" ಪಿರಮಿಡ್ ಸ್ಪಿರಿಚ್ಯುವಲ್ ಟ್ರಸ್ಟ್‌ಗಾಗಿ ನನ್ನ ಜೀವನ ಪರ್ಯಂತ ಸೇವೆ ಸಲ್ಲಿಸುತ್ತೇನೆ "

 

 

ನಾನು ಜನವರಿ 24, 2005 ರಂದು, JP.ನಗರ್‌ದಲ್ಲಿದ್ದ ಪಿರಮಿಡ್ ವ್ಯಾಲಿ ಕಚೇರಿಗೆ ಉದ್ಯೋಗ ನಿಮಿತ್ತ ಬಂದೆ. ಆದರೆ, ಈ ಕೆಲಸದಲ್ಲಿ ಮುಂದೆ ಶಾಶ್ವತವಾಗಿ ನೆಲೆಸುವ ಯೋಚನೆ ಇರಲಿಲ್ಲ. 45 ದಿನಗಳ ನಂತರ, ನಮ್ಮ ಸ್ವಗ್ರಾಮಕ್ಕೆ ಹಿಂತಿರುಗಿದೆ. ಅಲ್ಲಿ ಹಿರಿಯ ಪಿರಮಿಡ್ ಮಾಸ್ಟರ್‌ಗಳ ಜೊತೆ ನಡೆದ ಮಾತುಕತೆಯ ನಂತರ, ನಾನು ಪಿರಮಿಡ್ ಸ್ಪಿರಿಚ್ಯುವಲ್ ಟ್ರಸ್ಟ್‌ಗಾಗಿ ನನ್ನ ಜೀವನ ಪರ್ಯಂತ ಸೇವೆ ಸಲ್ಲಿಸಬೇಕೆಂದು ನಿಶ್ಚಯಿಸಿದೆ.

 

ಮೊದಲಿಗೆ ಶ್ರೀ I.V ರೆಡ್ಡಿ, ಶ್ರೀ P.ಚಂದ್ರಶೇಖರ್ ಮತ್ತು ಶ್ರೀ ಪಾಲ್ ವಿಜಯಕುಮಾರ್ ಇವರ ಬಳಿ ಕೆಲಸ ಕಾರ್ಯಗಳನ್ನು ಮಾಡಿ ಅನುಭವವನ್ನು ಪಡೆದೆ. ಅನಂತರ ಕೆಲಕಾಲ ಶ್ರೀ I.V.ರೆಡ್ಡಿ ಮತ್ತು ಶ್ರೀ ಶಿವರಾಮಪ್ಪ ಅವರ ಮಾರ್ಗದರ್ಶನದಲ್ಲಿ ನನ್ನ ಕಾರ್ಯ ಮುಂದುವರೆಸಿದೆ. ಕಳೆದ 2 ವರ್ಷಗಳಿಂದ ಶ್ರೀ P.ಚಂದ್ರಶೇಖರ್ ಮತ್ತು ಶ್ರೀ M.ಮುರಳಿ ಅವರು ವ್ಯಾಲಿಯ ಎಲ್ಲಾ ಜವಾಬ್ದಾರಿಯನ್ನು ವಹಿಸಿಕೊಂಡರು. 2010 ನಂತರ ಕಚೇರಿಯೊಂದಿಗೆ ನಾನು ಸಹ ವ್ಯಾಲಿಯಲ್ಲಿ ನನ್ನ ಕುಟುಂಬ ಸಮೇತ ಬಂದು ನೆಲೆಸಿದ್ದೇನೆ. 

 

ಈ ಎಲ್ಲಾ ಮಾಸ್ಟರ್‌ಗಳ ಜೊತೆ ಕೆಲಸ ಮಾಡಿ ನಾನು ಅನೇಕ ಹೊಸ ವಿಚಾರಗಳನ್ನು ಕಲಿತೆ. ಅವರ ಶೈಲಿಯಲ್ಲಿ ವೈವಿಧ್ಯತೆ ಮತ್ತು ಪ್ರತ್ಯೇಕತೆಯನ್ನು ನಾನು ಗಮನಿಸಿದೆ. ಇವರ ನಿರ್ವಾಹಣಾ ಶೈಲಿಯಲ್ಲಿ ಆಧ್ಯಾತ್ಮಿಕತೆ ಕೂಡಾ ಇತ್ತು. ನನ್ನ ಕೆಲಸದ ಅನುಭವಗಳ ಜೊತೆ ಆಧ್ಯಾತ್ಮಿಕತೆ ಕೂಡಾ ಬೆಳೆಯುತ್ತಿತ್ತು.

 

ಪಿರಮಿಡ್ ವ್ಯಾಲಿಗೆ ಸ್ಥಳಾಂತರಗೊಂಡ ನಂತರ ನಾನು ಆಧ್ಯಾತ್ಮಿಕವಾಗಿ ಹೆಚ್ಚು ಅನುಭವಗಳನ್ನು ಪಡೆದೆ. ನನ್ನ ನಿತ್ಯ ಧ್ಯಾನದಲ್ಲಿ ಸಹ ಹೆಚ್ಚಿನ ಅನುಭವಗಳನ್ನು ಪಡೆದೆ. ಕಳೆದ 8 ವರ್ಷಗಳಿಂದ ವ್ಯಾಲಿಯ ಅಭಿವೃದ್ಧಿಯನ್ನು ನೋಡುತ್ತಿದ್ದೇನೆ. ಒಂದು ಪುಷ್ಪದಂತೆ ಅದು ಬೆಳೆದಿದೆ. ಇಂತಹ ದೂರದ ಬೆಟ್ಟಗುಡ್ಡ ಪ್ರದೇಶದಲ್ಲೂ ನಾನು ಅಭಿವೃದ್ಧಿಯನ್ನು ಅನುಭವಿಸಿದ್ದೇನೆ.

 

ಭರತ್ ಚಂದ್ರ
ಪಿರಮಿಡ್ ವ್ಯಾಲಿ
 ಬೆಂಗಳೂರು

Go to top