" ಧ್ಯಾನ ಮಾಡುವುದರಿಂದ ಎಲ್ಲವೂ ಲಭ್ಯವಾಗುತ್ತದೆ "

 

 

ಬ್ರಹ್ಮರ್ಷಿ ಸುಭಾಷ್ ಪತ್ರೀಜಿಯವರಿಗೆ ನನ್ನ ನಮಸ್ಕಾರಗಳು.  ನನ್ನ ಹೆಸರು ಕವಿತಾ ದೇವೇಂದ್ರಪ್ಪ.  ನಮ್ಮ ಮನೆಯಲ್ಲಿ 10 ಜನ ಧ್ಯಾನಕ್ಕೆ ಹೋಗುತ್ತಿದ್ದೇವೆ. 41 ದಿನಗಳ ಮಂಡಲ ಧ್ಯಾನ ನಡೆಸಿಕೊಟ್ಟಂತಹ ಶ್ರೀನಿವಾಸರೆಡ್ಡಿಯವರಿಗೆ ನಮಸ್ಕಾರಗಳು.  ನಮಗೆ ಧ್ಯಾನವೆಂದರೆ ಮೊದಲಿಗೆ ಏನಪ್ಪಾ ಇದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದೆವು.  ಆದರೆ, ಶ್ರೀನಿವಾಸ್ ಸಾರ್ ನೀವು ಧ್ಯಾನ ಮಾಡಿರಿ ಎಂದು ಹೇಳಿದರು. 41 ದಿವಸ ತಪ್ಪದೇ ಹೋದೆವು.  ಯೋಚನೆಗಳು ಇರುತ್ತಿದ್ದವು.  ಆದರೆ, ಅಲ್ಲಿಗೆ ನಿಲ್ಲಿಸಿ ಉಸಿರಾಟದ ಕಡೆ ಗಮನ ಹರಿಸಿದೆ.  ನನ್ನ ಮನಸ್ಸಿಗೆ ಸಮಾಧಾನ ಮತ್ತು ಕೈಕಾಲುಗಳ ನೋವು ಕಡಿಮೆಯಾದವು.  ಆಮೇಲೆ ಸಂಪೂರ್ಣ ಆರೋಗ್ಯ ಮತ್ತು ಮಾನಸಿಕ ಶಾಂತಿ, ನೆನಪಿನಶಕ್ತಿ ಬಂದಿದೆ.  ತಾಳ್ಮೆ, ಆತ್ಮವಿಶ್ವಾಸ, ದೈಹಿಕ ಆರೋಗ್ಯ, ಆಧ್ಯಾತ್ಮಿಕ ಜ್ಞಾನ ಸಿಗುವುದು.  ಧ್ಯಾನ ಮಾಡುವುದರಿಂದ ಎಲ್ಲವೂ ಲಭ್ಯವಾಗುತ್ತದೆ. 

 

ಪ್ರತಿಯೊಂದು ಹಳ್ಳಿಯೂ ಸಹ ತನ್ನದೇ ಪಿರಮಿಡ್ ಹೊಂದಬೇಕು ಎಂಬ ಆಸೆ ನನಗಿದೆ.  ನನ್ನ ಪತಿಗೆ ಧ್ಯಾನ ಮಾಡುವುದರಿಂದ ಸಕ್ಕರೆ ಖಾಯಿಲೆ ಬಹಳ ನಿಯಂತ್ರಣದಲ್ಲಿದೆ.  ಧ್ಯಾನದಿಂದ ಬೇಗ ಗುಣಮುಖವಾಗಿದೆ. ನಾನು ಧ್ಯಾನದಲ್ಲಿ ಇನ್ನೂ ಬಹಳಷ್ಟು ಸಾಧನೆ ಮಾಡಬೇಕು ಎನಿಸುತ್ತಿದೆ.

 

 

 ಕವಿತಾ B.K. ದೇವೇಂದ್ರಪ್ಪ
 ಬಸಾಪುರ
ದಾವಣಗೆರೆ

Go to top