" ಧ್ಯಾನದ ಅನುಭವ ಮತ್ತು ಲಾಭಗಳು "

 

ನನ್ನ ಹೆಸರು ಅಶೋಕ್ ಕುಲಕರ್ಣಿ, ರಿಟೈರ್ಡ್ ಸ್ಪೆಷಲ್ ಅಸ್ಸಿಸ್ಟೆಂಟ್, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್. ಶ್ರೀ ವಿಜಯ ಕುಮಾರ್ ಚಿಮ್ಮಕೋಡ್ ಮತ್ತು ಅವರ ಪತ್ನಿ ಶ್ರೀಮತಿ ಭುವನೇಶ್ವರಿಯವರು ಹಮ್ಮಿಕೊಂಡಿದ್ದ 41 ದಿವಸದ ಮಂಡಲ ಧ್ಯಾನ ಶಿಬಿರದಲ್ಲಿ 41 ದಿವಸ ಧ್ಯಾನ ಮಾಡಿದ್ದೀನಿ. ಪ್ರಾರಂಭದಲ್ಲಿ ಒಂದು ವಾರ ನನಗೆ ಶ್ವಾಸದ ಮೇಲೆ ಗಮನವಿಡಲು ಆಗುತ್ತಿರಲಿಲ್ಲ, ಅನೇಕ ವಿಚಾರಗಳು ಬರುತ್ತಾ ಇರುತ್ತಿದ್ದವು. ವಿಚಾರಗಳು ಎಲ್ಲಿಂದಲೋ ಬಂದು ಎಲ್ಲಿಗೋ ಹೋಗುತ್ತಿದ್ದವು.

 

ನನಗೆ ಧ್ಯಾನ ಆಗುತ್ತಾ ಇರಲಿಲ್ಲ. ಶ್ರೀ ವಿಜಯ ಕುಮಾರ ಚಿಮ್ಕೋಡರು ಹೇಳಿಕೊಟ್ಟ ರೀತಿಯಲ್ಲಿ, ಅವರ ಪ್ರೋತ್ಸಾಹದಿಂದ ಧ್ಯಾನ ಮಾಡಿದ ಮೇಲೆ ಧ್ಯಾನ ಹತ್ತಲು ಪ್ರಾರಂಭವಾಯಿತು. ಆ ದಿನದಿಂದ ಒಂದು ಗಂಟೆ ಧ್ಯಾನದಲ್ಲಿ ಕುಳಿತಿರಲು ಸಾಧ್ಯವಾಯಿತು.

 

ಧ್ಯಾನದಿಂದ ನನ್ನ ಆರೋಗ್ಯ ಸಂಪೂರ್ಣವಾಗಿ ಸುಧಾರಿಸಿದೆ. ಧ್ಯಾನಕ್ಕೆ ಬರುವ ಮೊದಲು ನನಗೆ High B.P. ಹಾಗೂ Cholesterol, ತ್ರಾಯಿಗ್ಲಿಸರಾಯಿಡ್ ಮತ್ತು ಕೋಲ್ಡ್ ಅಲರ್ಜಿ ಇತ್ತು. ಆದರೆ, 3 ತಿಂಗಳ ನಂತರ ಧ್ಯಾನದಿಂದ ಬಿಪಿ ನಾರ್ಮಲ್ ಆಗಿದೆ ಹಾಗೂ ಕೊಲಸ್ಟ್ರಾಲ್ ಎಲ್ಲವೂ ಬಿಲೋ ನಾರ್ಮಲ್ ಇದೆ.

 

ಧ್ಯಾನಕ್ಕೆ ಬರಲು ಮೊದಲು ನನ್ನಲ್ಲಿ ನೆಗೆಟಿವ್ ವಿಚಾರ ಬಹಳ ಇತ್ತು. ಈಗ ಧ್ಯಾನದಿಂದ ಎಲ್ಲ ಕೆಟ್ಟ ವಿಚಾರಗಳು ಹೋಗಿ ಪಾಜಿಟಿವ್ ಥಿಂಕಿಂಗ್ ಬಂದಿದೆ. ಧ್ಯಾನದಿಂದ ನನ್ನ ಆರೋಗ್ಯ, ಮಾನಸಿಕವಾಗಿ, ಆಧ್ಯಾತ್ಮಿಕವಾಗಿ, ದೈಹಿಕವಾಗಿ, ಸಂಪೂರ್ಣವಾಗಿ ಸುಧಾರಿಸಿದೆ, ಹಾಗೂ ಆತ್ಮವಿಶ್ವಾಸ, ಏಕಾಗ್ರತೆಯ ಶಕ್ತಿ, ಮಾನಸಿಕ ಶಾಂತಿ, ಇವೆಲ್ಲವೂ ಲಭಿಸಿದೆ.

 

ಧ್ಯಾನದಿಂದಲೇ ಜ್ಞಾನ, ಜ್ಞಾನದಿಂದಲೇ ಜೀವನ ಪರಿಪೂರ್ಣ ವಾಗುತ್ತದೆ.

 

ಅಶೋಕ್ ಕುಲಕರ್ಣಿ
ಗುಲಬರ್ಗಾ

Go to top