" ನನಗೇ ಅರಿವಿಲ್ಲದೆ ನಾನು ಸಂಪೂರ್ಣ ಸಸ್ಯಾಹಾರಿಯಾಗಿ ಬದಲಾದೆ "

 

ನನ್ನ ಹೆಸರು ಬಾಷಾ. ನಮ್ಮ ಊರು ‘ಆದೋನಿ’. ನಾನು 2011ರ ಮೇ ತಿಂಗಳಲ್ಲಿ, ಪಿರಮಿಡ್ ವ್ಯಾಲಿಯಲ್ಲಿ ಕೆಲಸ ಮಾಡುತ್ತಿರುವ ನಾಗೇಶ್‌ರವರ ಮೂಲಕ ಪಿರಮಿಡ್ ವ್ಯಾಲಿಗೆ ಬಂದು ‘ಡ್ರೈವರ್’ ಆಗಿ ಕೆಲಸ ಮಾಡುತ್ತಿದ್ದೇನೆ. ಹುಟ್ಟಿನಿಂದ ಮುಸ್ಲಿಂ ಆಗಿರುವುದರಿಂದ ಮಾಂಸಾಹಾರಿ ಆಗಿದ್ದೆ. ಅಷ್ಟೇ ಅಲ್ಲದೆ, ನನಗೆ ಅಸಹನೆ, ಕೋಪ ತುಂಬಾ ಇತ್ತು. ಆದ್ದರಿಂದ, ಎಲ್ಲರ ಜೊತೆ ಜಗಳವಾಡುತ್ತಾ ಕೋಪದಿಂದ ಇರುತ್ತಿದ್ದೆ. ವ್ಯಾಲಿಗೆ ಬಂದನಂತರ ಸೀನಿಯರ್ ಪಿರಮಿಡ್ ಮಾಸರ್‌ಗಳ ಸಲಹೆಯಂತೆ ನಾನು ಧ್ಯಾನ ಕಲಿತು ಧ್ಯಾನ ಮಾಡಲಾರಂಭಿಸಿದ್ದೇನೆ. ನನ್ನಗೇ ಅರಿವಿಲ್ಲದೆ ನಾನು ಸಂಪೂರ್ಣ ಸಸ್ಯಾಹಾರಿಯಾಗಿ ಬದಲಾದೆ. ಧ್ಯಾನ ಸಾಧನೆ ಆರಂಭಿಸಿದನಂತರ ನನ್ನಲ್ಲಿ ಅಸಹನೆಯ ಸ್ಥಾನದಲ್ಲಿ ಸಹನೆ ಬಂದಿದೆ. ಕೋಪ ಹೋಗಿ ಶಾಂತಿ ನನ್ನಲ್ಲಿ ಆವರಿಸಿಕೊಂಡಿದೆ. ವ್ಯಾಲಿಯ ಸಿಬ್ಬಂದಿ ಯಾವ ಸಮಯದಲ್ಲಿ ಕರೆದರೂ ಅರ್ಥರಾತ್ರಿ ಆದರೂ ಎಲ್ಲರ ಸಂತೃಪ್ತಿಗಾಗಿ ನನ್ನ ಸೇವೆಯನ್ನು ಎಲ್ಲಕಾಲಗಳಲ್ಲಿ ಎಲ್ಲ ವ್ಯವಸ್ಥೆಗಳಲ್ಲಿಯೂ ನೆರವೇರಿಸುತ್ತಿದ್ದೇನೆ.

 

ನಮ್ಮ ಗ್ರಾಮದ ಪ್ರಜೆಗಳು ನನ್ನ ಸಹನೆಯನ್ನು, ಶಾಂತಿಯನ್ನು ಗಮನಿಸಿ ತುಂಬಾ ಸಂಭ್ರಮಾಶ್ಚರ್ಯಗಳಿಗೆ ಒಳಗಾಗುತ್ತಿದ್ದಾರೆ. ಹಿಂದೆ ಸದಾ ಎಲ್ಲರ ಜೊತೆಯಲ್ಲೂ ಜಗಳವಾಡುತ್ತಿದ್ದ ನಾನು ಇಂದು ಇಷ್ಟೊಂದು ಶಾಂತ ಸ್ವಭಾವದವನಾಗಿರುವುದು ನನಗೇ ಆಚ್ಚರಿಯ ವಿಷಯವಾಗಿದೆ. ಇದೆಲ್ಲಾ ಸಸ್ಯಾಹಾರ ಮತ್ತು ಧ್ಯಾನ ಸಾಧನೆಯಿಂದ ಉಂಟಾದ ಪ್ರಯೋಜನಗಳು. ನನ್ನಲ್ಲಿ ಆಗಿರುವ ಈ ಬದಲಾವಣೆಗೆ ನಾನು ತುಂಬಾ ಸಂತೃಪ್ತಿಯನ್ನು ಹೊಂದಿದ್ದೇನೆ.

 

ಈ ನಡುವೆ ನನಗೆ ಪತ್ರೀಜಿ ಅವರನ್ನು ಕಾರ್‌ನಲ್ಲಿ ಹತ್ತಿಸಿಕೊಂಡು ಕರ್ನೂಲ್‌ಗೆ ಹೋಗುವ ಮಹಾಭಾಗ್ಯ ಸಿಕ್ಕಿತು. ಅವರ ಜೊತೆ ಪ್ರಯಾಣಿಸುತ್ತಾ ಅವರು ಹೇಳಿದ ಅನೇಕ ಒಳ್ಳೆಯ ವಿಷಯಗಳನ್ನು ತಿಳಿದುಕೊಂಡು ನನ್ನನ್ನು ನಾನು ಇನ್ನೂ ಹೆಚ್ಚಾಗಿ ಬದಲಾಯಿಸಿಕೊಂಡೆ. ಅವರ ಜೊತೆ ಪ್ರಯಾಣಿಸುತ್ತಿರುವಾಗ ನನಗೆ ಸ್ವಲ್ಪ ಭಯವಾಗುತ್ತಿತ್ತು. ಆದರೆ, ಅವರು ನನ್ನನ್ನು ಒಬ್ಬ ಸ್ನೇಹಿತನಂತೆ ಭಾವಿಸಿ ತಮಾಷೆಯಿಂದ ಅನೇಕ ವಿಷಯಗಳನ್ನು ತಿಳಿಸಿಕೊಟ್ಟರು. ನಾನು ಹುಟ್ಟಿನಿಂದ ಮುಸ್ಲಿಂ ಆದರೂ ಪಿರಮಿಡ್ ವ್ಯಾಲಿಯಲ್ಲಿ ಯಾವರೀತಿಯ ಬೇಧ-ಭಾವನೆ ತೋರಿಸದೆ ನನ್ನನ್ನು ತುಂಬಾ ಆದರದಿಂದ ನೋಡಿಕೊಳ್ಳುತ್ತಿದ್ದಾರೆ.

 

ಮತ ಅಂತ್ಯವಾದೂಡನೆ ಆಧ್ಯಾತ್ಮಿಕತೆ ಪ್ರಾರಂಭವಾಗುತ್ತದೆ ಎನ್ನುವ ಸತ್ಯವನ್ನು ಅರಿತ ಪಿರಮಿಡ್ ಮಾಸರ್‌ಗಳ ಸ್ನೇಹ, ಸೌರಭಗಳಿಂದ ನಾನು ತುಂಬಾ ಆನಂದದಿಂದ ಇದ್ದೇನೆ. ಮನಸಾ-ವಾಚ-ಕರ್ಮಣ ನನ್ನ ಸೇವೆಗಳನ್ನು ಪಿರಮಿಡ್ ವ್ಯಾಲಿಗೆ ಮುಂದುವರಿಸುತ್ತೇನೆಂದು ಭಾಷೆ ಕೊಡುತ್ತಿದ್ದೇನೆ. ನನ್ನಲ್ಲಿ ಈ ಬದಲಾವಣೆಗೆ ಕಾರಣಕರ್ತರಾದ ಬ್ರಹ್ಮರ್ಷಿ ಪತ್ರೀಜಿ ಅವರಿಗೆ ಮತ್ತು ಪಿರಮಿಡ್ ವ್ಯಾಲಿಯ ಸಿಬ್ಬಂದಿ ವರ್ಗದವರೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ.

 

ಬಾಷಾ
ವಾಹನ ಚಾಲಕ
ಪಿರಮಿಡ್ ವ್ಯಾಲಿ, ಬೆಂಗಳೂರು

Go to top