" ಧ್ಯಾನದಿಂದ ಮಾನಸಿಕ ಶಾಂತಿ ಸಿಗುತ್ತದೆ "

 

 

ಬ್ರಹ್ಮರ್ಷಿ ಪತ್ರೀಜಿಯವರಿಗೆ ನನ್ನ ಹೃದಯ ಪೂರ್ವಕವಾದ ಶಿರಸಾಷ್ಟಾಂಗ ನಮಸ್ಕಾರಗಳು. ನಾನು ಜೂನ್ 2010ರಿಂದ ಪ್ರತಿದಿನ ತಪ್ಪದೇ, ನಮ್ಮ ಗ್ರಾಮದ "ತಿರುಮಲ ಪಿರಮಿಡ್ ಧ್ಯಾನ ಕೇಂದ್ರ" ದಲ್ಲಿ ಧ್ಯಾನ ಮಾಡುತ್ತಿದ್ದೇನೆ. ನನಗಿದ್ದ, ಗ್ಯಾಸ್ಟ್ರಿಕ್ ಟೆನ್‌ಷನ್, ಇವೆಲ್ಲವೂ ಧ್ಯಾನ ಮಾಡುವುದರಿಂದ ದೂರವಾಗಿವೆ. ಬೆಂಗಳೂರಿನ ಮಲ್ಯ ಆಸ್ಪತ್ರೆಯಲ್ಲಿ ಸರ್ಜರಿ ಮಾಡಿಸಿಕೊಂಡರೂ ಏನೂ ಉಪಯೋಗವಾಗಿರಲಿಲ್ಲ.ಅಂದಾಜು 2 ಲಕ್ಷ ರುಪಾಯಿಗಳನ್ನು ಖರ್ಚು ಮಾಡಿದರೂ ಪ್ರಯೋಜನವಾಗಲಿಲ್ಲ. ಈಗ, ನಾನು ಮಾತ್ರೆಗಳನ್ನು ಸೇವಿಸಬಾರದೆಂದು ತೀರ್ಮಾನಿಸಿ, ಸಸ್ಯಾಹಾರಿಯಾಗಲು ನಿರ್ಧರಿಸಿದ್ದೇನೆ. ಇವೆಲ್ಲವೂ ಧ್ಯಾನದಿಂದಲೇ ಸಾಧ್ಯವೆಂದು ಪೂರ್ಣ ವಿಶ್ವಾಸದಿಂದ ನಂಬಿರುತ್ತೆನೆ.

 

ಧ್ಯಾನದ ಬಗ್ಗೆ ಮಾರ್ಗದರ್ಶನ ನೀಡಿದ ತಿರುಮಲ ಪಿರಮಿಡ್ ಧ್ಯಾನ ಕೇಂದ್ರದ ಶ್ರೀಮತಿ ಮತ್ತು ಶ್ರೀ ಎ ಚನ್ನಬಸಪ್ಪರವರಿಗೂ ಹಾಗೂ ಆತ್ಮಸಾಯಿ ಪಿರಮಿಡ್ ಧ್ಯಾನಕೇಂದ್ರ ಸಂಸ್ಥಾಪಕರಾದ ಕೂಡ್ಲಿಗಿಯ ಶ್ರೀಮತಿ ಮತ್ತು ಶ್ರೀ H.Y ತುರಾಯಿ, D.Y.S.P ಸಾಹೇಬರಿಗೂ, ನಾನು ತುಂಬಾ ಚಿರಋಣಿಯಾಗಿರುತ್ತೇನೆ. 2010 ನವೆಂಬರ್ 28ರಂದು, ತಿರುಮಲ ಪಿರಮಿಡ್ ಧ್ಯಾನ ಕೇಂದ್ರದ ಆವರಣದಲ್ಲಿ, ಶ್ರೀ ಪಿಪ್ಪಳ್ಳ ಪ್ರಸಾದ್‌ರಾವ್ ಅವರಿಂದ "ಸಂಗೀತ ಧ್ಯಾನ" ಕಾರ್ಯಕ್ರಮವು ಅದ್ಭುತವಾಗಿ ನೆರವೇರಿತು. ಪ್ರೇಕ್ಷಕರೆಲ್ಲರೂ ಸಂಗೀತ ಧ್ಯಾನದಿಂದ ಮೈಮರೆತು ತಲೆದೂಗಿದರು. ಧ್ಯಾನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದರು.  ಪ್ರತಿನಿತ್ಯ ತಪ್ಪದೆ, ದಯವಿಟ್ಟು ಎಲ್ಲರೂ ಧ್ಯಾನ ಮಾಡಿರಿ. ಧ್ಯಾನಿಗಳಾಗಿರಿ. ಧ್ಯಾನದಿಂದ ತಾಳ್ಮೆ, ಶಾಂತಿ, ಸಂಸ್ಕೃತಿ, ಆತ್ಮಶುದ್ಧಿ, ಜ್ಞಾಪಕಶಕ್ತಿ, ಮೋಕ್ಷ, ಆರೋಗ್ಯ ಎಲ್ಲವೂ ಲಭಿಸುತ್ತವೆ.

 

 S.K ಬಸವರಾಜ್
ಕೂಡ್ಲಿಗಿ
ಮೊಬೈಲ್ : +91 9986872856

Go to top