" ವೈಜಾಗ್‌ನ ವೈಭವ "

 

ತಿಯೊಬ್ಬರ ಜೀವನದಲ್ಲೂ ಕೆಲವಾದರೂ ಮರೆಯಲಾರದ ಘಟನೆಗಳು ಅಥವಾ ದಿನಗಳಿರುತ್ತವೆ. ಅಂತಹದೊಂದು ನನ್ನ ಜೀವನದಲ್ಲಿ ನಾನು ಕಂಡದ್ದು ವೈಜಾಗಿನ ಧ್ಯಾನಮಹಾಯಜ್ಞ. 2011ರ ಡಿಸೆಂಬರ್ 21 ರಿಂದ 31 ವರೆಗಿನ ದಿನಗಳು, ಯಾವುದೇ ಕಾರಣಕ್ಕೂ, ನಿಜವಾಗಿಯೂ ಸಹ ನನಗೆ ‘ಮರೆಯಲಾಗದ ದಿನಗಳು’. ಇದು ಯಾವುದೇ ಹಿಂದಿನ ಧ್ಯಾನಯಜ್ಞಗಳಿಗೆ ಹೋಲಿಸಲಾಗದಂತಹ ವಿಶೇಷಯಜ್ಞವಾಗಿ ಕಂಡುಬಂತು. ಮಾತುಗಳಿಂದ ಹೇಳಲಾಗದ, ಪದಗಳಿಂದ ವರ್ಣಿಸಲಾಗದ ಆ ಅನುಭವನನ್ನು ಆ ಸ್ವಾದಿಸುತ್ತಿರುವಾಗ, ಹಗಲು-ರಾತ್ರಿಗಳು ಹೇಗೆ ಕಳೆದವೆಂಬುದೇ ಗೊತ್ತಾಗಲಿಲ್ಲ. ವರ್ಷದಿಂದ ವರ್ಷಕ್ಕೆ ಈ ಧ್ಯಾನಯಜ್ಞಗಳು ಊಹಿಸಲೂ ಸಾಧ್ಯವಾಗದಂತಹ ರೀತಿಯಲ್ಲಿ ಬೆಳೆಯುತ್ತಿರುವುದನ್ನು ನೋಡುವುದೇ ಆನಂದ. ಪತ್ರೀಜಿ ಒಬ್ಬ ವ್ಯಕ್ತಿಯಲ್ಲ, ಅವರೊಂದು ಮಹಾಶಕ್ತಿ ಎಂಬುದನ್ನು ಇಲ್ಲಿ ಕಂಡುಕೊಳ್ಳಲಾಯಿತು. ಇದಕ್ಕೆ ಪ್ರತಿ ದಿನವೂ ಬೆಳಗ್ಗೆ 5 ರಿಂದ 7 ಗಂಟೆ ವರೆಗಿನ ಸಾಮೂಹಿಕ ಧ್ಯಾನ ಸಾಗರವೇ ಸಾಕ್ಷಿ. ಧರ್ಮ ಒಂದೇ ಎಂದು ತಿಳಿದಿದ್ದ ನನಗೆ ಅನೇಕ ಧರ್ಮಗಳನ್ನು ಪರಿಚಯಿಸಿದ, ಆ ಕರುಣಾಮೂರ್ತಿಯನ್ನು ಎಷ್ಟು ಸ್ಮರಿಸಿದರೂ ಸಾಲದು.

 

 

B. ನಾರಾಯಣ್
ಅಧ್ಯಕ್ಷರು, ಕೆ.ವಿ.ಡಿ.ಪಿ.ಟ್ರಸ್ಟ್
ಬೆಂಗಳೂರು
ಫೋನ್ : +91 9342034388

Go to top