" ನನಗೆ ಸಂಪೂರ್ಣ ಆರೋಗ್ಯ, ಮಾನಸಿಕ ಶಾಂತಿ ಸಿಕ್ಕಿದೆ "

 

ಬ್ರಹ್ಮರ್ಷಿ ಸುಭಾಶ್ ಪತ್ರೀಜಿಯವರ ಚರಣ ಕಮಲಗಳಿಗೆ ನನ್ನ ಹೃದಯಪೂರ್ವಕವಾದ ವಂದನೆಗಳು. ಧ್ಯಾನದಿಂದ ನಾನು ತುಂಬ ಲಾಭಗಳನ್ನು ಪಡೆದುಕೊಂಡಿದ್ದೇನೆ. ನನಗೆ ಮಾನಸಿಕ ನೋವುಗಳು ತುಂಬ ಇದ್ದವು. ನನಗೆ 10 ಮಕ್ಕಳು. ಅವರಲ್ಲಿ ಒಬ್ಬ ಮಗನನ್ನು 6 ತಿಂಗಳ ಹಿಂದೆ ಕಳೆದುಕೊಂಡಿದ್ದೇನೆ. ಅ ನೋವಿನಿಂದ ಹೊರಬರುವುದು ನನಗೆ ಅಸಾಧ್ಯವೆನಿಸಿತು. ನನ್ನ ತಂಗಿ ಈ ಧ್ಯಾನದ ಬಗೆ ತಿಳಿಸಿದರು. "ಅಕ್ಕ ನೀನು ಧ್ಯಾನ ಮಾಡು, ಯಾವಾಗಲು ಅಳುತ್ತಾ ಕುಳಿತುಕೊಳ್ಳಬೇಡ, ಧ್ಯಾನದಿಂದ ನಿನಗೆ ಎಲ್ಲಾ ನೋವುಗಳು ಮಾಯವಾಗುತ್ತದೆ" ಎಂದು ಹೇಳಿದರು. ಆದರೆ, ಈ ಧ್ಯಾನ ಎಂದರೆ ಏನು?ಹೇಗೆ ಮಾಡಬೇಕು?ಇದಾವುದರ ಅರಿವು ನನಗೆ ಇರಲಿಲ್ಲ. ಒಂದು ದಿನ ಈ ಧ್ಯಾನದ ಪರಿಚಯ ನಮ್ಮ ಗ್ರಾಮಕ್ಕೆ ಆಯಿತು. "ರೋಗಿ ಬಯಸಿದ್ದು ಹಾಲು-ಅನ್ನ, ವೈದ್ಯ ಹೇಳಿದ್ದೂ ಹಾಲು-ಅನ್ನ" ಎನ್ನುವ ಹಾಗೆ ನನಗೆ ತುಂಬ ಸಂತೋಷವಾಯಿತು. ಏಕೆಂದರೆ, ನನ್ನ ಮಗನ ನೆನೆಪು ದಿನೇ ದಿನೇ ನನ್ನ ಮನಸನ್ನು ಕುಗ್ಗಿಸುತ್ತಿತ್ತು. ಧ್ಯಾನದ ಆರಂಭವಾದ ದಿನದಿಂದ ಇಂದಿನವರೆಗೂ ಧ್ಯಾನವನ್ನು ಒಂದು ದಿನ ಕೂಡ ಬಿಡಲಿಲ್ಲ.

ಇದರಿಂದ ನನಗೆ ಸಂಪೂರ್ಣ ಆರೋಗ್ಯ, ಮಾನಸಿಕ ಶಾಂತಿ ಸಿಕ್ಕಿದೆ. ಇದನ್ನು ನಾನು ಎಷ್ಟು ಹಣ ವೆಚ್ಚ ಮಾಡಿದರೂ ನನಗೆ ಈ ಶಾಂತಿ, ನೆಮ್ಮದಿ ದೊರೆಯುತ್ತಿರಲಿಲ್ಲ. ಅಂತಹ ಒಂದು ಅದ್ಭುತ ಶಕ್ತಿ ಈ ಧ್ಯಾನಕ್ಕೆ ಇದೆ ಎಂಬುದನ್ನು ನಾನು ಅರಿತಿದ್ದೇನೆ. ಧ್ಯಾನಕ್ಕೆ ಕುಳಿತಾಗ ಅಲೋಚನೆಗಳೆಲ್ಲಾ ದೂರವಾಗಿ ಮನಸ್ಸು ಶಾಂತ ಸ್ಥಿತಿಗೆ ಬಂತು, ನಂತರ ಉಯ್ಯಾಲೆಯಲ್ಲಿ ಕುಳಿತ ಅನುಭವವಾಯಿತು. ಈ ಧ್ಯಾನದ ಬಗ್ಗೆ ನನ್ನ ಮಕ್ಕಳು, ಸಂಬಂಧಿಕರಿಗೆ ತಿಳಿಸಿದ್ದೇನೆ. ಧ್ಯಾನ ಮಾಡಿ ಆರೋಗ್ಯ ಪಡೆದುಕೊಳ್ಳಿ ಎಂದು ಹೇಳುತ್ತಿದ್ದೇನೆ.

ಪ್ರತಿ ದಿನ ಧ್ಯಾನಕ್ಕೆ ಹೋಗುವುದೆಂದರೆ ನನಗೆ ಎಲ್ಲಿಲ್ಲದ ಉತ್ಸಾಹ ಮತ್ತು ಸಂತೋಷ. ಜೈ ಧ್ಯಾನ ಜಗತ್.

 

ಶ್ರೀಮತಿ ದಾಕ್ಷಾಯಿಣಮ್ಮ
ಆವರಗೆರೆ, ದಾವಣಗೆರೆ
ಫೋನ್ : 08192-256208

Go to top