" ಆನಂದವನ್ನು ಇಂದೇ ಕಂಡುಕೊಳ್ಳೋಣ "

 

 

ನನ್ನ ಹೆಸರು ದಿವ್ಯ. ನಾನು ಒಂದು ಪ್ರಸಿದ್ಧವಾದ ಕಾಲೇಜಿನಲ್ಲಿ B.E. ಓದುತ್ತಿದ್ದೇನೆ. ಸುಮಾರು ಎರಡು ವರ್ಷದ ಹಿಂದೆ ಧ್ಯಾನದ ಪರಿಚೆಯವಾಯಿತು. ಅಂದಿನಿಂದ ನಾನು ಧ್ಯಾನಿ ಎಂದು ಹೇಳಲು ಸಂತೋಷವಾಗುತ್ತದೆ. ಆದರೆ, ಎಲ್ಲರೂ ಸಹ ಆತ್ಮ ಜೀವಿಗಳೇ ಹಾಗು ಅದರ ಏಳಿಗೆಗಾಗಿಯೇ ಹೋರಾಟ, ಎಂಬುವುದು ಸತ್ಯವಾದ ಸಂಗತಿ. ಆದುದರಿಂದ, ಎಂದಿನಿಂದ ಧ್ಯಾನ ಮಾಡುತ್ತಿದ್ದೇವೆ ಅನ್ನುವುದರ ಬಗ್ಗೆ ಗಮನ ಕೊಡದೆ, ನಾವೆಲ್ಲ ಧ್ಯಾನಿಗಳಾಗಬೇಕು ಎಂಬುವುದನ್ನು ಬೆಳಕಿಗೆ ತರುವುದೇ ನನ್ನ ಈ ಲೇಖನದ ಉದ್ದೇಶ.

 

ನಾವು ಅರ್ಧಪೂರ್ಣವಾದ ಹಾಗು ಗೊಂದಲದಿಂದ ದೂರವಾದ ಜೀವನವನ್ನು ಸಾಗಿಸಿದರೇ, ನಾವು 'ಸಜೀವಿಗಳು' ಎಂಬುದಕ್ಕೆ ಆದಾರ. ಚಿಕ್ಕಂದಿನಿಂದಲ್ಲೂ ನನಲ್ಲಿ ಹಲವಾರು ಪ್ರಶ್ನೆಗಳು ಮೂಡುತ್ತಿದ್ದವು. ನನ್ನದೇ ಆದ ಉತ್ತರಗಳನ್ನು ಕೊಟ್ಟಿದೆ. ಆದರೆ, ಅಂತಹ ನಿಯಮಗಳಿಂದ ನನ್ನ ಕೆಲಸಗಳಲ್ಲಿ ತೃಪ್ತಿ ಹಾಗು ಪರಿಪೂರ್ಣತೆಗಳ ಲೋಪವಿತ್ತು.

 

ಧ್ಯಾನ ಮಾಡುವುದರಿಂದ ಮತ್ತೆ ಇಂತಹ ಪರಿಸ್ಥಿತಿ ಬರಲ್ಲಿಲ್ಲ. ನನಗೆ ಪುನರ್ಜನ್ಮ ಪಡೆದಂತಾಗಿದೆ.

 

ಏಕೆಂದರೇ, "ಧ್ಯಾನ ಮಾಡದೆ ಯಾರೂ ಸಹ ಪರಿಪೂರ್ಣತೆಯಲ್ಲಿ ಬದುಕಲಾಗದು, ಬದುಕಿನ ಪರಿ ಪೂರ್ಣತೆ ಧ್ಯಾನದಿಂದಲೇ ಸಾಧ್ಯ."

 

ಬಹಳ ಸಮಯವನ್ನು ಏಕಾಂತದಲ್ಲಿ ಕಳೆಯಲು ಇಷ್ಟ ಪಡುತ್ತೇನೆ. ಇತರರ ಬಗೆಗೆ ಅನವಶ್ಯವಾಗಿ ಚಿಂತನೆ ಕಡಿಮೆ ಮಾಡಿದರೆ ಎನರ್ಜಿ ನಿರ್ಗಮಿಸುತ್ತದೆ. ಮೌನದಲ್ಲಿ ಅಥವಾ ಕಡಿಮೆ ಮಾತನಾಡಿದಾಗ, ಮನಸ್ಸು ವಿಶಾಲವಾಗಿರುತ್ತದೆ. ಹಾಗು ಸೊಷ್ಮತೆಗಳನ್ನು ಗಮನಿಸಬಹುದು.

 

" ಮೌನದ ಮೂಲಕ, ಅನೇಕ ಭ್ರಮಗಳು ಕಳಚಿಕೊಳ್ಳುತ್ತವೆ. "

 

ಅನಾರೋಗ್ಯಕ್ಕೆ ಕಾರಣವಾದ ಒತ್ತಡಗಳನ್ನು ನಿರ್ಮೂಲನಗೊಳಿಸಬಹುದು. ನಾನು ಧ್ಯಾನ ಮಾಡಲು ಆರಂಭಿಸಿದ ದಿನದಿಂದ ಯಾವ ವೈದ್ಯರ ಬಳಿ ಹೋಗಿಲ್ಲ ಹಾಗು ಯಾವ ಮಾತ್ರೆಯೂ ತೆಗೆದುಕೊಂಡಿಲ್ಲ. ನೆಗಡಿ, ಜ್ವರ ಸಾಮಾನ್ಯವಾಗಿ ಬಂದರೂ, ಪಿರಾಮಿಡನ್ನು ಉಪಯೋಗಿಸಿಕೊಂಡು, ಧ್ಯಾನ ಮಾಡಿದಾಗ, ಅವು ಸಹಜವಾಗಿ ಗುಣವಾಗುತ್ತದೆ. ಪಿರಾಮಿಡನ್ನು ಉಪಯೋಗಿಸುವುದರಿಂದ ಧ್ಯಾನ ಸ್ಥಿತಿಯನ್ನು ಪಡೆಯುವ ಸಮಯನ್ನು ಕಡಿಮೆಮಾಡಬಹುದು.

 

ನನ್ನ ವಿದ್ಯಾಭ್ಯಾಸದಲ್ಲಿಯೂ ಬದಲಾವಣೆಗಳನ್ನು ಕಂಡಿದ್ದೇನೆ. ಧ್ಯಾನದ ಮುಂಚೆ ಹಾಗು ಧ್ಯಾನದ ನಂತರ ಸಮಪ್ರಮಾಣದ "efforts" ಹಾಕಿದಾಗ, ಹೆಚ್ಚಿನ ಫಲಿತ ಧ್ಯಾನದ ನಂತರದ ಸಮದಲ್ಲಿ ಕಂಡೆ. 3 ಘಂಟೆಗಳ ಕಾಲ ಹಿಡಿಯುವಲ್ಲಿ, ಘಂಟೆ ಮಾತ್ರ ಹಿಡಿಯುತ್ತದೆ ಎಂದು ತಿಳಿದುಕೊಂಡೆನು. ಏಕೆಂದರೆ, ಮಂಗನಂತೆ ಹಾರುವ ಚಂಚಲ ಮನಸ್ಸನ್ನು ನಮ್ಮ ಹಿಡಿತ್ತಕ್ಕೆ ತರಲು ಧ್ಯಾನವು ಸಹಕರಿಸುತ್ತದೆ.

 

ಪರಿಸ್ಥಿತಿಯನ್ನು ಗಮನಿಸಿ, ಯಾವುದು 'ನಮಗೆ’ ಸೂಕ್ತವೆಂದು ಪರಿಶೀಲಿಸುವ ಚುರುಕುತನ ಹೆಜ್ಜೆಹಾಕುವುದರಿಂದ, ನಮ್ಮ ಶಕ್ತಿಯು ವ್ಯರ್ಥವಾಗದೆ, ಕೆಲಸಗಳಲ್ಲಿ ಅರ್ಪಿಸಿಕೊಂಡು ಸಫಲರಾಗಬಹುದು.

 

ಒಂದು ಅನುಭವವನ್ನು ಆಳವಾಗಿ ರುಚಿಸಿದಾಗ, ಅದರಲ್ಲಿ ಅಡಗಿದ್ದ ಪಾಠವನ್ನು ಸವಿಯಬಹುದು. ಆಧ್ಯಾತ್ಮಿಕ ಜೀವನವು ಕೆಲವರಿಗೆ ಮಾತ್ರ ಸೀಮಿತವಾದುದಲ್ಲ. ನಾವೆಲ್ಲರೂ ಆತ್ಮಜೀವಿಗಳೆ. ಮಾಯಾಜಾಲದಲ್ಲಿ ಸಿಲುಕಿ ಅದನ್ನು ಮರೆತಿದ್ದೀವೆ ಅಷ್ಟೇ. ಈ ವಿಷಯವು ಧ್ಯಾನಿಗಳಿಗೆ ಎತ್ತಿಕಾಣುತ್ತದೆ. ಹುಟ್ಟುಸಾವಿನ ಚಕ್ರದಿಂದ ಮುಕ್ತರಾಗಲು, ಧ್ಯಾನವೊಂದೇ ಪರಿಹಾರ.

 

ಧ್ಯಾನವು ಕೇವಲ ಮುದುಕರಿಗೆ ಎಂದು ಭಾವಿಸುವುದಾದರೇ, ಅದು ಮೂರ್ಖತನವೇ ಸರಿ. ಏಕೆಂದರೆ, ನಮ್ಮ ವರ್ತಮಾನವೇ, ನಮ್ಮ ಭವಿಷ್ಯದ ಅಡಿಪಾಯ. ಅಡಿಪಾಯದಲ್ಲಿ ವ್ಯತ್ಯಾಸ ಬಂದರೆ ಇಡೀ ಕಟ್ಟಡವು ಕುಸಿದುಹೋಗುತ್ತದೆ. ಹಾಗು ಯೌವನದಲ್ಲಿ ಕಲಿಕೆಗೆ ಹೆಚ್ಚಿನ ಬಾಗಿಲುಗಳು ತೆರೆದುಕೊಂಡಿರುತ್ತದೆ. ಅದ್ದುದರಿಂದ, ಒಳ್ಳೆಯದನ್ನು ಕಲಿಯಲು ತಡಬೇಡ ಗೆಳೆಯರೆ. ತಂದೆ-ತಾಯಿಯರು ತಮ್ಮ ಮಕ್ಕಳಿಗೆ ಕೊಡುವ ಶಾಶ್ವತವಾದ ಕಾಣಿಕೆ ಧ್ಯಾನವೊಂದೆ. ಕೊನೆಗೊಂದು ದಿನ ನಾವೆಲ್ಲ ಹೊರೆಯುವುದು ನಾವು ಗಳಿಸಿದ ಜ್ಞಾನವೆ, ಐಶ್ವರ್ಯವಲ್ಲ. "ಜೀವನ ಸಾಗಿಸುವುದನ್ನು ಶಿಕ್ಷಣವು ಕಲಿಸುತ್ತದೆ. ಒದುಕುವುದನ್ನು ಆಧ್ಯಾತ್ಮವು ಕಲಿಸುತ್ತದೆ." ಆಧ್ಯಾತ್ಮಿಕ ಜೀವನವು ಒಂದು ಸಂಶೋಧನೆ.

 

ಮತ್ತೆ, ನಾವು ಸಸ್ಯಹಾರಿಗಳಾಗುವುದು ಬಹಳ ಮುಖ್ಯ. ಇದರಿಂದ ನಮ್ಮಲ್ಲಿ ಆಗುವ ಬದಲಾವಣೆಗಳ ಪಟ್ಟಿಯನ್ನೇ ಮಾಡಬಹುದು. "ನಿಮ್ಮ ಹೊಟ್ಟೆಯು ಪ್ರಾಣಿಗಳ ಗೋರಿ ಅಲ್ಲ." ಎಂದು ಮಾಹಾಕವಿಯೊಬ್ಬರು ಒತ್ತಿ ಹೇಳಿದ್ದಾರೆ. ಮಾಂಸದಿಂದ ನಷ್ಟವೆ ಹೊರತು ಲಾಭವಿಲ್ಲ. ಒಟ್ಟಾರ, ನಮ್ಮೆಲರ ಜೀವನ "victimhood" ರಿಂದ "creatorhood"ಗೆ ಬದಲಾಗಬೇಕು. ಕನ್ನಡಿಯನ್ನು ಮುಂದಿಟ್ಟುಕೊಂಡು, ನಾವು ಕುರುಡರಾಗಬಾರದು. ಧ್ಯಾನದಿಂದ ನಮ್ಮನ್ನು ನಾವು ತಿಳಿದುಕೊಂಡು ಸಾರ್ಥಕ ಬದುಕನ್ನು ಜೀವಿಸೋಣ ಬನ್ನಿ, ಧ್ಯಾನದ ಮೂಲಕವೇ ಜೀವನ ಸಾರ್ಥಕ್ಯ ಕಾಣಲು ಸಾಧ್ಯ.

 

ನಮ್ಮೆಲರಿಗೊ ದಾರಿದೀಪವಾಗಿರುವ ಪತ್ರಿಜೀಯವರಿಗೆ ನನ್ನ ವಂದನೆಗಳು.

 

ದಿವ್ಯ
ಬೆಂಗಳೂರು

Go to top