" ವಿಶ್ವದ ಜೊತೆ ಕನೆಕ್ಟಿವಿಟೀ ಅನುಭವಿಸಿದೆ "

 

 

ನನ್ನ ಹೆಸರು ದೀಪ, ಬೆಂಗಳೂರಿನಲ್ಲಿ ನೆಲೆಸಿರುತ್ತೇನೆ, ಸುಮಾರು 2 ವರ್ಷಗಳಿಂದ ಧ್ಯಾನಾಭ್ಯಾಸದಲ್ಲಿ ತೊಡಗಿರುತ್ತೇನೆ. ಈಜಿಪ್ಟ್ ಯಾತ್ರೆಯಲ್ಲಿ ಪಾಲ್ಗೊಂಡಿದ್ದು ನನ್ನ ಅದೃಷ್ಟವೆಂದು ಭಾವಿಸುತ್ತೇನೆ. ಈಜಿಪ್ಟ್ ಯಾತ್ರೆಯ ಅನುಭವಗಳನ್ನು ನಿಮ್ಮೆಲ್ಲರಲ್ಲಿ ಹಂಚಿಕೊಳ್ಳಲು ಬಯಸುತ್ತೇನೆ. ಅಕ್ಟೋಬರ್ 29 ರಿಂದ ನವಂಬರ್ 7 ವರೆಗೆ ನಮ್ಮ ಈಜಿಪ್ಟ್ ಯಾತ್ರೆ ಸುಗಮವಾಗಿತ್ತು. 2 ನವಂಬರ್ ಹುಣ್ಣಿಮೆಯಂದು ನನ್ನಲ್ಲಿ ಪತ್ರೀಜಿ ವಾಕಿನ್ ಆದರು. ಅಂದಿನಿಂದ ನನ್ನ ಅನುಭವಗಳು ಪ್ರಾರಂಭವಾಯಿತು. ಪತ್ರೀಜಿ ವಾಕಿನ್ ಆದಾಗ ನನ್ನಲ್ಲಿ ಎರಡು ರೂಪಗಳನ್ನು ಸಷ್ಟವಾಗಿ ನೋಡಿದೆ. ದೀಪ ಎನ್ನುವ ನಾನು ಎಲ್ಲೋ ಮೂಲೆಯಲ್ಲಿದ್ದು ಪತ್ರೀಜಿ ರೂಪವನ್ನು ನೋಡಿದೆ. ಅದ್ಭುತವಾದ ಅನುಭವ. ನನ್ನ ಜೀವಿತ ಉದ್ದೇಶವನ್ನು ತಿಳಿದುಕೊಂಡೆ, ಮಾಸ್ಟರ್‌ಗಳ ಸಂದೇಶಗಳು ಬರತೊಡಗಿತು. ವನ್ನೆಸ್ ಇಷ್ಟುದಿನ ಥೀಯರಿಟಿಕಲ್ ಆಗಿ ತಿಳಿದಿದ್ದೆ, ಈಜಿಪ್ಟ ಯಾತ್ರೆಯಲ್ಲಿ ಪ್ರಾಕ್ಟಿಕಲ್ ಆಗಿ ಅನುಭವಿಸಿದೆ, ವಿಶ್ವದ ಜೊತೆ ಕನೆಕ್ಟಿವಿಟೀ ಅನುಭವಿಸಿದೆ, ಅಟಾಚ್ಮೆಂಟ್ ಮತ್ತು ಡಿಟಾಚ್ಮೆಂಟ್ ಅನುಭವಿಸಿದೆ. ಪ್ರತಿಯೊಬ್ಬ ಮಾಸ್ಟರ್ ನಿಂದ ಕಲಿಯುವುದನ್ನು ಅನುಭವಿಸಿದೆ.

 

ಇನ್ನೂ ಪಿರಮಿಡ್‌ನಲ್ಲಿ ಧ್ಯಾನ ಮಾಡಲು ಗೀಜಾಗೆ ಹೊರಟಾಗ ಅದರ ವಾತಾವರಣಕ್ಕೆ ಹೋಗುತ್ತಲೇ ಸಹಜವಾಗಿ ಆಗಿ ನಿಶ್ಶಬ್ಧ, ಆಲೋಚನಾರಹಿತಸ್ಥಿತಿ, ಧ್ಯಾನದ ಸ್ಥಿತಿಯನ್ನು ಧ್ಯಾನಕ್ಕೆ ಮುಂಚಿತವೇ ಅನುಭವಿಸಿದೆ. ಪಿರಮಿಡ್‌ನಲ್ಲಿ ಧ್ಯಾನ ಮಾಡಿದಾಗ, ಅಲ್ಲಿ ಧ್ಯಾನ ಮಾಡಿದ ಎನರ್ಜೀಸ್ ಇಂಟರ್ ಗೆಲಾಕ್ಟಿಕ್ ಕನ್ನೆಕ್ಟಿವಿಟೀಗೆ ಉಪಯೋಗವಾಗುತ್ತದೆಂದು ಅರಿವಾಯಿತು. ಹೋಗಿದ್ದ ಕಾರ್ಯ ಪರಿಪೂರ್ಣವಾಯಿತೆಂದು ತಿಳಿದುಕೊಂಡೆ. ಧ್ಯಾನದ ನಂತರದ ನನ್ನ ಆನಂದದ ಅನುಭವ ಹೇಳಲು ಪದಗಳೇ ಸಾಲದು. ಪಕ್ಷಿಗೆ ಆಕಾಶದಲ್ಲಿ ಹಾರಲು ರೆಕ್ಕೆಗಳ ಸಹಾಯ ಬೇಕು. ರೆಕ್ಕೆಗಳ ಸಹಾಯವಿಲ್ಲದೆ ನಾನು ಆನಂದವಾಗಿ ಹಾರುತ್ತಿದ್ದೆ. ಬ್ರಹ್ಮರ್ಷಿ ಪತ್ರೀಜಿ ಅವರಿಗೆ ಕೋಟಿ ಕೋಟಿ ಜನ್ಮ ಜನ್ಮದ ವಂದನೆಗಳು. ಪ್ರತಿಯೊಬ್ಬ ಪಿರಮಿಡ್ ಮಾಸ್ಟರ್ ಈಜಿಪ್ಟ್ ಗೀಜಾ ಪಿರಮಿಡ್ ವೀಕ್ಷಿಸಬೇಕೆಂದು ಸ್ವ ಅನುಭವದಿಂದ ಹೇಳುತ್ತಿದ್ದೇನೆ.

 

ಯಾವಾಗಲೂ ನನ್ನ ಧ್ಯಾನಕ್ಕೆ ಸಹಾಯಕಾರಿ ಮತ್ತು ಪ್ರೋತ್ಸಾಹ ನೀಡಿದ ಮತ್ತು ಕೇಳದ ತಕ್ಷಣವೇ, ಒಪ್ಪಿ , ನನ್ನನ್ನು ಈಜಿಪ್ಟ್‌ಗೆ ಕಳುಹಿಸಿದ ನನ್ನ ಪತಿ ಸಚ್ಚನ್‌ಗೆ ಕೃತಜ್ಞತೆಗಳು. ನನ್ನ ಮಗ ಭೂವನ್ ನನಗೆ ಪ್ರೇರಣೆ ಮತ್ತು ತುಂಬ ಸಪ್ಪೋರ್ಟಿವ್. ಧ್ಯಾನಕ್ಕೆ ಸದಾ ಸಹಕರಿಸಿದ ನನ್ನ ತಂದೆ-ತಾಯಿಗೆ ವಂದನೆಗಳು. ಧ್ಯಾನಕ್ಕೆ ಯಾವಾಗಲೂ ಸ್ಪೂರ್ತಿಯಾದ ನನ್ನ ಕಸಿನ್ ದಿವ್ಯಶ್ರೀ, ಗೆಳತಿ ಅನಿತಾ, ಆದೋನಿ ಪ್ರೇಮ್‌ನಾಥ್ ಸರ್ ಇವರಿಗೆ ವಂದನೆಗಳು.

 

The message I got on the last day in Egypt is, OBSERVE EVERYTHING AS YOU OBSERVE YOUR BREATH.

 

ದೀಪ ಸಚ್ಚಿನ್
ಬೆಂಗಳೂರು

Go to top