" ನಿರಂತರವಾಗಿ ಕನ್ನಡ, ಇಂಗ್ಲೀಷ್, ಹಿಂದಿ, ತಮಿಳ್, ತೆಲುಗು ಭಾಷೆಗಳಲ್ಲಿ ಧ್ಯಾನ ಕಲಿಸುತ್ತಿದ್ದೇನೆ "

 

 

1999 ಫೆಬ್ರವರಿ 28ರಂದು ಪತ್ರೀಜಿಯವರು ಹೇಳಿಕೊಟ್ಟ ಆನಾಪಾನಾಸತಿ ಧ್ಯಾನದ ಬಗ್ಗೆ ಪ್ರವಚನ ಕೇಳಿದೆ. ನಂತರ ಅವರ ಮಾರ್ಗದರ್ಶನದಲ್ಲಿ ‘ಬುದ್ಧ ಪಿರಮಿಡ್ ಧ್ಯಾನ ಕೇಂದ್ರ’ವನ್ನು ಹೊಸಪೇಟೆಯಲ್ಲಿ ನಮ್ಮ ಮನೆಯಲ್ಲಿ ಪ್ರಾರಂಭಿಸಿದೆ. ಕೊಪ್ಪಳ ವಿಧಾನಸಭಾಕ್ಷೇತ್ರದಿಂದ ಪಿರಮಿಡ್ ಪಾರ್ಟಿಯ ಅಭ್ಯರ್ಥಿಯಾಗಿ 1999 ಚುನಾವಣೆಯಲ್ಲಿ ಸ್ಪರ್ಧಿಸಿ 1000 ಮತ ಪಡೆದೆ.

 

ಪತ್ರೀಜಿಯವರ ಸೂಚನೆಯಂತೆ 12 ನೇ ಮಾರ್ಚ್ 2004 ರಂದು ಪಿರಮಿಡ್ ವ್ಯಾಲಿಗೆ ಸೇವೆಗಾಗಿ ನನ್ನ ಪತ್ನಿ ಸಮೇತ ಬಂದು 2007ನೆಯ ಬುದ್ಧಪೂರ್ಣಿಮೆವರೆಗೆ ಇಲ್ಲಿ ನೆಲಸಿದ್ದೆ.  ಕನಕಪುರ ಹಾಗೂ ಕಗ್ಗಲೀಪುರ ನಡುವಿನ ಎಲ್ಲಾ ಶಾಲೆಗಳಲ್ಲಿ ಧ್ಯಾನ ತರಗತಿಗಳನ್ನು ನಡೆಸಿದೆ. ಕನಕಪುರ ರೋಟರಿ ಭವನದಲ್ಲಿ ಪತ್ರೀಜಿಯವರ ಪ್ರವಚನಕ್ಕಾಗಿ ಒಂದು ದೊಡ್ಡ ತರಗತಿ ಏರ್ಪಡಿಸಲಾಗಿತ್ತು. ನಂತರ ತಿರುವಣ್ಣಾಮಲೈಗೆ ಪ್ರಚಾರಕ್ಕೆ ಹೊರಟೆ.

 

ಪತ್ರೀಜಿಯವರ ಇಚ್ಚೆಯಂತೆ 2010ರಲ್ಲಿ ವ್ಯಾಲಿಗೆ ಹಿಂತಿರುಗಿದೆ. ವ್ಯಾಲಿಗೆ ಭೇಟಿ ನೀಡುತ್ತಿರುವ ಜನರಿಗೆ ಕನ್ನಡ, ಇಂಗ್ಲೀಷ್, ಹಿಂದಿ, ತಮಿಳ್, ತೆಲುಗು ಭಾಷೆಗಳಲ್ಲಿ ನಿರಂತರವಾಗಿ ಧ್ಯಾನ ಕಲಿಸುತ್ತಿದ್ದೇನೆ.

 

ಇಂತಹ ಅವಕಾಶ ಕಲ್ಪಿಸಿ ನನ್ನ ಜೀವನದಲ್ಲಿ ಉನ್ನತ ಸಾಧನೆಗೆ ಅವಕಾಶ ಕಲ್ಪಿಸಿಕೊಟ್ಟ ಬ್ರಹ್ಮರ್ಷಿ ಪತ್ರೀಜಿಯವರ ಈ ಕೊಡುಗೆ ಅತಿಮುಖ್ಯವಾದದ್ದು. ಅವರಿಗೆ ನಾನು ಚಿರಋಣಿಯಾಗಿದ್ದೇನೆ. ಪಿರಮಿಡ್ ವ್ಯಾಲಿಗೆ ಎಲ್ಲರೂ ಆಧ್ಯಾತ್ಮಿಕ ತರಗತಿಗಳಿಗೆ ಬಂದು, ನಿತ್ಯ ಸಾಧನೆಯಲ್ಲಿ ತೊಡಗಿ, ಈ ಅಮೂಲ್ಯವಾದ ಸ್ಥಳದಲ್ಲಿ ಪ್ರೀತಿ, ಶಾಂತಿ ಮತ್ತು ಅನ್ಯೋನ್ಯತೆಯಿಂದ ಬದುಕಬೇಕೆಂದು ಆಶಿಸುತ್ತೇನೆ.

 

ಡಾಕಿರೆಡ್ಡಿ
ಪಿರಮಿಡ್ ವ್ಯಾಲಿ
ಬೆಂಗಳೂರು

Go to top