" ನಾನು ಹ್ಯಾಪಿ ಮಾಸ್ಟರ್‌ "

 

ನನ್ನ ಹೆಸರು ಭುವನ್. ನನಗೆ 9 ವರ್ಷ. ನಾನು 2 ವರ್ಷಗಳಿಂದ ಧ್ಯಾನ ಮಾಡುತ್ತಿದ್ದೇನೆ.

 

ಧ್ಯಾನಕ್ಕೆ ಮುಂಚೆ ನನಗೆ ಜ್ವರ, ಗಂಟಲನೋವು, ನೆಗಡಿ ತುಂಬಾ ಬರುತ್ತಿತ್ತು. ವಾರಕ್ಕೆ ಎರಡು ಬಾರಿ ಡಾಕ್ಟರ್ ಹತ್ತಿರ ಹೋಗುತ್ತಿದ್ದೆ. ಈಗ ಯಾವುದೇ ಬಂದರೂ ಧ್ಯಾನದಿಂದ ವಾಸಿಮಾಡಿಕೊಳ್ಳುತ್ತೇನೆ. ಔಷಧಿ ಬಿಟ್ಟು ತುಂಬಾ ದಿನವಾಯಿತು. ಧ್ಯಾನವೇ ನನ್ನ ಔಷಧಿ.

 

ದಿನಾ ಓದುವ ಮುಂಚೆ 10 ನಿಮಿಷಗಳು ಧ್ಯಾನ ಮಾಡುತ್ತೇನೆ. ಓದಿದ ನಂತರ 5 ನಿಮಿಷಗಳು ಧ್ಯಾನ ಮಾಡಿ, ಓದಿದ್ದನ್ನು ಮನನ ಮಾಡಿಕೊಳ್ಳುತ್ತೇನೆ. ಇದರಿಂದ ನನ್ನ ಓದಿನ ಸಮಯ ಕಡಿಮೆಯಾಗಿದೆ ಮತ್ತು ಆಟದ ಸಮಯ ಹೆಚ್ಚಾಗಿದೆ.

 

ಧ್ಯಾನಕ್ಕೆ ಮುಂಚೆ ಬೆಳ್ಳುಳ್ಳಿ ತಿನ್ನುತ್ತಿದ್ದೆ. ಈಗ ತಿನ್ನುವುದಿಲ್ಲ, ಏಕೆಂದರೆ, 'ಆರಾ’ದಲ್ಲಿ holes ಬರುತ್ತದೆ. ಹೊರಗಡೆ ತಿನ್ನುವ ಮುಂಚೆ ಬೆಳ್ಳುಳ್ಳಿ ಇದೆಯ ಇಲ್ಲವಾ ಎಂದು ಕೇಳಿ ತಿನ್ನುತ್ತೇನೆ. ಊಟ ತಿನ್ನದೇ ಎಷ್ಟು ದಿನ ಬೇಕಾದರೂ ಇರುತ್ತೇನೆ. ನನಗೆ ಹಣ್ಣು ಮತ್ತು ಹಣ್ಣಿನ ಜ್ಯೂಸ್ ಇದ್ದರೆ ಸಾಕು.

 

ಧ್ಯಾನದಲ್ಲಿ ನನಗೆ ನದಿ, ಜಲಾಶಯ, ಪಶು-ಪಕ್ಷಿಗಳು, ಕಾಮನಬಿಲ್ಲು ಕಾಣುತ್ತದೆ. ನನಗೆ ಪಿರಮಿಡ್ ವ್ಯಾಲಿ ಎಂದರೆ ತುಂಬಾ ಇಷ್ಟ. ರಜೆಯಲ್ಲಿ ಅಮ್ಮನ ಜೊತೆ ಪಿರಮಿಡ್ ವ್ಯಾಲಿಗೆ ಹೋಗುತ್ತೇನೆ. ನಮ್ಮ ಮನೆಯಲ್ಲಿ ನಾನು, ಅಪ್ಪ, ಅಮ್ಮ ಎಲ್ಲರೂ ಧ್ಯಾನ ಮಾಡುತ್ತೇವೆ. ನಮ್ಮದು ಧ್ಯಾನದ ಕುಟುಂಬ. ನೀವು ಧ್ಯಾನ ಮಾಡಿ ಧ್ಯಾನದ ಕುಟುಂಬಿಗಳಾಗಿ. ನಾನು ಯಾವಾಗಲೂ ಲವಲವಿಕೆಯಿಂದಿರುತ್ತೇನೆ. ನಾನು ಹ್ಯಾಪಿ ಮಾಸ್ಟರ್. ನೀವು ಧ್ಯಾನ ಮಾಡಿ, ಹ್ಯಾಪಿ ಮಾಸ್ಟರ್ ಆಗಿ.

 

ಭುವನ್
ಬೆಂಗಳೂರು

ಫೋನ್ : +91 9945120102

Go to top