ದರೂ ನನಗಾವ ಭಯವೂ ಕಾಡುವುದಿಲ್ಲ. ಸಮಸ್ಯೆಗಳು, ಕಾಯಿಲೆ, ಕಣ್ಣೀರೇ ನನ್ನ ಜೀವನದ ಸಂಗಾತಿಗಳು ಎಂದು ತಿಳಿದುಕೊಂಡಿದ್ದ ನಾನಿಂದು ‘ನನ್ನಂಥ ಪರಮ ಸುಖಿ’ ಯಾರೂ ಇಲ್ಲ ಎಂದು ಹೆಮ್ಮೆಯಿಂದ ಹೇಳುವಂತಾಗಿದೆ. ಅದಕ್ಕೆ ಕಾರಣ ‘ಪಿರಮಿಡ್ ಧ್ಯಾನ’. ನನ್ನಂತೆ ಸಮಸ್ಯೆ ಇರುವವರಿಗೆ ನಾನೊಂದು ಸ್ಫೂರ್ತಿಯಾಗಲಿ, ಇಂಥ ಅಮೂಲ್ಯ ಧ್ಯಾನವನ್ನು ಕರುಣಿಸಿದ ‘ಬ್ರಹ್ಮರ್ಷಿ ಪತ್ರೀಜಿ’ಯವರಿಗೆ ನಾನು ಚಿರಋಣಿ.

 

ಅನ್ನಪೂರ್ಣ K
ಗಂಗಾವತಿ

Go to top