" ವಿಶಾಖ ಧ್ಯಾನ ಮಹಾಚಕ್ರ - 2011 "

 

 

ಈ ವರ್ಷದ ವಿಶಾಖ ಧ್ಯಾನ ಚಕ್ರ ಮಹೋತ್ಸವ ಒಂದು ಮಹಾ ಅದ್ಭುತ ಸೃಷ್ಟಿ. ಪ್ರತಿ ದಿನದ ಪ್ರಾತಃಕಾಲ ಸಾಮೂಹಿಕ ಧ್ಯಾನ ಸಮಾವೇಶ ಧ್ಯಾನಿಗಳಿಗೆ ಸಾಕ್ಷಾತ್ತು ಆ ಕೈಲಾಸ ನಿವೇಶವನ್ನೇ ಭೂಮಿಗೆ ತಂದಂತಿತ್ತು. ಬ್ರಹ್ಮರ್ಷಿ ಪತ್ರೀಜಿ ಅವರ ವೇಣು ಧ್ಯಾನ, ಸಂಗೀತಾಲಾಪನೆಯ ಜೊತೆಗೆ ಎಲ್ಲ ಧ್ಯಾನಿಗಳು ಅಂತರ್ಮುಖರಾಗಿ ಧ್ಯಾನ ನಿರತರಾದರು. ಸಹ ಧ್ಯಾನಿಗಳ ಜೊತೆ ನಾನು ಪಡೆದ ಅನುಭವ ಅತಿ ವಿಶೇಷ ಮತ್ತು ಆನಂದದಾಯಕವಾದ್ದು. ನನ್ನ ಜೀವನಯಾತ್ರೆಯಲ್ಲಿ ಮರೆಯಲಾರದಿರುವಂಥ ಒಂದು ಅದ್ಭುತ ಘಟನೆ ಈ ಧ್ಯಾನ ಸಾಧನೆ. ಧ್ಯಾನಾನಂತರದ ಬ್ರಹ್ಮರ್ಷಿ ಅವರ ಸಂದೇಶಗಳು ಸಂದೇಹನಿವೃತ್ತಿ ಮಾಡುವಂತವು. ಪರಮೋತ್ಕೃಷ್ಟವಾದ ಸತ್ಯದ ನುಡಿಗಳು. ಸಾಮಾನ್ಯರಿಗೂ ಅರ್ಥವಾಗುವ ರೀತಿಯ ಮುತ್ತಿನ ಮಾತುಗಳು. ಎಲ್ಲರ ಜೀವನದಲ್ಲೂ ಧರ್ಮದ ಜ್ಯೋತಿಯನ್ನು ಬೆಳಗಿಸುವಂತವು. ಅವರಿಗೆ ಎಲ್ಲರು ಚಿರರುಣಿಯಾಗಿರುವರು. ಈ ಮೂಲಕ ಅವರಿಗೆ ನನ್ನ ವೈಯಕ್ತಿವಾದ ಶತಕೋಟಿ ನಮನಗಳು.

 


B. ಶಿವರಾಮಪ್ಪ
ಪಿರಮಿಡ್ ಸ್ಪಿರಿಚ್ಯುಯಲ್ ಸೈನ್ಸ್ ಅಕಾಡೆಮಿ, ಬೆಂಗಳೂರು
ಫೋನ್ : +91 9449831788

Go to top