" ಧ್ಯಾನದಿಂದ ನಾನು ಆರೋಗ್ಯವಾಗಿದ್ದೇನೆ "

 

 

ನನಗೆ 15 ವರ್ಷಗಳಿಂದ ಅಲರ್ಜಿ, ನೆಗೆಡಿ ಇತ್ತು. ಎಷ್ಟು ವೈದ್ಯರಿಗೆ ತೋರಿಸಿದರೂ ವಾಸಿಯಾಗಲಿಲ್ಲ. ಕೈ, ಕಾಲು, ಮೊಣಕಾಲು, ಕೀಲು ನೋವು ಇತ್ತು. ದಿನಾ ಗುಳಿಗೆ ನುಂಗಬೇಕಿತ್ತು. ಧ್ಯಾನ ಮಾಡಲು ಪ್ರಾರಂಭಿಸಿದ ಮೇಲೆ ಸ್ವಲ್ಪ ಕಡಿಮೆಯಾಗಿದೆ. ಧ್ಯಾನ ಶುರುವಾಗಿ 8 ದಿನಕ್ಕೆ ಕೂಡ್ಲಿಗಿಯ ಪಿರಮಿಡ್‌ಗೆ ಹೋಗಿದ್ದೆವು. ಅಲ್ಲಿಗೆ ಹೋಗಿ ಬಂದ ಬಳಿಕ ಆರೋಗ್ಯ ಸುಧಾರಣೆಯಾಗಿದೆ. ಬೆಂಗಳೂರು ಪಿರಮಿಡ್ಡಿನಲ್ಲಿ ಧ್ಯಾನವನ್ನು ಮಾಡಿ ಬಂದ ಮೇಲೆ ಆರೋಗ್ಯವಾಗಿದ್ದೇನೆ, ಸಮಾಧಾನವಾಗಿದೆ. ಧ್ಯಾನ ಮಾಡಿ 15 ದಿನದ ಬಳಿಕ ಗುಳಿಗೆಯನ್ನು ಬಿಟ್ಟೆ. ಅಲ್ಲಿಂದ ಯಾವುದೆ ನೆಗೆಡಿ, ಜ್ವರ, ಕೈ, ಕಾಲು ನೋವು ಇಲ್ಲ. ಇವೆಲ್ಲ ಹೋಗಿ ನಾನು ಇಂದು ಆರೋಗ್ಯವಾಗಿದ್ದೇನೆ. ಜೀವನದ ಕೊನೆ ಉಸಿರಿರುವವರೆಗೆ ನಾನು ಧ್ಯಾನ ಮಾಡುತ್ತೇನೆ. ನನಗೆ ಧ್ಯಾನ ಹೇಳಿಕೊಟ್ಟಿರುವ ಶ್ರೀ ಪ್ರಕಾಶ್‌ರವರಿಗೆ ನಾನು ಯಾವಾಗಲು ಚಿರಋಣಿಯಾಗಿರುತ್ತೇನೆ.

D.S. ಬಸಮ್ಮ
ಆನೆಕೊಂಡ

Go to top