" ಧ್ಯಾನದಿಂದ ಆರೋಗ್ಯ ಮತ್ತು ಜ್ಞಾನ "

 

 

 

ಧ್ಯಾನ ಅಂದರೆ ಏನು ಮತ್ತು ಹೇಗೆ ಮಾಡಬೇಕೆಂದು ಪರಿಚಯಿಸಿದ ಶ್ರೀ ಪ್ರಕಾಶ್‌ರವರಿಗೆ ಅಭಿನಂದನೆಗಳು. ಒಂದು ಮಂಡಲ ಧ್ಯಾನವನ್ನು ಮಾಡಿದ್ದೇನೆ. ಸಂಪೂರ್ಣ ಆರೋಗ್ಯ ಹೊಂದಿದ್ದೇನೆ. ಪಿರಮಿಡ್ ನೋಡಬೇಕೆಂಬ ಆಸೆಯಿಂದ ಕೂಡ್ಲಿಗಿಯಲ್ಲಿ ತುರಾಯಿಯವರು ಕಟ್ಟಿಸಿದ ಪಿರಮಿಡ್ ಸಮಾರಂಭಕ್ಕೆ ಹೋದಾಗ ಅಲ್ಲಿ ಪತ್ರೀಜಿಯವರನ್ನು ನೋಡುವ ಭಾಗ್ಯ ಲಭಿಸಿತು. ಪಿರಮಿಡ್ ಮೆಟ್ಟಿಲು ಹತ್ತುವಾಗ ಮೊಣಕಾಲಿನಲ್ಲಿ ಏನೋ ಒಂದು ತರಹದ ಶಬ್ದವಾಯಿತು. ಮೆಟ್ಟಿಲು ಹತ್ತುವುದು ಹೇಗೆ ಅಂದುಕೊಂಡಿದ್ದೆ. ಬಳಿಕ ಕಾಲು ನೋವು ಮಾಯವಾಯಿತು. ಇದು ನನ್ನ ಮೊದಲನೆ ಅನುಭವ. ಬೆಂಗಳೂರು ಪಿರಮಿಡ್ ಹೋಗಿ ಅಲ್ಲಿಯೂ ಸಹ 2-3 ತಾಸು ಧ್ಯಾನ ಮಾಡಿದ್ದೇನೆ. ಒಳ್ಳೆಯ ಅನುಭವ ಪಡೆದುಕೊಂಡು ಬಂದಿರುತ್ತೇನೆ. ಧ್ಯಾನ ಮಾಡುವುದರಿಂದ ಆತ್ಮ ವಿಶ್ವಾಸ, ಏಕಾಗ್ರತೆ, ಮಾನಸಿಕ ಶಾಂತಿ, ಎಲ್ಲವೂ ಲಭಿಸುತ್ತದೆ. ಧ್ಯಾನದಿಂದ ಜ್ಞಾನ, ಜ್ಞಾನದಿಂದ ಜೀವನ ಪರಿಪೂರ್ಣವಾಗುತ್ತದೆ. ಅಜ್ಞಾನಿಗಳಾಗಿದ್ದ ನಮ್ಮನ್ನು ಸುಜ್ಞಾನಿಗಳಾಗಲು  ಧ್ಯಾನ ಕಲಿಸಿದ ಶ್ರೀ ಪ್ರಕಾಶ್‌ರವರಿಗೆ, ಪತ್ರೀಜಿಯವರಿಗೆ ಕೋಟಿ ಕೋಟಿ ನಮಸ್ಕಾರಗಳು.    

ದಾಕ್ಷಾಯಿಣಮ್ಮ ಜಯಪ್ಪ
ಆನೆಕೊಂಡ

Go to top