" ಧ್ಯಾನ ಮಾಡುವುದರಿಂದ ನಮ್ಮ ದೇಹದಲ್ಲಿರುವ ರಕ್ತಕಣಗಳು ಪುನಶ್ಚೇತನಗೊಳ್ಳುತ್ತವೆ "

 

 

ನನ್ನ ಹೆಸರು ಚಂದನ್ ಭೀಷ್ಮ J. ನಾನು ದ್ವಿತೀಯ B.Com ಪದವಿ ವ್ಯಾಸಂಗ ಮಾಡುತ್ತಿದ್ದೇನೆ. ನನ್ನ ತಂದೆ K.C ಗುರುರಾಜ್ ಸಾವಯವ ಕೃಷಿಕರು. ತಾಯಿ ರೇಣುಕಾ, ತಂಗಿ ಭಾವನ. ನಾನು ಒಂಭತ್ತನೆಯ ತರಗತಿಯಲ್ಲಿ ಓದುತ್ತಿರುವಾಗ ದಾವಣಗೆರೆಯಲ್ಲಿರುವ ವನಿತಾ ಸಮಾಜದಲ್ಲಿ 41 ದಿನಗಳ ಕಾಲ ಪಿರಮಿಡ್ ಧ್ಯಾನ ಕಾರ್ಯಕ್ರಮ ನಡೆಯಿತು. ಅಲ್ಲಿಗೆ ನಾವು ಹೋಗಿ 15 ದಿನಗಳಕಾಲ ಮಂಡಲ ಧ್ಯಾನವನ್ನು ಮಾಡಿದೆವು. ಅಲ್ಲಿ ನಮಗೆ ಶ್ರೀ ಕೃಷ್ಣಮೂರ್ತಿಯವರ ಸಹಯೋಗದೊಂದಿಗೆ ಗುರುರಾಜ್‌ರಾವ್‌ರವರು ಧ್ಯಾನವನ್ನು ಹೇಳಿಕೊಟ್ಟರು. ಆಗ 2010 ಜನವರಿ 2 ರಂದು ಪತ್ರೀಜಿಯವರು ಬಂದಿದ್ದರು, ಧ್ಯಾನ ಕಾರ್ಯಕ್ರಮವು ಶ್ರೀ ತರಳಬಾಳು ಮರುಳಸಿದ್ಧೇಶ್ವರ ಮಂಟಪದಲ್ಲಿ ನಡೆಯಿತು. ಅಲ್ಲಿಂದ ಇಲ್ಲಿಯವರೆಗೆ ನಾನು ಮತ್ತು ನನ್ನ ತಂದೆ ತಾಯಿಯವರು ಪ್ರತಿದಿನ ಧ್ಯಾನವನ್ನು ಮಾಡುತ್ತಿದ್ದೇವೆ. ನಾನು ಪ್ರತಿನಿತ್ಯ ಧ್ಯಾನವನ್ನು ಮಾಡುತ್ತಾ ಬಂದಿದ್ದೇನೆ. ನನಗೆ ಯಾವುದೇ ಕಾಯಿಲೆಯು ಬಂದಿಲ್ಲ ನಾನು 3 ವರ್ಷದಿಂದ ಯಾವುದೇ ಔಷಧಿಯನ್ನು ತೆಗೆದುಕೊಂಡಿಲ್ಲ. ನಾವು ಧ್ಯಾನವನ್ನು ಮಾಡುತ್ತಿರುವಾಗ ಉಸಿರನ್ನು ಗಮನಿಸುತ್ತಾ ಸ್ವಲ್ಪ ಸಮಯದ ನಂತರ ನಾನು ಆಲೋಚನಾರಹಿತ ಸ್ಥಿತಿಗೆ ಹೋಗುತ್ತೇನೆ ಆಗ ಬ್ರಹ್ಮರಂದ್ರದ ಮೂಲಕ ವಿಶ್ವಮಯ ಪ್ರಾಣಶಕ್ತಿಯು ದೇಹದ ಒಳಗೆ ಪ್ರವೇಶಿಸುವ ಅನುಭವವಾಗುತ್ತದೆ. ನನಗೆ ಓದಲು ತುಂಬಾ ಅನುಕೂಲವಾಗುತ್ತಿದೆ. ಮತ್ತೆ ಧ್ಯಾನವನ್ನು ಮಾಡುವುದರಿಂದ ನನಗೆ ಏಕಾಗ್ರತೆ ಹೆಚ್ಚಾಗಿದೆ. ಮತ್ತು ಎಲ್ಲಾ ಕೆಲಸವನ್ನು ಸುಲಭವಾಗಿ ಮಾಡಲು ಅನುಕೂಲವಾಗುತ್ತಿದೆ. ನಾವು ಧ್ಯಾನವನ್ನು ಮಾಡುವುದರಿಂದ ನಮ್ಮ ದೇಹದಲ್ಲಿರುವ ರಕ್ತಕಣಗಳು ಪುನಶ್ಚೇತನಗೊಳ್ಳುತ್ತದೆ.

 

ನಾನು ನನ್ನ ಸ್ನೇಹಿತರಿಗೂ ಸಹ ಧ್ಯಾನದ ಬಗ್ಗೆ ಹೇಳುತ್ತೇನೆ ಮತ್ತು ನಮ್ಮ ಮನೆಗೆ ಬಂದ ಅತಿಥಿಗಳಿಗೂ ಸಹ ಧ್ಯಾನದ ಬಗ್ಗೆ ಹೇಳುತ್ತೇನೆ. ಇದರಿಂದ ನನ್ನ ಮನಸ್ಸಿಗೆ ತುಂಬಾ ಸಂತೋಷವಾಗುತ್ತದೆ.

 

ನಾನು ನನ್ನ ತಂದೆ ತಾಯಿ ಜೊತೆ ಧ್ಯಾನ ಮಹಾಚಕ್ರ - 2011 ವಿಶಾಖಪಟ್ಟಣದಲ್ಲಿ ನಡೆದ ಸ್ಥಳಕ್ಕೆ ಹೋಗಿ ಅಲ್ಲಿ 3 ದಿನಗಳಕಾಲ ಧ್ಯಾನವನ್ನು ಮಾಡಿ ಅದರ ಸಂಪೂರ್ಣ ಅನುಭವವನ್ನು ಪಡೆದುಕೊಂಡೆವು. ಧ್ಯಾನದಿಂದ ನಾವು ಯಾವುದೇ ಕಾಯಿಲೆಗಳನ್ನಾದರೂ ನಿವಾರಿಸಿಕೊಳ್ಳಬಹುದು ಎಂಬುವುದಕ್ಕೆ ಉದಾಹರಣೆಯಾಗಿ: ನನ್ನ ಅಜ್ಜಿ ಶ್ರೀಮತಿ ಗಂಗಮ್ಮ ಅವರಿಗೆ 75 ವರ್ಷಗಳು ಆಗಿವೆ. ಅವರಿಗೆ ಆಸ್ತಮಾ ರೋಗವು ತೀವ್ರವಾಗಿ ಕಾಡುತ್ತಿತ್ತು. ಉಸಿರಾಡುವುದಕ್ಕೆ ತುಂಬಾ ತೊಂದರೆ ಆಗುತ್ತಿತ್ತು. ಅವರು ಸತತ 10 ತಿಂಗಳ ಕಾಲ ಪ್ರತಿದಿನ 1 ಗಂಟೆಗಳ ಕಾಲ ಧ್ಯಾನವನ್ನು ಮಾಡಿದರು ಅವರಿಗೆ ಈಗ ಆಸ್ತಮಾ ಕಾಯಿಲೆ ಹೊರಟುಹೋಗಿದೆ. ಹೀಗೆ ಧ್ಯಾನದಿಂದ ಎಲ್ಲಾ ಕಾಯಿಲೆಗಳು ಗುಣಪಡಿಸಿಕೊಳ್ಳಬಹುದು.

 

ಎಲ್ಲರೂ ಧ್ಯಾನವನ್ನು ಮಾಡಿ, ಎಲ್ಲರು ಸಸ್ಯಾಹಾರಿ ಊಟವನ್ನು ಸೇವಿಸಿ, ಆರೋಗ್ಯದಿಂದ ಜೀವಿಸಿ ಮತ್ತು ನಾವು ಎಲ್ಲರೂ ಸೇರಿ ಈ ಜಗತ್ತನ್ನು ಧ್ಯಾನ ಜಗತ್ತನ್ನಾಗಿ ಮಾಡುವುದಕ್ಕೆ ಸಹಕರಿಸೋಣ. ಜೈ ಧ್ಯಾನ ಜಗತ್!

 

ಚಂದನ್ ಭೀಷ್ಮ
ದಾವಣಗೆರೆ

Go to top