" ಕರ್ಮಸಿದ್ಧಾಂತವನ್ನು ತಿಳಿಸಿದ ಗುರುವು "

 

 

ನನ್ನ ಹೆಸರು ಚಂದ್ರಮೌಳಿ.

 

ನಾನು ಅಂಡಮಾನ್ ನಿವಾಸಿ. ವೃತ್ತಿಯಲ್ಲಿ ಟೀಚರ್ ಆಗಿ ಕೆಲಸ ಮಾಡುತ್ತಿರುವ ನಾನು 2002 ನಲ್ಲಿ ನನ್ನ ಪತ್ನಿ ಗಂಗಾಭವಾನಿಯಿಂದ ಧ್ಯಾನ ಕಲಿತುಕೊಂಡೆ. ಅನಂತರ Dr. G.K ಅವರಿಂದ ಆಧ್ಯಾತ್ಮಿಕ ಸತ್ಯಗಳನ್ನು ತಿಳಿದುಕೊಳ್ಳುತ್ತಾ ಧ್ಯಾನ ಸಾಧನೆ ಪ್ರಾರಂಭಿಸಿದೆ. ಆಧ್ಯಾತ್ಮಿಕ ಸತ್ಯಾನ್ವೇಷಣೆಗೆ ಮಾರ್ಗ ತೋರಿಸಲು... ನನ್ನ ಜೀವನದಲ್ಲಿ ನನಗೆ ಸಿಕ್ಕಿದ ಉತ್ತಮೋತ್ತಮ ಗುರುವು "ಬ್ರಹ್ಮರ್ಷಿ ಪತ್ರೀಜಿ".

 

ಪತ್ರೀಜಿಯವರನ್ನು ಮೊದಲನೆಯ ಬಾರಿ 2002 "ಅಂಡಮಾನ್" ನಲ್ಲಿ ನಡೆದ "ಧ್ಯಾನ ಜ್ಞಾನ ಬೋಧನೆ" ಕಾರ್ಯಕ್ರಮದಲ್ಲಿ ನಾನು ಭೇಟಿ ಆದೆ. ಕಾರ್ಯಕ್ರಮದ ನಂತರ ನಮ್ಮ ಮನೆಗೆ ಊಟಕ್ಕೆ ಬಂದ ಪತ್ರೀಜಿ.... ಆ ಕಾರ್ಯಕ್ರಮವನ್ನು ನಾನೇ ನಿರ್ವಹಿಸಿದ್ದಕ್ಕೆ ನನ್ನ ಹತ್ತಿರ ಬಂದು, ನನ್ನ ಭುಜದ ಮೇಲೆ ಕೈ ಹಾಕಿ ಚೆನ್ನಾಗಿದೆ , ಚೆನ್ನಾಗಿ ಹೇಳಿರುವೆ, ಹೀಗೆಯೇ ಮುಂದುವರಿಸು ಚೆನ್ನಾಗಿರುತ್ತದೆ" ಎಂದರು.

 

ಇವೇ... ಸಾರ್ ನನ್ನನ್ನು ಪ್ರೋತ್ಸಾಹಿಸುತ್ತಾ ಮಾತನಾಡಿದ ಮಾತುಗಳು.ಆಗ ನಾನು ಆ ಸ್ನೇಹಪೂರಿತ ಮಾರ್ಗದರ್ಶಕತ್ವವನ್ನು ಗುರ್ತಿಸಲಾಗದೇ ಹೋದರೂ... ಆ ಪ್ರೇಮಪೂರಿತ ಪ್ರೋತ್ಸಾಹವೇ ನನ್ನ ಜೀವನದಲ್ಲಿ ಅನೇಕಾನೇಕ ಬದಲಾವಣೆಗಳನ್ನು ತಂದು, ಈ ದಿನ ನನ್ನಲ್ಲಿ ಆಶ್ಚರ್ಯವನ್ನು ಉಂಟುಮಾಡುವ ಆಧ್ಯಾತ್ಮಿಕ ಉನ್ನತಿಯನ್ನು ತಂದುಕೊಟ್ಟಿದೆ. ಹೀಗೆ, ಅದ್ಭುತವಾದ, ಪ್ರೀತಿಯಿಂದ ಕೂಡಿದ ಮಾತುಗಳಿಂದ ನಮ್ಮ ಹೃದಯಗಳನ್ನು ಸ್ಪರ್ಶಿಸಿ... ನಮ್ಮನ್ನು ಸತ್ಯದ ಕಡೆ ನಡೆಸುವ ಪರಮಗುರುವು... "ಬ್ರಹ್ಮರ್ಷಿ ಪತ್ರೀಜಿ".

 

ಒಂದು ಬಾರಿ ಪತ್ರೀಜಿಯವರ ಜೊತೆ ಧ್ಯಾನ ಪ್ರಚಾರಕ್ಕೆ "ರಂಗತ್" ಗೆ ಹೋದಾಗ ಕ್ಲಾಸ್‌ನಲ್ಲಿ ಒಬ್ಬರು "ಕರ್ಮಸಿದ್ಧಾಂತ ಅಂದರೆ ಏನು ಸಾರ್?" ಎಂದರು. ಅದಕ್ಕೆ ಉತ್ತರ ನೀಡಲು ಸಾರ್... ಆ ಕಡೆ, ಈ ಕಡೆ ನೀಡುತ್ತಾ ಹಿಂದೆ ಕುಳಿತಿರುವ ನನ್ನನ್ನು ಹತ್ತಿರಕ್ಕೆ ಕರೆದು...ನಾನು ಏನು ಮಾಡುತ್ತೇನೆಯೋ ಹಾಗೆಯೇ ನೀನೂ ಸಹ ಮಾಡಬೇಕು ಎಂದರು.

 

ನಾನು "ಸರಿ" ಎನ್ನುವಷ್ಟರಲ್ಲೇ ... ನನ್ನ ಕೆನ್ನೆಯ ಮೇಲೆ ಜೋರಾಗಿ ಹೊಡೆದರು, ನನಗೆ ತುಂಬಾ ಅಯೋಮಯವಾಯಿತು. "ಏನಪ್ಪಾ ಇದು" ಎಂದುಕೊಳ್ಳುವಷ್ಟರಲ್ಲಿ... "ನಾನು ಏನು ಮಾಡಿದೆನೊ ನೀನು ಅದೇ ಮಾಡು" ಎಂದರು ಸಾರ್.

 

" ಒಬ್ಬ ಗುರುವು ಶಿಷ್ಯರ ಕೈಯಿಂದ ಹೊಡೆಸಿಕೊಳ್ಳುವುದು " ಎನ್ನುವುದು ನನ್ನ ಜೀವನದಲ್ಲಿ ಮೊದಲನೆಯ ಆಶ್ಚರ್ಯಕರವಾದ ವಿಷಯ. ಆ ಮಾತು ಕೇಳಿದ ತಕ್ಷಣ ನನಗೆ ಏನು ಮಾಡಬೇಕೊ ತೋಚಲಿಲ್ಲ. ಆದರೆ, ಏನು ಮಾಡುವುದು? ಗುರುವಾಜ್ಞೆ ಮಾಡಿ ತೀರಲೇಬೇಕು.

 

ಇನ್ನು ‘ಸರಿ’ ಎಂದು ನಾನು ನಿಧಾನವಾಗಿ ಸಾರ್ ಕೆನ್ನೆಮೇಲೆ ಹೊಡೆದೆ. "ಹಾಗಲ್ಲ... ನಾನು ನಿನ್ನನ್ನು ಹೇಗೆ ಹೊಡೆದೆನೋ... ನೀನು ಹಾಗೆಯೇ ಹೊಡಿ" ಎಂದರು ಹಾಗೆಯೇ ನಾನು ಜೋರಾಗಿ ಹೊಡೆದೆ.

 

ಆಗ ಸಾರ್ "ಇದೇ ಕರ್ಮ ಸಿದ್ಧಾಂತ. ನಾವು ಏನು ಮಾಡುತ್ತೇವೆಯೋ ಅದನ್ನೇ ನಾವು ಪುನಃ ಅನುಭವಿಸಿ ತೀರಬೇಕು". ಎನ್ನುತ್ತಾ ಆ ಮಹಾಸತ್ಯವನ್ನು ಮಾತಿನಲ್ಲಿ ಅಲ್ಲದೇ ಅನುಭವಪೂರ್ವಕವಾಗಿ ಮಾಡಿ ತೋರಿಸಿದರು... "ದಟೀಸ್ ಪತ್ರೀಜಿ".

 

ಈ ಘಟನೆಯಿಂದ... "ಅವರವರ ಕರ್ಮಗಳು ಅವರವರ ಮತಿಗೆ ಅನುಸಾರವಾಗಿರುತ್ತದೆ ಎಂದು ಅರ್ಥವಾಯಿತು. "ಹಿಂಸೆ ರಾಕ್ಷಸ ಪ್ರವೃತ್ತಿ" ಎನ್ನುವ ಸತ್ಯ ನನ್ನ ಹೃದಯಕ್ಕೆ ತಾಕಿತು. ಮರುಕ್ಷಣದಿಂದಲೇ ನಾನು ಮಾಂಸಾಹಾರವನ್ನು ತ್ಯಜಿಸಿದ್ದೇನೆ. ಒಬ್ಬ ಪರಮಗುರುಗಳ ಬಾಯಿಂದ ಬರುವ "ಸತ್ಯವಚನ ತುಂಬಾ ಪ್ರಭಾವವನ್ನು ತೊರಿಸಿ... ನಮ್ಮಲ್ಲಿ ಎಂತಹ ಪರಿವರ್ತನೆ ತರುತ್ತದೆ ಎಂಬುದು ನನಗೆ ಅನುಭವಪೂರ್ವಕವಾಗಿ ತಿಳಿದು ಬಂತು.

 

ಪತ್ರೀಜಿ ಅಂಡಮಾನ್ ಬಂದಾಗಲೆಲ್ಲಾ ನಮಗೆ ತುಂಬಾ ಆತುರವಾಗಿ, ಆನಂದವಾಗಿ, ಕೋಲಾಹಲವಾಗಿ ಇರುತ್ತದೆ. ಒಂದು ಬಾರಿ ಪತ್ರೀಜಿ ಐದು ದಿನಗಳು ಅಂಡಮಾನ್ ಧ್ಯಾನ ಪ್ರಚಾರಕ್ಕೆ ಬಂದಾಗ ಅವರ ಜೊತೆ ಸೇರಿ "ದಿಗ್ಲೀಪೂರ್" ಎನ್ನುವ ದ್ವೀಪಕ್ಕೆ ಹೋದೆವು. ಆ ಶಿಕ್ಷಣ ತರಗತಿಗೆ ನನ್ನ ಜೊತೆ ಕೆಲಸಮಾಡುತ್ತಿರುವ ಕೆಲವರು ಉಪಾಧ್ಯಾಯರು ಸಹ ಹಾಜರಾದರು. ಕ್ಲಾಸ್ ಮುಗಿದನಂತರ ನಡೆದ ಒಂದು ಚಿಕ್ಕ ಘಟನೆಯಿಂದ ಪತ್ರೀಜಿ ನನ್ನ ಕೆನ್ನೆಯಮೇಲೆ ಫಟಾಫಟ ಎಂದು ಐದು ಬಾರಿ ಬಾರಿಸಿದರು. ನನ್ನ ಪಂಚಕೋಶಗಳೂ ತತ್ತರಿಸಿತು. ಅಲ್ಲಿರುವವರೆಲ್ಲಾ ಆಶ್ಚರ್ಯಚಕಿತರಾದರು. ಮುಖ್ಯವಾಗಿ ನನ್ನ ಜೊತೆ ಕೆಲಸಮಾಡುತ್ತಿರುವ ಉಪಾಧ್ಯಾಯರಿಗೆ ತುಂಬಾ ಆಶ್ಚರ್ಯವಾಯಿತು.

 

ಅನಂತರ ರಾಮಕೃಷ್ಣ, ವಿಜಯ್ ಎನ್ನುವ ಮಾಸ್ಟರ‍್ಸ್ "ನಿನ್ನಲ್ಲಿ ಕೆಲವು ನೆಗಟಿವ್ಸ್ ಇದೆ. ಅವು ತೊಲಗಿಸಲು ಸಾರ್ ನಿನ್ನನ್ನು ಹೊಡೆದರು. ಇನ್ನು ಮುಂದೆ ನಿನ್ನಲ್ಲಿ ಆಧ್ಯಾತ್ಮಿಕೊನ್ನತಿ ಶೀಘ್ರವಾಗಿ ಆಗುತ್ತದೆ " ಎಂದರು.

 

"ನನ್ನನ್ನು ಸಮಾಧಾನಗೊಳಿಸಲು ಅವರು ಹಾಗೆ ಎನ್ನುತ್ತಿದ್ದಾರೆ" ಎಂದುಕೊಂಡೆ ಆದರೆ, ನಿಜವಾಗಲೂ ಆ ದಿನದ "ನಾನು" ಈ ದಿನದ "ನಾನು" ಆಗಿ ಬೆಳೆಯಲಿಕ್ಕಾಗಿ ನನ್ನ ಗುರುವು ಎಷ್ಟು ಸಹಕರಿಸಿದರೋ ನನಗೆ ಭವಿಷ್ಯತ್ತಿನಲ್ಲಿ ಚೆನ್ನಾಗಿ ತಿಳಿದುಬಂತು. ಆಗ ಸಾರ್ "ಬೈದರು" ಎಂದು ನೊಂದುಕೊಂಡರೂ... ಈಗ ಮಾತ್ರ "ನಾನು ತುಂಬಾ ಅದೃಷ್ಟವಂತನು" ಎನ್ನುವ ಆನಂದದಲ್ಲಿ ತೇಲಾಡುತ್ತಿರುತ್ತೇನೆ.

 

ನಮ್ಮಲ್ಲಿರುವ ಕೆಲವು ‘ನೆಗೆಟಿವ್ಸ್’ ನಮ್ಮ ಆಧ್ಯಾತ್ಮಿಕ ಉನ್ನತಿಗೆ ಅಡ್ಡಿ ಆಗುತ್ತಿರುವಾಗ... ಅವು ಗಮನಿಸಿದ ಗುರುವು ಅವುಗಳನ್ನು ತೊಲಗಿಸಲು ಹೀಗೆ ಮಾಡುವುದು ಅನಿವಾರ್ಯ. ನಿಜಕ್ಕೂ ಹಾಗೆ ಮಾಡುವವರೇ ಉತ್ತಮ ಗುರುಗಳು" ಎಂದು ಅನುಭವಪೂರ್ವಕವಾಗಿ ನನಗೆ ತಿಳಿಸಿದ ಶ್ರೇಷ್ಠ ಗುರುವು... "ಪತ್ರೀಜಿ".

 

2004 ಡಿಸೆಂಬರ್ 26ನೇ ದಿನಾಂಕ ಅಂಡಮಾನ್‌ನಲ್ಲಿ ‘ಸುನಾಮಿ’ಬಂದಾಗ ನಮ್ಮ ಮನೆ ಸಮುದ್ರದಲ್ಲಿ ಕೊಚ್ಚಿಕೊಂಡುಹೋಗಿ ಮನೆಯಲ್ಲಿರುವ ಎಲ್ಲಾ ಸಾಮಾನುಗಳು ಪೂರ್ತಿಯಾಗಿ ಸಮುದ್ರ ಪಾಲಾಯಿತು. ಮನೆ ಒಳಗೆ ಹೋಗಿ ನೋಡಿದರೆ ಏನೂ ಉಳಿದಿಲ್ಲ. ಆದರೆ, ನಾನು 1993 ನಲ್ಲಿ ತಿರುಪತಿಯಲ್ಲಿ ಕೊಂಡುಕೊಂಡ "ಚಿಕ್ಕ ಬುದ್ಧನ ಪ್ರತಿಮೆ " ಮಾತ್ರ ಪುಸ್ತಕಗಳು ಇಡುವ ಷೆಲ್ಫ್‌ನಲ್ಲಿ ಕ್ಷೇಮವಾಗಿತ್ತು. ಅದನ್ನು ನೋಡಿದ ಮರುಕ್ಷಣವೇ ತುಂಬಾ ಆನಂದವನ್ನು ಅನುಭವಿಸಿದ ನನಗೆ... ಧ್ಯಾನದಲ್ಲಿ ನನ್ನ ಅಂತರ್‌ವಾಣಿಯಿಂದ ನಮ್ಮಲ್ಲಿರುವುದೆಲ್ಲಾ ಮಾಯವಾದಾಗಲೇ..... ನಮ್ಮಲ್ಲಿ "ಬುದ್ಧತ್ವ" ಉಳಿಯುತ್ತದೆ. ಈ ಪ್ರಾಪಂಚಿಕ ಸಂಪತ್ತು ಎಷ್ಟು ಇದ್ದರೂ ಯಾವುದೋ ಒಂದು ರೀತಿನಲ್ಲಿ ಹೋಗುತ್ತವೆ ಆದರೆ, ಎಂತಹ ಪರಿಸ್ಥಿತಿಯಲ್ಲೂ ನಮ್ಮನ್ನು ಆಗಲದೇ ಇರುವುದು ಒಂದು ‘ನಮ್ಮ ಬುದ್ಧತ್ವ’ವೇ ವಿನಹ ಮತ್ತೊಂದಲ್ಲ ಎಂದು ಕೇಳಿಸಿತು.

 

"ಮನುಷ್ಯ ಶಾಶ್ವತಾನಂದವನ್ನು ಪ್ರಸಾದಿಸುವ ಬುದ್ಧತ್ವಕ್ಕಾಗಿ ಓಡಬೇಕೇ ವಿನಹ ಪ್ರಾಪಂಚಿಕ ಸಂಪತ್ತಿಗಾಗಿ ಅಲ್ಲ" ಎಂದು ತಿಳಿಯಪಡಿಸಿ, ಶಾಶ್ವತಾನಂದವನ್ನು ನೀಡುವ ಬುದ್ಧತ್ವ ಸಂಪತ್ತಿನಿಂದ ಜೀವನವನ್ನು ಧನ್ಯವನ್ನಾಗಿಸಿಕೊಳ್ಳುವ ಮಾರ್ಗವನ್ನು ತೋರಿಸುವ ಸದ್ಗುರುವು "ಪತ್ರೀಜಿ" 2009 ಡಿಸೆಂಬರ್‌ನಲ್ಲಿ ನಡೆದ ಶ್ರೀಶೈಲ ಧ್ಯಾನಮಹಾಯಜ್ಞಕ್ಕೆ "ಹೇಗಾದರೂ ಮಾಡಿ ಹೋಗಬೇಕು" ಎಂದುಕೊಂಡೆ ಆದರೆ... ಅದೇ ಸಮಯಕ್ಕೆ ನನಗೆ ಇನ್‌ಸ್ಪೆಕ್ಷನ್ ಡ್ಯೂಟಿಗೆ ಕರೆ ಬರುವುದು ಮತ್ತು ವಿಮಾನದ ಟಿಕೆಟ್ಸ್ ಸಿಗದೇ ಹೋಗುವುದು ಮುಂತಾದ ಅನೇಕ ಪರಿಸ್ಥಿತಿಗಳು ಎದುರಾಯಿತು. ಯಾವ ಪರಿಸ್ಥಿತಿಗಳು ಹೇಗೆ ಎದುರಾದರೂ ನಾನು ಡಿಸೆಂಬರ್ 26ರಂದು ಶ್ರೀಶೈಲ ಧ್ಯಾನ ಯಜ್ಞಕ್ಕೆ ತಲಪುವಹಾಗೆ ಅನುಕೂಲ ಪರಿಸ್ಥಿತಿಗಳು ಬರಬೇಕು ಎಂದು ಹೃದಯಪೂರ್ವಕವಾಗಿ, ಸಮರ್ಪಣಾ ಭಾವದಿಂದ ವಿಶ್ವಕ್ಕೆ ಬೇಡಿಕೊಂಡೆ.

 

ಅಷ್ಟೇ ಸಮಯಕ್ಕೆ ಸರಿಯಾಗಿ ನನ್ನ ಡ್ಯೂಟಿ ಪೂರ್ತಿಯಾಗಿ... ಸ್ಪೆಷಲ್ ಫ್ಲೈಟ್ ಟಿಕೆಟ್ಸ್ ಸಿಕ್ಕಿ..... ನಾನು ಡಿಸೆಂಬರ್ 26 ಮಧ್ಯಾಹ್ನಕ್ಕೆಲ್ಲಾ ಶ್ರೀಶೈಲಕ್ಕೆ ತಲುಪಿದೆ. ಈ ರೀತಿ "ಪ್ರತಿಯೊಬ್ಬರಲ್ಲೂ ಕೂಡ ಒಂದು ಮಹಾ ಸಂಕಲ್ಪ ಶಕ್ತಿ ಇರುತ್ತದೆ" ಎಂದು ತಿಳಿಯಪಡಿಸಿದರು ಪತ್ರೀಜಿ. "ಆ ಸಂಕಲ್ಪ ಶಕ್ತಿಯನ್ನು ಪ್ರಪಂಚ ಶಾಂತಿಗೆ, ಪ್ರಪಂಚ ಶ್ರೇಯಸ್ಸಿಗೆ, ಮಾನವಕಲ್ಯಾಣಕ್ಕೆ ಅಲ್ಲದೇ, ಈ ಸೃಷ್ಟಿಯಲ್ಲಿರುವ ಜೀವರಾಶಿಗಳೆಲ್ಲದರ ಶ್ರೇಯಸ್ಸಿಗಾಗಿ ಕೂಡಾ ಉಪಯೋಗಿಸಬೇಕು ಎಂದು... "ಅದೇ ಪರಮಧರ್ಮ" ಎಂದು ಪ್ರಪಂಚಕ್ಕೆ ಡಂಗುರ ಹಾಕಿ ಹೇಳಿತ್ತಿರುವ ಏಕೈಕ ಗುರುವು... "ಪತ್ರೀಜಿ"


.
"ಪ್ರಕೃತಿಯ ಜೊತೆ ಸಹಜೀವನ ಮಾಡುತ್ತಾ, ಪ್ರಕೃತಿಗೆ ಅನುಕೂಲವಾಗಿ ನಾವು ಜೀವನವನ್ನು ಸಾಗಿಸಿದಾಗ... ಪ್ರಕೃತಿ ಕೂಡಾ ನಮಗೆ ಅನುಕೂಲವಾಗಿಯೂ ಮತ್ತೂ ಸಹಾಯಕಾರಿಯಾಗಿಯೂ ಇರುತ್ತದೆ" ಎನ್ನುವುದು ಪ್ರಪಂಚದಾದ್ಯಂತ ಎಲ್ಲರಿಗೂ ತಿಳಿದ ಸತ್ಯವೇ.

 

ಸುನಾಮಿ ಬಂದು ಹೋದನಂತರ ನಮಗೆ ಇರುವ ಮನೆ ಹೋಗಿ ನಾವು ಬಾಡಿಗೆ ಮನೆಗೆ ಸೇರಿದವು. "ಬಾಡಿಗೆ ಮನೆ" ಅಂದರೇನೆ... ನಿಯಮ ನಿಬಂಧನೆಗಳಿಂದ ಕೂಡಿಕೊಂಡು ಇರುತ್ತದೆ. "ಮೊಳೆ ಹೊಡೆಯಬಾರದು", "ಪೆನ್ಸಿಲ್‌ನಿಂದ ಗೀಚಬಾರದು", "ಗಲಾಟೆ ಮಾಡಬಾರದು", "ಮಕ್ಕಳು ಗಲಾಟೆ ಮಾಡಬಾರದು" ಎನ್ನುತ್ತಾ ಅನೇಕ ನಿಬಂಧನೆಗಳಿರುತ್ತವೆ. ಆದರೆ, ನಾವು ಒಬ್ಬ ಪಿರಮಿಡ್ ಮಾಸ್ಟರ್ ಮನೆಯಲ್ಲಿರುವುದರಿಂದ ಇಂತಹ ನಿಬಂಧನೆಗಳೇನೂ ಇರಲಿಲ್ಲ. ಆದರೆ, ಸ್ವಲ್ಪ ಕಾಲದನಂತರ ಅವರ ಮಗನ ಮಧುವೆಯ ಸಂದರ್ಭವಾಗಿ ಆ ಮನೆ ಖಾಲಿ ಮಾಡಬೇಕಾದ ಪರಿಸ್ಥಿತಿ ಬಂತು.

 

ಈ ಪರಿಸ್ಥಿತಿಯಲ್ಲಿ ನಾವು ಹೀಗೆ ಎಷ್ಟು ಮನೆಗಳು ಅಂತ ಬದಲಾಯಿಸುವುದು. ನಮಗೇ ಅಂತ ಒಂದು ಮನೆ ಇದ್ದರೆ ಇಂತಹ ಕಷ್ಟಗಳು ಇರುವುದಿಲ್ಲವಲ್ಲ" ಎಂದು ನೆನೆಸಿ, "ಓ ಪರಮಾತ್ಮನೇ ನಾನು ಈ ದಿನ ಏನಾಗಿ ಇದ್ದೇನೋ... ಅದು ನಿನ್ನ ಆಶೀರ್ವಾದ ಫಲಿತವೇ ವಿನಹ ಮತ್ತೊಂದಿಲ್ಲ. ನನಗೆ ಸದಾ ಯಾವ ಅವಶ್ಯಕತೆ ಇದೆಯೋ ಅದು ನೀನು ನನಗೆ ನೀಡುವೆ ಎನ್ನುವ ವಿಶ್ವಾಸ ನನಗಿದೆ. ನನ್ನ ಸುಖ ಜೀವನಕ್ಕೆ ನನಗೆ ಒಂದು ಗೃಹವನ್ನು ನೀಡು... ಅದರ ಮೇಲೆ ನಾನು ಒಂದು ಪಿರಮಿಡ್ ನಿರ್ಮಿಸುತ್ತೇನೆ ಎಂದು ವಿಶ್ವಕ್ಕೆ ವಿನಂತಿಸಿಕೊಂಡೆ.

 

ಅಷ್ಟೇ... ಆಶ್ಚರ್ಯಕರವಾಗಿ ಒಂದು ವಾರ ಕಳೆಯುವುದಕ್ಕಿಂತಾ ಮುಂಚಿತವಾಗಿಯೇ ಒಂದು ಸೈಟು ಮಾರಾಟಕ್ಕೆ ಇತ್ತು. ಅದಕ್ಕೆ ತಕ್ಷಣ ಅಡ್ವಾನ್ಸ್ ನೀಡಿ.. ಮಾಸ್ಟರ‍್ಸ್‌ಗೂ ವಿಶ್ವಕ್ಕೂ ಕೃತಜ್ಞತೆಗಳನ್ನು ತಿಳಿಸಿ ಮನೆಯ ನಿರ್ಮಾಣ ಪ್ರಾರಂಭಿಸಿದೆ.

 

"ಮನೆಯ ನಿರ್ಮಾಣ ನಡೆಯುತ್ತಿರುವ ದಿನಗಳಲ್ಲಿ... ನಾವು ಹಗಲೆಲ್ಲಾ ಕೆಲಸ ಮಾಡಿಸಿ ಸಾಯಂಕಾಲ ಮನೆಗೆ ಹೊರಟುಹೋಗುತ್ತಿದ್ದೆವು. ಒಂದು ದಿನ ಮುಂಜಾನೆ ಅಲ್ಲಿಗೆ ಹೋದಾಗ... ನಮ್ಮ ಮನೆಯ ನಿರ್ಮಾಣ ನಡೆಯುತ್ತಿರುವ ಸ್ಥಳದ ಹತ್ತಿರ ಪಕ್ಕದ ಮನೆಯಲ್ಲಿ ನಿವಾಸಮಾಡುತ್ತಿರುವ ಒಬ್ಬ ಮಹಿಳೆ ಬಂದು "ಅಣ್ಣಾ, ರಾತ್ರಿ ಇಲ್ಲಿ ಕೆಲಸ ಮಾಡಿಸಿದ್ದೀರಾ?" ಎಂದು ಕೇಳಿದರು.

 

"ಇಲ್ಲ, ನಾನು ಈಗಲೇ ಬಂದೆ" ಎಂದು ಹೇಳಿದೆ.

 

"ಅರ್ಧರಾತ್ರಿ 1:30 ಗಂಟೆಗಳಿಗೆ ನಾಯಿಗಳು ತುಂಬಾ ಬೊಗುಳುತಿತ್ತು ‘ಏನಿರಬಹುದು?’ ಎಂದು ಹೊರಗೆ ಬಂದು ಎಲ್ಲಾ ಕಡೆ ನೋಡಿದೆ. ಆದರೇ, ಯಾರೂ ಕಾಣಿಸಲಿಲ್ಲ. ಆದರೆ, ಯಾರೂ ಕೆಲಸ ಮಾಡುತ್ತಿರುವ ಹಾಗೆ ಶಬ್ದ ಕೇಳಿಸಿತು" ಎಂದರು.

 

ತಕ್ಷಣ ನನಗೆ "ಆಸ್ಟ್ರಲ್ ಮಾಸ್ಟರ‍್ಸ್ ಬಂದು, ಅಲ್ಲಿ ಆಸ್ಟ್ರಲ್ ಆಗಿ ಪಿರಮಿಡ್ ನಿರ್ಮಾಣ ಮಾಡುತ್ತಿದ್ದಾರೆ" ಎಂದು ಅರ್ಥವಾಯಿತು.

 

ಮನೆ ನಿರ್ಮಾಣ ಪೂರ್ಣಗೊಂಡಿತು. "ಇನ್ನು ಪಿರಮಿಡ್ ಶೀಘ್ರವಾಗಿ ಕಟ್ಟಬೇಕು" ಎಂದುಕೊಂಡೆ. ಆದರೆ, ಯಾಕೋ ತಾತ್ಸಾರ ಮಾಡಿದೆ. ಸ್ವಲ್ಪ ಕಾಲದನಂತರ ಮನೆಯ ಮೇಲೆ ಹುಣ್ಣಿಮೆ ಧ್ಯಾನ ಮಾಡುತ್ತಿದ್ದೆವು. ಅಷ್ಟರಲ್ಲೇ ನಾಗಲಕ್ಷ್ಮಿ ಎನ್ನುವ ಪಿರಮಿಡ್ ಮಾಸ್ಟರ್ ಒಳಗೆ ‘ವೀರಬ್ರಹ್ಮೇಂದ್ರಸ್ವಾಮಿ’ ಬಂದು ಕಾಳಿಕಾಂಬ ಸಪ್ತಸ್ತುತಿಯಿಂದ ನನ್ನಿಂದ 20 ಪದ್ಯಗಳನ್ನು ಹೇಳಿಸಿಕೊಂಡು "ಎಲ್ಲರೂ ಧ್ಯಾನಮಾಡಬೇಕು" ಎನ್ನುವ ಸಂದೇಶವನ್ನು ನೀಡಿದರು. ಅಷ್ಟರಲ್ಲಿ ಧ್ಯಾನದಲ್ಲಿದ್ದ ನನ್ನ ಹೆಂಡತಿ "ಪಿರಮಿಡ್ ಕಟ್ಟುವುದು ಯಾವಾಗ?" ಎಂದು ಜೋರಾಗಿ ಕಿರುಚಿದಳು. "ಪತ್ರೀಜಿ ನನಗೆ ಎಚ್ಚರಿಕೆ ನಿಡುತ್ತಿದ್ದಾರೆ" ಎಂದು ಅರ್ಥವಾಯಿತು! ದಟೀಸ್ ಪತ್ರೀಜಿ.

 

"ತಕ್ಷಣ ಪ್ರಾರಂಭಿಸುತ್ತೇನೆ ಸಾರ್" ಎಂದೆ. ನಿನಗೆ ಏನು ಬೇಕೋ ಎಲ್ಲಾ ಕೊಟ್ಟಾಯಿತು. ಪಿರಮಿಡ್ ಬೇಗ ಕಟ್ಟು ಎಂದು ಸಾರ್ ನನ್ನ ಹೆಂಡತಿ ಮೂಲಕ ನನಗೆ ಸಂದೇಶ ನೀಡಿದರು" ಎಂದು ಅರ್ಥವಾಯಿತು.

 

ಧ್ಯಾನಾಂಧ್ರಪ್ರದೇಶ್ ಪತ್ರಿಕೆ "ಟೂರ್ ಡೈರಿ" ನೋಡಿದರೆ... ಆ ದಿನ ಪತ್ರೀಜಿ ವೈಜಾಗ್‌ನಲ್ಲಿದ್ದರು. ಸಾರ್‌ಗೆ ಫೋನ್ ಮಾಡಿ ನಡೆದಿದ್ದು ತಿಳಿಸಿ "ನಿಮ್ಮ ಸಂದೇಶ ನೀಡಿ ಸಾರ್" ಎಂದು ಕೇಳಿದೆ. ಸಾರ್ ತಕ್ಷಣ "ನೀನೇ ಒಂದು ಸಂದೇಶ" ಎಂದರು.

 

ಪ್ರತಿಯೊಬ್ಬ ಮನುಷ್ಯ ಧ್ಯಾನಸಾಧನೆ ಮಾಡಿ... ತಾನು ತಿಳಿದುಕೊಂಡ ಅನುಭವಪೂರ್ವಕ ಸತ್ಯವನ್ನು ಪ್ರತಿಯೊಬ್ಬರಿಗೂ ತಿಳಿಯಪಡಿಸುತ್ತಾ, ಪಿರಮಿಡ್ ನಿರ್ಮಾಣ ಮಾಡಿದ ದಿನ "ಆ ಮಾಸ್ಟರ್ ಜೀವನ ಒಂದು ಸಂದೇಶ" ಆಗುತ್ತದೆ ಎಂದು ತಿಳಿಯಪಡಿಸಿದ ದೊಡ್ಡ ಶಕ್ತಿಸ್ವರೂಪರು "ಪತ್ರೀಜಿ".

 

"ಇಂತಹ ಶ್ರೇಷ್ಠ ಗುರುವಿನ ಜೊತೆ ಸ್ಪರ್ಧೆ ಇಟ್ಟುಕೊಂಡು ಕೆಲಸ ಮಾಡಿದರೇ ವಿನಹ ಅವರ ಋಣ ತೀರಿಸಿಕೊಳ್ಳಲಾಗುವುದಿಲ್ಲ" ಎನ್ನುವ ದಿವ್ಯಪ್ರಣಾಳಿಕೆಯನ್ನು ಅರ್ಥಮಾಡಿಕೊಂಡು ಆ ದಿಸೆಯಲ್ಲಿ ಧ್ಯಾನಜಗತ್" ಪ್ರಚಾರಗಳನ್ನು ತೀವ್ರವಾಗಿ ಮಾಡುತ್ತಿದ್ದೇವೆ.

 

ಚಂದ್ರಮೌಳಿ
ಅಂಡಮಾನ್

ಫೋನ್ : +91 9933277782

Go to top