" ಪತ್ರೀಜಿಯವರ ಜೊತೆ ನನ್ನ ಅನುಭವ "

 

 

ನನ್ನ ಹೆಸರು ಬೃಂದ. ನಮ್ಮದು ಬೆಂಗಳೂರು. ನಾನು 4 ವರ್ಷಗಳಿಂದ ಧ್ಯಾನ ಮಾಡುತ್ತಿದ್ದೇನೆ. ಆದರೆ, ಎಲ್ಲರು ಹೇಳೋ ಹಾಗೆ ನನಗೆ ಯಾವುದೇ ಧ್ಯಾನಾನುಭವ ಆಗಲಿಲ್ಲ ಅಂದುಕೊಳುತ್ತಿದ್ದೆ. ಆದರೆ, ಒಂದು ದಿವಸ ಮಧ್ಯಾನ 3 ಗಂಟೆಗೆ ಧ್ಯಾನಕ್ಕೆ ಕುಳಿತಾಗ ಒಂದು ಅನುಭವ ಆಯಿತು. 20 ದಿನಗಳ ಹಿಂದೆ ನನ್ನ ಮೊದಲನೆ ಸೊಸೆ ಜ್ಯೋತಿಗೆ ಗಂಡು ಮಗು ಆಗಿದೆ. ಅದನ್ನು ಎತ್ತಿಕೊಂಡು ಆಡಿಸುತಿದ್ದಾಗ, ಮಗು ಕೈ ಜಾರಿ ಕೆಳಗೆ ಬಿತ್ತು. ಭಯದಿಂದ ಚೇರಿಬಿಟ್ಟೆ. ಗಾಭರಿಯಿಂದ ಮಗುವನ್ನು ಎತ್ತಿಕೊಂಡು ಏನಾಗಿದೆಯೊ ಎಂದು ಮೈ ಕೈ ಎಲ್ಲಾ ನೋಡಿದೆ. ಅಷ್ಪರಲ್ಲಿ ಪತ್ರಿಸಾರ್ ಬಂದು ಏನೂ ಆಗಿಲ್ಲ. ಹೆದರ ಬೇಡ ಅಂತ ಮಗು ತಲೆ ಮೇಲೆ ಕೈ ಇಟ್ಟು ಹೇಳಿದರು.

 

ಬೃಂದ
ಬೆಂಗಳೂರು

Go to top