" ನನ್ನಲ್ಲಿ ಅಡಗಿಕೊಂಡಿರುವ ಸೇವಾ ಮನೋಭಾವನೆಯನ್ನು ಬೆಳಕಿಗೆ ತಂದಿದ್ದು ಪಿರಮಿಡ್ ವ್ಯಾಲಿ "

 

ನನ್ನ ಹೆಸರು ಚಂದ್ರಮೋಹನ್. ಆನಾಪಾನಸತಿ ಧ್ಯಾನವನ್ನು 2000 ಇಸವಿಯಲ್ಲಿ ಕಲಿತಿದ್ದೇನೆ. 2004 ರಲ್ಲಿ ಮೆಗಾ ಪಿರಮಿಡ್ ಬರುವ ವಿಷಯ ನಾನು ಹೈದರಾಬಾದ್‌ನಲ್ಲಿ M.B.A ಓದುತ್ತಿದ್ದಾಗ ತಿಳಿಯಿತು. ಮೆಗಾ ಪಿರಮಿಡ್‌ನ್ನು ಯಾವತ್ತು ನೋಡುವೆನೋ ಎನ್ನುವ ಕುತೂಹಲ ನನ್ನಲ್ಲಿತ್ತು. 2007ರಲ್ಲಿ ಬೆಂಗಳೂರಿನಲ್ಲಿ ಕೆಲಸ ಸಿಗುವ ಮೂಲಕ ಈ ಬೃಹತ್ ಪಿರಮಿಡ್ ನೋಡುವ ಅದ್ಭುತವಾದ ಅವಕಾಶ ನನಗೆ ಒದಗಿಬಂತು.

 

ಒಬ್ಬ ಸಾಮಾನ್ಯ ಮಾಸ್ಟರ್ ಆಗಿ ಭೇಟಿ ನೀಡುವ ಮೂಲಕ, ಇಲ್ಲಿನ ಪ್ರಕೃತಿಯ ಆಹ್ಲಾದಕರ ವಾತಾವರಣ ನೋಡಿ, ಇಲ್ಲಿನ ಮಾಸ್ಟರ್‌ಗಳು ಮಾಡುವ ಸೇವೆ ನೋಡಿದ ಮೇಲೆ ನನ್ನ ಸ್ವಂತ ಮನೆಯಲ್ಲಿರುವ ಅನುಭವವಾಯಿತು. ವ್ಯಾಲಿಯಲ್ಲಿ ಅನೇಕ ಮಾಸ್ಟರ್‌ಗಳು ಮತ್ತು ವಾಲಂಟಿಯರ್‌ಗಳು ಮಾಡುವ ಸೇವೆಯನ್ನು ನೋಡಿ ನನಗೂ ಸೇವೆ ಮಾಡುವ ಮನೋಭಾವನೆಯು ಬೀಜರೂಪದಲ್ಲಿ ಮೊಳಕೆಯೊಡೆಯಿತು.  ಆ ಮೂಲಕ ವ್ಯಾಲಿಯಲ್ಲಿ ಜರುಗಿದ ಬುದ್ಧಪೂರ್ಣಿಮೆ, GCSS ಕಾರ್ಯಕ್ರಮಗಳಲ್ಲಿ ಸೇವೆ ಮಾಡುವ ಅದ್ಭುತವಾದ ಅವಕಾಶ ನನಗೆ ಒದಗಿಬಂತು. ಹಾಗೆಯೇ, ಹಂತ ಹಂತವಾಗಿ ಪ್ರತಿಯೊಬ್ಬರನ್ನು ಪುನಃಶ್ಚೇತನಗೊಳಿಸುತ್ತಾ ಮತ್ತು ವಾಲಂಟಿಯರ್‌ಗಳನ್ನು ಸಿದ್ಧಗೊಳಿಸುವ ಕೌಶಲ್ಯ ಬೆಳೆಸಿಕೊಳ್ಳುವ ಅವಕಾಶ ಒದಗಿಬಂತು. ನನ್ನಲ್ಲಿ ಅಡಗಿಕೊಂಡಿರುವ ಸೇವಾ ಮನೋಭಾವನೆಯನ್ನು ಬೆಳಕಿಗೆ ತಂದಿದ್ದು ಈ ಪಿರಮಿಡ್ ವ್ಯಾಲಿಯೇ.

 

ಒಬ್ಬ ಬುದ್ಧನಾಗಿ ಪರಿವರ್ತನೆಯಾಗಲು ಹಾಗೂ ನನ್ನಲ್ಲಿರುವ ಸೇವಾ ಮನೋಭಾವ ಕೌಶಲ್ಯವನ್ನು ಬೆಳಕಿಗೆ ತರಲು ಬ್ರಹ್ಮರ್ಷಿ ಪತ್ರೀಜಿಯವರೇ ಮುಖ್ಯ ಕಾರಣ. ಅವರು ನನಗೆ ಮತ್ತೊಂದು ಅವಕಾಶ ಒದಗಿಸಿಕೊಟ್ಟಿದ್ದಾರೆ. ನನ್ನನ್ನು ಪಿರಮಿಡ್ ವ್ಯಾಲಿಯಲ್ಲಿನ ಕಾರ್ಯಕ್ರಮಗಳನ್ನು ಸಂಘಟಿಸುವ ಮತ್ತು ಪ್ರೋತ್ಸಾಹಿಸುವ ಹೊಣೆಗಾರಿಕೆಯನ್ನು ನೀಡಿದ್ದಾರೆ. ಡೈರೆಕ್ಟರ್ ಪ್ರೋಗ್ರಾಮ್ಸ್ ಅಂಡ್ ಪ್ರೊಮೋಷನ್ಸ್ ಆಗಿ ನೇಮಕ ಮಾಡಿದ್ದಾರೆ.  ಇಲ್ಲಿ ಪ್ರತಿಯೊಬ್ಬ ಸಿಬ್ಬಂದಿಯನ್ನು ಪುನಃಶ್ಚೇತನಗೊಳಿಸುತ್ತಾ ಹಾಗೂ ಉತ್ತೇಜಿಸುತ್ತಾ, ನನ್ನನ್ನು ನಾನು ಸಂಪೂರ್ಣ ಬುದ್ಧನಾಗಿ ಪರಿವರ್ತನೆಗೊಳ್ಳಲು ಟ್ರಸ್ಟಿ ಮತ್ತು ಸಿಬ್ಬಂದಿ ವರ್ಗದವರು ನನಗೆ ಎಲ್ಲಾ ತರಹದ ಸಹಾಯ ಹಸ್ತ ನೀಡಿದ್ದಾರೆ, ಆ ಮೂಲಕ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಲು ಕಾರಣರಾಗಿದ್ದಾರೆ.  ಶ್ರೀ ಚಂದ್ರಶೇಖರ್‌ರವರು ಮತ್ತು ಶ್ರೀ ಪ್ರಸಾದ್‌ರವರು ವ್ಯಾಲಿ ಚಟುವಟಿಕೆಗಳು ನನಗೆ ಅರ್ಥೈಸುವಲ್ಲಿ ತುಂಬಾ ಸಹಾಯ ಮಾಡಿದ್ದಾರೆ. ಹಾಗೆಯೇ, ನನಗೆ ಎಲ್ಲಾ ತರಹದ ಮಾರ್ಗದರ್ಶನವನ್ನು ನೀಡಿರುವ ಬ್ರಹ್ಮರ್ಷಿ ಪತ್ರೀಜಿಯವರು ನನ್ನ ಹಿಂದೆ ಇದ್ದು, ನನ್ನ ಮುಖಾಂತರ ಎಲ್ಲಾ ಕೆಲಸಗಳನ್ನು ಮಾಡಿಸಿದ್ದಾರೆ.

 

ಈ ಮೂಲಕ ನನ್ನಲ್ಲಿ ಶಾಂತಿ, ಸಹನೆ, ಪ್ರತಿಯೊಬ್ಬರ ಜೊತೆ ಬೆರೆಯುವ ಕಲೆ, ರಾತ್ರಿ-ಹಗಲು ವ್ಯಾಲಿಯಲ್ಲಿ ಕೆಲಸ ಮಾಡುವುದು, ಶಕ್ತಿ ಹೀನನಾಗದೆ ಶಕ್ತಿಯುತನಾಗುತ್ತಾ ಪ್ರತಿದಿನದ ಕಾರ್ಯಕ್ರಮಗಳಲ್ಲಿ ತೊಡಗಲು ವ್ಯಾಲಿಯಲ್ಲಿರುವ ಅದ್ಭುತ ಆಧ್ಯಾತ್ಮಿಕ ಶಕ್ತಿಯೇ ಕಾರಣ.

 

ಚಂದ್ರಮೋಹನ್
ಪಿರಮಿಡ್ ವ್ಯಾಲಿ
ಬೆಂಗಳೂರು

Go to top