" ಸಂತಸದಿಂದ ಆರೋಗ್ಯದಿಂದ ಜೀವನವನ್ನು ನಡೆಸುತ್ತಿದ್ದೇನೆ " 

 

 

ನಾನು ನನ್ನ ತಂದೆ ತಾಯಿಯ ಪ್ರೇರಣೆಯ ಮೇಲೆ ಧ್ಯಾನವನ್ನು ಕಲಿತುಕೊಂಡೆ. ಮೊದಲು ನನಗೆ ಒಂದು ತಾಸು ಕುಳಿತುಕೊಳ್ಳಲು ಕಷ್ಟವೆನಿಸಿತು. ಕಾಲುನೋವು, ಬೆನ್ನುನೋವು, ಚಂಚಲ ಮನಸ್ಸು, ನಾನು ಯಾವಾಗ ಎದ್ದು ಹೋಗುವೆನೋ ಎನಿಸುತ್ತಿತ್ತು. ದಿನಗಳು ಕಳೆದಂತೆ ನನಗೆ ಸಮಾಧಾನದಿಂದ ಕುಳಿತುಕೊಳ್ಳಬೇಕೆನಿಸಿತು. ಕಣ್ಣು ಮುಚ್ಜಿದ ಬಳಿಕ ನಾನು ಎಲ್ಲಿ ಕುಳಿತಿರುವೆ, ಏನು ಮಾಡುತ್ತಿರುವೆ, ನನ್ನ ಸುತ್ತಲೂ ಏನು ನಡೆಯುತ್ತಿದೆ ಎಂಬುದರ ಅರಿವೇ ಇಲ್ಲದೆ ನಾನು ಎಲ್ಲೋ ಬೇರೆ ಪ್ರಪಂಚಕ್ಕೆ ಹೋದ ಹಾಗೆ, ಕಾಡು ಪ್ರಾಣಿಗಳು ನನ್ನನ್ನು ಸ್ಪರ್ಶಿಸಿದ ಹಾಗೆ, ಜುಳುಜುಳು ಹರಿಯುವ ನೀರು, ಆಕಾಶದಲ್ಲಿ ಹಾರಾಡುವ ಪಕ್ಷಿಗಳು, ಇವೆಲ್ಲವನ್ನು ಸವಿಯತೊಡಗಿದೆ. ನಂತರ, ಕಣ್ಣು ಬಿಟ್ಟಾಗ ಏನೋ ಒಂದು ನಿರ್ಮಲವಾದ ಆನಂದ, ಮನಸ್ಸು ಹಗುರ, ನೆಮ್ಮದಿ ಎನಿಸಿತು. ಹೊಸ ಪ್ರಪಂಚಕ್ಕೆ ಕಾಲಿಟ್ಟ ಹಾಗೆ ಭಾಸವಾಗುತ್ತಿತ್ತು. ದಿನವಿಡೀ ಸಂತಸದಿಂದ ಆರೋಗ್ಯದಿಂದ ಜೀವನವನ್ನು ನಡೆಸುತ್ತಿದ್ದೇನೆ. ನನ್ನನ್ನು ಈ ಸ್ವರ್ಗದ ಬಾಗಿಲ ಕಡೆ ನಡೆಯಲು ಪ್ರೇರಪಿಸಿದ ತಂದೆ ತಾಯಿಗೂ, ಸ್ವರ್ಗವೇನೆಂದು ತಿಳಿಸಿ, ಹಾಗೆ ಜೀವನ ಮಾಡಲು ಸಹಕರಿಸಿದ ಪಿರಮಿಡ್ ಟ್ರಸ್ಟ್‌ನವರಿಗೂ, ನನ್ನ ಅಭಿನಂದನೆಗಳು.

 

ಛಾಯಾ ಮನೋಹರ
ದಾವಣಗೆರೆ

Go to top