" ಧ್ಯಾನ ಸಾಧನೆಯಿಂದ ನನ್ನ ಜೀವನ ಬದಲಾಯಿತು "

 

ನನ್ನ ಹೆಸರು T.L. ಬದರೀ ಶಂಕರ್. ನಮ್ಮದು ಚಳ್ಳಕೆರೆ. ನನ್ನನ್ನು ಧ್ಯಾನಕ್ಕೆ ಕರೆತಂದ ಪ್ರಸಾದ್ ಹಾಗೂ ಸ್ನೇಹಿತ ಸುರೇಶ್‌ಗೆ ನನ್ನ ಧನ್ಯವಾದಗಳು.

 

ಧ್ಯಾನ ಅಂದರೆ ನಾನು ವಯಸ್ಸಾದ ಹಾಗೂ ಮಾಡಲು ಕೆಲಸವಿಲ್ಲದವರು ಮಾಡುವುದು ಎಂದುಕೊಂಡಿದ್ದೆ. ಆದರೆ, ಮೊದಲ ಬಾರಿ ಒಲ್ಲದ ಮನಸ್ಸಿನಿಂದ ದಿನಾಂಕ 10-01-10ರಂದು ನಾನು ಧ್ಯಾನ ಮಂದಿರಕ್ಕೆ ಹೋಗಿ ಪ್ರೇಮ್‌ನಾಥ್ ಸರ್ ಅವರಿಂದ ಧ್ಯಾನದ ಮಹತ್ವವನ್ನು ತಿಳಿದುಕೊಂಡು ದಿನಾಂಕ 11-01-10ರಂದು ನಾನು ಮೊದಲ ಬಾರಿ 1 ಗಂಟೆ ಧ್ಯಾನ ಮಾಡಿದೆ. ಆದರೆ, ಎಷ್ಟೋ ಗಂಟೆ ಮಾಡಿದ ಹಾಗೆ ಅನಿಸಿತು. ಎರಡನೇ ದಿವಸ ಪರವಾಗಿಲ್ಲ ಎನಿಸಿತು. ಮೂರನೇ ದಿನ ಮೂರಕ್ಕೆ ಮುಕ್ತಾಯ ಆಗುತ್ತೋ ಹೇಗೋ ಅಂದುಕೊಂಡಿದ್ದೆ. ಆದರೆ, ಮೂರನೇ ದಿವಸ ಮನಸ್ಸು ತುಂಬಾ ಹತೋಟಿಗೆ ಬಂದು ನನ್ನಲ್ಲಿ ಆ ದಿನ ಏನೋ ವಿಶೇಷ ಅನಿಸಿತು. ದಿನಪೂರ್ತಿ ಉಲ್ಲಾಸ ಮತ್ತು ಉತ್ಸಾಹದಿಂದ ಕೂಡಿತ್ತು. ಅಲ್ಲಿಂದ ನಾನು ಹಿಂತಿರುಗಿ ನೋಡಲಿಲ್ಲ. ಆದಷ್ಟು ಎಲ್ಲರಿಗಿಂತ ಮುಂಚೆ ಧ್ಯಾನ ಮಂದಿರಕ್ಕೆ ಬಂದು ಕಾಯುತ್ತಾ ಕುಳಿತಿರುತ್ತಿದ್ದೆ.

 

ಧ್ಯಾನದಿಂದ ನನಗಾದ ಕೆಲವು ಅನುಭವಗಳು:

 

1. ಆರೋಗ್ಯದ ವೃದ್ಧಿ
2. ವ್ಯಾಪಾರದಲ್ಲಿ ಇನ್ನೂ ಹೆಚ್ಚಿನ ಏಕಾಗ್ರತೆ ಸಿಕ್ಕಿದೆ.
3. ಸಕಾರಾತ್ಮದ ಚಿಂತನೆ ಹೆಚ್ಚಿದೆ.
4. ನನ್ನ ಕೆಲವು ಸಂಕಲ್ಪಗಳು ಸ್ವಲ್ಪ ಅವಧಿಯಲ್ಲೇ ಈಡೇರಿವೆ.
5. ಮನಸ್ಸಿನಲ್ಲಿನ ಅನವಶ್ಯಕ ಭಯ ಹಾಗೂ ಆತಂಕ ದೂರ ಆಗಿದೆ ಮತ್ತು ನೆಮ್ಮದಿ ತಂದಿದೆ.

 

ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ನನ್ನಲ್ಲಿದ್ದ ಧ್ಯಾನದ ಬಗ್ಗೆ ತಪ್ಪು ಕಲ್ಪನೆ ಸಂಪೂರ್ಣವಾಗಿ, 100% ರಷ್ಟು ನಿವಾರಣೆಗೊಂಡಿವೆ. ಹಾಗಾಗಿ ಪ್ರಿಯ ಮಿತ್ರರೇ ನನ್ನ ವಿನಂತಿ ಏನೆಂದರೆ, ನೀವೆಲ್ಲ ಕನಿಷ್ಠ ಪಕ್ಷ ಮೂರು ಮಂದಿಗಾದರೂ ಧ್ಯಾನ ಹಾಗೂ ಅದರ ಮಹತ್ವ ತಿಳಿಸಿಕೊಡಬೇಕಾಗಿ ವಿನಂತಿಸಿಕೊಳ್ಳುತ್ತೇನೆ.

 

T.L. ಬದರೀ ಶಂಕರ್
ಚೆಳ್ಳಕೆರೆ

Go to top